ಬಳಕೆದಾರರ ಕೈ ಸೇರಲಿರುವ ವಾಟ್ಸಾಪ್‌ನ ಹೊಸ ಫೀಚರ್

Posted By: Shwetha PS

  ಇಂದಿನ ಮೊಬೈಲ್ ಯುಗದಲ್ಲಿ ವಾಟ್ಸಾಪ್‌ನಂತಹ ಸಾಮಾಜಿಕ ತಾಣವನ್ನು ಬಳಸದೇ ಇದ್ದವರು ಯಾರಿದ್ದಾರೆ ಹೇಳಿ. ನಮಗೆಲ್ಲಾ ಗೊತ್ತಿರುವಂತೆ ವಾಟ್ಸಾಪ್ ಇಂದು ತನ್ನಲ್ಲಿ ಅನೇಕ ಬೆಳವಣಿಗೆಗಳನ್ನು ಕಾರ್ಯರೂಪಕ್ಕೆ ತಂದುಕೊಂಡು ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ವಾಟ್ಸಾಪ್‌ನಲ್ಲಿ ಬರಿಯ ಚಾಟಿಂಗ್ ಅನ್ನು ಮಾಡದೆಯೇ ವೀಡಿಯೊ ಕರೆ, ವಾಯ್ಸ್ ಕಾಲಿಂಗ್ (ಧ್ವನಿ ಕರೆ) ಯನ್ನು ನೀವು ನಿರ್ವಹಿಸಬಹುದಾಗಿದೆ.

  ಬಳಕೆದಾರರ ಕೈ ಸೇರಲಿರುವ ವಾಟ್ಸಾಪ್‌ನ ಹೊಸ ಫೀಚರ್

  ಈಗ ಪ್ರಸ್ತುತವಾಗಿ ಬಂದಿರುವ ಸುದ್ದಿಯೊಂದರ ಪ್ರಕಾರ ವಾಟ್ಸಾಪ್‌ ಬಳಸುವ ಐಓಎಸ್ ಬಳಕೆದಾರರು ಅಪ್ಲಿಕೇಶನ್‌ನಲ್ಲಿನ ಪ್ಲೇಬ್ಯಾಕ್ ವೀಡಿಯೊಗಳನ್ನು ಮಾತ್ರವೇ ಬೆಂಬಲಿಸದೇ ವಾಟ್ಸಾಪ್‌ನ ಹೊರಗೆ ಕೂಡ ನಿಮ್ಮ ಮೆಚ್ಚಿನ ಯೂಟ್ಯೂಬ್ ವೀಡಿಯೊಗಳನ್ನು ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೂಲಕ ವೀಕ್ಷಿಸಬಹುದಾಗಿದೆ.

  ಹಿಂದಿಗಿಂತಲೂ ಬಹಳಷ್ಟು ಅಪ್‌ಡೇಟ್‌ಗಳನ್ನು ವಾಟ್ಸಾಪ್ ಮಾಡಿಕೊಂಡಿದ್ದು, ಐಓಎಸ್‌ಗಾಗಿ ವಾಟ್ಸಾಪ್‌ನ 2.17.40 ಆವೃತ್ತಿ ಅಪ್ಲಿಕೇಶನ್‌ನಲ್ಲಿ ಯೂಟ್ಯೂಬ್ ಪ್ಲೇಬ್ಯಾಕ್ ವೀಡಿಯೊಗಳನ್ನು ಬೆಂಬಲಿಸುವ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. WABetaInfo ಮೊದಲ ಬಾರಿಗೆ ಈ ವೈಶಿಷ್ಟ್ಯವನ್ನು ಗಮನಿಸಿದ್ದು ಇದು ಇನ್ನೂ ಸಾರ್ವಜನಿಕರು ಬಳಸುವಂತೆ ಆಗಿಲ್ಲ ಏಕೆಂದರೆ ಇದು ಇನ್ನೂ ಪರೀಕ್ಷಾ ಮಟ್ಟದಲ್ಲಿದೆ. WABetaInfo ಪ್ರಕಾರ ಈ ವೈಶಿಷ್ಟ್ಯವು ಚಿತ್ರ-ಚಿತ್ರ ಮೋಡ್‌ನಲ್ಲಿ ಯೂಟ್ಯೂಬ್‌ನಿಂದ ವೀಡಿಯೊಗಳನ್ನು ಪ್ಲೇ ಮಾಡುವ ಅವಕಾಶವನ್ನು ಬಳಕೆದಾರರಿಗೆ ಒದಗಿಸಲಿದೆ.

  ಬಳಕೆದಾರರು ತಮಗೆ ಬೇಕಾದ ರೀತಿಯಲ್ಲಿ ವಿಂಡೋವನ್ನು ಮರುಗಾತ್ರಗೊಳಿಸಬಹುದಾಗಿದ್ದು ಪೂರ್ಣ ಪರದೆ ರೂಪದಲ್ಲಿ ಕೂಡ ವೀಡಿಯೊಗಳನ್ನು ಪ್ಲೇ ಮಾಡುವ ಆಯ್ಕೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ವೀಡಿಯೊ ನೋಡುತ್ತಿರುವ ವಿಂಡೋವನ್ನು ಸಣ್ಣದಾಗಿಸಿಕೊಂಡು ವಾಟ್ಸಾಪ್‌ ಚಾಟ್‌ನಲ್ಲಿ ಸಂದೇಶಗಳನ್ನು ವೀಕ್ಷಿಸಬಹುದಾಗಿದೆ. ಇನ್ನು ವೀಡಿಯೊಗಳನ್ನು ಬದಿಯಲ್ಲಿ ಮರೆಮಾಡುವ ವೈಶಿಷ್ಟ್ಯವನ್ನು ಇದು ಹೊಂದಿದೆ.

  ಅಪ್ಲಿಕೇಶನ್‌ನಲ್ಲಿ ವೀಡಿಯೊ ಪ್ಲೇಬ್ಯಾಕ್ ಬಳಕೆದಾರರು ಚಾಟ್ ಅನ್ನು ಬದಲಾಯಿಸಿದಾಗ ಅಲ್ಲಿ ಕಂಡುಬರುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇನ್ನು ವಿವರವಾಗಿ ಹೇಳಬೇಕೆಂದರೆ ಐಫೋನ್ 6 ಮತ್ತು ನಂತರದ ಆವೃತ್ತಿಯ ಐಫೋನ್‌ಗಳು ಮಾತ್ರವೇ ಈ ವೈಶಿಷ್ಟ್ಯವನ್ನು ಬಳಸಬಹುದಾಗಿದೆ. ಹಿಂದಿನ ಮಾಡೆಲ್‌ಗಳಲ್ಲಿ ದೊಡ್ಡ ಡಿಸ್‌ಪ್ಲೇಗಳು ಇಲ್ಲದೇ ಇರುವುದರಿಂದ ಈ ವೈಶಿಷ್ಟ್ಯವು ಈ ಫೋನ್‌ಗಳಲ್ಲಿ ಬೆಂಬಲವನ್ನು ಹೊಂದಿಲ್ಲ.

  ಆಂಡ್ರಾಯ್ಡ್ ಆವೃತ್ತಿಯಲ್ಲೂ ಈ ವೈಶಿಷ್ಟ್ಯ ಬರಲಿದೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ. ಕಂಪೆನಿಯು ಮೊದಲಿಗೆ ಐಓಎಸ್ ಆವೃತ್ತಿಗಳಲ್ಲಿ ಈ ವೈಶಿಷ್ಟ್ಯವನ್ನು ಪ್ರಸ್ತುತಪಡಿಸಿ ನಂತರ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊರತರುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಈ ವೈಶಿಷ್ಟ್ಯವು ಶೀಘ್ರದಲ್ಲೇ ವಾಟ್ಸಾಪ್ ಬಳಕೆದಾರರ ಕೈ ಸೇರಲಿದೆ.

  Read more about:
  English summary
  This feature is not available to the public yet since it is still in the testing phase.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more