ಜಿಮೇಲ್‌ನ ಹೊಸ ಫೀಚರ್ ಆಂಡ್ರಾಯ್ಡ್‌ ಮತ್ತು ಐಒಎಸ್‌ನಲ್ಲಿ ಲಭ್ಯ..!

By GizBot Bureau
|

ಜಗತ್ತಿನಾದ್ಯಂತ ಮಿಲಿಯನ್ ಗಟ್ಟಲೆ ಬಳಕೆದಾರರು ತಮ್ಮ ಇಮೇಲ್ ಗಳನ್ನು ಕಳುಹಿಸಲು ಜಿಮೇಲ್ ನ್ನೇ ಪ್ರಮುಖ ಮಾರ್ಗವಾಗಿ ಅನುಸರಿಸುತ್ತಿದ್ದಾರೆ. ಕೇವಲ ವ್ಯಕ್ತಿಗತವಾಗಿ ಮಾತ್ರವಲ್ಲ ದೊಡ್ಡ ದೊಡ್ಡ ಸಂಸ್ಥೆಗಳು ಕೂಡ ಜಿಮೇಲ್ ಸೇವೆಯನ್ನೇ ಸಂಪರ್ಕಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ಆದರೆ ಕೆಲವು ಸಣ್ಣಪುಟ್ಟ ದೋಷಗಳು ಜಿಮೇಲ್ ಬಳಕೆದಾರರಿಗೆ ಕಿರಿಕಿರಿಯನ್ನು ಉಂಟು ಮಾಡುತ್ತದೆ.

ಉದಾಹರಣೆಗೆ ನೀವು ಒಂದು ಸಣ್ಣ ಇಮೇಲ್ ನ ಭಾಗವಾಗಿರುತ್ತೀರಿ ಮತ್ತು ಅದರಲ್ಲಿ ಅತೀ ಹೆಚ್ಚು ಜನರು ಇರುತ್ತಾರೆ ಎಂದಿಟ್ಟುಕೊಳ್ಳೋಣ. ಆಗ ಅದನ್ನು ಸ್ಕ್ರೋಲ್ ಮಾಡಿ ಹುಡುಕಾಡುವುದು ಸ್ವಲ್ಪ ಕಷ್ಟದ ವಿಚಾರವಾಗಿದೆ. ಆದರೆ ಈ ಸಮಸ್ಯೆಗೆ ಜಿಮೇಲ್ ಫುಲ್ ಸ್ಟಾಪ್ ಇಟ್ಟಿದೆ. ಕೇವಲ ವೆಬ್ ನಲ್ಲಿ ಮಾತ್ರ ಇದಕ್ಕೆ ಇಷ್ಟು ದಿನ ಅವಕಾಶವಿತ್ತು. ಆದರೆ ಇನ್ನು ಮುಂದೆ ನೀವು ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲೂ ಕೂಡ ಸ್ಕ್ರಾಲ್ ಮಾಡಬೇಕಾಗಿಲ್ಲ ಬದಲಾಗಿ ಇಮೇಲ್ ಥ್ರೆಡ್ಸ್ ನ್ನು ಡಿಸೇಬಲ್ ಮಾಡಿ ಇಡಬಹುದು.

ಜಿಮೇಲ್‌ನ ಹೊಸ ಫೀಚರ್ ಆಂಡ್ರಾಯ್ಡ್‌ ಮತ್ತು ಐಒಎಸ್‌ನಲ್ಲಿ ಲಭ್ಯ..!

ಈ ಥ್ರೆಡ್ ಗಳು ಕಾನ್ವರ್ಸೇಷನ್ ಎಂದು ಕರೆಯಲ್ಪಡುತ್ತದೆ ಮತ್ತು ನೀವು ಬದಲಾವಣೆಯನ್ನು ಜೀಮೇಲ್ ನಲ್ಲಿ ಗುರುತಿಸಿ ಟ್ರ್ಯಾಕ್ ಮಾಡಲು ಸುಲಭಗೊಳಿಸುತ್ತದೆ ಮತ್ತು ಜೀಮೇಲ್ ಮತ್ತು ಆಂಡ್ರಾಯ್ಡ್ ನಲ್ಲೂ ಇದನ್ನು ಡಿಸೇಬಲ್ ಮಾಡಿಕೊಳ್ಳಬಹುದು. ಒಂದು ವೇಳೆ ನಿಮಗೆ ತಿಳಿಯದೇ ಇದ್ದಲ್ಲಿ ವೆಬ್ ವರ್ಷನ್ ನ ಸೆಟ್ಟಿಂಗ್ಸ್ ಮೆನುವಿನಲ್ಲಿ ಇದು ಈಗಾಗಲೇ ಲಭ್ಯವಿದೆ. ಅಲ್ಲಿ ಗಮನಿಸಿಕೊಳ್ಳಬಹುದು.

ಒಂದು ವೇಳೆ ನೀವು ವೆಬ್ ವರ್ಷನ್ ನಲ್ಲಿ ಕಾನ್ವರ್ಸೇಷನ್ ವ್ಯೂ ವನ್ನು ಆಫ್ ಮಾಡಿದ್ದೇ ಆದಲ್ಲಿ ಅದು ಇನ್ನು ಮುಂದೆ ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲೂ ಕೂಡ ಆಫ್ ಆಗಿರಲಿದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.

ಬ್ಲಾಕ್ ಪೋಸ್ಟ್ ನಲ್ಲಿ ಸಂಸ್ಥೆ ಈ ವಿಚಾರವನ್ನು ಪ್ರಕಟ ಪಡಿಸಿದ್ದು ಇಷ್ಟು ದಿನ ಕೇವಲ ವೆಬ್ ನಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿದ್ದ ವೈಶಿಷ್ಟ್ಯತೆಯನ್ನು ಜಿಮೇಲ್ ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲೂ ಬಳಸಲು ಸಾಧ್ಯವಿದೆ ಎಂದು ತಿಳಿಸಿದೆ.

ಒಮ್ಮೆ ಕಾನ್ವರ್ಸೇಷನ್ ವೈಶಿಷ್ಟ್ಯವು ಆಫ್ ಆದರೆ, ನೀವು ಥ್ರೆಡ್ ಆಗಿರುವ ಕಾನ್ವರ್ಸೇಷನ್ ಗಳನ್ನು ಮೇಲ್ ಬಾಕ್ಸ್ ನ ಭಿನ್ನ ಐಕಾನ್ ನಲ್ಲಿ ಕಾಣಬಹುದು. ಬಲಭಾಗದಲ್ಲಿ ಅರಿಶಿನ ಬಣ್ಣದಲ್ಲಿ ಕಾಣುವ ಬದಲು ಬಾಣದ ಗುರುತಿನಲ್ಲಿ ಕಾಣಸಿಗುತ್ತದೆ.

ಸದ್ಯ ಆಂಡ್ರಾಯ್ಡ್ ಮತ್ತು ಐಓಎಸ್ ನ ಎಲ್ಲಾ ಬಳಕೆದಾರರು ಇದನ್ನು ಗುರುತಿಸಲು ಸಾಧ್ಯವಿಲ್ಲದೇ ಇರಬಹುದು. ಹಂತಹಂತವಾಗಿ ಬಿಡುಗಡೆಗೊಳಿಸಲಾಗುತ್ತಿದ್ದು ಸುಮಾರು 15 ದಿನದಲ್ಲಿ ಜಗತ್ತಿನ ಎಲ್ಲಾ ಬಳಕೆದಾರರಿಗೂ ಈ ವೈಶಿಷ್ಟ್ಯತೆ ಲಭ್ಯವಾಗುವ ನಿರೀಕ್ಷೆ ಇದೆ. ಒಬ್ಬ ವ್ಯಕ್ತಿ ಮತ್ತು ಸಂಸ್ಥೆಯ ಎಲ್ಲಾ ಜೀಮೇಲ್ ಬಳಕೆದಾರರೂ ಕೂಡ ಈ ಸೌಲಭ್ಯವನ್ನು ಪಡೆಯಲಿದ್ದಾರೆ.

Best Mobiles in India

English summary
You’ll thank Google for bringing this new Gmail feature on Android and iOS. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X