ವಾಟ್ಸ್‌ಆಪ್‌ನಲ್ಲಿ ಬರ್ತಿದೆ ಸ್ಟಿಕ್ಕರ್ ಫೀಚರ್!! ಬಳಸಲು ತಯಾರಾಗಿ!!

By GizBot Bureau
|

ಫೇಸ್ಬುಕ್ ನ ಸಂಸ್ಥೆಯ ವಾಟ್ಸ್ ಆಪ್, ಹಲವಾರು ವರ್ಷಗಳಿಂದ, ಟೆಕ್ಸ್ಟ್ ಮೆಸೇಜ್ ಗಳಿಗೆ ಪ್ರತ್ಯುತ್ತರ ನೀಡಲು ಹಲವು ರೀತಿಯ ಮಾರ್ಗಗಳನ್ನು ನೀಡಿದೆ.ಇದರಲ್ಲಿ ವಾಯ್ಸ್ ನೋಟ್ಸ್, GIF ಸಪೋರ್ಟ್, ಮತ್ತು ಎಮೋಜಿಗಳು ಕೂಡ ಹೌದು.ಆದರೆ ಈಗ ಸದ್ಯದಲ್ಲೇ ಟೆಕ್ಸ್ಟ್ ಮೆಸೇಜ್ ಗಳಿಗೆ ಪ್ರತ್ಯುತ್ತರ ನೀಡಲು ಮತ್ತೊಂದು ವೈಶಿಷ್ಟ್ಯವು ವಾಟ್ಸ್ ಆಪ್ ನಲ್ಲಿ ಲಭ್ಯವಾಗುತ್ತದೆ ಅದುವೇ ಸ್ಟಿಕ್ಕರ್ಸ್.

ಕರ್ನಾಟಕ ರಾಜ್ಯ ಪೋಲೀಸ್ ಅಪ್ ಬಿಡುಗಡೆ..ಡೌನ್‌ಲೋಡ್ ಮಾಡಲೇಬೇಕು ಎನ್ನಲು 5 ಕಾರಣಗಳು!!ಕರ್ನಾಟಕ ರಾಜ್ಯ ಪೋಲೀಸ್ ಅಪ್ ಬಿಡುಗಡೆ..ಡೌನ್‌ಲೋಡ್ ಮಾಡಲೇಬೇಕು ಎನ್ನಲು 5 ಕಾರಣಗಳು!!

ವಾಟ್ಸ್ ಆಪ್ ನಲ್ಲಿ ಸ್ಟಿಕ್ಕರ್ ಗಳು ಬರುತ್ತವೆ ಎಂಬುದನ್ನು ಮೊದಲೇ ಊಹಿಸಲಾಗುತ್ತಿತ್ತು, ಯಾಕೆಂದರೆ ಇದರ ಪೇರೆಂಟ್ ಕಂಪೆನಿ ಈಗಾಗಲೇ ಪ್ರಮುಖ ಆಪ್ ನಲ್ಲಿ ಮಾತ್ರವಲ್ಲದೆ, ಮೆಸೇಂಜರ್ ನಲ್ಲೂ ಕೂಡ ಸ್ಟಿಕ್ಕರ್ ಗಳನ್ನು ಬಳಕೆ ಮಾಡಲು ಅನುವು ನೀಡಿದೆ.

ವಾಟ್ಸ್‌ಆಪ್‌ನಲ್ಲಿ ಬರ್ತಿದೆ ಸ್ಟಿಕ್ಕರ್ ಫೀಚರ್!! ಬಳಸಲು ತಯಾರಾಗಿ!!

ವೆಬ್ಟಿನಾಇನ್ಫೋ ವೆಬ್ ಸೈಟ್ ವಾಟ್ಸ್ ಆಪ್ ಮತ್ತು ಎಫ್ ಬಿ ಮೆಸೇಂಜರ್ ಗಳಲ್ಲಿ ಮುಂಬರುವ ದಿನಗಳಲ್ಲಿ ಬರುವ ವೈಶಿಷ್ಟ್ಯಗಗಳ ಬಗ್ಗೆ , ಟ್ರ್ಯಾಕ್ ಇಡುತ್ತಿದ್ದು, ಈಗಾಗಲೇ ಆಂಡ್ರಾಯ್ಡ್ ಬೆಟಾ ವರ್ಷನ್ 2.18.120. ನಲ್ಲಿ ವಾಟ್ಸ್ ಆಪ್ ನ ಸ್ಟಿಕ್ಕರ್ ವೈಶಿಷ್ಟ್ಯ ಹೇಗಿರಲಿದೆ ಎಂಬುದನ್ನು ಪರೀಕ್ಷಿಸುತ್ತಿದೆ.. ಈ ವೈಶಿಷ್ಟ್ಯವನ್ನು ಈಗಾಗಲೇ ಲೇಟೇಸ್ಟ್ ಆಂಡ್ರಾಯ್ಡ್ ಬೆಟಾ ವಾಟ್ಸ್ ಆಪ್ ವರ್ಷನ್ – 2.18.189 ರಲ್ಲಿ ತೆಗೆದುಹಾಕಲಾಗಿದೆ. ಮತ್ತು ಯಾವಾಗ ವೈಶಿಷ್ಟ್ಯವನ್ನು ಬಿಡುಗಡೆಗೊಳಿಸಲಾಗುತ್ತೆ ಎಂಬ ಬಗ್ಗೆ ಯಾವುದೇ ಸಮಯವನ್ನು ನಿಗದಿ ಪಡಿಸಿಲ್ಲ.

ವಾಟ್ಸ್ ಆಪ್ ನಲ್ಲಿ ಸ್ಟಿಕ್ಕರ್ ಪ್ರತಿಕ್ರಿಯೆಗಳ ಅನುಷ್ಟಾನ

ವಾಟ್ಸ್ ಆಪ್ ಬಳಕೆದಾರರಿಗೆ ಸ್ಟಿಕ್ಕರ್ ಗಳನ್ನು ಸಂಬಂಧಪಟ್ಟ ಸ್ಟಿಕ್ಕರ್ ವ್ಯೂವ್ ನಲ್ಲಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುತ್ತದೆ ಮತ್ತು ಅದನ್ನು ಪ್ರತಿಕ್ರಿಯೆಯ ರೂಪದಲ್ಲಿ ಕಳುಹಿಸಬಹುದು. ಪರದೆಯ ಮೇಲ್ಬಾಗದ ಕಾರ್ನರ್ ನಲ್ಲಿ ಹೃದಯದ ಆಕಾರದ ಒಂದು ಐಕಾನ್ ಇರುತ್ತದೆ. ಇದು ಎಲ್ಲಾ ಕೆಟಗರಿಗಳನ್ನು ತೋರಿಸುತ್ತದೆ..ನೀವು ಡೌನ್ ಲೋಡ್ ಮಾಡುವ ಸ್ಟಿಕ್ಕರ್ ಪ್ಯಾಕ್ ಗಳನ್ನು ಕೂಡ ಇದು ತೋರಿಸುತ್ತದೆ. ಬಳಕೆದಾರರು ಬೇರೆಬೇರೆ ನಾಲ್ಕು ಕೆಟಗರಿಯಿಂದ ಸ್ಟಿಕ್ಕರ್ ಗಳನ್ನು ಡೌನ್ ಲೋಡ್ ಮಾಡಲು ಅವಕಾಶವಿರುತ್ತದೆ. ಅವುಗಳೆಂದರೆ ಲೋಲ್, ಲವ್,ಸ್ಯಾಡ್ ಮತ್ತು ವಾವ್ .

ಸದ್ಯ ಈ ವೈಶಿಷ್ಟ್ಯವು ಬೆಟಾ ವರ್ಷನ್ ಆಗಿದ್ದು, ಸದ್ಯದಲ್ಲೇ ಎಲ್ಲಾ ಬಳಕೆದಾರರಿಗೂ ತಲುಪುವ ನಿರೀಕ್ಷೆ ಇದೆ.

ವಾಟ್ಸ್‌ಆಪ್‌ನಲ್ಲಿ ಬರ್ತಿದೆ ಸ್ಟಿಕ್ಕರ್ ಫೀಚರ್!! ಬಳಸಲು ತಯಾರಾಗಿ!!

ಇದೇ ಬೇಟಾ ವರ್ಷನ್ ನಲ್ಲಿ ಗ್ರೂಪ್ ವೀಡಿಯೋ ಕಾಲಿಂಗ್ ಗೂ ಕೂಡ ಅವಕಾಶವಿರುತ್ತಾ?

ವಾಟ್ಸ್ ಆಪ್ ಕೆಲವು ದಿನಗಳ ಹಿಂದಷ್ಟೇ ಆಂಡ್ರಾಯ್ಡ್ ಬೇಟಾ ವರ್ಷನ್ 2.18.189 ನಲ್ಲಿ ಗ್ರೂಪ್ ವೀಡಿಯೋ ಕಾಲಿಂಗ್ ಗೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಆದರೆ ಈ ವೈಶಿಷ್ಟ್ಯವನ್ನು ಅಧಿಕೃತವಾಗಿ ಫೇಸ್ ಬುಕ್ ನ ಆನುವಲ್ ಡೆವಲಪರ್ ಕಾನ್ಫರೆನ್ಸ್ ನಲ್ಲಿ ಹಿಂತೆಗೆದುಕೊಳ್ಳಲಾಯಿತು.

ಒಂದು ವೇಳೆ ಈ ಬೇಟಾ ವರ್ಷನ್ ನಲ್ಲಿ ಇದನ್ನು ಸೇರಿಸಿದರೆ ಉತ್ತಮವಾಗುತ್ತೆ. ಆದರೆ, ಸೇರಿಸದೆ ಇದ್ದರೂ ಕೂಡ ಈ ಬೇಟಾ ವರ್ಷನ್ ನಲ್ಲಿರುವ ಬಳಕೆದಾರರು, ಗ್ರೂಪ್ ವೀಡಿಯೋ ಕಾಲಿಂಗ್ ನಲ್ಲಿ ಪ್ರತಿಕ್ರಿಯೆ ನೀಡುವ ಅವಕಾಶವಿರುವ ಸಾಧ್ಯತೆ ಇದೆ.

ಈಗಾಗಲೇ ಟೆಸ್ಟಿಂಗ್ ನಲ್ಲಿ ಗಮನಿಸಿದಂತೆ ನಾಲ್ಕು ಜನ ಗ್ರೂಪ್ ವೀಡಿಯೋ ಕಾಲಿಂಗ್ ನಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, 5 ನೇ ಯವರನ್ನು ಸೇರಿಸಲು ಮುಂದಾಗುವ ಹೊತ್ತಿಗೆ ಮೇಲ್ಬಾಗದ ಬಲ ಕಾರ್ನರ್ ನಲ್ಲಿರುವ ಐಕಾನ್ ಡಿಸೇಬಲ್ ಆಗಿರುತ್ತದೆ.

Best Mobiles in India

English summary
WhatsApp 'Sticker' reactions feature spotted on Android. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X