Subscribe to Gizbot

ಶೀಘ್ರದಲ್ಲೇ ವಾಟ್ಸ್ಆಪ್ ಮೂಲಕ ಎಲ್ಲಾ ರೀತಿಯ ಫೈಲ್ ಶೇರ್ ಮಾಡುವ ಅವಕಾಶ..!

By: Akshatha J

ಬೇರೆ ಮೆಸೇಜಿಂಗ್ ಪ್ಲಾಟ್ಫಾರ್ಮ್ಗೆ ಸಮಾನವಾಗಿರಲು ವಾಟ್ಸ್ಆಪ್, ಇದೀಗ ಹೊಸ ವೈಶಿಷ್ಟ್ಯಗಳನ್ನು ಒಂದೊಂದಾಗಿ ಪರಿಚಯಿಸುತ್ತುರುವುದು ಎಲ್ಲರಿಗು ತಿಳಿದಿದೆ. ಆದರೆ ಇತ್ತೀಚಿನವರೆಗೂ, ಹೊಸ ವೈಶಿಷ್ಟ್ಯಗಳನ್ನು ರೋಲ್ ಮಾಡುವಲ್ಲಿ ವೇದಿಕೆಯು ಬಹಳ ಮಂದಗತಿಯಲ್ಲಿತ್ತು ಆದರೆ ಇನ್ನು ಮುಂದೆ ಈ ರೀತಿ ಆಗಲ್ಲ...

ಶೀಘ್ರದಲ್ಲೇ ವಾಟ್ಸ್ಆಪ್ ಮೂಲಕ ಎಲ್ಲಾ ರೀತಿಯ ಫೈಲ್ ಶೇರ್ ಮಾಡುವ ಅವಕಾಶ..!

ವಾಟ್ಸ್ಆಪ್ ತನ್ನ ಹೊಸ ಆವಿಷ್ಕಾರದಲ್ಲಿ ನಿರತವಾಗಿದೆ ಎಂದು ತಿಳಿದುಬಂದಿದೆ. ಹಾಗು ತನ್ನ ಹೊಸ ವೈಶಿಷ್ಟ್ಯಗಳನ್ನು ಜನರಿಗೆ ಪರಿಚಯಿಸುವಲ್ಲಿ ನಿರತವಾಗಿದೆ. ವಾಟ್ಸ್ಆಪ್ ಇನ್ಫೋ ಇಂದ ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ, ವಾಟ್ಸ್ಆಪ್ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ ಹಾಗು ನೀವು ಎಲ್ಲಾ ರೀತಿಯ ಫೈಲುಗಳನ್ನು ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಎಲ್ಲರಿಗು ಈ ಫೈಲುಗಳನ್ನು ಶೇರ್ ಮಾಡಲು ಅವಕಾಶ ಕಲ್ಪಿಸಿದೆ. ಈ ಆವಿಷ್ಕಾರ ವಾಟ್ಸ್ಆಪ್ ಬಳಕೆದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಇನ್ನು ನೀವು ಶೇರ್ ಮಾಡಬಹುದಾದ ಫೈಲುಗಳು ಈಗಿದೆ...

ಈ ಹೊಸ ವೈಶಿಷ್ಟ್ಯದಿಂದ ನೀವು CSV, doc, docx, pdf, ppt, pptx, rtf, txt, xls, xlsx, ಇನ್ನು ಹಲವು ಫೈಲುಗಳನ್ನು ಶೇರ್ ಮಾಡಬಹುದಾಗಿದೆ. ಇನ್ನು ಈ ವೈಶಿಷ್ಟ್ಯವನ್ನು ಪರೀಕ್ಷೆ ಮಾಡಲಾಗುತ್ತಿದೆ. ಆದರೇ ನಿಮ್ಮ ಶೇರ್ ಫೈಲ್ 100MB, IOS 128MB ಮತ್ತು WhatsApp ವೆಬ್ನಲ್ಲಿ 64MB ಆಗಿರುತ್ತದೆ. ಮೂಲಗಳ ಪ್ರಕಾರ ಕಂಪೆನಿಯು 4K ವಿಡಿಯೋಗಳನ್ನು ಶೇರ್ ಮಾಡುವಲ್ಲಿ ಕೂಡ ಕಾರ್ಯ ನಿರತವಾಗಿದೆ ಎಂದು ತಿಳಿಯಲಾಗಿದೆ.

Read more about:
English summary
WhatsApp is testing a new feature that will let you share any type of file with your contacts or groups.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot