Subscribe to Gizbot

ಗೂಗಲ್ ತೇಜ್ ಆಯ್ಕೆಯನ್ನು ಕಾಪಿ ಮಾಡಿದ ವಾಟ್ಸ್‌ಆಪ್ ಪೇಮೆಂಟ್..! ಯಾವುದು..?

Written By:

ವಾಟ್ಸ್‌ಆಪ್‌ ಪೇಮೆಂಟ್ ಸೇವೆಯೂ ಇನ್ನು ಪ್ರಯೋಗತ್ಮಾಕ ಹಂತದಲ್ಲಿದ್ದು, ಕೆಲವು ಬೀಟಾ ಬಳಕೆದಾರರು ಮಾತ್ರವೇ ಈ ಸೇವೆಯನ್ನು ಪಡೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ವಾಟ್ಸ್ಆಪ್ ಪೇಮೆಂಟ್ ದಿನಕ್ಕೊಂದು ಹೊಸ ಆಯ್ಕೆಯನ್ನು ಪಡೆದುಕೊಳ್ಳುತ್ತಿದೆ. ಮೊನ್ನೇ ತಾನೇ QR ಕೋಡ್ ಸ್ಕ್ಯಾನ್ ಮಾಡಿ ಹಣವನ್ನು ವರ್ಗಾವಣೆ ಮಾಡುವ ಅವಕಾಶವನ್ನು ನೀಡಲಾಗಿತ್ತು. ಇದೇ ಮಾದರಿಯಲ್ಲಿ ಮತ್ತೊಂದು ಹೊಸ ಸೇವೆಯೂ ಬಳಕೆದಾರರಿಗೆ ದೊರೆಯಲಿದೆ.

ಗೂಗಲ್ ತೇಜ್ ಆಯ್ಕೆಯನ್ನು ಕಾಪಿ ಮಾಡಿದ ವಾಟ್ಸ್‌ಆಪ್ ಪೇಮೆಂಟ್..! ಯಾವುದು..?

ಇನ್ನು ಮುಂದೇ ವಾಟ್ಸ್‌ಆಪ್ ಪೇಮೆಂಟ್ ಸೇವೆಯಲ್ಲಿ ಬಳಕೆದಾರರಿಗೆ ಹಣವನ್ನು ರಿಕ್ವೇಸ್ಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಈ ಹಿಂದೆ ಗೂಗಲ್ ತೇಜ್ ಮಾತ್ರವೇ ಈ ಆಯ್ಕೆಯನ್ನು ಹೊಂದಿತ್ತು ಎನ್ನಲಾಗಿದೆ. ಇದನ್ನು ಕಾಪಿ ಮಾಡಿರುವ ವಾಟ್ಸ್ಆಪ್ ಪೇಮೆಂಟ್, ತನ್ನ ಬಳಕೆದಾರರಿಗೆ ಮನಿ ರಿಕ್ವೇಸ್ಟ್ ಕಳುಹಿಸುವ ಅವಕಾಶವನ್ನು ನೀಡಲು ಮುಂದಾಗಿದೆ.

UPI ಪ್ಲಾಟ್‌ಪಾರ್ಮ್‌ನಲ್ಲಿ ಕಾರ್ಯನಿರ್ವಹಿಸುವ ವಾಟ್ಸ್‌ಆಪ್ ಪೇಮೆಂಟ್, ಶೀಘ್ರವೇ ಸಾಮಾನ್ಯ ಬಳಕೆದಾರರಿಗೂ ಮುಕ್ತವಾಗಲಿದ್ದು, ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸದ್ದು ಮಾಡಲಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಆಪ್‌ಗಳು ಇದರ ಮುಂದೆ ಸ್ಪರ್ಧೆಯನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಮತ್ತು ಮಾರುಕಟ್ಟೆಯಲ್ಲಿ ಮೊಬೈಲ್ ಪೇಮೆಂಟ್ ಅನ್ನು ಅತ್ಯಂತ ಸರಳವಾಗಿಸಲಿದೆ ಎನ್ನುವ ಮಾತು ಕೇಳಿ ಬಂದಿದೆ.

ಗೂಗಲ್ ತೇಜ್ ಆಯ್ಕೆಯನ್ನು ಕಾಪಿ ಮಾಡಿದ ವಾಟ್ಸ್‌ಆಪ್ ಪೇಮೆಂಟ್..! ಯಾವುದು..?

ಅದರಲ್ಲಿಯೂ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೊಂದಿರುವ ಗೂಗಲ್ ತೇಜ್, ಪೋನ್ ಪೇ ಹಾಗೂ ಪೇಟಿಎಂಗೆ ಹೆಚ್ಚಿನ ಹೊಡೆತವನ್ನು ವಾಟ್ಸ್‌ಆಪ್ ಪೇಮೆಂಟ್ ನೀಡಲಿದೆ. ಕಾರಣ ಸುಮಾರು 200 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆಪ್, ಎಲ್ಲಾ ಬಳಕೆದಾರರಿಗೂ ಈ ಆಯ್ಕೆಯನ್ನು ನೀಡಲಿದೆ. ಇದರಿಂದಾಗಿ ಅತೀ ಹೆಚ್ಚು ಬಳಕೆದಾರರನು ಹೊಂದಿರುವ ಪೇಮೆಂಟ್ ಆಪ್ ಎನ್ನುವ ಖ್ಯಾತಿಗೆ ಪಾತ್ರವಾಗಲಿದೆ.

TEZ App : ಗೂಗಲ್ ಭಾರತೀಯರಿಗಾಗಿ ಗೂಗಲ್‌ನಿಂದ Tez ಪೇಮೆಂಟ್ ಆಪ್

ಇದೇ ಹಿನ್ನಲೆಯಲ್ಲಿ ಸರಕಾರಿ ಸ್ವಾಮ್ಯದ ಪೇಮೆಂಟ್ ಆಪ್ ಭೀಮ್ ಅನ್ನು ಜನಪ್ರಿಯಗೊಳಿಸುವ ಸಲುವಾಗಿ ಸರಕಾರವೂ ಕ್ಯಾಷ್ ಬ್ಯಾಕ್ ಸೇವೆಯನ್ನು ಆರಂಭಿಸಿದ್ದು, ಇದರಿಂದಾಗಿ ಹೆಚ್ಚಿನ ಜನರು ಈ ಆಪ್ ಕಡೆಗೆ ಮುಖ ಮಾಡಿದರೆ. ಆದರೆ ವಾಟ್ಸ್‌ಆಪ್ ಬಂದರೆ ಬೇರೆ ಆಪ್‌ಗಳಿಗೆ ಹೊಡೆತ ಬೀಳುವುದು ಖಂಡಿತ.

English summary
WhatsApp Payments Gets Request Money Feature on Android. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot