Just In
- 5 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 8 hrs ago
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 1 day ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
Don't Miss
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- Movies
2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಾಟ್ಸ್‌ಆಪ್ ಬಳಕೆಯನ್ನು ಸರಳಗೊಳಿಸಿದ ಗೂಗಲ್ ಅಸಿಸ್ಟಂಟ್..!
ವಾಟ್ಸ್‌ಆಪ್ ಸೇರಿ ಥರ್ಡ್ ಪಾರ್ಟಿ ಚಾಟಿಂಗ್ ಅಪ್ಲಿಕೇಶನ್‌ಗಳಲ್ಲಿ ಸಂದೇಶಗಳನ್ನು ಕಳುಹಿಸಲು ಗೂಗಲ್ ಅಸಿಸ್ಟಂಟ್ ಅವಕಾಶ ನೀಡುತ್ತದೆ ಎಂದು ಬಹಳಷ್ಟು ಜನಕ್ಕೆ ಈಗಾಗಲೇ ತಿಳಿದಿದೆ. ಆದಾಗ್ಯೂ, ನೀವು ಗೂಗಲ್ ಅಸಿಸ್ಟಂಟ್‌ನ್ನು ಆಡಿಯೋ ಅಥವಾ ವಿಡಿಯೋ ಕರೆ ಮಾಡಲು ಕೇಳಿದಾಗ ವೀಡಿಯೊ ಕರೆಗಾಗಿ ಡೀಫಾಲ್ಟ್ ಆಗಿ ಗೂಗಲ್ ಡ್ಯುಯೋ ಆಪ್‌ನ್ನು ಬಳಸುತ್ತಿತ್ತು.

ಆಡಿಯೊ ಕರೆಗಳಿಗಾಗಿ ಸಾಮಾನ್ಯ ಹ್ಯಾಂಡ್‌ಸೆಟ್ ಕಾಲಿಂಗ್ ಸೇವೆಯನ್ನು ಬಳಸುತ್ತಿತ್ತು. ಆದರೆ, ಈಗ ಗೂಗಲ್ ಅಸಿಸ್ಟೆಂಟ್ ಬಳಸಿ ವಾಟ್ಸ್‌ಆಪ್ ಮೂಲಕ ಆಡಿಯೋ ಮತ್ತು ವಿಡಿಯೋ ಕರೆಗಳನ್ನು ಮಾಡಲು ಸಾಧ್ಯವಾಗುತ್ತಿದ್ದು, ಗೂಗಲ್ ಅಸಿಸ್ಟಂಟ್ ವಾಟ್ಸ್‌ಆಪ್ ಬಳಕೆಯನ್ನು ಇನ್ನಷ್ಟು ಸುಲಭವಾಗಿಸಿದೆ.

'ಹೇ ಗೂಗಲ್' ಕಮಾಂಡ್
ಈಗ ನೀವು ಸರಳವಾಗಿ ‘ಹೇ ಗೂಗಲ್' ಆಜ್ಞೆಯನ್ನು ನೀಡಿ, ನಂತರ ‘ವಾಟ್ಸಾಪ್ ವಿಡಿಯೋ ಮತ್ತು ಯಾರಿಗೆ ಕರೆ ಮಾಡಬೇಕು ಎಂಬ ಹೆಸರನ್ನು ಹೇಳಬೇಕು. ಗೂಗಲ್ ಅಸಿಸ್ಟೆಂಟ್‌ನ ಉತ್ಪನ್ನ ನಿರ್ವಾಹಕ ನಿರ್ದೇಶಕ ಕ್ರಿಸ್ ಟರ್ಕ್‌ಸ್ಟ್ರಾ ಈ ಫೀಚರ್ ಬಗ್ಗೆ ತಮ್ಮ ಅಧಿಕೃತ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. "ಗೂಗಲ್ ಅಸಿಸ್ಟಂಟ್ ಈಗಾಗಲೇ ಸಂದೇಶಗಳನ್ನು ಓದಲು ಮತ್ತು ಕಳುಹಿಸಲು ಸಹಾಯಕನಾಗಿ ಜನಪ್ರಿಯ ಮೆಸೇಜಿಂಗ್ ಆಪ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಈಗ ನೀವು ವಾಟ್ಸ್‌ಆಪ್ ಆಂಡ್ರಾಯ್ಡ್ ಆಪ್‌ನಲ್ಲಿ ಗೂಗಲ್ ಅಸಿಸ್ಟಂಟ್ ಮೂಲಕ ಹ್ಯಾಂಡ್ಸ್-ಫ್ರೀ ಆಡಿಯೋ ಮತ್ತು ವಿಡಿಯೋ ಕರೆಗಳನ್ನು ಮಾಡಬಹುದು." ಎಂದು ಬರೆದಿದ್ದಾರೆ.

ಐಫೋನ್‌ನಲ್ಲಿ ಸಾಧ್ಯವಿಲ್ಲ
ಸದ್ಯ ಈ ಫೀಚರ್ ಐಫೋನ್‌ನಲ್ಲಿ ಲಭ್ಯವಿಲ್ಲ. ಐಫೋನ್‌ನಲ್ಲಿ ವಾಟ್ಸ್‌ಆಪ್ ಮತ್ತು ಗೂಗಲ್ ಅಸಿಸ್ಟೆಂಟ್ ಆಪ್‌ಗಳನ್ನು ಸ್ಥಾಪಿಸಿದ್ದರೂ ಈ ಫೀಚರ್ ಐಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಫೀಚರ್ ಮುಂದೆಯಾದರೂ ಐಫೋನ್‌ಗಳಿಗೆ ಬರುತ್ತದೆಯೋ ಇಲ್ಲವೋ ಎಂಬುದು ಇನ್ನು ಖಚಿತವಾಗಿಲ್ಲ.

ಜಿಐನ ಹೊಸ ಸಾಧನಗಳು
ಗೂಗಲ್ ಅಸಿಸ್ಟೆಂಟ್ ಸೇವೆ ಪಡೆಯುವ ಹೊಸ ಸಾಧನಗಳ ಪಟ್ಟಿಯನ್ನು ಸಹ ಟರ್ಕ್‌ಸ್ಟ್ರಾ ಉಲ್ಲೇಖಿಸಿದ್ದಾರೆ. ಇವುಗಳಲ್ಲಿ ಲೆನೊವೊ ಸ್ಮಾರ್ಟ್ ಟ್ಯಾಬ್ ಎಂ8 ಹೆಚ್‌ಡಿ, ಲೆನೊವೊ ಯೋಗ ಸ್ಮಾರ್ಟ್ ಟ್ಯಾಬ್ ಕೂಡ ಸೇರಿವೆ. ಇನ್ನು, ಹೊಸ ನೋಕಿಯಾ 7.2 ಮತ್ತು ನೋಕಿಯಾ 6.2 ಸ್ಮಾರ್ಟ್‌ಫೋನ್‌ಗಳು ಅಸಿಸ್ಟೆಂಟ್ ಆಂಬಿಯೆಂಟ್ ಮೋಡ್‌ನ್ನು ಪಡೆಯುತ್ತವೆ.

ಅಸಿಸ್ಟಂಟ್ ಸೇವೆ ವಿಸ್ತರಣೆ
ಬ್ಲಾಗ್‌ನಲ್ಲಿ ಹೇಳಿರುವಂತೆ, ಈ ವರ್ಷಾಂತ್ಯಕ್ಕೆ ಹೆಚ್ಚಿನ ದೇಶಗಳಿಗೆ ಮತ್ತು ಅನೇಕ ಸ್ಪೀಕರ್‌ಗಳಿಗೆ ಗೂಗಲ್ ಅಸಿಸ್ಟಂಟ್ ತನ್ನ ಸೇವೆಯನ್ನು ವಿಸ್ತರಿಸಲಿದೆ. ಕೆಲವು ತಿಂಗಳುಗಳ ಹಿಂದೆ, ಮೊದಲ ಬಾರಿಗೆ ಸೋನೋಸ್ ಮತ್ತು ಬೋಸ್ ಸ್ಪೀಕರ್ ವ್ಯವಸ್ಥೆಗಳಿಗೆ ಗೂಗಲ್ ಅಸಿಸ್ಟಂಟ್‌ನ್ನು ಬಳಸಿದ್ದೇವು. ಅವುಗಳು ಈಗ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಮತ್ತು ನೆದರ್‌ಲ್ಯಾಂಡ್ಸ್‌ಗಳಲ್ಲಿ ಲಭ್ಯವಿದ್ದು, ವರ್ಷಾಂತ್ಯಕ್ಕೆ ಇನ್ನು ಹೆಚ್ಚಿನ ದೇಶಗಳ ಮಾರುಕಟ್ಟೆಗ ಕಾಲಿಡಲಿವೆ. ಮನೆ ಮತ್ತು ಹಿತ್ತಲಿನಲ್ಲಿ ಎಲ್ಲಿಯಾದರೂ ನಿಮಗೆ ಸಹಾಯ ಮಾಡಲು ಗೂಗಲ್ ಅಸಿಸ್ಟಂಟ್ ಲಭ್ಯವಿರುತ್ತದೆ. ಸೋನೋಸ್ ಮೂವ್, ಬೋಸ್ ಪೋರ್ಟಬಲ್ ಹೋಮ್ ಸ್ಪೀಕರ್ ಮತ್ತು ಜೆಬಿಎಲ್ ಲಿಂಕ್ ಪೋರ್ಟಬಲ್ ಹೊಸ ಬ್ಯಾಟರಿ ಚಾಲಿತ ಸ್ಮಾರ್ಟ್ ಸ್ಪೀಕರ್‌ಗಳಾಗಿವೆ ಎಂದು ಟರ್ಕ್‌ಸ್ಟ್ರಾ ಹೇಳಿದ್ದಾರೆ.

ಹೆಚ್ಚಿನ ಬ್ರಾಂಡ್‌ಗಳಲ್ಲಿ ಅಸಿಸ್ಟಂಟ್
ಜೆಬಿಎಲ್, ಫಿಲಿಪ್ಸ್ ಮತ್ತು ಇತರ ಪ್ರಮುಖ ಸೌಂಡ್‌ಬಾರ್‌ಗಳಿಗೆ ಗೂಗಲ್ ಅಸಿಸ್ಟಂಟ್ ಅಳವಡಿಸಲು ಬ್ರ್ಯಾಂಡ್‌ಗಳೊಂದಿಗೆ ಗೂಗಲ್ ಕಾರ್ಯನಿರ್ವಹಿಸುತ್ತಿದೆ. ಜೆವಿಸಿ, ಶಾರ್ಪ್, ಟಿಸಿಎಲ್, ಸೋನಿ ಮುಂತಾದ ಬ್ರಾಂಡ್‌ಗಳಿಂದ ಉತ್ಪಾದನೆಯಾಗುವ ಹೆಚ್ಚಿನ ಆಂಡ್ರಾಯ್ಡ್ ಟಿವಿಗಳು ಗೂಗಲ್ ಅಸಿಸ್ಟೆಂಟ್ ಸೇವೆಯನ್ನು ಪಡೆಯಲಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470