ಯೂಟ್ಯೂಬ್ ಗೋ ಆಪ್ ಲಾಂಚ್: ಗೂಗಲ್ ನ ಹೊಸ ಪ್ರಯೋಗ

By Lekhaka
|

ಭಾರತದಲ್ಲಿ ವಿಡಿಯೋ ಮಾರುಕಟ್ಟೆ ಬಹು ವಿಸ್ತಾರವಾಗಿ ಬೆಳೆಯುತ್ತಿದೆ. ಈ ಹಿನ್ನಲೆಯಲ್ಲಿ ಸರ್ಚ್ ಇಂಜಿನ್ ದೈತ್ಯ ಗೂಗಲ್ ಯೂಟ್ಯೂಬ್ ಬಳಕೆದಾರರಿಗೆ ಹೊಸ ಮಾದರಿಯ ಅನುಭವವನ್ನು ನೀಡಲು ಮುಂದಾಗಿದೆ. ಅದರಲ್ಲೂ ಒಂದೇ ಸಮನೆ ಏರಿಕೆಯಾದ ಭಾರತೀಯ ಬಳಕೆದಾರರಿಗೆ ವಿಶೇಷ ಕಾಳಜಿಯನ್ನು ಗೂಗಲ್ ತೋರಿಸುತ್ತಿದೆ ಎಂದರೆ ತಪ್ಪಾಗುವುದಿಲ್ಲ ಎನ್ನಲಾಗಿದೆ.

ಯೂಟ್ಯೂಬ್ ಗೋ ಆಪ್ ಲಾಂಚ್: ಗೂಗಲ್ ನ ಹೊಸ ಪ್ರಯೋಗ

ಇದಕ್ಕಾಗಿಯೇ ಪ್ಲೇ ಸ್ಟೋರಿನಲ್ಲಿ ಯೂಟ್ಯೂಬ್ ಗೋ ಬಿಟಾ ಆವೃತ್ತಿಯ ಆಪ್ ಅನ್ನು ಬಿಡುಗಡೆ ಮಾಡಿದೆ. ಇದು ಎಲ್ಲಾರ ಬಳಕೆಗೆ ಮುಕ್ತವಾಗಿಲ್ಲ ಎನ್ನಲಾಗಿದೆ ಕೆಲವು ವ್ಯಕ್ತಿಗಳಿಗೆ ಮತ್ತು ಕೆಲವು ಪ್ರದೇಶದಲ್ಲಿ ಮಾತ್ರವೇ ಬಳಕೆಗೆ ದೊರೆಯುತ್ತಿದ್ದು, ಶೀಘ್ರವೇ ಎಲ್ಲಾ ಬಳಕೆದಾರರಿಗೂ ಯೂಟ್ಯೂಬ್ ಗೋ ಬಳಕೆಗೆ ಮುಕ್ತವಾಗಲಿದೆ.

ಆಂಡ್ರಾಯ್ಡ್ 4.1 ಮೇಲ್ಪಟ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಯೂಟ್ಯೂಬ್ ಗೋ ಆಪ್ ಬಳಕೆ ಮಾಡಬಹುದಾಗಿದೆ. ಭಾರತ ಮತ್ತು ಇಂಡೋನೇಷ್ಯಾದ ಬಳಕೆದಾರರು ಮಾತ್ರವೇ ಈ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳು ಅವಕಾಶವನ್ನು ಪಡೆದುಕೊಂಡದಿದ್ದಾರೆ ಎನ್ನಲಾಗಿದೆ.

ಪ್ರಧಾನಮಂತ್ರಿಗಳಿಂದ ಹೊಸ ಮೊಬೈಲ್ ಆಪ್ ಲಾಂಚ್- ಉಮಂಗ್ಪ್ರಧಾನಮಂತ್ರಿಗಳಿಂದ ಹೊಸ ಮೊಬೈಲ್ ಆಪ್ ಲಾಂಚ್- ಉಮಂಗ್

ಈ ಆಪ್ ಇನ್ನು ಅಭಿವೃದ್ದಿ ಹಂತದಲ್ಲಿದೆ ಎನ್ನಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು 9.4MB ಗಾತ್ರದಲ್ಲಿದೆ ಎನ್ನಲಾಗಿದೆ. ಇದು ಯೂಟ್ಯೂಬ್ ಮಾದರಿಯ ಕೇಲವು ಆಯ್ಕೆಗಳನ್ನು ಒಳಗೊಂಡಿರಲಿದೆ.

ಯೂಟ್ಯೂಬ್ ಗೋ ಆಪ್ ಬಳಕೆದಾರರಿಗೆ ವಿಡಿಯೋ ಡೌನ್ ಲೋಡ್ ಮಾಡಿಕೊಳ್ಳುವ ಮುನ್ನವೇ ಕೊಂಚ ನೋಡಲು ಅನುವು ಮಾಡಿಕೊಡಲಿದೆ. ಅಲ್ಲದೇ ವಿವಿಧ ಗುಣಮಟ್ಟದ ವಿಡಿಯೋ ವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸಹ ನೀಡಡಿದೆ. ಡೌನ್ ಲೋಡ್ ಮಾಡಿದ ವಿಡಿಯೋಗಳನ್ನು ಮೆಮೊರಿ ಕಾರ್ಡಿನಲ್ಲೂ ಇಟ್ಟುಕೊಳ್ಳಬಹುದಾಗಿದೆ.

Best Mobiles in India

Read more about:
English summary
YouTube Go app is compatible with devices running on Android 4.1 Jellybean and newer versions.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X