ವಾಟ್ಸ್‌ಆಪ್‌ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಮಾಡಬಾರದು ಅಂದ್ರೆ ಹೀಗೆ ಮಾಡಿ...!

|

ವಿಶ್ವದಲ್ಲಿ ಅತೀ ಹಚ್ಚು ಬಳಕೆದಾರರನ್ನು ಹೊಂದಿರುವ ಸೋಶಿಯಲ್ ಮೇಸೆಂಜಿಗ್ ಆಪ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ, ಫೇಸ್‌ಬುಕ್ ಮಾಲೀಕತ್ವದ ವಾಟ್ಸ್ಆಪ್ ತನ್ನ ಬಳಕೆದಾರರಿಗೆ ಮತ್ತೊಂದು ಬೊಂಬಾಟ್ ಆಯ್ಕೆಯನ್ನು ನೀಡಲು ಮುಂದಾಗಿದೆ. ಇಷ್ಟು ದಿನ ವಾಟ್ಸ್‌ಆಪ್ ನಲ್ಲಿ ವಂಚನೆಯನ್ನು ಮಾಡುತ್ತಿದ್ದವರಿಗೆ ತಡೆಯನ್ನು ಹಾಕುವ ನಿಟ್ಟಿನಲ್ಲಿ ಹೊಸ ಮಾದರಿಯ ಕ್ರಮಕ್ಕೆ ವಾಟ್ಸ್‌ಆಪ್ ಮುಂದಾಗಿದ್ದು, ಇದಕ್ಕಾಗಿ ಹೊಸ ಸೇವೆಯನ್ನು ಆರಂಭಿಸುತ್ತಿದೆ.

ವಾಟ್ಸ್‌ಆಪ್‌ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಮಾಡಬಾರದು ಅಂದ್ರೆ ಹೀಗೆ ಮಾಡಿ

ಮೊಬೈಲ್ ಮೂಲಕವೇ ಎಲ್ಲಾ ಮಾದರಿಯ ಮಾದರಿಯ ವ್ಯವಹಾರಗಳು ನಡೆಯುತ್ತಿರುವ ಕಾರಣದಿಂದಾಗಿ ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕ್ ಮಾಡಲು ಎಲ್ಲಾ ಮಾದರಿಯಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಇದೇ ರೀತಿಯಲ್ಲಿ ವಾಟ್ಸ್‌ಆಪ್ ಮೂಲಕವೂ ವೈರಸ್ ಹರಿಬಿಡುವುದು, ಇಲ್ಲವೇ ಬೇರೆ ಯಾವುದೇ ಮಾದರಿಯ ಮಾಹಿತಿಯನ್ನು ಕಳುಹಿಸುವುದನ್ನು ಮಾಡುತ್ತಿದ್ದವರಿಗೆ ತಡೆ ನೀಡುವ ಸಲುವಾಗಿಯೇ ವಾಟ್ಸ್‌ಆಪ್ ಹೊಸದಾಗಿ ಲಿಂಕ್ ಇಂಡಿಕೇಟರ್ ಆಯ್ಕೆಯನ್ನು ಬಳಕೆದಾರರಿಗೆ ನೀಡುತ್ತಿದೆ.

ಸಂದೇಹಾಸ್ಪದ ಲಿಂಕ್ ಸೂಚಕ:

ಸಂದೇಹಾಸ್ಪದ ಲಿಂಕ್ ಸೂಚಕ:

ವಾಟ್ಸ್‌ಆಪ್ ನಲ್ಲಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಫಾರ್ವಡ್ ಮಸೇಜ್ ಗಳು ಹರಿದಾಡುತ್ತವೆ. ಅಲ್ಲದೇ ಹಾದಿ ತಪ್ಪಿಸವಂತ ಮೇಸೆಜ್ ಗಳು ಬರುತ್ತವೆ. ಇಲ್ಲಿ ಕ್ಲಿಕ್ ಮಾಡಿ ಅತೀ ಕಡಿಮೆ ಬೆಲೆಗೆ ಫೋನ್ ಪಡೆಯಿರಿ ಎಂಬ ಆಮಿಷಗಳು ಕಾಣಿಸಿಕೊಳ್ಳುತ್ತವೆ, ಇವುಗಳಲ್ಲಿ ಸಾಕಷ್ಟು ವಂಚನೆಯ ಜಾಲವಾಗಿರುವ ಸಾಧ್ಯತೆ ಹೆಚ್ಚು. ಈ ಹಿನ್ನಲೆಯಲ್ಲಿ ನಿಮಗೆ ಸಂದೇಹಾಸ್ಪದ ಲಿಂಕ್ ಸೂಚಕ ಆಯ್ಕೆಯನ್ನು ನೀಡಲು ವಾಟ್ಸ್ಆಪ್ ಯೋಜನೆ ರೂಪಿಸಿದೆ.

ಏನೀದು..?

ಏನೀದು..?

ನಿಮ್ಮ ವಾಟ್ಸ್‌ಆಪ್‌ನಲ್ಲಿ ಯಾವುದಾರು ಲಿಂಕ್ ಗಳು ಬಂದ ಸಂದರ್ಭದಲ್ಲಿ ಅದನ್ನು ಕ್ಲಿಕ್ ಮಾಡಿ ಓಪನ್ ಮಾಡುವ ಮೊದಲೇ ವಾಟ್ಸ್ಆಪ್ ಆ ಲಿಂಕ್ ಅನ್ನು ಪರೀಕ್ಷಿಸಿ ನೀವು ಅದನ್ನು ಓಪನ್ ಮಾಡಬಹುದೇ ಅಥಾವ ಅದು ಯಾವುದಾದರು ವಂಚನೆಯ ಜಾಲವೇ ಎಂಬುದನ್ನು ತಿಳಿಸಿದೆ. ಅದು ತಿಳಿಸಿದ ಮೇಲೆಯೂ ಅದನ್ನು ಒಪನ್ ಮಾಡುವುದು ನಿಮಗೆ ಬಿಟ್ಟಿದ್ದು. ಮಾಡಿದರೆ ಕೆಲವು ಬಾರಿ ತೊಂದರೆಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿ ಇರಲಿದೆ.

ಈಗಾಗಲೇ ಇದೆ:

ಈಗಾಗಲೇ ಇದೆ:

ಸಂದೇಹಾಸ್ಪದ ಲಿಂಕ್ ಸೂಚಕ ಆಯ್ಕೆಯನ್ನು ಈಗಾಗಲೇ ವಾಟ್ಸ್‌ಆಪ್ ಆಪಲ್ ಬಳಕೆದಾರರಿಗೆ ನೀಡಿದೆ. ಇದೇ ಆಯ್ಕೆಯನ್ನು ಇನ್ನು ಮುಂದೆ ಆಂಡ್ರಾಯ್ಡ್ ಬಳಕೆದಾರರಿಗೂ ನೀಡಲು ಮುಂದಾಗಿದೆ. ಇದರಿಂದಾಗಿ ಮುಂದೆ ನಿಮ್ಮನ್ನು ವಂಚಿಸಲು ಯಾರಾದರು ಪ್ರಯತ್ನಿಸಿದ ಸಂದರ್ಭದಲ್ಲಿ ನೀವು ತೊಂದರೆಗೆ ಸಿಲುಕಿಕೊಳ್ಳುವುದನ್ನು ತಪ್ಪಿಸಬಹುದಾಗಿದೆ.

ಬಿಟಾ ಆವೃತ್ತಿ:

ಬಿಟಾ ಆವೃತ್ತಿ:

ಸಂದೇಹಾಸ್ಪದ ಲಿಂಕ್ ಸೂಚಕ ವನ್ನು ಮೊದಲಿಗೆ ವಾಟ್ಸ್ಆಪ್ ತನ್ನ ಬೀಟಾ ಬಳಕೆದಾರರಿಗೆ ನೀಡಲಿದೆ ಎನ್ನಲಾಗಿದೆ. ಇದಾದ ನಂತರದಲ್ಲಿ ಸಾಮಾನ್ಯ ಬಳಕೆದಾರರಿಗೂ ನೀಡಲಿದೆ. ನೀವು ಈ ಹೊಸ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಬೇಕು ಎನ್ನುವುದಾದರೆ ಬಿಟಾ ಆವೃತ್ತಿ ಬಳಕೆದಾರರಾಗಿ ಮತ್ತು ಈಗಲೇ ನಿಮ್ಮ ವಾಟ್ಸ್ಆಪ್ ಆಪ್‌ಡೇಟ್ ಮಾಡಿ.

ಮಹತ್ವದ ಹೆಜ್ಜೆ:

ಮಹತ್ವದ ಹೆಜ್ಜೆ:

ವಾಟ್ಸ್ಆಪ್ ತನ್ನ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೆಕ್ಯೂರಿಟಿಯನ್ನು ಒದಗಿಸಲು ಎಲ್ಲಾ ಮಾದರಿಯ ಪ್ರಯತ್ನವನ್ನು ಮಾಡುತ್ತಿದೆ. ಇದೇ ಮಾದರಿಯಲ್ಲಿ ಈ ಸಂದೇಹಾಸ್ಪದ ಲಿಂಕ್ ಸೂಚಕವನ್ನು ಬಿಡುಗಡೆ ಮಾಡಿದೆ. ಇದು ಮಹತ್ವದ ಹೆಜ್ಜೆಯಾಗಿದ್ದು, ಬಳಕೆದಾರರನ್ನು ಎಚ್ಚರಿಸುವ ಮತ್ತು ಮೋಸದ ಜಾಲಕ್ಕೆ ಸಿಲುಕದಿರುವಂತೆ ಮಾಡುವ ಪ್ರಯತ್ನವಾಗಿದೆ.

Best Mobiles in India

English summary
WhatsApp Rolls Out 'Suspicious Link Indicator' for All Android Beta Users. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X