ಇನ್ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ವೀಡಿಯೋಗಳನ್ನು ಈಗ ವಾಟ್ಸ್‌ಆಪ್‌ನಲ್ಲಿ ನೋಡಬಹುದು!

By Tejaswini P G

  F8 ಕೀನೋಟ್ ನಲ್ಲಿ ನೀಡಿದ ಭರವಸೆಯಂತೆ ವಾಟ್ಸಾಪ್ ನಲ್ಲಿ ಶೀಘ್ರವೇ ಬರಲಿದೆ ಹೊಸ ಆಕರ್ಷಕ ಫೀಚರ್ಗಳು. ಈಗ ವಾಟ್ಸಾಪ್ ಸಂಸ್ಥೆಯು ಐಓಎಸ್ ಬಳಕೆದಾರರಿಗೆ ಹೊಸ ಅಪ್ಡೇಟ್ ಅನ್ನು ನೀಡಲು ಹೊರಟಿದೆ.ಈ ಅಪ್ಡೇಟ್ ಮೂಲಕ ವಾಟ್ಸಾಪ್ ನಲ್ಲೇ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ವೀಡಿಯೋಗಳನ್ನು ನೋಡುವ ಸಾಮರ್ಥ್ಯ ದೊರೆಯಲಿದೆ. ಈ ಆಪ್ ನಲ್ಲಿ ಈಗಾಗಲೇ ಯೂಟ್ಯೂಬ್ ಗೆ ಬೆಂಬಲವಿತ್ತು, ಮತ್ತು ಈ ಅಪ್ಡೇಟ್ ಮೂಲಕ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಗೂ ಇದು ಅನ್ವಯಿಸಲಿದೆ.

  ಸಧ್ಯ ಬಳಕೆದಾರರು ಇನ್ಸ್ಟಾಗ್ರಾಮ್ ಅಥವಾ ಫೇಸ್ಬುಕ್ ವೀಡಿಯೋಗಳನ್ನು ವೀಕ್ಷಿಸಲು ಆ ಆಪ್ ಅನ್ನೇ ತೆರೆಯಬೇಕಾಗುತ್ತಿತ್ತು. ಈ ಹೊಸ ಅಪ್ಡೇಟ್ನೊಂದಿಗೆ ವಾಟ್ಸಾಪ್ ನಲ್ಲಿ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ವೀಡಿಯೋ ವೀಕ್ಷಿಸಲು ಇನ್-ಆಪ್ ಬೆಂಬಲ ದೊರೆಯಲಿದೆ ಎಂದು ವಾಟ್ಸಾಪ್ ತಿಳಿಸಲಿದೆ. ಸಧ್ಯಕ್ಕೆ ಈ ಫೀಚರ್ ಕೆಲಸಮಾಡುತ್ತಿಲ್ಲವಾದರೂ ಮುಂದಿನ ದಿನಗಳಲ್ಲಿ ಇದು ಸಾಧ್ಯವಾಗಲಿದೆ.

  ಇನ್ಸ್ಟಾಗ್ರಾಮ್, ಫೇಸ್‌ಬುಕ್ ವೀಡಿಯೋಗಳನ್ನು ಈಗ ವಾಟ್ಸ್‌ಆಪ್‌ನಲ್ಲಿ ನೋಡಬಹುದು!!

  ಈ ಅಪ್ಡೇಟ್ ನೊಂದಿಗೆ PiP ಫೀಚರ್ ಕೂಡ ಬರಲಿದ್ದು, ಬಳಕೆದಾರರು ಚಿಕ್ಕ ವಿಂಡೋ ಒಂದರಲ್ಲಿ ವೀಡಿಯೋ ಪ್ಲೇ ಆಗುತ್ತಿರುವಂತೆಯೇ ಆಪ್ ನಲ್ಲಿ ನ್ಯಾವಿಗೇಟ್ ಮಾಡಬಹುದಾಗಿದೆ. ಬಳಕೆದಾರರು ಈ ವಿಂಡೋ ಅನ್ನು ಅತ್ತಿತ್ತ ಸರಿಸಬಹುದು, ಪ್ಲೇ/ಪಾಸ್ ಮಾಡಬಹುದು ಅಥವಾ ವಿಡಿಯೋ ಅನ್ನು ಹಿರಿದಾಗಿಸಬಹುದು ಅಥವಾ ಮುಚ್ಚಬಹುದು. ಅಷ್ಟೇ ಅಲ್ಲದೆ F8 ಕಾನ್ಫರೆನ್ಸ್ ನಲ್ಲಿ ವಾಟ್ಸಾಪ್ ನಲ್ಲಿ ಗ್ರೂಪ್ ಕಾಲಿಂಗ್ ಫೀಚರ್ ಬರಲಿದೆ ಎಂದು ಹೇಳಿದ್ದರು. ಈ ಫೀಚರ್ ಮೂಲಕ ಒಟ್ಟಿಗೆ 4 ಮಂದಿ ವೀಡಿಯೋ ಕಾಲ್ ಮಾಡಬಹುದಾಗಿದೆ.

  ಇದೇ ಸಂದರ್ಭದಲ್ಲಿ ಸ್ನ್ಯಾಪ್ಚ್ಯಾಟ್ ನಿಂದ ಪ್ರೇರಿತವಾದ ವಾಟ್ಸಾಪ್ ನ ವಾಟ್ಸಾಪ್ ಸ್ಟೇಟಸ್ ಫೀಚರ್ ಪ್ರತಿದಿನ 450 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಇದು ಸ್ನ್ಯಾಪ್ಚ್ಯಾಟ್ ನ ಒಟ್ಟು ಬಳಕೆದಾರರ ಸಂಖ್ಯೆಯ ಎರಡರಷ್ಟಿದೆ. ಈಗ ವಾಟ್ಸಾಪ್ ಗ್ರೂಪ್ ವೀಡಿಯೋ ಕಾಲಿಂಗ್ ಫೀಚರ್ ಅನ್ನೂ ಪಡೆಯಲಿದೆ. ವಾಟ್ಸಾಪ್ ಬಹಳ ತ್ವರಿತ ಗತಿಯಲ್ಲಿ ಬೆಳೆಯುತ್ತಿದ್ದರೆ ಸ್ನ್ಯಾಪ್ಚ್ಯಾಟ್ ಬಹಳ ನಿಧಾನ ಗತಿಯ ಬೆಳವಣಿಗೆಯನ್ನು ಕಂಡಿದೆ. ಸ್ನ್ಯಾಪ್ಚ್ಯಾಟ್ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಲು ವಿಫಲವಾಗಿದ್ದು ವಾಟ್ಸಾಪ್ ಯಶಸ್ಸಿನ ಮೆಟ್ಟಲೇರುತ್ತಿದೆ.ಇತ್ತೀಚೆಗೆ ವಾಟ್ಸಾಪ್ ನ ಸಹಸಂಸ್ಥಾಪಕರಾದ ಜ್ಯಾನ್ ಕೌಂ ಅವರು ಶೀಘ್ರವೇ ವಾಟ್ಸಾಪ್ ತೊರೆಯಲಿರುವುದಾಗಿ ಹೇಳಿಕೆ ನೀಡಿದ್ದಾರೆ.

  ಜ್ಯಾನ್ ಕೌಂ ಅವರು ತಮ್ಮ ಖಾಸಗಿ ಫೇಸ್ಬುಕ್ ಪೇಜ್ ನಲ್ಲಿ ಈ ಕುರಿತು ಹೀಗೆ ಹೇಳಿಕೊಂಡಿದ್ದಾರೆ "ನಾನು ಮತ್ತು ಬ್ರಯಾನ್ ವಾಟ್ಸಾಪ್ ಪ್ರಾರಂಭಿಸಿ ಸುಮಾರಾಗಿ ಒಂದು ದಶಕವೇ ಸಂದಿದೆ. ಒಂದಷ್ಟು ಶ್ರೇಷ್ಠ ಜನರೊಡನೆ ಈ ಸಂದರ್ಭದಲ್ಲಿ ವ್ಯವಹರಿಸಿದ್ದು ಇದೊಂದು ಅಪೂರ್ವ ಅನುಭವವೆನಿಸಿದೆ. ಆದರೆ ಈಗ ಜೀವನದಲ್ಲಿ ಮುಂದುವರೆಯುವ ಸಂದರ್ಭ ಬಂದಿದೆ. ಒಂದು ಚಿಕ್ಕ ತಂಡ ಸಾಕಷ್ಟು ಶ್ರಮವಹಿಸಿ ದುಡಿದು ಜಗತ್ತಿನಾದ್ಯಂತ ಇಷ್ಟೊಂದು ಮಂದಿ ಬಳಸುವಂತಹ ಒಂದು ಆಪ್ ಅನ್ನು ಸೃಷ್ಟಿಸಲು ಸಾಧ್ಯವಾದುದು ನಮ್ಮ ಅದೃಷ್ಟವೇ ಸರಿ.

  How to read deleted WhatsApp messages - GIZBOT KANNADA

  ಜಗತ್ತಿನಾದ್ಯಂತ ಜನರು ನಾನು ಯೋಚಿಸಿದಕ್ಕಿಂತ ಹೆಚ್ಚಿನ ವಿಧಗಳಲ್ಲಿ ವಾಟ್ಸಾಪ್ ಅನ್ನು ಬಳಸುತ್ತಿರುವ ಸಂದರ್ಭದಲ್ಲಿ ನಾನು ಇದನ್ನು ತೊರೆಯುತ್ತಿದ್ದೇನೆ. ವಾಟ್ಸಾಪ್ ನ ತಂಡ ಬಹಳ ಶಕ್ತಿಶಾಲಿಯಾಗಿದ್ದು ಅದು ಅಸಾಧಾರಣವಾದುದನ್ನು ಸಾಧಿಸುವುದರಲ್ಲಿ ಸಂಶಯವಿಲ್ಲ. ನಾನು ಈ ಸಂದರ್ಭದಲ್ಲಿ ವಿರಾಮವನ್ನು ಬಯಸುತ್ತಿದ್ದು, ತಂತ್ರಜ್ಞಾನದ ಹೊರತಾಗಿ ನಾನು ಇಷ್ಟಪಡುವ ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಬಯಸಿದ್ದೇನೆ. ಅಪರೂಪದ ಹವಾ-ನಿಯಂತ್ರಿತ ಪೋರ್ಶ್ ಗಳನ್ನು ಸಂಗ್ರಹಿಸುವುದು, ನನ್ನ ಕಾರ್ ಗಳ ಮೇಲೆ ಕೆಲಸಮಾಡುವುದು, ಫ್ರಿಸ್ಬೀ ಆಡುವುದು ಇತ್ಯಾದಿಗಳನ್ನು ಮಾಡಲು ಯೋಚಿಸಿದ್ದೇನೆ. ಹಾಗೆಯೇ ಹೊರಗಿನಿಂದಲೇ ವಾಟ್ಸಾಪ್ ಗೆ ನನ್ನ ಬೆಂಬಲವನ್ನು ನೀಡುತ್ತೇನೆ. ನನ್ನ ಈ ಪ್ರಯಾಣದಲ್ಲಿ ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು".

  English summary
  WhatsApp seems to be working on a lot of new features to make the user experience seamless. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more