Subscribe to Gizbot

ಜುಲೈ 21ಕ್ಕೆ ಜಿಯೋ 4G ಫೋನ್ ಲಾಂಚ್: ಬಿಡುಗಡೆಗೆ ಮುಂಚೆಯೇ ದಾಖಲೆ ನಿರ್ಮಾಣ..!

Written By:

ಜಿಯೋ ನಾಳೆ (ಜುಲೈ21)ಕ್ಕೆ ತನ್ನ 4G ಫೋನ್ ಲಾಂಚ್ ಮಾಡಲು ಸಿದ್ಧತೆ ನಡೆಸಿದ್ದು, ಇದರ ಬೆನ್ನಲೇ ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ನಿರ್ಮಾಣ ಮಾಡಲು ಸಿದ್ಧತೆ ನಡೆಸಿದೆ. ಎರಡು ವರ್ಷದ ಅವಧಿಯಲ್ಲಿ ಒಟ್ಟು 20 ಕೋಟಿ ಫೀಚರ್ ಫೋನ್ ಗಳನ್ನು ಮಾರಾಟ ಮಾಡಲು ಚಿಂತನೆಯನ್ನು ನಡೆಸಿದೆ.

ಜುಲೈ 21ಕ್ಕೆ ಜಿಯೋ 4G ಫೋನ್ ಲಾಂಚ್: ಬಿಡುಗಡೆಗೆ ಮುಂಚೆಯೇ ದಾಖಲೆ ನಿರ್ಮಾಣ..!

ಓದಿರಿ: ಯುವತಿಯರೇ ಎಚ್ಚರ..! ಸೋಶಿಯಲ್ ಮಿಡಿಯಾಗಳಲ್ಲಿ ಫೋಟೋ ಪೋಸ್ಟ್ ಮಾಡುವ ಮುನ್ನ..!!!

ಈಗಾಗಲೇ ಇದಕ್ಕಾಗಿ ವಿವಿಧ ಕಂಪನಿಗಳೊಂದಿಗೆ ಮಾತುಕತೆಯೂ ನಡೆಸಿದ್ದು, ಅದರಲ್ಲೂ 500 ರೂ.ಗೆ ಫೀಚರ್ ಫೋನ್ ಅನ್ನು ನೀಡಿದರೆ ಎಲ್ಲರೂ ಖರೀದಿಸುತ್ತಾರೆ ಎಂದು ತಿಳಿದಿರುವ ಜಿಯೋ ತನ್ನ LYF ಬ್ರಾಂಡಿನಡಿಯಲ್ಲಿ 20 ಕೋಟಿ ಫೋನ್ ಗಳನ್ನು ಮಾರಾಟ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಂ.1 ಟೆಲಿಕಾಂ ಕಂಪನಿಯಾಗುವ ಗುರಿ:

ನಂ.1 ಟೆಲಿಕಾಂ ಕಂಪನಿಯಾಗುವ ಗುರಿ:

ಈಗಾಗಲೇ 120 ಮಿಲಿಯನ್ ಗಿಂತಲೂ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಅತೀ ಹೆಚ್ಚು ಚಂದಾದರನ್ನು ಹೊಂದಿರುವ ದೇಶದ ನಂ.1 ಟೆಲಿಕಾಂ ಕಂಪನಿಯಾಗುವ ಬಯಕೆಯನ್ನು ಹೊಂದಿದ್ದು, ಇದಕ್ಕಾಗಿ ಕಡಿಮೆ ಬೆಲೆಗೆ ಫೀಚರ್ ಫೋನ್ ನೀಡಿ, 200 ಮಿಲಿಯನ್ ಬಳಕೆದಾರರನ್ನು ಸೆಳೆಯುವ ತಂತ್ರವನ್ನು ಮಾಡಲಿದೆ.

ಸದ್ಯ ಭಾರತದಲ್ಲಿ ಮಾರಾಟವಾಗಿರುವುದು 136 ಮಿಲಿಯನ್:

ಸದ್ಯ ಭಾರತದಲ್ಲಿ ಮಾರಾಟವಾಗಿರುವುದು 136 ಮಿಲಿಯನ್:

ಸದ್ಯ ಇದುವರೆಗೂ ಭಾರತದಲ್ಲಿ ಮಾರಾಟವಾಗಿರುವ ಫೋನ್ ಗಳ ಸಂಖ್ಯೆಯೇ 136 ಮಿಲಿಯನ್ ಎಂದು ವರದಿಯೊಂದು ತಿಳಿಸುತ್ತದೆ. ಆದರೆ ಜಿಯೋ ಅದನ್ನೆಲ್ಲಾ ಮೀರಿಸಿ, ತನ್ನ ಫೀಚರ್ ಫೋನ್ ಅನ್ನು 200 ಮಿಲಿಯನ್ ಸಂಖ್ಯೆಯಲ್ಲಿ ಮಾರಾಟ ಮಾಡುವ ಯೋಜನೆಯನ್ನು ರೂಪಿಸಿದೆ ಎನ್ನಲಾಗಿದೆ.

Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
ಮೊದಲ ವರ್ಷವೇ 100 ಮಿಲಿಯನ್ ಮಾರಾಟದ ಗುರಿ:

ಮೊದಲ ವರ್ಷವೇ 100 ಮಿಲಿಯನ್ ಮಾರಾಟದ ಗುರಿ:

ಜಿಯೋ ತನ್ನ LYF ಬ್ರಾಂಡಿನ ಅಡಿಯಲ್ಲಿ ಮೊದಲ ವರ್ಷವೇ 100 ಮಿಲಿಯನ್ ಫೀಚರ್ ಫೋನ್ ಅನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಈಗಾಗಲೇ ಫೀಚರ್ ಪೋನ್ ಮಾರಾಟದ ರೂಪರೇಷಗಳನ್ನು ತಯಾರು ಮಾಡಲಾಗಿದೆ ಎನ್ನಲಾಗಿದೆ.

ಫಾಕ್ಸ್‌ಕಾನ್ ಇಲ್ಲವೇ ಇನ್‌ಟೆಲ್ ನಿಂದ ಖರೀದಿ:

ಫಾಕ್ಸ್‌ಕಾನ್ ಇಲ್ಲವೇ ಇನ್‌ಟೆಲ್ ನಿಂದ ಖರೀದಿ:

ಜಿಯೋ ತನ್ನ ಗ್ರಾಹಕರಿಗೆ ಉತ್ತಮವಾದ ಫೋನ್ ಅನ್ನು ನೀಡುವ ಗುರಿ ಹೊಂದಿದ್ದು, ಇದಕ್ಕಾಗಿ ಕಳಪೆ ಗುಣಮಟ್ಟದ ಮೊಬೈಲ್ ನೀಡುವ ಬದಲು ಗುಣಮಟ್ಟದ ಫೋನ್ ನೀಡಲಿದೆ ಎನ್ನಲಾಗಿದೆ. ಇದಕ್ಕಾಗಿ ಫಾಕ್ಸ್‌ಕಾನ್ ಇಲ್ಲವೇ ಇನ್‌ಟೆಲ್ ನೊಂದಿಗೆ ಮಾತುಕತೆಯನ್ನು ನಡೆಸಿದೆ ಎನ್ನಲಾಗಿದೆ.

ಜಿಯೋ LYF 4G VoLTE ಫೋನಿನ ವಿಶೇಷತೆ:

ಜಿಯೋ LYF 4G VoLTE ಫೋನಿನ ವಿಶೇಷತೆ:

ಈಗಾಗಲೇ ಲೀಕ್ ಆಗಿರುವ ಮಾಹಿತಿಯ ಪ್ರಕಾರ ಜಿಯೋ LYF 4G VoLTE ಫೀಚರ್ ಫೋನಿನಲ್ಲಿ 2.4 ಇಂಚಿನ ಡಿಸ್‌ಪ್ಲೇಯೂ ಇದೆ ಎನ್ನಲಾಗಿದೆ. ಇದಲ್ಲದೇ 512 MB RAM, 4GB ಇಂಟರ್ನಲ್ ಮೆಮೊರಿ ಹೊಂದಿದ್ದು, ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ಹೊಂದಿರಲಿದೆ. ಇದರಲ್ಲಿ ವೈ-ಫೈ, ಬ್ಲೂಟೂತ್, GPS ಮತ್ತು ಕ್ಯಾಮೆರಾ ಇರಲಿದ್ದು, 2000mAh ಬ್ಯಾಟರಿ ಇರಲಿದೆ ಎನ್ನುವ ರೂಮರ್ ಹರಿದಾಡುತ್ತಿದೆ.

ಜಿಯೋ LYF 4G VoLTE ಫೋನಿಗೆ ವಿಶೇಷ ಆಫರ್:

ಜಿಯೋ LYF 4G VoLTE ಫೋನಿಗೆ ವಿಶೇಷ ಆಫರ್:

ಜಿಯೋ LYF 4G VoLTE ಫೋನಿನ ಬಳಕೆದಾರರಿಗೆ ಪ್ರತ್ಯೇಕ ಆಫರ್ ವೊಂದನ್ನು ಲಾಂಚ್ ಮಾಡುವ ಸಾಧ್ಯತೆ ಇದೆ. ನೂತನ ಆಫರ್ ವೊಂದನ್ನು ಫೋನ್ ಲಾಂಚಿಂಗ್ ವೇಳೆಯಲ್ಲಿಯೇ ಘೋಷಣೆ ಮಾಡಲಿದೆ. ಇದಕ್ಕಾಗಿ ನಾಳೆಯವರೆಗೂ ನಾವು ಕಾಯಲೇಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The launch of Jio feature phone with 4G VoLTE support is just a day away, and both the telecom and mobile phone industries are geared up to see how Reliance Jio transforms another market. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot