Subscribe to Gizbot

ಹೊಸ ಆಯ್ಕೆ: ಇದರಿಂದ ನಿಮ್ಮ ವಾಟ್ಸ್ಆಪ್ ಚಾಟ್ ಮತ್ತಷ್ಟು ಸುಂದರ..!!

Written By:

ಫೇಸ್‌ಬುಕ್ ಓಡೆತನದ ವಾಟ್ಸ್‌ಆಪ್ ದಿನಕ್ಕೊಂದು ಹೊಸ ಆಯ್ಕೆಯನ್ನು ತನ್ನ ಬಳಕೆದಾರರಿಗೆ ನೀಡುತ್ತಲೇ ಬಂದಿದೆ. ಸದ್ಯ ಹೊಸದೊಂದು ಆಯ್ಕೆಯ ಬಗ್ಗೆ ಪ್ರಯೋಗವನ್ನು ನಡೆಸಲು ಮುಂದಾಗಿದ್ದು, ಇದು ಹಿಟ್ ಆದಲ್ಲಿ ನಿಮ್ಮ ವಾಟ್ಸ್‌ಆಪ್ ಚಾಟಿಂಗ್ ಮತ್ತಷ್ಟು ಸುಂದರವಾಗಲಿದೆ.

ಹೊಸ ಆಯ್ಕೆ: ಇದರಿಂದ ನಿಮ್ಮ ವಾಟ್ಸ್ಆಪ್ ಚಾಟ್ ಮತ್ತಷ್ಟು ಸುಂದರ..!!

ಓದಿರಿ: ಜುಲೈ 21ಕ್ಕೆ ಜಿಯೋ 4G ಫೋನ್ ಲಾಂಚ್: ಬಿಡುಗಡೆಗೆ ಮುಂಚೆಯೇ ದಾಖಲೆ ನಿರ್ಮಾಣ..!

ದೇಶದಲ್ಲಿ ಅನೇಕ ಮಾದರಿಯ ವಿಡಿಯೋ ಕಾಲಿಂಗ್ ಮಾಡುವ ಆಪ್ ಗಳು ಲಭ್ಯವಿದ್ದರೂ ಸಹ ಭಾರತೀಯರು ವಾಟ್ಸ್‌ಆಪ್ ವಿಡಿಯೋ ಕಾಲಿಂಗ್ ಬಳಕೆ ಮಾಡಿಕೊಂಡಷ್ಟು ಇನ್ಯಾವುದೇ ಆಪ್ ಅನ್ನು ಬಳಸಿಕೊಂಡಿಲ್ಲ. ಇದಕ್ಕಾಗಿಯೇ ವಾಟ್ಸ್ಆಪ್ ವಿಡಿಯೋ ಕಾಲಿಂಗ್ ನಲ್ಲಿ ಬದಲಾವಣೆ ಮಾಡಿಕೊಳ್ಳಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಡಿಯೋ ಕಾಲ್ ನೊಂದಿಗೆ ಮಲ್ಟಿ ಟಾಸ್ಕ್:

ವಿಡಿಯೋ ಕಾಲ್ ನೊಂದಿಗೆ ಮಲ್ಟಿ ಟಾಸ್ಕ್:

ಈ ಮೊದಲು ವಾಟ್ಸ್ಆಪ್ ವಿಡಿಯೋ ಕಾಲಿಂಗ್ ಮಾಡುವ ಸಂದರ್ಭದಲ್ಲಿ ಬೇರೆ ಯಾವುದೇ ಕಾರ್ಯವನ್ನು ಮಾಡಲು ಸಾಧ್ಯವಿರಲಿಲ್ಲ. ಇಡೀ ಸ್ಕ್ರಿನ್ ತುಂಬ ಅದೇ ಕಾಣಿಸಿಕೊಳ್ಳುತ್ತಿತ್ತು. ಇದಕ್ಕಾಗಿ ವಾಟ್ಸ್‌ಆಪ್ ಈ ಬಾರಿ ವಿಡಿಯೋ ಕಾಲ್ ನೊಂದಿಗೆ ಮಲ್ಟಿ ಟಾಸ್ಕ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ.

ಇದಕ್ಕಾಗಿ ಪಿಐಪಿ ಆಯ್ಕೆ:

ಇದಕ್ಕಾಗಿ ಪಿಐಪಿ ಆಯ್ಕೆ:

ವಾಟ್ಸ್‌ಆಪ್ ಇದಕ್ಕಾಗಿ PiP ಆಯ್ಕೆಯನ್ನು ಟೆಸ್ಟ್ ಮಾಡುತ್ತಿದ್ದು, ಪಿಚ್ಚರ್ ಇನ್ ಪಿಚ್ಚರ್ ಆಯ್ಕೆ ಇದ್ದಾಗಿದ್ದು, ಈ ಆಯ್ಕೆಯೂ ಬ್ಯಾಕ್ ಗ್ರೌಂಡಿನಲ್ಲಿ ವಿಡಿಯೋ ಕಾಲಿಂಗ್ ಮಾಡಿಕೊಂಡು ಮತ್ತೊಂದು ಟಾಸ್ಕ್ ಮಾಡಿಕೊಳ್ಳಲು ಸಹಾಯಕಾರಿಯಾಗಿದೆ.

ಆಂಡ್ರಾಯ್ಡ್ O ನಲ್ಲಿ ಇರಲಿದೆ:

ಆಂಡ್ರಾಯ್ಡ್ O ನಲ್ಲಿ ಇರಲಿದೆ:

ಈ ಹೊಸ ಆಯ್ಕೆಯೂ ಆಂಡ್ರಾಯ್ಡ್ 'O' ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಆಂಡ್ರಾಯ್ N ನಲ್ಲಿ ಈ ಆಯ್ಕೆಯ ಲಭ್ಯತೆ ಕಡಿಮೆ ಎನ್ನುವ ಮಾತು ಕೇಳಿಬಂದಿದೆ.

ಈಗಾಗಲೇ ಈ ಆಯ್ಕೆ iOSನಲ್ಲಿದೆ:

ಈಗಾಗಲೇ ಈ ಆಯ್ಕೆ iOSನಲ್ಲಿದೆ:

ಈಗಾಗಲೇ ಈ ಹೊಸ ಆಯ್ಕೆಯನ್ನು iOS ನಲ್ಲಿ ನೀಡಲಾಗಿದ್ದು, ಶೀಘ್ರವೇ ಇದನ್ನು ಆಂಡ್ರಾಯ್ಡ್ ಬಳಕೆದಾರರಿಗೂ ನೀಡುವ ಕಾರ್ಯವು ಜಾರಿಯಲ್ಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The PiP feature for video calling will be enabled by default for WhatsApp on Android O.to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot