ಬಂದಿದೆ ವಾಟ್ಸ್ಆಪ್ ಫೇಕ್ ಆಪ್: ಎಚ್ಚರ..!

By Precilla Dias
|

ಇಡೀ ವಿಶ್ವದಲ್ಲಿಯೇ ಅತೀ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳುತ್ತಿರುವ ಆಪ್ ಗಳಲ್ಲಿ ಒಂದಾದ. ಫೇಸ್ ಬುಕ್ ಮಾಲೀಕತ್ವದ ವಾಟ್ಸ್ಆಪ್ ಸುಮಾರು 1.5 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಹಲವು ವಾಟ್ಸ್ ಆಪ್ ಮಾದರಿಯ ಫೇಕ್ ಆಪ್ ಗಳು ಕಾಣಿಸಿಕೊಂಡಿದ್ದು, ಬಳಕೆದಾರನ್ನು ವಂಚಿಸುವಂತಹ ಕಾರ್ಯಗಳನ್ನು ಮಾಡುತ್ತಿವೆ, ಈ ಹಿನ್ನಲೆಯಲ್ಲಿ ಬಳಕೆದಾರರು ಎಚ್ಚರವನ್ನು ವಹಿಸುವುದು ಅಗತ್ಯ.

ಬಂದಿದೆ ವಾಟ್ಸ್ಆಪ್ ಫೇಕ್ ಆಪ್: ಎಚ್ಚರ..!


ವಾಟ್ಸ್ಆಪ್ ದಿನೇ ದಿನೇ ಹೆಚ್ಚು ಬದಲಾವಣೆಯನ್ನು ಹೊಂದುತ್ತಿದ್ದು, ಇದನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಹಲವರು, ವಾಟ್ಸ್ಆಪ್ ಪ್ಲಸ್ ಹೆಸರಿನಲ್ಲಿ ಆಪ್ ವೊಂದನ್ನು ಪ್ಲೇ ಸ್ಟೋರಿನಲ್ಲಿ ಹರಿ ಬಿಟ್ಟಿದ್ದು, ಈ ಆಪ್ ಅನ್ನು ನೀವು ಬಳಕೆ ಮಾಡಿಕೊಳ್ಳಲು ಮುಂದಾದರೆ ನಿಮ್ಮ ಸ್ಮಾರ್ಟ್ ಫೋನ್ ಹ್ಯಾರ್ಕಸ್ ಕೈಗೆ ಸಿಕ್ಕಂತಯೇ ಸರಿ.

ಈಗಾಗಲೇ ವಾಟ್ಸ್ಆಪ್ ಹಿಟ್ ಆಗಿರುವ ಹಿನ್ನಲೆಯಲ್ಲಿ ವಾಟ್ಸ್ಆಪ್ ಪ್ಲಸ್ ಎನ್ನುವ ಆಪ್ ಅನ್ನು ಹೆಚ್ಚಿನ ಜನರನ್ನು ಆಕರ್ಷಿಸುವ ಸಲುವಾಗಿ ಲಾಂಚ್ ಮಾಡಲಾಗಿದ್ದು, ಇದು ಬಳಕೆದಾರರ ಮಾಹಿತಿಯನ್ನು ಕದಿಯುವಂತಹ ಆಪ್ ಆಗಿದೆ. ಇದರಲ್ಲಿ ಬಳಕೆದಾರರು ತಮ್ಮ ಮಾಹಿತಿಯನ್ನು ನೀಡುತ್ತಿದ್ದಂತೇ ಮಾಹಿತಿ ಪಡೆದವರು ನಿಮ್ಮ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಸಾಧ್ಯತೆ ಇದೆ.

ವಾಟ್ಸ್ಆಪ್ ಪ್ಲಸ್ ಪ್ಲೇ ಸ್ಟೋರ್ ಮತ್ತು ವೆಬ್ ನಲ್ಲಿ ಬಳಕೆಗೆ ಮುಕ್ತವಾಗಿದ್ದು, ಇದರೊಂದಿಗೆ ವಾಟ್ಸ್ಆಪ್ ಗೋಲ್ಡ್ ಸಹ ಬಳಕೆಗೆ ದೊರೆಯುತ್ತಿದೆ. ಆದರೆ ಈ ಆಪ್ ಗಳೇಲ್ಲವು ಫೇಕ್ ಆಗಿದ್ದು, ವಾಟ್ಸ್ಆಪ್ ಬೇರೆ ಯಾವುದೇ ಆಪ್ ಗಳನ್ನು ಲಾಂಚ್ ಮಾಡಿಲ್ಲ. ಬಿಸ್ನೆಸ್ ಆಪ್ ವೊಂದನ್ನು ಬಿಟ್ಟರೆ ಉಳಿದ ಯಾವುದೇ ಆಪ್ ಗಳು ವಾಟ್ಸ್ ಆಪ್ ಒಡೆತನಕ್ಕೆ ಸೇರಿರುವುದಲ್ಲ.

ಇದೊಂದು ಆಡ್ ವೇರ್ ಮತ್ತು ಮಾಲ್ವೇರ್ ಹೊಂದಿರುವ ಆಪ್ ಆಗಿದ್ದು, ಇದನ್ನು ಇನ್ ಸ್ಟಾಲ್ ಮಾಡಿಕೊಂಡ ಸಂದರ್ಭದಲ್ಲಿ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಆಡ್ ಗಳು ತುಂಬಿಕೊಳ್ಳಲಿವೆ, ಅಲ್ಲದೇ ನಿಮ್ಮ ಅರಿವೆ ಬಾರದಂತೆ ಹ್ಯಾಕರ್ಸ್ ನಿಮ್ಮ ಸ್ಮಾರ್ಟ್ಫೋನ್ ಎಂಟ್ರಿ ಪಡೆದು ನಿಮಗೆ ನಷ್ಟವನ್ನು ಮಾಡಲಿದ್ದಾರೆ. ಹಾಗಾಗಿ ಈ ಫೇಕ್ ಆಪ್ ಗಳನ್ನು ಬಳಕೆ ಮಾಡಿಕೊಳ್ಳಬಾರದು. ಎಚ್ಚರ ವಹಿಸುವುದು ಅಗತ್ಯ.

Best Mobiles in India

Read more about:
English summary
WhatsApp Plus is a fake app and is not available for download on the Google Play Store. This app is unofficial and could be risky. Here we detail you the risks associated with using such modified apps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X