ವಾಟ್ಸ್‌ಆಪ್ ಇರೋದು ಕೇವಲ ಚಾಟ್ ಮಾಡೋದಕ್ಕೆ ಮಾತ್ರವಲ್ಲ!! ಮತ್ತೆ?

Written By:

ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೆಸ್‌ಬುಕ್ ಒಡೆತನದ ಮೆಸೇಂಜರ್ ಆಪ್ ವಾಟ್ಸ್‌ಆಪ್‌ ಇದೀಗ ಅತ್ಯುತ್ತಮ ಅಪ್‌ಡೇಟ್ ಹೊಂದಿದೆ.! ಆಪ್‌ನಲ್ಲಿನ ಸೇವೆಗಳನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿರುವ ವಾಟ್ಸ್‌ಅಪ್ ಇದೀಗ ತನ್ನ ಬಳಕೆದಾರರಿಗಾಗಿ ಹೊಸದೊಂದು ಅದ್ಬುತ ಆಯ್ಕೆ ನೀಡುತ್ತಿದೆ.!!

ಹೌದು, ಇಂದು ವಾಟ್ಸ್‌ಆಪ್‌ ಕೇವಲ ಚಾಟಿಂಗ್‌ಗಾಗಿ ಮಾತ್ರ ಉಳಿದಿಲ್ಲ. ಹಲವಾರು ಸೌಲಭ್ಯಗಳು ಈಗಾಗಲೇ ನಮಗೆ ವಾಟ್ಸ್‌ಆಪ್‌ನಿಂದ ದೊರೆಯುತ್ತಿದದ್ದು, ಇದೀಗ ಹೊಸ ಆಯ್ಕೆ ಸೇರ್ಪಡೆಯಾಗಿದೆ. ಹಾಗಾಗಿ, ಇನ್ನು ಇ-ಮೇಲ್‌ ರೀತಿಯಲ್ಲಿ ಎಲ್ಲಾ ದಾಖಲೆಗಳನ್ನು (ಫೈಲ್‌) ವಾಟ್ಸ್‌ಅಪ್ ಮೂಲಕವೇ ಹಂಚಿಕೊಳ್ಳಬಹುದಾಗಿದೆ.!!

ತಮ್ಮ ಪ್ರೀತಿಪಾತ್ರರ ಜೊತೆ ಸಂಭಾಷಣೆ ನಡೆಸಲು ಮಾತ್ರ ಬಳಕೆಯಾಗುತ್ತಿದ್ದ ವಾಟ್ಸ್‌ಆಪ್‌ ಇನ್ನು ನಮ್ಮ ವ್ಯವಹಾರಿಕ ಜೀವನಕ್ಕೂ ಕಾಲಿಟ್ಟಿದ್ದು, ಆಂಡ್ರಾಯ್ಡ್, ವಿಂಡೋಸ್ ಮತ್ತು ಐಒಎಸ್ ಮೂರು ಫಾರ್ಮೆಟ್‌ಗಳಿಗೂ ಲಭ್ಯವಿದೆ. ಹಾಗಾದರೆ, ವಾಟ್ಸ್‌ಆಪ್‌ ಮೂಲಕ ದಾಖಲೆಗಳನ್ನು (ಫೈಲ್‌) ಶೇರ್ ಮಾಡುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಪ್‌ಡೇಟ್ ವರ್ಷನ್ ಆಪ್ ಡೌನ್‌ಲೋಡ್ ಮಾಡಿ.!!

ಅಪ್‌ಡೇಟ್ ವರ್ಷನ್ ಆಪ್ ಡೌನ್‌ಲೋಡ್ ಮಾಡಿ.!!

ದಾಖಲೆಗಳನ್ನು (ಫೈಲ್‌) ಶೇರ್ ಮಾಡುವ ಆಯ್ಕೆಗಾಗಿ ಹೊಸದಾಗಿ ಅಭಿವೃಧ್ಧಿಗೊಂಡಿರುವ ಅಪ್‌ಡೇಟ್ ವರ್ಷನ್ ಆಪ್ ಡೌನ್‌ಲೋಡ್ ಮಾಡಿ. ಈ ಫೇವರಿಟ್ ಫೀಚರ್ ಹೊಸದಾಗಿ ಬಂದಿರುವ ಬೀಟಾ ವರ್ಷನ್ನಲ್ಲಿ ಲಭ್ಯವಿದೆ.! ನೀವು ಗೂಗಲ್ ಪ್ಲೇ ಸ್ಟೋರ್ ಮೂಲಕ ಬೀಟಾವರ್ಷನ್ ಆಪ್‌ ಡೌನ್‌ಲೋಡ್ ಮಾಡಬಹುದಾಗಿದೆ.!!

100MB ದಾಖಲೆಯನ್ನು ಸೆಂಡ್ ಮಾಡಬಹುದು.!!

100MB ದಾಖಲೆಯನ್ನು ಸೆಂಡ್ ಮಾಡಬಹುದು.!!

ಮೊದಲೆಲ್ಲಾ ದಾಖಲೆಗಳನ್ನು ಸೆಂಡ್ ಮಾಡಲು ಹರಸಾಹಸಪಡಬೇಕಿತ್ತು. ಆದರೆ ಇಂದು ಎಲ್ಲಾ ಗುಪ್ತದಾಖಲೆಗಳನ್ನು ಸೆಂಡ್ ಮಾಡಲು ಕೇವಲ ಒಂದು ಕ್ಲಿಕ್ ಸಾಕಾಗುತ್ತದೆ. ಹಾಗಾಗಿ, ಇ-ಮೇಲ್‌ ರೀತಿಯಲ್ಲಿಯೇ ವಾಟ್ಸ್‌ಅಪ್ ಬಳಕೆ ಮಾಡಬಹುದು.!!

ಎನ್‌ಸ್ಕ್ರಿಪ್ಟ್ ಆಗಿದೆ ವಾಟ್ಸ್‌ಆಪ್‌!!

ಎನ್‌ಸ್ಕ್ರಿಪ್ಟ್ ಆಗಿದೆ ವಾಟ್ಸ್‌ಆಪ್‌!!

ವಾಟ್ಸ್‌ಆಪ್‌ ಮೂಲಕ ದಾಖಲೆಗಳನ್ನು ಶೇರ್ ಮಾಡುವುದರಿಂದ ನಿಮ್ಮ ಯಾವುದೇ ದಾಖಲೆಗಳು ಕಳುವಾಗದಂತೆ ವಾಟ್ಸ್‌ಆಪ್‌ ಎನ್‌ಸ್ಕ್ರಿಪ್ಟ್ ಆಗಿದೆ. ಹಾಗಾಗಿ, ನಿಮ್ಮ ಸಂಭಾಷಣೆ ಸೇರಿ ಯಾವುದೇ ದಾಖಲೆಗಳು ವಾಟ್ಸ್‌ಆಪ್‌ ಉದ್ಯೋಗಿಗಳು ಸಹ ನೋಡಲು ಸಾಧ್ಯವಿಲ್ಲಾ ಎಂದರೆ ನೀವು ನಂಬಲೇಬೇಕು.!

 ಹಣ ಸೆಂಡ್‌ ಮಾಡುವ ಸೌಲಭ್ಯ ಶೀಘ್ರದಲ್ಲಿಯೇ!!

ಹಣ ಸೆಂಡ್‌ ಮಾಡುವ ಸೌಲಭ್ಯ ಶೀಘ್ರದಲ್ಲಿಯೇ!!

ವಾಟ್ಸ್‌ಆಪ್‌ ಮೂಲಕ ದಾಖಲೆಗಳನ್ನು ಶೇರ್ ಮಾಡುವುದು ಈಗಷ್ಟೇ ಕಾಲಿಟ್ಟಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ವಾಟ್ಸ್‌ಆಪ್ ಮೂಲಕ ಹಣ ಸೆಂಡ್‌ ಮಾಡುವ ಸೌಲಭ್ಯ ಸಹ ಸಿಗಲಿದೆ. ಹಾಗಾಗಿ, ವಾಟ್ಸ್‌ಆಪ್‌ ಹೆಚ್ಚು ಆಕರ್ಷಣೀಯವಾಗಲಿದೆ.!

ಓದಿರಿ: ಇನ್ಮುಂದೆ ಹೆಣ್ಣುಮಕ್ಕಳು ತಮ್ಮದೇ ಫೇಸ್‌ಬುಕ್‌ ಪ್ರೊಫೈಲ್ ಫೋಟೊ ಹಾಕಬಹುದು!! ಏಕೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The company is said to be testing support for all types of file transfers (including archives) on Android, iPhone, and Windows. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot