ಆಂಡ್ರಾಯ್ಡ್‌ಗಾಗಿ ಯೂಟ್ಯೂಬ್ ಪ್ರಸ್ತುಪಡಿಸುತ್ತಿದೆ ಹೊಚ್ಚಹೊಸ ಫೀಚರ್

By Shwetha Ps
|

ಹೆಚ್ಚಿನವರಿಗೆ ತಿಳಿದಿರುವಂತೆ ಯೂಟ್ಯೂಬ್ ತನ್ನಲ್ಲಿ ಒಂದು ಫೀಚರ್ ಅನ್ನು ಒಳಗೊಂಡಿದ್ದು ಇದನ್ನು ಡಾರ್ಕ್ ಮೋಡ್ ಎಂದು ಕರೆಯಲಾಗಿದೆ. ಬಿಳಿಯಾಗಿರುವ ಯೂಟ್ಯೂಬ್‌ನ ಈ ಆವೃತ್ತಿಯು ಕಪ್ಪಾಗಿ ಪರಿವರ್ತಿತವಾಗುತ್ತದೆ. ಅಂದರೆ ರಾತ್ರಿಯಲ್ಲಿ ವೀಡಿಯೊ ನೋಡುವುದಕ್ಕಾಗಿ ಲಭ್ತವಿದೆ. ಹೆಸರೇ ಹೇಳುವಂತೆ ಇದೊಂದು ಹಿಡನ್ ಫೀಚರ್ ಆಗಿದೆ. ಯೂಟ್ಯೂಬ್‌ನಲ್ಲಿ ಈ ಫೀಚರ್ ಅನ್ನು ಸಕ್ರಿಯಗೊಳಿಸಲು ನೀವು ಕೆಲವೊಂದು ಹಂತಗಳನ್ನು ಅನುಸರಿಸಬೇಕು.

ಆಂಡ್ರಾಯ್ಡ್‌ಗಾಗಿ ಯೂಟ್ಯೂಬ್ ಪ್ರಸ್ತುಪಡಿಸುತ್ತಿದೆ ಹೊಚ್ಚಹೊಸ ಫೀಚರ್

ರೆಡ್ಡಿಟ್ ಬಳಕೆದಾರರು ಈ ಫಿಚರ್ ಅನ್ನು ಮೊದಲು ಅನ್ವೇಷಿಸಿದರು. ಆಂಡ್ರಾಯ್ಡ್ ಪೊಲೀಸ್‌ನ ವರದಿಯಂತೆ ಯೂಟ್ಯೂಬ್ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗೆ ಡಾರ್ಕ್ ಮೋಡ್ ಅನ್ನು ಸೇರಿಸುವ ಪ್ರಯತ್ನದಲ್ಲಿದೆ. ಆದರೆ ಈ ಫೀಚರ್ ಯಾವಾಗ ಬರುತ್ತದೆ ಎಂಬುದು ಮಾತ್ರ ವರದಿಯಾಗಿಲ್ಲ.

ನಿಮಗೆ ಆಸಕ್ತಿ ಇದ್ದರೆ ಯೂಟ್ಯೂಬ್‌ನ ಇತ್ತೀಚಿನ ಡೆವಲಪರ್ ಸೆಟ್ಟಿಂಗ್‌ಗಳಿಗೆ ಹೋಗಿ ಇಲ್ಲಿ ಮೋಡ್ ಆನ್ ಮಾಡಿಕೊಳ್ಳಬಹುದಾಗಿದೆ. ಈ ಫೀಚರ್ ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ ಎಂಬುದನ್ನು ಗಮನಿಸಿಕೊಳ್ಳಿ. ಆದ್ದರಿಂದಲೇ ಸ್ಕ್ರೀನ್‌ನಲ್ಲಿರುವ ವಿಷಯಗಳು ಸರಿಯಾಗಿ ಬಣ್ಣದಲ್ಲಿ ಲಭ್ಯವಿಲ್ಲ.

ವೀಡಿಯೊ ಪ್ಯಾನಲ್‌ನಲ್ಲಿರುವ ಕೆಲವೊಂದು ಚಿತ್ರಗಳು, ವಿಷಯಗಳು ಮತ್ತು ಐಕಾನ್‌ಗಳು ಕಪ್ಪು ಬಣ್ಣದಲ್ಲಿವೆ. ಪುಟದ ವಿಭಾಗದಲ್ಲಿನ ಪ್ಯಾನಲ್‌ ಗಾಢ ಕಂದು ಬಣ್ಣದಲ್ಲಿದ್ದರೆ ಪಠ್ಯ ಮತ್ತು ಐಕಾನ್‌ಗಳು ಕಾಣುತ್ತವೆ. ಆಸಕ್ತಿಕರವಾಗಿ ಇತರ ಕೆಲವೊಂದು ಅವುಗಳ ಹಿಂದಿರುವ ಕೆಲವೊಂದು ಐಕಾನ್‌ಗಳು ಸ್ವಲ್ಪ ಕಾಣಿಸುತ್ತವೆ ಏಕೆಂದರೆ ಅವು ತಿಳಿ ಕಂದು ಬಣ್ಣದಲ್ಲಿವೆ. ಗೂಗಲ್ ಈ ಫೀಚರ್ ಅನ್ನು ಪ್ರಸ್ತುತಪಡಿಸುವ ಮುನ್ನ ಕೆಲವೊಂದು ಅಂಶಗಳನ್ನು ಸೇರಿಸುವ ಯೋಜನೆಯಲ್ಲಿದೆ.

ಆಂಡ್ರಾಯ್ಡ್ ಸೇಫ್‌ ಅಲ್ಲ: ಬಳಕೆದಾರರ ಮಾಹಿತಿಯನ್ನು ಗೂಗಲ್ ಕದಿಯುವ ಕಾರಣ ಗೊತ್ತಾ..?ಆಂಡ್ರಾಯ್ಡ್ ಸೇಫ್‌ ಅಲ್ಲ: ಬಳಕೆದಾರರ ಮಾಹಿತಿಯನ್ನು ಗೂಗಲ್ ಕದಿಯುವ ಕಾರಣ ಗೊತ್ತಾ..?

ಯೂಟ್ಯೂಬ್‌ನ ಡೆಸ್ಕ್‌ಟಾಪ್ ಆವೃತ್ತಿಯು ಡಾರ್ಕ್ ಮೋಡ್‌ನಲ್ಲಿ ಕಾಣುವಂತೆ ಯೂಟ್ಯೂಬ್ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಕೆದಾರ ಇಂಟರ್ಫೇಸ್ ಸಂಪೂರ್ಣ ಗಾಢಬಣ್ಣವಾಗುವುದಿಲ್ಲ. ವೀಡಿಯೊ ಪ್ಯಾನಲ್ ಮಾತ್ರ ಗಾಢವಾಗುತ್ತದೆ. ಮುಖ್ಯ ವೀಡಿಯೊದ ಕೆಳಗಿರುವ ಯುಐನ ಮೊದಲ ಮೂರು ವಿಭಾಗಗಳು ಕಪ್ಪಾಗುತ್ತವೆ. ಈ ಫೀಚರ್ ಇನ್ನೂ ಕಾರ್ಯಾಚರಣೆಯಲ್ಲಿದ್ದು ಇದನ್ನು ಪ್ರಸ್ತುತಪಡಿಸುವ ಸಮಯದಲ್ಲಿ ಇದು ಇನ್ನಷ್ಟು ಹೊಸದಾಗಿ ಕಾಣಬಹುದು.

Best Mobiles in India

Read more about:
English summary
The desktop version of YouTube already has the Dark Mode feature.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X