ನಿಮ್ಮ ವಾಟ್ಸಾಪ್‌ ಸ್ಟೇಟಸ್‌ ಅನ್ನು ಇತರೆ ಆಪ್ಸ್‌ಗೆ ಶೇರ್ ಮಾಡುವುದು ಹೇಗೆ?

By Gizbot Bureau
|

ಮೆಟಾ ಮಾಲೀಕತ್ವದ ವಾಟ್ಸಾಪ್‌ ಜನಪ್ರಿಯ ಮೆಸೆಜಿಂಗ್ ಆಪ್ ಆಗಿದ್ದು, ವಿಶ್ವದಲ್ಲಿ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿದೆ. ವಾಟ್ಸಾಪ್‌ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ವಾಟ್ಸಾಪ್‌ ಅಪ್ಲಿಕೇಶನ್‌ನಲ್ಲಿ ವಾಟ್ಸಾಪ್‌ ಸ್ಟೇಟಸ್‌ ಇಡುವ ಆಯ್ಕೆಯು ಫೇಮಸ್ ಆಗಿದ್ದು, ಬಳಕೆದಾರರು ಸ್ಟೇಟಸ್‌ ಅಪ್‌ಡೇಟ್‌ ಹಂಚಿಕೊಳ್ಳುವ ಆಯ್ಕೆ ಸಹ ಇದೆ.

ನಿಮ್ಮ ವಾಟ್ಸಾಪ್‌ ಸ್ಟೇಟಸ್‌ ಅನ್ನು ಇತರೆ ಆಪ್ಸ್‌ಗೆ ಶೇರ್ ಮಾಡುವುದು ಹೇಗೆ?

ಬಳಕೆದಾರರು ವಾಟ್ಸಾಪ್‌ ಅಪ್ಲಿಕೇಶನ್ ನಲ್ಲಿ ಸ್ಟೇಟಸ್‌ ಇಡುವ ಆಯ್ಕೆ ಇದೆ. ಇದು 24 ಗಂಟೆಗಳ ನಂತರ ತಾನಾಗಿಯೇ ಕಣ್ಮರೆಯಾಗುತ್ತದೆ. ಸ್ಟೇಟಸ್‌ನಲ್ಲಿ ಟೆಕ್ಸ್ಟ್‌, ಫೋಟೋ, ವೀಡಿಯೊ ಮತ್ತು GIF ಮಾದರಿ ಬಳಕೆ ಮಾಡಲು ಅವಕಾಶ ಇದೆ. ಹಾಗೆಯೇ ವಾಟ್ಸಾಪ್‌ ಸ್ಟೇಟಸ್‌ ಅನ್ನು ಫೇಸ್‌ಬುಕ್ ಸೇರಿದಂತೆ ಇತರೆ ಆಪ್‌ಗಳಿಗೆ ಸುಲಭವಾಗಿ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ ಸ್ಟೇಟಸ್‌ ಅನ್ನು ಇತರೆ ಆಪ್‌ಗಳಿಗೆ ಹಂಚಿಕೊಳ್ಳಲು ಈ ಕ್ರಮ ಅನುಸರಿಸಿ

ಹಂತ 1: ಮೊದಲು, ನಿಮ್ಮ ಸಾಧನದಲ್ಲಿ ವಾಟ್ಸಾಪ್‌ ತೆರೆಯಿರಿ.

ಹಂತ 2: ಮುಂದೆ, ಸ್ಟೇಟಸ್‌ ಟ್ಯಾಬ್‌ಗೆ ಹೋಗಿ.

ಹಂತ 3: ನಿಮ್ಮ ಆಂಡ್ರಾಯ್ಡ್‌ ಅಥವಾ ಐಫೋನ್ ಸಾಧನದಲ್ಲಿ ಸ್ಟೇಟಸ್‌ ನವೀಕರಣವನ್ನು ರಚಿಸಿ.

ಹಂತ 4: ಇಲ್ಲಿ ನೀವು ಎರಡು ಹಂಚಿಕೆ ಆಯ್ಕೆಗಳನ್ನು ಹೊಂದಿದ್ದೀರಿ, ನೀವು ಹೊಸ ಅಥವಾ ಹಳೆಯ ಸ್ಟೇಟಸ್‌ ನವೀಕರಣವನ್ನು ಹಂಚಿಕೊಳ್ಳಲು ಬಯಸಿದರೆ

ನೀವು ಹೊಸ ಸ್ಟೇಟಸ್‌ ಅನ್ನು ಶೇರ್ ಮಾಡಲು ಬಯಸಿದರೆ ಹೀಗೆ ಮಾಡಿ

* ಮೈ ಸ್ಟೇಟಸ್‌ ತೆರೆಯಿರಿ

* ಮುಂದೆ, ಶೇರ್ ಐಕಾನ್ ಅನ್ನು ಟ್ಯಾಪ್ ಮಾಡಿ

* ನೀವು ಇನ್ನೊಂದು ಟ್ಯಾಬ್‌ಗೆ ಹೋದ ನಂತರ ಶೇರ್ ಆಯ್ಕೆಯು ಕಣ್ಮರೆ ಆಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ನೀವು ಹಳೆಯ ಸ್ಟೇಟಸ್‌ ಅನ್ನು ಶೇರ್ ಮಾಡಲು ಬಯಸಿದರೆ ಹೀಗೆ ಮಾಡಿ

* ಆಂಡ್ರಾಯ್ಡ್‌ ನಲ್ಲಿ ಮೈ ಸ್ಟೇಟಸ್ ಮೂಲಕ ಅಥವಾ ಐಫೋನ್‌ ನಲ್ಲಿ ಮೈ ಸ್ಟೇಟಸ್ ಅನ್ನು ತೆರೆಯಿರಿ

* ಮುಂದೆ, ನೀವು ಹಂಚಿಕೊಳ್ಳಲು ಬಯಸುವ ಸ್ಟೇಟಸ್ ನವೀಕರಣದ ಮುಂದೆ ಇನ್ನಷ್ಟು ಐಕಾನ್ (ಮೂರು ಡಾಟ್‌ ಗಳನ್ನು) ಟ್ಯಾಪ್ ಮಾಡಿ

* ಕೊನೆಯದಾಗಿ, ಶೇರ್ ಆಯ್ಕೆ ಟ್ಯಾಪ್ ಮಾಡಿ.

Best Mobiles in India

Read more about:
English summary
WhatsApp Tips: Share WhatsApp Status On Facebook, Other Apps With These Easy Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X