'ಯೂಟ್ಯೂಬ್ ಗೊ' ಆಪ್‌ನಲ್ಲಿ ಡಾಟಾ ಅವಶ್ಯಕತೆ ಇಲ್ಲದೇ ವೀಡಿಯೊ ಡೌನ್‌ಲೋಡ್ ಮಾಡಿ!

By Suneel
|

ಸೆಪ್ಟೆಂಬರ್‌ ಗೂಗಲ್‌ಗೆ ಒಳ್ಳೆಯ ತಿಂಗಳು ಅನಿಸುತ್ತೆ. ಯಾಕಂದ್ರೆ 'Allo app' ಲಾಂಚ್‌ ಮಾಡಿದ ನಂತರ, ಅದರ ಹಿಂದೆಯೇ 'YouTube Go' ಆಪ್‌ ಅನ್ನು ಹೊರತಂದಿದೆ. ಈ ಆಪ್‌ ಭಾರತದಲ್ಲಿ ಬಳಕೆದಾರರು ಉಚಿತವಾಗಿ ಯಾವುದೇ ಡಾಟಾ ಅವಶ್ಯಕತೆ ಇಲ್ಲದೇ ತಮ್ಮ ನೆಚ್ಚಿನ ವೀಡಿಯೊಗಳನ್ನು ನೋಡಲು ಅವಕಾಶ ನೀಡುತ್ತದೆ.

'YouTube Go' ಆಪ್‌ ಭಾರತೀಯರ ಅನುಭವವನ್ನು ಹೆಚ್ಚಿಸಲು ಗುರಿಯನ್ನು ಹೊಂದಿರುವ ಆಪ್‌ ಆಗಿದೆ. ಹಲವು ಪ್ರಭಾವಶಾಲಿ ಫೀಚರ್‌ಗಳನ್ನು ಹೊಂದಿದ್ದು, ಹೆಚ್ಚು ಮನರಂಜನೆ ನೀಡುವ ವೀಡಿಯೊಗಳನ್ನು ನೀಡಲಿದೆ.

'YouTube Go' ಆಪ್‌ ಸ್ಮಾರ್ಟ್‌ ಆಫ್‌ಲೈನ್ ಫೀಚರ್‌ನೊಂದಿಗೆ ಅಭಿವೃದ್ದಿ ಹೊಂದಿದ್ದು, ಭಾರತೀಯ ಬಳಕೆದಾರರಿಗಾಗಿ ಮಾತ್ರ ಈ ವರ್ಷ ಲಾಂಚ್‌ ಮಾಡುತ್ತಿದೆ. ಆಪ್‌ ಹೇಗೆ ಪಡೆಯುವುದು, ಆಪ್‌ ಫೀಚರ್‌ಗಳೇನು ಎಂಬಿತ್ಯಾದಿ ಮಾಹಿತಿಗಾಗಿ ಕೆಳಗಿನ ಮಾಹಿತಿಗಳನ್ನು ಓದಿರಿ.

ಇಂಟರ್ನೆಟ್ ಮೂಲಕ ಯೂಟ್ಯೂಬ್ ಬಳಸಿ ಹಣಸಂಪಾದಿಸಿ

 'YouTube Go' ಬಗ್ಗೆ ಮಾಹಿತಿ

'YouTube Go' ಬಗ್ಗೆ ಮಾಹಿತಿ

ಭಾರತೀಯ ಬಳಕೆದಾರರು 'YouTube Go' ಆಪ್‌ನಲ್ಲಿ ತಮ್ಮ ನೆಚ್ಚಿನ ಟ್ರ್ಯಾಕ್‌ಗಳು, ಸಿನಿಮಾಗಳು, ಸೀರೀಸ್‌ಗಳನ್ನು ನೋಡಬಹುದಾಗಿದೆ. ಬಳಕೆದಾರರು ತಮ್ಮ ನೆಚ್ಚಿನ ವೀಡಿಯೊಗಳನ್ನು ಆಫ್‌ಲೈನ್‌ಗೆ ಸೇವ್ ಮಾಡಿಕೊಂಡು, ಇಂಟರ್ನೆಟ್‌ಗೆ ಕನೆಕ್ಟ್‌ ಆಗದ ಸಮಯದಲ್ಲಿ ನೋಡಬಹುದು.

ವಿಶೇಷತೆ ಎಂದರೆ 'YouTube Go' ಆಪ್‌ನಲ್ಲಿ ವೀಡಿಯೊ ಗುಣಮಟ್ಟ, ಫೈಲ್‌ ಸೈಜ್ ಆಯ್ಕೆಯ ಆಪ್ಶನ್‌ಗಳಿವೆ.

 ಡಾಟಾ ನಿಯಂತ್ರಣ

ಡಾಟಾ ನಿಯಂತ್ರಣ

ನಿರ್ದಿಷ್ಟ ವೀಡಿಯೊ ನೋಡುವ ಮೊದಲು ಅದರ ಪ್ರಿವೀವ್ ಅನ್ನು ನೋಡಿ, ವೀಡಿಯೊ ಸೈಜ್‌ ಆಯ್ಕೆ ಮಾಡಿ ಡಾಟಾ ನಿಯಂತ್ರಣ ಹೊಂದಬಹುದಾಗಿದೆ.

 ಇಂಟರ್ನೆಟ್ ಇಲ್ಲದೇ ಶೇರ್‌ ಮಾಡಿ

ಇಂಟರ್ನೆಟ್ ಇಲ್ಲದೇ ಶೇರ್‌ ಮಾಡಿ

ಯಾವುದೇ ಡಾಟಾ ಬಳಕೆಯ ಅವಶ್ಯಕತೆ ಇಲ್ಲದೇ ವೀಡಿಯೋವನ್ನು ಕುಟುಂಬದವರು ಮತ್ತು ಸ್ನೇಹಿತರಿಗೆ ಶೇರ್‌ ಮಾಡಬಹುದಾಗಿದೆ.

 'YouTube Go' ಫೀಚರ್‌

'YouTube Go' ಫೀಚರ್‌

'YouTube Go' ಆಪ್‌ ಬಳಕೆದಾರರಿಗೆ ವೀಡಿಯೊ ಆಫ್‌ಲೈನ್‌ನಲ್ಲಿ ನೋಡಲು ಸೇವ್‌ ಮಾಡಿಕೊಳ್ಳುವ ಫೀಚರ್ ಜೊತೆಗೆ, ಅತಿ ಕಡಿಮೆ ಡಾಟಾ ಬಳಸಿಕೊಳ್ಳುತ್ತದೆ. ಹಾಗೂ ಅಕ್ಕಪಕ್ಕದಲ್ಲಿರುವವರಿಗೂ ಶೇರ್‌ ಮಾಡಬಹುದಾಗಿದೆ.

'YouTube Go' ಆಪ್‌ ಪಡೆಯುವುದು ಹೇಗೆ?

'YouTube Go' ಆಪ್‌ ಪಡೆಯುವುದು ಹೇಗೆ?

'YouTube Go' ಆಪ್‌ ಅನ್ನು ಯೂಟ್ಯೂಬ್ ಭಾರತೀಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ದಿಪಡಿಸಿದ್ದು, ಉತ್ತಮ ಕೆನೆಕ್ಟಿವಿಟಿ ನೀಡಲಿದೆ. ಆಪ್‌ ಅನ್ನು ಈಗಾಗಲೇ ಭಾರತದಲ್ಲಿ ಲಾಂಚ್ ಮಾಡಲಾಗಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇನ್ನೂ ಲಭ್ಯವಿಲ್ಲ.

ಆಪ್ ಯಾವಾಗ ಲಭ್ಯ ಎಂದು ತಿಳಿಯಲು http://youtubego.com/signup/ ತಾಣಕ್ಕೆ ಭೇಟಿ ನೀಡಿ ಸೈನಪ್‌ ಆಗಿ ಮಾಹಿತಿ ಪಡೆಯಬಹುದು.

Best Mobiles in India

English summary
You Can Now Share and Download Videos Without Any Data in India with YouTube Go,. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X