Subscribe to Gizbot

400 MP ಕ್ಯಾಮೆರಾ, ಒಂದು ಫೋಟೋ ಗಾತ್ರ 2.5GB: ಬೆಲೆ ಊಹಿಸಲು ಆಗಲ್ಲ...!

Written By:

ದಿನೇ ದಿನೇ ಕ್ಯಾಮೆರಾ ಮಾರುಕಟ್ಟೆಯೂ ವಿಸ್ತಾರವಾಗುತ್ತಿದ್ದು, ಹೊಸ ಹೊಸ ಕ್ಯಾಮೆರಾಗಳು ಮಾರುಕಟ್ಟೆಗೆ ಬರುತ್ತಿದೆ. DSLR ಪೋಟೋಗ್ರಫಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಇದರೊಂದಿಗೆ ಮಿರಲ್ ಲೈಸ್ ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ಇದೇ ಮಾದರಿಯಲ್ಲ ಮಾರುಕಟ್ಟೆಗೆ ಹೈಯಂಡ್ ಕ್ಯಾಮೆರಾವೊಂದು ಕಾಲಿಟ್ಟಿದ್ದು, ಇದು 100MP ಗುಣಮಟ್ಟದ ಸೆಸ್ಸಾರ್ ಹೊಂದಿದ್ದು, ಒಂದು ಫೋಟೋ 2.4GB ಗಾತ್ರದಲ್ಲಿ ಇರಲಿದೆ ಎನ್ನಲಾಗಿದೆ.

400 MP ಕ್ಯಾಮೆರಾ, ಒಂದು ಫೋಟೋ ಗಾತ್ರ 2.5GB: ಬೆಲೆ ಊಹಿಸಲು ಆಗಲ್ಲ...!

ಹ್ಯಾಸೆಲ್ ಬ್ಲಾಡ್ ಕಂಪನಿಯೂ 400 ಮೆಗಾಪಿಕ್ಸೆಲ್ ಸಾಮಾರ್ಥ್ಯದ H6D-400 ಸಿ ಮಲ್ಟಿ-ಶಾಟ್ ಕ್ಯಾಮೆರಾವನ್ನು ಪರಿಚಯ ಮಾಡಿದ್ದು, ಸದ್ಯದ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತೀ ಹೆಚ್ಚಿನ ಮೆಗಾಪಿಕ್ಸೆಲ್ ಸಾಮಾರ್ಥ್ಯದ ಮತ್ತು ದುಬಾರಿ ಬೆಲೆಯ ಕ್ಯಾಮೆರಾ ಇದಾಗಿದೆ. ಇದರಲ್ಲಿ ಅತ್ಯಂತ ಗುಣಮಟ್ಟದ ಫೋಟೋಗಳನ್ನು ತೆರೆಯಬಹುದಾಗಿದೆ.

ಓದಿರಿ: ಜಿಯೋ ಕಟ್ಟಿರುವ ಸಾಮ್ರಾಜ್ಯ ಅಲ್ಲಾಡಿಸಲು ಏರ್‌ಟೆಲ್‌ನ ಇದೊಂದು ಆಫರ್ ಸಾಕು...!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾನವ ಕಣ್ಣಿಗೆ ಹೋಲಿಕೆ:

ಮಾನವ ಕಣ್ಣಿಗೆ ಹೋಲಿಕೆ:

ಈ ಕ್ಯಾಮೆರಾದಲ್ಲಿ ಅಳವಡಿಸಿದರುವ 400 ಮೆಗಾಪಿಕ್ಸೆಲ್ ಹತ್ತಿರ ಹತ್ತಿರ ಮಾನವ ಕಣ್ಣಿಗೆ ಸಮವಾಗಿದ್ದು, ಮಾನವ ಕಣ್ಣು ಸಹ 400MP ಅಸುಪಾಸಿನ ಗುಣಮಟ್ಟವನ್ನು ಹೊಂದಿದೆ ಎನ್ನಲಾಗಿದೆ. ಹ್ಯಾಸೆಲ್ ಬ್ಲಾಡ್ H6D-400 ಸಿ ಮಲ್ಟಿ-ಶಾಟ್ ಕ್ಯಾಮೆರಾದಲ್ಲಿ ಗುಣಮಟ್ಟದ ವಿಡಿಯೋ ಮತ್ತು ಫೋಟೋ ವನ್ನು ತೆಗೆಯಬಹುದಾಗಿದೆ.

2.4 GB ಫೋಟೋ:

2.4 GB ಫೋಟೋ:

ಈ ಕ್ಯಾಮೆರಾದಲ್ಲಿ ಕ್ಲಿಕಿಸುವ ಪ್ರತಿ ಫೋಟೋದ ಗಾತ್ರವೂ ಅತ್ಯಂತ ಹೆಚ್ಚಾಗಿ ಇರಲಿದ್ದು, ಒಂದು ಫೋಟೋ ಸುಮಾರು 2.4GB ಯಷ್ಟು ಇರಲಿದೆ. ಇದರಿಂದಾಗಿ ಇದರಲ್ಲಿ ಕ್ಲಿಕಿಸಿದ ಫೋಟೋ ಎಂದಿಗೂ ಪಿಕ್ಸಲೆಟ್ ಆಗುವುದಿಲ್ಲ ಎನ್ನಲಾಗಿದೆ.

4K ವಿಡಿಯೋ:

4K ವಿಡಿಯೋ:

ಹ್ಯಾಸೆಲ್ ಬ್ಲಾಡ್ H6D-400 ಸಿ ಮಲ್ಟಿ-ಶಾಟ್ ಕ್ಯಾಮೆರಾದಲ್ಲಿ 4K ಗುಣಮಟ್ಟದ ವಿಡಿಯೋಗಳನ್ನು ಸೆರೆಹಿಡಿಯಬಹುದಾಗಿದೆ. ಸಿನಿಮಾ ಕ್ಷೇತ್ರದಲ್ಲಿಯೂ ಈ ಕ್ಯಾಮೆರಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

How to Download e-Aadhaar Card! ಸ್ಮಾರ್ಟ್‌ಫೋನ್‌ನಲ್ಲಿ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..?
ರೂ.30 ಲಕ್ಷ:

ರೂ.30 ಲಕ್ಷ:

ಸದ್ಯ ಕ್ಯಾಮೆರಾ ನಿರ್ಮಾಣ ಹಂತದಲ್ಲಿದ್ದು, ಮಾರ್ಚ್‌ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಇದರ ಬೆಲೆ ಸುಮಾರು ರೂ.30 ಲಕ್ಷಗಳಾಗಿಲಿದೆ. ಸದ್ಯ ಮಾರುಕಟ್ಟೆಯ ದುಬಾರಿ ಕ್ಯಾಮೆರಾ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Hasselblad Announces 400-Megapixel H6D-400c Multi-Shot. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot