ಫುಲ್ ಸ್ಕ್ರಿನ್ ಡಿಸ್ ಪ್ಲೇ ಸ್ಮಾರ್ಟ್ ಫೋನ್ ಗಳಿಗಾಗಿ ತನ್ನ ಚಹರೆ ಬದಲಾಯಿಸಿಕೊಂಡ ಯುಟ್ಯೂಬ್..!

By Lekhaka
|

ಸದ್ಯ ಮೊಬೈಲ್ ಮಾರುಕಟ್ಟೆಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನಂತರದಲ್ಲಿ 18:9 ಅನುಪಾತದ ಡಿಸ್ ಪ್ಲೇ ಹೆಚ್ಚು ಸದ್ದು ಮಾಡುತ್ತಿದೆ. ಪ್ರತಿಯೊಂದ ಮೊಬೈಲ್ ತಯಾರಕ ಕಂಪನಿಗಳು ಫುಲ್ ಸ್ಕ್ರಿನ್ ಡಿಸ್ ಪ್ಲೇಯನ್ನು ಹೊಂದಿರುವ ಸ್ಮಾರ್ಟ್ ಫೋನ್ ಲಾಂಚ್ ಮಾಡಲು ಮುಂದಾಗಿದ್ದಾರೆ.

ಫುಲ್ ಸ್ಕ್ರಿನ್ ಡಿಸ್ ಪ್ಲೇ ಸ್ಮಾರ್ಟ್ ಫೋನ್ ಗಳಿಗಾಗಿ ತನ್ನ ಚಹರೆ ಬದಲಾಯಿಸಿಕೊಂಡ

ಈ ಹಿನ್ನಲೆಯಲ್ಲಿ ಯುಟ್ಯೂಬ್ ಸಹ ತನ್ನ ಚಹರೆಯನ್ನು ಈ ಸ್ಮಾರ್ಟ್ ಫೋನ್ ಗಳಿಗಾಗಿ ಬದಲಾಯಿಸಿಕೊಂಡಿದೆ. ಇದಕ್ಕಾಗಿಯೇ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಈ ಮಾದರಿಯ ಡಿಸ್ ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಸಂಖ್ಯೆಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಯೂಟ್ಯೂಬ್ ಈ ಕ್ರಮಕ್ಕೆ ಮುಂದಾಗಿದೆ.

ಈ ಹಿಂದೆ ಮಾರುಕಟ್ಟೆಯಲ್ಲಿ 16:9 ಅನುಪಾತದ ಡಿಸ್ ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಗಳನ್ನು ನಾವು ಹೆಚ್ಚಾಗಿ ಕಾಣಬಹುದಾಗಿದ್ದು, ಈ ಸ್ಮಾರ್ಟ್ ಫೋನ್ ಗಳಿಗೆ ಸರಿಹೊಂದುವಂತೆ ತನ್ನ ಆಪ್ ವಿನ್ಯಾಸವನ್ನು ಯುಟ್ಯೂಬ್ ಮಾಡಿತ್ತು. ಆದರೆ ಈಗ ಅದನ್ನು ಮೀರಿ ಡಿಸ್ ಪ್ಲೇ ಬೆಳೆದಿದೆ.

18:9 ಅನುಪಾತದ ಡಿಸ್ ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಗಳಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ನೋಡುವ ಸಂದರ್ಭದಲ್ಲಿ ಸರಿಯಾಗಿ ಫುಲ್ ಸ್ಕ್ರಿನ್ ಕಾಣಿಸುತ್ತಿರಲಿಲ್ಲ. ಇದಕ್ಕಾಗಿಯೇ ಯೂಟ್ಯೂಬ್ ಜೂಮ್ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ, ಇದರಿಂದಾಗಿ ವಿಡಿಯೋ ನೋಡುವ ಅನುಭವ ಉತ್ತಮವಾಗಿರಲಿದೆ.

ಬಜೆಟ್ ಬೆಲೆಯಲ್ಲಿ ಬೊಂಬಾಟ್ ಸ್ಮಾರ್ಟ್ ಫೋನ್ ಲಾಂಚ್ ಮಾಡಿದ ಪ್ಯಾನಾಸೋನಿಕ್ಬಜೆಟ್ ಬೆಲೆಯಲ್ಲಿ ಬೊಂಬಾಟ್ ಸ್ಮಾರ್ಟ್ ಫೋನ್ ಲಾಂಚ್ ಮಾಡಿದ ಪ್ಯಾನಾಸೋನಿಕ್

ಈಗಾಗಲೇ 4G ಸೇವೆಯೂ ದೊರೆಯುತ್ತಿರುವ ಹಿನ್ನಲೆಯಲ್ಲಿ ಯೂಟ್ಯೂಬ್ ನೋಡುವವರ ಸಂಖ್ಯೆಯೂ ಹೆಚ್ಚಾಗಿದೆ. ಅದಕ್ಕಾಗಿ ಯೂಟ್ಯೂಬ್ ತನ್ನ ಚಹರೆಯನ್ನು ಬದಲಾಯಿಸಿಕೊಂಡಿದೆ ಎನ್ನಲಾಗಿದೆ. ಇದು ಬಳಕೆದಾರರಿಗೂ ಸಂತಸವನ್ನು ತಂದಿದೆ ಎನ್ನುವುದು ಸತ್ಯ.

Best Mobiles in India

Read more about:
English summary
YouTube has now added support for crop-zooming videos so that it fills up all the usable space on smartphones with 18:9 displays.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X