ಗ್ರೂಪ್ ಅಡ್ಮಿನ್ಗಳಿಗೆ ಹೆಚ್ಚಿನ ಫೀಚರ್ ನೀಡಲಿರುವ ವಾಟ್ಸಾಪ್

ವಾಟ್ಸಾಪ್ ಗ್ರೂಪ್ ಆಡಳಿತಕ್ಕೆ ಅನುವಾಗುವಂತೆ ಉತ್ತಮ ಫೀಚರ್ಗಳನ್ನು ನೀಡಲಿದ್ದು, ಮೆಸೇಜ್ ಅನ್ಸೆಂಡ್ ಮತ್ತು ಯುಪಿಐ ಪಾವತಿಯ ಫೀಚರ್ಗಳು ಕೂಡ ಬೀಟಾ ಟೆಸ್ಟಿಂಗ್ ಹಂತದಲ್ಲಿದೆ.

By Tejaswini P G
|

ವಾಟ್ಸಾಪ್ ಗ್ರೂಪ್ ವಾಯ್ಸ್ ಕಾಲಿಂಗ್ ಸಾಮರ್ಥ್ಯ ನೀಡಲಿರುವ ಸುದ್ದಿ ಇತ್ತೀಚೆಗಷ್ಟೇ ಕೇಳಿಬಂದಿತ್ತು. ಐಓಎಸ್ ಬೀಟಾ ಆವೃತ್ತಿ 2.17.70 ರಲ್ಲೂ ಇದರ ಸುಳಿವು ಕಂಡುಬಂದಿತ್ತು.

ಗ್ರೂಪ್ ಅಡ್ಮಿನ್ಗಳಿಗೆ ಹೆಚ್ಚಿನ ಫೀಚರ್ ನೀಡಲಿರುವ ವಾಟ್ಸಾಪ್

ಆದರೆ ಈಗ ಬರುತ್ತಿರುವ ಸುದ್ದಿಯ ಪ್ರಕಾರ ವಾಟ್ಸಾಪ್ ಗ್ರೂಪ್ ಗಳಿಗೆ ಇನ್ನೂ ಹೆಚ್ಚಿನ ಫೀಚರ್ಗಳನ್ನು ನೀಡಲಿದೆ. ಇನ್ನು ಮುಂದೆ ವಾಟ್ಸಾಪ್ ಗ್ರೂಪ್ ನ ಹೆಸರು, ಸ್ಟೇಟಸ್ ಬದಲಾಯಿಸುವುದು ಇತ್ಯಾದಿ ಜವಾಬ್ದಾರಿಗಳನ್ನು ಗ್ರೂಪ್ ನ ಯಾವ ಯಾವ ಸದಸ್ಯರು ನಿರ್ವಹಿಸಬಹುದು ಎನ್ನುವುದನ್ನು ಗ್ರೂಪ್ ಅಡ್ಮಿನಿಸ್ಟ್ರೇಟರ್ಗಳು ನಿರ್ಧರಿಸಬಹುದು.WABetaInfo ನ ಪೋಸ್ಟ್ ಒಂದರ ಅನುಸಾರ ಈ ಹೊಸ ಫೀಚರ್ ವಾಟ್ಸಾಪ್ ನ ಹೊಸ ಆಂಡ್ರಾಯ್ಡ್ ಬೀಟಾ ಆವೃತ್ತಿ 2.17.387ರಲ್ಲಿ ಬಿಡುಗಡೆಯಾಗಲಿದೆ.

ವರದಿಗಳ ಅನುಸಾರ ವಾಟ್ಸಾಪ್ ಗ್ರೂಪ್ ಆಡಳಿತವನ್ನು ಉತ್ತಮವಾಗಿ ನಿರ್ವಹಿಸಲು ಅನುವಾಗುವಂತೆ ಉತ್ತಮ ಫೀಚರ್ಗಳನ್ನು ನೀಡಲಿದೆ. ಮೊದಲನೆಯದಾಗಿ ಗ್ರೂಪ್ ಆಡ್ಮಿನ್ ಗಳು ಗ್ರೂಪ್ ಅನ್ನು ಸೃಷ್ಟಿಸಿದ ಸದಸ್ಯರನ್ನು ಗ್ರೂಪ್ ನಿಂದ ತೆಗೆಯುವುದನ್ನು ತಡೆಗಟ್ಟಲು ಹೊಸ ಟೂಲ್ ಬರಲಿದೆ. ಸಧ್ಯಕ್ಕೆ ಗ್ರೂಪ್ ನ ಯಾವುದೇ ಸದಸ್ಯರು ಯಾವುದೇ ಸದಸ್ಯರನ್ನು ಬೇಕಾದರೂ ಗ್ರೂಪ್ ನಿಂದ ತೆಗೆಯಬಹುದು.ಮೇಲೆ ಹೇಳಿದ ಹೊಸ ಫೀಚರ್ಗಳು ಸಧ್ಯಕ್ಕೆ ಎಲ್ಲರಿಗೂ ಲಭ್ಯವಿಲ್ಲ.

ಮೇಸೆಂಜರ್ ಇನ್ಸೆಂಟ್ ಗೇಮ್ಸ್ ಸಂಖ್ಯೆ ಹೆಚ್ಚಳ; ಮನೊರಂಜನೆಯ ಮಹಾಪೂರಮೇಸೆಂಜರ್ ಇನ್ಸೆಂಟ್ ಗೇಮ್ಸ್ ಸಂಖ್ಯೆ ಹೆಚ್ಚಳ; ಮನೊರಂಜನೆಯ ಮಹಾಪೂರ

ಬೀಟಾ ಟೆಸ್ಟರ್ ಗಳು ಈ ಫೀಚರ್ ಅನ್ನು ಪರೀಕ್ಷಿಸುತ್ತಿದ್ದು ಅದರಲ್ಲಿರಬಹುದಾದ ತಪ್ಪುಗಳನ್ನು ಹುಡುಕುತ್ತಿದ್ದಾರೆ. ಇದನ್ನು ಸರಿಯಾಗಿ ಪರೀಕ್ಷಿಸಿದ ನಂತರ ಈ ಫೀಚರ್ಗಳನ್ನು ಎಲ್ಲಾ ಬಳಕೆದಾರರಿಗೆ ನೂತನ ಆವೃತ್ತಿಯಲ್ಲಿ ವಾಟ್ಸಾಪ್ ಬಿಡುಗಡೆ ಮಾಡಲಿದೆ.

ವಾಟ್ಸಾಪ್ ಈಗಾಗಲೇ ಕಳುಹಿಸಿರುವ ಮೆಸೇಜ್ಗಳನ್ನು ಅನ್ಸೆಂಡ್ ಮಾಡುವ ಫೀಚರ್ ನೀಡಲಿದೆ ಎಂಬ ಸುದ್ದಿ ಭಾರೀ ಪ್ರಚಾರ ಪಡೆದಿತ್ತು. WABetaInfo ಬ್ಲಾಗ್ ಮತ್ತು ಟ್ವಿಟ್ಟರ್ ಹ್ಯಾಂಡಲ್ಗಳ ಅನುಸಾರ ವಾಟ್ಸಾಪ್ "ಡಿಲೀಟ್ ಫಾರ್ ಎವ್ರಿವನ್" ಎಂಬ ಫೀಚರನ್ನು ಪರೀಕ್ಷಿಸುವ ಅಂತಿಮ ಹಂತದಲ್ಲಿದೆ.

ಇನ್ನು ಕೆಲವೇ ತಿಂಗಳಲ್ಲಿ ಈ ಫೀಚರ್ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಈ ಫೀಚರ್ ಮೂಲಕ ಬಳಕೆದಾರರು ವಾಟ್ಸಾಪ್ನಲ್ಲಿ ಈಗಾಗಲೇ ಕಳುಹಿಸಿರುವ ಟೆಕ್ಸ್ಟ್, ವೀಡಿಯೋ, ಫೋಟೋ, ಜಿಫ್, ಡಾಕ್ಯುಮೆಂಟ್, ಸ್ಟೇಟಸ್ ರಿಪ್ಲೈ ಗಳನ್ನು ಕಳುಹಿಸಿದ 5 ನಿಮಷಗಳೊಳಗೆ ಹಿಂಪಡೆಯಬಹುದು ಅಥವ ಅನ್ಸೆಂಡ್ ಮಾಡಬಹುದು.

ಇಷ್ಟೇ ಅಲ್ಲದೆ ವಾಟ್ಸಾಪ್ UPI ಪಾವತಿಯನ್ನೂ ಕೂಡ ಆಪ್ ನೊಂದಿಗೆ ಜೋಡಿಸುವ ಯೋಜನೆ ಹೊಂದಿದ್ದು, ಬಳಕೆದಾರರು ವಾಟ್ಸಾಪ್ ಮೂಲಕವೇ ತಮ್ಮ ಕಾಂಟ್ಯಾಕ್ಟ್ಗಳೊಂದಿಗೆ ಹಣ ವಿನಿಮಯ ಮಾಡಿಕೊಳ್ಳಬಹುದು. ಈ ಫೀಚರ್ ಅನ್ನು ವಾಟ್ಸಾಪ್ ನ ಆಂಡ್ರಾಯ್ಡ್ ಬೀಟಾ ಆವೃತ್ತಿ 2.17.295 ರಲ್ಲಿ ಕಾಣಲಾಗಿತ್ತು.

Best Mobiles in India

Read more about:
English summary
WhatsApp is likely to roll out more features to group admins soon so that the management of the groups becomes simple.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X