Subscribe to Gizbot

ಯೂಟ್ಯೂಬ್ ನ ಹೊಸ ಆಯ್ಕೆ: ಡೆಸ್ಕ್ ಟಾಪ್ ಬಳಕೆದಾರರಿಗೆ ಹಬ್ಬ..!!!!

Written By: Lekhaka

ಡೆಸ್ಕ್ ಟಾಪ್ ನಲ್ಲಿ ಯೂಟ್ಯೂಬ್ ಬಳಕೆ ಮಾಡುವವರಿಗೆ ಹೊಸದೊಂದು ಫೀಚರ್ ಅನ್ನು ನೀಡಲಾಗಿದೆ. ವಿಡಿಯೋ ಫ್ರಿ ವ್ಯೂ ಟಂಬ್ಲೈನ್ ಆಯ್ಕೆಯನ್ನು ನೀಡಲು ಯೂಟ್ಯೂಬ್ ಮುಂದಾಗಿದೆ.

ಯೂಟ್ಯೂಬ್ ನ ಹೊಸ ಆಯ್ಕೆ: ಡೆಸ್ಕ್ ಟಾಪ್ ಬಳಕೆದಾರರಿಗೆ ಹಬ್ಬ..!!!!

ಇನ್ನು ಮುಂದೆ ಯೂಟ್ಯೂಬ್ ಬಳಕೆದಾರರು ಯಾವುದಾದರು ವಿಡಿಯೋವನ್ನು ನೋಡುವ ಮುಂಚೆಯೇ ಅದರ ಮೇಲೆ ಮೌಸ್ ಕರ್ಜರ್ ನಿಲ್ಲಿಸಿದ ಸಂದರ್ಭದಲ್ಲಿ ಮೂರಿಂದ ನಾಲ್ಕು ಸೆಕೆಂಡ್ಗಳ ವಿಡಿಯೋ ಪ್ರೀವ್ಯೂ ದೊರೆಯಲಿದೆ.

ಈಗಾಗಲೇ ಈ ಆಯ್ಕೆಯೂ ಬಿಡುಗಡೆಯಾಗಿದ್ದು, ಹೆಚ್ಚಿನ ಮಂದಿ ಬಳಕೆದಾರರು ಈ ಆಯ್ಕೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಜುಲೈ ಮಧ್ಯ ಭಾಗದ ಒಳಗೆ ಬಹುತೇಕ ಎಲ್ಲಾ ಬಳಕೆದಾರರಿಗೂ ಈ ವಿಡಿಯೋ ಫ್ರೀ ವ್ಯೂ ಆಯ್ಕೆಯನ್ನು ಯೂಟ್ಯೂಬ್ ನೀಡಲಿದೆ.

ಬಳಕೆದಾರರು ಜಿಫ್ ಮಾದರಿಯಲ್ಲಿ ವಿಡಿಯೋ ಫ್ರೀ ವ್ಯೂ ಪಡೆಯಬಹುದಾಗಿದೆ. ಈ ಆಯ್ಕೆಯೂ ಕ್ರೋಮ್ 32 ಆವೃತ್ತಿಯಲ್ಲಿ ಮಾತ್ರವೇ ಲಭ್ಯವಿದ್ದು, ಓಪೆರಾ 19 ಆವೃತ್ತಿಯ ಬಳಕೆದಾರಿಗೂ ಇದು ಲಭ್ಯವಿದೆ.

ಆದರೆ ಯೂಟ್ಯೂಬ್ ಲೈವ್ ವಿಡಿಯೋ ಗಳು ಈ ಫ್ರಿ ವ್ಯೂ ಆಯ್ಕೆಯನ್ನು ಹೊಂದಿರುವುದಿಲ್ಲ ಎನ್ನಲಾಗಿದೆ. ಅಲ್ಲದೇ 30 ಸೆಕೆಂಡ್ ಗಿಂತ ಹೆಚ್ಚಿನ ಅವಧಿಯ ವಿಡಿಯೋಗಳು ಮಾತ್ರವೇ ಫ್ರಿ ವ್ಯೂ ಆಯ್ಕೆಯನ್ನು ಪಡೆದುಕೊಂಡಿವೆ ಎನ್ನಲಾಗಿದೆ.

ಈ ವಿಡಿಯೋ ಫ್ರಿ ವ್ಯೂ ಬಳಕೆದಾರರಿಗೆ ವಿಡಿಯೋದಲ್ಲಿ ಏನೀದೆ ಎಂಬುದನ್ನು ತಿಳಿಸಿಕೊಡಲಿದೆ. ಇದು ವಿಡಿಯೋವನ್ನು ನೋಡಬೇಕೆ ಬೇಡವೇ ಎಂಬುದನ್ನು ನಿರ್ಧರಿಸಲು ಸಹಾಯಕಾರಿಯಾಗಿದೆ.

Read more about:
English summary
YouTube has introduced a feature for its users that allows them to go through a preview of the video content by hovering the mouse pointer over the video thumbnail.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot