Subscribe to Gizbot

ಫೇಸ್‌ಬುಕ್‌ ಬಿಟ್ಟ ಭಾರತೀಯನಿಂದ ವಿಶ್ವದ ಮೊದಲ 'ವಿಡಿಯೊ ಸಾಮಾಜಿಕ ಜಾಲತಾಣ' ರಿಲೀಸ್!!

Written By:

ವಿದೇಶದಲ್ಲಿ ಫೇಸ್‌ಬುಕ್‌ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯನೋರ್ವ ಭಾರತಕ್ಕೆ ಮರಳಿ ಜಗತ್ತಿನ ಮೊಟ್ಟ ಮೊದಲ ವಿಡಿಯೊ ಸಾಮಾಜಿಕ ಜಾಲತಾಣವನ್ನು ವಿನ್ಯಾಸ ಮಾಡಿದ್ದಾರೆ.! ಉನ್ನತ ಹುದ್ದೆಗೆ ರಾಜೀನಾಮೆ ಕೊಟ್ಟು ಭಾರತಕ್ಕೆ ಮರಳಿದ ದುರ್ಗೆಶ್ ಕೌಶಿಕ್ ಎಂಬುವವರು ಇಂತಹ ಸಾಧನೆ ಮಾಡಿ ವಿಶ್ವದ ಗಮನ ಸೆಳೆದಿದ್ದಾರೆ.!!

ದುರ್ಗೆಶ್ ಕೌಶಿಕ್ ಅಭಿವೃದ್ದಿಪಡಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಿಂದ ಬಳಕೆದಾರರು ವಿಡಿಯೊ ಚಾಟಿಂಗ್ ಮಾಡಬಹುದಾದ, ತಮ್ಮ ಸುತ್ತಲೂ ನಡೆಯುವ ವಿದ್ಯಮಾನಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದಾದ ಹಾಗೂ ಗೆಳೆಯರೊಂದಿಗೆ ಮುಖಾಮುಖಿ ಚರ್ಚೆ ಮಾಡಬಹುದಾದ ಆಯ್ಕೆ ನೀಡಿದ್ದಾರೆ.!!

ಫೇಸ್‌ಬುಕ್‌ ಬಿಟ್ಟ ಭಾರತೀಯನಿಂದ ವಿಶ್ವದ ಮೊದಲ 'ವಿಡಿಯೊ ಸಾಮಾಜಿಕ ಜಾಲತಾಣ' ರಿಲೀಸ್

ಭಾರತೀಯನೋರ್ವ ಸಂವಹನದ ಬಗ್ಗೆ ಸಾಕಷ್ಟು ಅನುಭವ ಹೊಂದಿ ಜಗತ್ತಿನ ಮೊಟ್ಟ ಮೊದಲ ವಿಡಿಯೊ ಸಾಮಾಜಿಕ ರೂಪಿಸಿದ್ದು, ಹಾಗಾದರೆ, ಜಗತ್ತಿನ ಮೊಟ್ಟ ಮೊದಲ ವಿಡಿಯೊ ಸಾಮಾಜಿಕ ಜಾಲತಾಣ ಯಾವುದು? ಈ ಜಾಲತಾಣದಿಂದ ಬಳಕೆದಾರರಿಗೆ ಸಿಗುವ ಸೌಲಭ್ಯಗಳೆನು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಷ್ ಫೈ ಜಾಲಾತಾಣ!!

ವಿಷ್ ಫೈ ಜಾಲಾತಾಣ!!

ಫೇಸ್‌ಬುಕ್‌ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ ಕೌಶಿಕ್ ಅವರು "ವಿಷ್ ಫೈ" ಎಂಬ ಜಗತ್ತಿನ ಮೊಟ್ಟ ಮೊದಲ ವಿಡಿಯೊ ಸಾಮಾಜಿಕ ಜಾಲತಾಣ ನಿರ್ಮಿಸಿದ್ದಾರೆ.ಒಂದು ರೀತಿಯಲ್ಲಿ ವಿಡಿಯೊ ಕಾಲಿಂಗ್ ಮಾದರಿಯಲ್ಲಿ ಕೆಲಸ ಮಾಡುವ ಈ ಆಪ್ ಈಗಾಗಲೇ ಬಳಕೆದಾರರನ್ನು ಸೆಳೆದಿದೆ.!!

ಹೇಗೆ ಕೆಲಸ ಮಾಡುತ್ತೆ ವಿಷ್ ಫೈ?

ಹೇಗೆ ಕೆಲಸ ಮಾಡುತ್ತೆ ವಿಷ್ ಫೈ?

ಜಗತ್ತಿನ ಮೊಟ್ಟ ಮೊದಲ ವಿಡಿಯೊ ಸಾಮಾಜಿಕ ಜಾಲತಾಣ ವಿಷ್ ಫೈ ಸೆಲ್ಫಿ ಕ್ಯಾಮೆರಾವನ್ನು ಬಳಸಿಕೊಂಡು ಜನರನ್ನು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ವಿಡಿಯೊ ಚಾಟಿಂಗ್ ಮಾಡಬಹುದಾದ, ವಿದ್ಯಮಾನಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದಾದ ಹಾಗೂ ಗೆಳೆಯರೊಂದಿಗೆ ಚರ್ಚೆ ಮಾಡಬಹುದಾದ ಆಯ್ಕೆಯನ್ನು ಹೊಂದಿದೆ.!!

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?
ವಿಷ್ ಫೈ ಜಾಲತಾಣದ ಕಾನ್ಸೆಪ್ಟ್ ಏನು?

ವಿಷ್ ಫೈ ಜಾಲತಾಣದ ಕಾನ್ಸೆಪ್ಟ್ ಏನು?

ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅಧಿಕಾರ ನೀಡುವ ಉದ್ದೇಶದಿಂದ ವಿಷ್ ಫೈ ಅಭಿವೃದ್ದಿಯಾಗಿದೆ.! ನರೇಂದ್ರ ಮೋದಿ ಅವರ ಸಾಧನೆ, ಪದ್ಮಾವತಿ ಮೂವಿ ವಿವಾದ , ವಿರಾಟ್ ಕೊಹ್ಲಿ ತಂಡದ ಆಯ್ಕೆ, ಮಹದಾಯಿ ವಿವಾದ ಈ ಬಗ್ಗೆ ಜನರು ತಮ್ಮ ಅಭಿಪ್ರಾಯವನ್ನು ಸೆಲ್ಫಿ ವಿಡಿಯೋದಲ್ಲಿ ಹಂಚಿಕೊಳ್ಳಬಹುದಾಗಿದೆ.!!

ವಿಷ್ ಫೈ ಬಗ್ಗೆ ಕೌಶಿಕ್ ಹೇಳುವುದೇನು?

ವಿಷ್ ಫೈ ಬಗ್ಗೆ ಕೌಶಿಕ್ ಹೇಳುವುದೇನು?

ನಾಳೆ ಜಗತ್ತನ್ನು ನಿರ್ಮಿಸುವಲ್ಲಿ ಭಾಗವಹಿಸಲು ಎಲ್ಲರಿಗೂ ಅವಕಾಶವಿದೆ. ಅದರಲ್ಲಿ ಅಂತರ್ಜಾಲ ಪ್ರವೇಶವು ಮೊದಲ ಹೆಜ್ಜೆಯಾಗಿದ್ದು, ಜನರು ತಮ್ಮ ಅಭಿಪ್ರಾಯಗಳನ್ನು ಧ್ವನಿಮುದ್ರಿಸಲು ವೇದಿಕೆಯನ್ನು ನೀಡುವ ವಿಷ್ ಫೈ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಜನರಿಗೆ ಅಧಿಕಾರವನ್ನು ನೀಡುತ್ತದೆ ಎಂದು ಕೌಶಿಕ್ ಹೇಳಿದ್ದಾರೆ.!!

20 ಸಾವಿರ ಡೌನ್‌ಲೋಡ್!!

20 ಸಾವಿರ ಡೌನ್‌ಲೋಡ್!!

ಜನರು ತಮ್ಮ ಅಭಿಪ್ರಾಯಗಳನ್ನು ಅನಾಮಧೇಯವಾಗಿ ಹಂಚಿಕೊಳ್ಳಲು ಅನುಮತಿಸುವ ಏಕೈಕ ಚಾನೆಲ್ ವಿಷ್ ಫೈ ಅನ್ನು ಭಾರತದಲ್ಲಿ ಈಗಾಗಲೇ 20 ಸಾವಿರ ಜನರು ಬಳಕೆ ಮಾಡುತ್ತಿದ್ದಾರೆ. ಆಂಡ್ರಾಯ್ಡ್ ಮತ್ತು ಐಒಎಸ್ ಮಾದರಿಯಲ್ಲಿ ಈ ವಿಡಿಯೊ ಆಪ್ ಉಚಿತವಾಗಿ ಲಭ್ಯವಿದ್ದು, ನೀವು ಸಹ ಆಪ್‌ ಡೌನ್‌ಲೋಡ್ ಮಾಡಿಕೊಳ್ಳಬಹುದು.!!

ಓದಿರಿ: ಸರ್ಕಾರದ ಎಲ್ಲಾ ದಾಖಲೆಗಳ ಕಣಜ ಈ ಡಿಜಿಟಲ್ ಆಪ್!.ಇದಿದ್ದರೆ ಟ್ರಾಫಿಕ್ ಪೊಲೀಸ್ ತಲೆನೊವ್ವಿಲ್ಲ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Ex-Facebooker Durgesh Kaushik returns to India to launch Wishfie, a video-first social media platform that empowers people to share their opinions using their phone's selfie camera. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot