ಸ್ಯಾಮ್ಸಂಗ್ ಕ್ರೋಮ್ ಬುಕ್ ಪ್ರೋದ 5 ಅತ್ಯಾಕರ್ಷಕ ವಿಶೇಷತೆಗಳು.

Written By:

ಗ್ಯಾಲಕ್ಸಿ ನೋಟ್ 7 ಕೊಟ್ಟ ಹೊಡೆತವು ಸ್ಯಾಮ್ಸಂಗ್ ಕಂಪನಿಯ ವಾರ್ಷಿಕ ಲಾಭವನ್ನು ಬಹಳಷ್ಟು ಕಡಿಮೆ ಮಾಡಿಬಿಟ್ಟಿದ್ದರೂ ಕಂಪನಿಯು ಹೊಸ ಉತ್ಪನ್ನಗಳನ್ನು ಹೊರತರುವುದನ್ನು ನಿಲ್ಲಿಸಿಲ್ಲ. ಕೊರಿಯಾದ ದೈತ್ಯ ಉನ್ನತ ಕ್ರೋಮ್ ಬುಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ, ಇದು ನೇರವಾಗಿ ಆ್ಯಪಲ್ ನ ಮ್ಯಾಕ್ ಬುಕ್ ಪ್ರೊಗೆ ಸವಾಲೊಡ್ಡಲಿದೆ.

ಸ್ಯಾಮ್ಸಂಗ್ ಕ್ರೋಮ್ ಬುಕ್ ಪ್ರೋದ 5 ಅತ್ಯಾಕರ್ಷಕ ವಿಶೇಷತೆಗಳು.

ವರದಿಗಳ ಪ್ರಕಾರ, ಮಾರುಕಟ್ಟೆ ಪ್ರವೇಶಿಸಲಿರುವ ಹೊಸ ಕ್ರೋಮ್ ಬುಕ್ ಪ್ರೊ ಬಿಡುಗಡೆಯ ಸಮಯದಲ್ಲಿ (ಬಹುಶಃ ಮುಂದಿನ ವಾರ) ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ನೋಟ್ ಬುಕ್ ಎನ್ನಿಸಿಕೊಳ್ಳಲಿದೆ. ಇದರಲ್ಲಿ ಅತ್ಯುನ್ನತ ಫೀಚರುಗಳಿರಲಿದೆ, ಉತ್ತಮ ಹಾರ್ಡ್ ವೇರ್ ಇರಲಿದೆ. ಉನ್ನತ ಗುಣಮಟ್ಟದ ನೋಟ್ ಬುಕ್ ಖರೀದಿಸಲು ನೀವು ಬಯಸಿದ್ದಲ್ಲಿ ಸ್ವಲ್ಪ ಕಾಯಿರಿ ಎನ್ನುವುದು ನಮ್ಮ ಸಲಹೆ. ಸ್ಯಾಮ್ಸಂಗ್ ನೋಟ್ ಬುಕ್ಕಿನ ಜೊತೆಗೆ ಆ್ಯಪಲ್ ನ ಮ್ಯಾಕ್ ಬುಕ್ ಪ್ರೊ ಕೂಡ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಸ್ಪರ್ಧೆ ತುರುಸಾಗಿದೆ.

ಓದಿರಿ: ವಾಟ್ಸಾಪ್‌ನಲ್ಲಿ ನಿಮ್ಮ ಬೆಸ್ಟ್‌ ಫ್ರೆಂಡ್ ಯಾರು ತಿಳಿಯಲು ಈ ಸಿಂಪಲ್ ಟ್ರಿಕ್ ಸಾಕು!

ಸದ್ಯಕ್ಕೆ ಸ್ಯಾಮ್ಸಂಗ್ ಕ್ರೋಮ್ ಬುಕ್ ಪ್ರೋದ ವಿಶೇಷತೆಗಳನ್ನು ಅರಿಯಿರಿ.

ಸ್ಯಾಮ್ಸಂಗ್ ಕ್ರೋಮ್ ಬುಕ್ ಪ್ರೋದ 5 ಅತ್ಯಾಕರ್ಷಕ ವಿಶೇಷತೆಗಳು.

ಸ್ಟೈಲಸ್ ಇರುವ ಪ್ರಥಮ ಕ್ರೋಮ್ ಬುಕ್.

ಸ್ಯಾಮ್ಸಂಗ್ ತನ್ನ ನೋಟ್ ಸರಣಿಯ ಫೋನುಗಳಲ್ಲಿ ಮೊದಲ ಬಾರಿಗೆ ಸ್ಟೈಲಸ್ಸುಗಳನ್ನು ಪರಿಚಯಿಸಿತ್ತು. ಈಗ ಕ್ರೋಮ್ ಬುಕ್ ಪ್ರೋದಲ್ಲಿ ಇತಿಹಾಸ ಮರುಕಳಿಸಿದೆ. ಸ್ಯಾಮ್ಸಂಗ್ ಅಲ್ಟ್ರಾಬುಕ್ ನಲ್ಲಿ ವ್ಯಾಕಮ್ ಆ್ಯಕ್ಟೀವ್ ಸ್ಟೈಲಸ್/ಡಿಜಿಟೈಜರ್ ಇರಲಿದೆ.

ಈ ಹೊಸ ಸ್ಟೈಲಸ್ ನಿಂದಾಗಿ ನೀವು ನೋಟ್ ಬುಕ್ ನಲ್ಲಿ ಕೆಲಸ ಮಾಡುವ ರೀತಿ ಬದಲಾಗಲಿದೆ, ಲ್ಯಾಪ್ ಟಾಪುಗಳ ಉಪಯುಕ್ತತೆ ಹೆಚ್ಚಲಿದೆ. ಫ್ಯಾಂಡ್ರಾಯ್ಡ್ ನಲ್ಲಿನ ಚಿತ್ರದ ಪ್ರಕಾರ ಸ್ಟೈಲಸ್ ಇಡಲು ನೋಟ್ ಬುಕ್ ನ ಬಲ ತುದಿಯಲ್ಲಿ ಪೋರ್ಟ್ ಇರಲಿದೆ.

ಸ್ಯಾಮ್ಸಂಗ್ ಕ್ರೋಮ್ ಬುಕ್ ಪ್ರೋದ 5 ಅತ್ಯಾಕರ್ಷಕ ವಿಶೇಷತೆಗಳು.

ಕ್ರೋಮ್ ಬುಕ್ ಪ್ರೊ ಹೈಬ್ರಿಡ್ ಸಾಧನ.

ಸೋರಿಕೆಯಾದ ಮಾಹಿತಿಯ ಪ್ರಕಾರ, ಹೊಸ ಕ್ರೋಮ್ ಬುಕ್ ಪ್ರೋ ಅನ್ನು 360 ಡಿಗ್ರಿವರೆಗೂ ತಿರುಗಿಸಬಹುದು. ಪರದೆಯನ್ನು ಸಂಪೂರ್ಣವಾಗಿ ಹಿಮ್ಮುಖವಾಗಿ ಮಡಚಬಹುದು. ಇದರ ತೂಕ 1.08 ಕೆಜಿ ಇರಲಿದೆ ಮತ್ತು ಕೇವಲ 13.9 ಎಂಎಂ ದಪ್ಪವಿರಲಿದೆ. ಹೈಬ್ರಿಡ್ ವಿನ್ಯಾಸದಿಂದಾಗಿ ಮಲ್ಟಿಮೀಡಿಯಾದಂತಹ ಕೆಲಸಗಳನ್ನು ಸುಲಭವಾಗಿ ಮಾಡಬಹುದು.

ಸ್ಯಾಮ್ಸಂಗ್ ಕ್ರೋಮ್ ಬುಕ್ ಪ್ರೋದ 5 ಅತ್ಯಾಕರ್ಷಕ ವಿಶೇಷತೆಗಳು.

13 ಅಥವಾ 12.3 ಇಂಚಿನ ಟಚ್ ಪರದೆ.

ಸ್ಯಾಮ್ಸಂಗ್ ತನ್ನ ಸೂಪರ್ ಅಮೊಲೆಡ್ ಪರದೆಗಳಿಗಾಗಿ ಖ್ಯಾತಿ ಪಡೆದಿದೆ, ಸ್ಯಾಮ್ಸಂಗ್ ಕ್ರೋಮ್ ಬುಕ್ ಪ್ರೋದಲ್ಲಿ ಈ ಗುಣವಿರಲಿದೆ. ಹೈಬ್ರಿಡ್ ಸಾಧನದಲ್ಲಿ 13 ಅಥವಾ 12.3 ಇಂಚಿನ ಟಚ್ ಪರದೆಯಿರಲಿದೆ, 2400x1600 ಪಿಕ್ಸೆಲ್ಸ್ ಪರದೆ. ಈ ಟಚ್ ಪರದೆಯನ್ನು ಸ್ಟೈಲಸ್ ಬಳಸಿಯೂ ಉಪಯೋಗಿಸಬಹುದು.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಕ್ರೋಮ್ ಬುಕ್ ಪ್ರೋದ 5 ಅತ್ಯಾಕರ್ಷಕ ವಿಶೇಷತೆಗಳು.

ಶಕ್ತಿಯುತ ಹಾರ್ಡ್ ವೇರ್.

ಸ್ಯಾಮ್ಸಂಗ್ ಕ್ರೋಮ್ ಬುಕ್ ಪ್ರೋ ಸದ್ಯ ಲಭ್ಯವಿರುವ ಶಕ್ತಿಯುತ ಹೈಬ್ರಿಡ್ ಸಾಧನವಾಗಲಿದೆ. ಇದರಲ್ಲಿ ಹೆಕ್ಸಾ ಕೋರ್ ರಾಕ್ ಚಿಪ್ ಪ್ರೊಸೆಸರ್, 4ಕೆ ಪ್ಲೇಬ್ಯಾಕ್ ಸೌಲಭ್ಯವಿರಲಿದೆ.

4ಜಿಬಿ ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, ಹತ್ತು ಘಂಟೆಯಷ್ಟು ಬಾಳಿಕೆ ಬರುವ ಬ್ಯಾಟರಿ ಇರಲಿದೆ.

ಸ್ಯಾಮ್ಸಂಗ್ ಕ್ರೋಮ್ ಬುಕ್ ಪ್ರೋದ 5 ಅತ್ಯಾಕರ್ಷಕ ವಿಶೇಷತೆಗಳು.

ಕ್ರೋಮ್ ಒ.ಎಸ್ ನ ಶಕ್ತಿ ಮತ್ತು ಆ್ಯಂಡ್ರಾಯ್ಡ್ ನ ಅನುಕೂಲತೆ.

ಸೋರಿಕೆಯಾದ ಮಾಹಿತಿಯ ಪ್ರಕಾರ ಹೊಸ ಕ್ರೋಮ್ ಬುಕ್ ನಲ್ಲಿ ಕ್ರೋಮ್ ಒ.ಎಸ್ ಇರಲಿದೆ, ಜೊತೆಗೆ ಇದರಲ್ಲಿ ಆ್ಯಂಡ್ರಾಯ್ಡ್ ತಂತ್ರಾಂಶಗಳು ಕಾರ್ಯನಿರ್ವಹಿಸಲಿವೆ. ಇತ್ತೀಚೆಗಷ್ಟೇ ಗೂಗಲ್ ಪ್ಲೇ ಸ್ಟೋರನ್ನು ಕ್ರೋಮ್ ಬುಕ್ ಸಾಧನಗಳಿಗೂ ವಿಸ್ತರಿಸಿದ್ದರಿಂದ ಇದು ಸಾಧ್ಯವಾಗಿದೆ.

ಹೊಸ ಕ್ರೋಮ್ ಬುಕ್ ಪ್ರೋದಲ್ಲಿ ಎರಡು ಟೈಪ್ ಸಿ ಯು.ಎಸ್.ಬಿ ಪೂರ್ಟುಗಳಿರಲಿದೆ, ಒಂದು ಹೆಡ್ ಫೋನ್ ಜ್ಯಾಕ್ ಮತ್ತು ಎಸ್.ಡಿ ಕಾರ್ಡ್ ಹಾಕುವ ಸೌಲಭ್ಯವಿರಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Read more about:
English summary
The end of Galaxy Note 7 is definitely a big blow to Samsung's yearly profits, but that doesn't mean it's the closure to company's innovative product lineup. The Korean giant is gearing up to launch a high-end Chromebook, which will take on Apple's ever popular series of notebooks- the MacBook Pro.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot