ಭಾರತದಲ್ಲಿರುವ ಅತ್ಯುತ್ತಮ ಹತ್ತು ಟೆಕ್ ಸಂಸ್ಥೆಗಳು

By Shwetha
|

ಭಾರತದಲ್ಲಿ ಕೆಲಸ ಮಾಡಲು ಅನುಕೂಲಕರ ಮತ್ತು ಮಹಾನ್ ಎಂದೆನಿಸಿಕೊಳ್ಳುವ ಹತ್ತು ಟೆಕ್ ಸ್ಥಳಗಳನ್ನು ಇಕನಾಮಿಕ್ ಟೈಮ್ಸ್ ಬಿಡುಗಡೆ ಮಾಡಿದೆ. ಉದ್ಯೋಗಿಗಳು ಆ ಕಂಪೆನಿಯಲ್ಲಿ ಕೆಲಸ ಮಾಡುವಾಗ ಉಂಟಾಗುವ ಅನುಕೂಲತೆ, ಸ್ಥಳದ ಭದ್ರತೆ, ನಂಬಿಕೆ, ಗೌರವ ಮೊದಲಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಂಪೆನಿ ಈ ಸಂಸ್ಥೆಗಳ ಹೆಸರನ್ನು ಪ್ರಕಟಪಡಿಸಿದೆ.

ಇಂದಿನ ಲೇಖನದಲ್ಲಿ ಈ ಹತ್ತು ತಂತ್ರಜ್ಞಾನ ಸಂಬಂಧಿತ ಕಂಪೆನಿಗಳ ಕುರಿತ ವಿವರವಾದ ಮಾಹಿತಿಯನ್ನು ನೋಡೋಣ.

#1

#1

ತಮ್ಮ ಆಲೋಚನೆಗಳನ್ನು ಹಂಚಿಕೊಂಡು, ಕೆಲಸ ಮಾಡುವ ಮಹಾನ್ ಅನುಭವವನ್ನು ಪಡೆದುಕೊಳ್ಳಬಹುದಾದ ಅತಿ ಮಹಾನ್ ಸಂಸ್ಥೆಯಾಗಿ ಗೂಗಲ್ ಬಂದಿದೆ. ಇದು ವಿಶ್ವದಾದ್ಯಂತವಿರುವ ತನ್ನ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ ಮತ್ತು ತನ್ನ ಉದ್ಯೋಗಿಗಳ ಭದ್ರ ಭವಿಷ್ಯಕ್ಕಾಗಿ ಅತ್ಯುತ್ತಮ ಕಾರ್ಯಗಳನ್ನು ಹಮ್ಮಿಕೊಂಡಿದೆ.

#2

#2

ಭಾರತದಲ್ಲಿ ಕಾರ್ಯನಿರ್ವಹಿಸಲು ಅತ್ಯುತ್ತಮವಾಗಿರುವ ಟೆಕ್ ಕಂಪೆನಿ ಎಂಬ ಬಿರುದಿನಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿರುವುದು ಇಂಟೆಲ್ ಆಗಿದೆ. ಇದು ಉದ್ಯೋಗಿಗಳು ಬೆಳೆಯುವಂತಹ ಸ್ಪರ್ಧಾತ್ಮಕ ವಾತಾವರಣವನ್ನು ನಿರ್ಮಿಸಿಕೊಡುತ್ತದೆ. ತನ್ನ ಸಹೋದ್ಯೋಗಿಗಳ ಭವಿಷ್ಯದ ಕುರಿತಾದ ಕೆಲವೊಂದು ಮಹಾನ್ ಕಾರ್ಯಗಳನ್ನು ಕೂಡ ಇದು ಸಂಘಟಿಸುತ್ತದೆ.

#3

#3

ಇನ್ನು ಮೂರನೇ ಸ್ಥಾನದಲ್ಲಿರುವುದು SAP ಲ್ಯಾಬ್ ಆಗಿದೆ. ಉದ್ಯೋಗಿಗಳ ಭವಿಷ್ಯದ ಕನಸನ್ನು ಸಾಕಾರಗೊಳಿಸುವಂತಹ ಉತ್ತಮ ವೇದಿಕೆಯನ್ನು ಈ ಕಂಪೆನಿ ಹಾಕಿಕೊಡುತ್ತದೆ.

#4

#4

ಅಡೋಬ್ ಇಂಡಿಯಾ ಮುಖ್ಯಸ್ಥ ನರೇಶ್ ಗುಪ್ತಾ, ಹಂತ ಹಂತದ ಪ್ರಕ್ರಿಯೆಗಳ ಮೂಲಕ ಸಹೋದ್ಯೋಗಿಗಳಿಗೆ ಉತ್ತಮ ಕಾರ್ಯನಿರ್ವಹಣೆಯ ಪರಿಸರವನ್ನು ನಿರ್ಮಿಸಿಕೊಡುತ್ತಿದ್ದಾರೆ.

#5

#5

ಆರ್ಥಿಕ ಸಾಫ್ಟ್‌ವೇರ್ ತಯಾರಕ Intuit ಹೊಸ ಉದ್ಯೋಗಿಗಳಿಗೆ ಮೊದಲ ಮೂವತ್ತು ದಿನಗಳು " ನೋ ವರ್ಕ್ ಜೋನ್" ಎಂಬ ಕಲ್ಪನೆಯನ್ನು ನಿರ್ಮಿಸಿಕೊಡುತ್ತದೆ. ಈ ಸಮಯದಲ್ಲಿ ಉದ್ಯೋಗಿಯು ವ್ಯವಹಾರ ಮತ್ತು ಕಂಪೆನಿಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಅಭ್ಯಸಿಸಬೇಕು. ಕೆಲಸ ಮಾಡುವ ವೈಖರಿಯನ್ನು ಈ ಸಮಯದಲ್ಲಿ ತರಬೇತಿಯಂತೆ ಉದ್ಯೋಗಿಗಳಿಗೆ ಕಂಪೆನಿ ಕಲ್ಪಸಿಕೊಡುತ್ತದೆ.

#6

#6

ನೆಟ್‌ಆಪ್ ಭಾರತದಲ್ಲಿ 11 ಸ್ಥಾನವನ್ನು ಗಳಿಸಿದೆ. ಯುಎಸ್ ಆಧಾರಿತ ಕಂಪ್ಯೂಟರ್ ಸಂಗ್ರಹಣಾ ಕಂಪೆನಿ ಇದಾಗಿದ್ದು ಉದ್ಯೋಗಿಗಳಿಗೆ ಉತ್ತಮ ಭವಿಷ್ಯ ನಿರ್ಮಾಣವನ್ನು ಇದು ಮಾಡುತ್ತದೆ.

#7

#7

ಮೈಕ್ರೋಸಾಫ್ಟ್ 14 ನೇ ಸ್ಥಾನವನ್ನು ಗಳಿಸಿದೆ.

#8

#8

ಪಟ್ಟಿಯಲ್ಲಿ ಮೊದಲ ಟೆಲಿಕಾಮ್ ಕಂಪೆನಿಯಾಗಿ ಹೊರಹೊಮ್ಮಿರುವ ವೋಡಾಫೋನ್ 18 ಸ್ಥಾನವನ್ನು ಗಳಿಸಿದೆ.

#9

#9

ತಾವಂತ್ ಟೆಕ್ನೋಲಜೀಸ್ ಇನ್ನೊಂದು ಉತ್ತಮ ಭವಿಷ್ಯವುಳ್ಳ ಟೆಕ್ ಕಂಪೆನಿಯಾಗಿದೆ.

#10

#10

ಹತ್ತನೇ ಸ್ಥಾನದಲ್ಲಿರುವ ಏಸ್ಪೈರ್ ಸಿಸ್ಟಮ್ಸ್ ತನ್ನ ಉದ್ಯೋಗಿಗಳನ್ನು ಪ್ರಮುಖ ರಾಯಭಾರಿಯನ್ನಾಗಿ ನೇಮಿಸಿಕೊಳ್ಳುವಂತಹ ತರಬೇತಿಯನ್ನು ಮಾಡುತ್ತದೆ.

Best Mobiles in India

Read more about:
English summary
This article tells about 10 best technology companies to work in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X