ಸ್ಪೆಕ್ಸ್ ಹಾಕಿಕೊಳ್ಳಿ, 3ಡಿ ಲ್ಯಾಪ್ ಟಾಪ್ ಬಂದಿದೆ!

Posted By: Staff

ಸ್ಪೆಕ್ಸ್ ಹಾಕಿಕೊಳ್ಳಿ, 3ಡಿ ಲ್ಯಾಪ್ ಟಾಪ್ ಬಂದಿದೆ!
ಅವತಾರ್ ಫಿಲ್ಮ್ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆಹೊಡದ ನಂತರ ಎಲ್ಲರಿಗೂ 3ಡಿ ಹುಚ್ಚು ಹಿಡಿದಿದೆ. ಇದೀಗ ಪುಟ್ಟ ಪೆಟ್ಟಿಗೆ ಲ್ಯಾಪ್ ಟಾಪ್ ಇದೆಯಲ್ವ. ಅದಕ್ಕೂ 3ಡಿ ಶೋಕಿ ಹಿಡಿದಿದೆ. ಇನ್ನು ಮುಂದೆ ಲ್ಯಾಪ್ ಟಾಪ್ ಗಳಲ್ಲೂ 3ಡಿ ಅನುಭವ ಪಡೆಯಬಹುದು.

3ಡಿ ಲ್ಯಾಪ್ ಟಾಪ್ ಲೋಕಕ್ಕೆ ಎಲ್ ಜಿ ಕಾಲಿಟ್ಟಿದೆ. ಈಗಾಗಲೇ ಕಂಪನಿಯು LG Xnote A530 ಎಂಬ 3ಡಿ ಲ್ಯಾಪ್ ಟಾಪ್ ಅನಾವರಣ ಮಾಡಿದೆ. ಇದಕ್ಕಾಗಿ ಯಾವುದೇ ಪ್ರತ್ಯೇಕ ಹಾರ್ಡ್ ವೇರ್ ಅಗತ್ಯವಿಲ್ಲವಂತೆ. ಮಾಮೂಲಿ ಪರದೆಯನ್ನೇ ವಿಶೇಷವಾಗಿ 3ಡಿಗೆ ಪರಿವರ್ತಿಸಲಾಗುತ್ತದಂತೆ. ಆದರೆ 3ಡಿ ಲ್ಯಾಪ್ ಟಾಪ್ ನೋಡಲು 3ಡಿ ಕನ್ನಡಕ ಮಾತ್ರ ಕಡ್ಡಾಯ.

ನೂತನ 3ಡಿ ಲ್ಯಾಪ್ ಟಾಪ್ 15.6 ಇಂಚಿನ ಪೂರ್ಣಪ್ರಮಾಣದ ಎಚ್ ಡಿ ಎಲ್ ಸಿಡಿ ಸ್ಕ್ರೀನ್ ಡಿಸ್ ಪ್ಲೇ ಹೊಂದಿದೆ. ಕಂಪನಿ ಒದಗಿಸಿರುವ 3ಡಿ ಲೆನ್ಸ್ ಗಳನ್ನು ಸಾಮಾನ್ಯ ಕನ್ನಡಕಗಳಿಗೂ ಹಾಕಿ 3ಡಿ ಅನುಭವ ಪಡೆಯಬಹುದಾಗಿದೆ.

ಕಂಪನಿಯು ನೂತನ ಲ್ಯಾಪ್ ಟಾಪ್ ಗಳೊಂದಿಗೆ ಹೆಚ್ಚುವರಿಯಾಗಿ ಲೆನ್ಸ್ ಗಳನ್ನು ನೀಡುತ್ತದಂತೆ. ಹೀಗಾಗಿ ನಿಮ್ಮ ಲ್ಯಾಪ್ ಟಾಪ್ ಸುತ್ತಮುತ್ತ ಕುಳಿತಿರುವರಿಗೂ ಲೆನ್ಸ್ ನೀಡಬಹುದು.

ಈ ಲ್ಯಾಪ್ ಟಾಪ್ ನಲ್ಲಿ ಎರಡು ವೆಬ್ ಕ್ಯಾಮ್ ಇದೆ. ಬಳಕೆದಾರರು ಇದರಿಂದ 3ಡಿ ವಿಡಿಯೋಗಳನ್ನು ಮಾಡಬಹುದಾಗಿದೆ. ಈ ಲ್ಯಾಪ್ ಟಾಪ್ ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ದೇಶಗಳಿಗೆ ಈ ಲ್ಯಾಪ್ ಟಾಪ್ ಈ ತಿಂಗಳು ಪ್ರವೇಶಿಸಲಿದೆ. ಉಳಿದ ದೇಶಗಳಿಗೆ ಮುಂದಿನ ತಿಂಗಳ ನಂತರ.. ಇದರಲ್ಲಿರುವ ಕೆಲವು ವಿಶೇಷಗಳು.

LG Xnote A530 ವಿಶೇಷತೆ
* ಇಂಟೆಲ್ ಐ7 ಕೋರ್ ಪ್ರೊಸೆಸರ್
* RAM ಸಾಮರ್ಥ್ಯ 8ಜಿಬಿ
* ಎರಡು ವೆಬ್ ಕ್ಯಾಮ್(ಇದರಿಂದ ಅತ್ಯಧಿಕ ಗುಣಮಟ್ಟದ 2ಡಿ ಮತ್ತು 3ಡಿ ಇಮೇಜ್ ದಾಖಲಿಸಬಹುದು)
* ಡಿವಿಡಿ, ಬ್ಲೂರೇ ಕಾಂಬೊ ಡ್ರೈವ್
* ವೈ-ಫೈ, ಬ್ಲೂಟೂಥ್ ಕನೆಕ್ಷನ್
* 3ಡಿ ಎಸ್ಆರ್ಎಸ್ ಸೌಂಡ್ ಸಿಸ್ಟಮ್

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot