Subscribe to Gizbot

ವಾಟ್ಸಾಪ್‌ನಲ್ಲಿ ನಿಮ್ಮ ಬೆಸ್ಟ್‌ ಫ್ರೆಂಡ್ ಯಾರು ತಿಳಿಯಲು ಈ ಸಿಂಪಲ್ ಟ್ರಿಕ್ ಸಾಕು!

Written By:

ವಾಟ್ಸಾಪ್‌ನಲ್ಲಿ ಟೈಪಿಸದೇ ಚಾಟ್‌ ಮಾಡುವುದು ಹೇಗೆ ಎಂದು ಇತ್ತೀಚೆಗಷ್ಟೆ ತಿಳಿಸಿದ್ದೆವು. ವಾಟ್ಸಾಪ್‌ನಲ್ಲಿ ಕೇವಲ ಈ ಫಿಚರ್‌ ಅಲ್ಲದೇ ಇತರರಿಗೆ ಆನ್‌ಲೈನ್‌ನಲ್ಲಿ ಲಾಸ್ಟ್‌ ಸೀನ್‌ ಕಾಣದಂತೆ ಹೈಡ್‌ ಮಾಡುವ ಫೀಚರ್‌ ಸಹ ಇದೆ. ವಾಟ್ಸಾಪ್‌ ಇಂದು ತನ್ನ ಅತ್ಯಾಧುನಿಕ ಅತ್ಯಾಕರ್ಷಕ ಫೀಚರ್‌ಗಳನ್ನು ಹೊಂದಿರುವ ಕಾರಣದಿಂದಲೇ 1 ಶತಕೋಟಿಗಿಂತ ಹೆಚ್ಚು ಬಳಕೆದಾರರನ್ನು ಹೊಂದಿದೆ.

ವಾಟ್ಸಾಪ್ ಆಪ್‌ ಹೊಂದಿರುವ ಎಲ್ಲರೂ ಸಹ ಇಂದು ದಿನನಿತ್ಯ ಹೆಚ್ಚು ಸಮಯಗಳ ಕಾಲ ಆಪ್‌ ಅನ್ನು ಬಳಸುತ್ತಾರೆ. ಹಲವು ಸ್ನೇಹಿತರೊಂದಿಗೆ ವಾಟ್ಸಾಪ್‌ ಕರೆಯಲ್ಲೇ ಮಾತನಾಡುವುದು, ಹೆಚ್ಚು ಚಾಟ್‌ ಮಾಡುವ ಚಟುವಟಿಕೆಗಳಿಗೆ ಮಿತಿಯಿಲ್ಲ. ಹಾಗಿದ್ರೆ ವಾಟ್ಸಾಪ್‌ನಲ್ಲಿ ನಿಮ್ಮ ಅತಿ ಹೆಚ್ಚಿನ ಬೆಸ್ಟ್‌ ಫ್ರೆಂಡ್‌ ಯಾರು ಗೊತ್ತೇ?

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಕೆದಾರರು ಟೈಪಿಸದೇ 'ವಾಟ್ಸಾಪ್' ಮೆಸೇಜ್‌ ಸೆಂಡ್ ಮಾಡುವುದು ಹೇಗೆ?

ಖಂಡಿತ ನಿಮಗಂತು ತಿಳಿದಿರುವುದೇ ಇಲ್ಲಾ. ಯಾಕಂದ್ರೆ ಚಾಟಿಂಗ್ ಕೇವಲ ಒಬ್ಬರ ಜೊತೆ ನಡೆಯುವುದೇ ಇಲ್ಲ. ಆದ್ದರಿಂದ ನಿಮಗೆ ಗೊತ್ತಿರಲು ಸಾಧ್ಯವಿಲ್ಲ. ಆದರೆ ಈ ಮಾಹಿತಿ ವಾಟ್ಸಾಪ್‌ಗೆ(WhatsApp) ಗೊತ್ತು. ಹೌದು, ವಾಟ್ಸಾಪ್‌ನಲ್ಲಿ ನಿಮ್ಮ ಬೆಸ್ಟ್‌ ಫ್ರೆಂಡ್‌ ಯಾರು ಅಂತ ವಾಟ್ಸಾಪ್‌ನಲ್ಲಿನ ರಹಸ್ಯ ಫೀಚರ್‌ನಿಂದಲೇ ತಿಳಿಯಬಹುದು. ನೀವು ಹೆಚ್ಚು ಯಾರೊಂದಿಗೆ ಸಂಭಾ‍ಷಣೆ ನಡೆಸುತ್ತೀರಿ ಎಂದು ಸಹ ತಿಳಿಯಿರಿ. ಕೆಳಗಿನ ಸಿಂಪಲ್‌ ಟ್ರಿಕ್ಸ್‌ಗಳನ್ನು ಫಾಲೋ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್ ಆಫ್‌ ಓಪನ್‌ ಮಾಡಿ

ವಾಟ್ಸಾಪ್ ಆಫ್‌ ಓಪನ್‌ ಮಾಡಿ

ಲೇಟೆಸ್ಟ್ ಅಪ್‌ಡೇಟ್‌ ಆದ ವಾಟ್ಸಾಪ್‌ ಅನ್ನು ಡೌನ್‌ಲೋಡ್‌ ಮಾಡಿ ಅಥವಾ ವಾಟ್ಸಾಪ್‌ ಅಪ್‌ಡೇಟ್‌ ಮಾಡಿ. ನಂತರ ಆಪ್‌ ಓಪನ್‌ ಮಾಡಿ.

ವಾಟ್ಸಾಪ್‌ ಸೆಟ್ಟಿಂಗ್‌'ಗೆ ಹೋಗಿ

ವಾಟ್ಸಾಪ್‌ ಸೆಟ್ಟಿಂಗ್‌'ಗೆ ಹೋಗಿ

ವಾಟ್ಸಾಪ್‌ ಆಪ್‌ ಓಪನ್ ಮಾಡಿದ ನಂತರ, ಸೆಟ್ಟಿಂಗ್ಸ್‌ಗೆ ಹೋಗಿ, ಲೀಸ್ಟ್‌ನಲ್ಲಿ 'Account' ಆಪ್ಶನ್‌ ಮೇಲೆ ಕ್ಲಿಕ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಟ್ಸಾಪ್ ಸ್ಟೋರೇಜ್‌ ಬ್ರೇಕ್‌ಡೌನ್‌ ಚೆಕ್‌ ಮಾಡಿ (Breakdown)

ವಾಟ್ಸಾಪ್ ಸ್ಟೋರೇಜ್‌ ಬ್ರೇಕ್‌ಡೌನ್‌ ಚೆಕ್‌ ಮಾಡಿ (Breakdown)

'Account' ಆಪ್ಶನ್‌ ಮೇಲೆ ಕ್ಲಿಕ್ ಮಾಡಿದ ನಂತರ, 'Storage Usage' ಆಪ್ಶನ್‌ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಎಲ್ಲಾ ಎಕ್ಸ್‌ಚೇಂಜ್‌ ಮೆಸೇಜ್‌ಗಳನ್ನು ಒಟ್ಟಿಗೆ ನೋಡಬಹುದು.

 ಯಾರ ಜೊತೆ ಹೆಚ್ಚು ಚಾಟ್‌ ಮಾಡಿದ್ದೀರಿ ನೋಡಿ

ಯಾರ ಜೊತೆ ಹೆಚ್ಚು ಚಾಟ್‌ ಮಾಡಿದ್ದೀರಿ ನೋಡಿ

'Storage Usage' ಆಪ್ಶನ್‌ ಮೇಲೆ ಕ್ಲಿಕ್ ಮಾಡಿದ ನಂತರ, ಕೇವಲ ಚಾಟ್‌ ಮಾಡಿದವರ ಲೀಸ್ಟ್‌ ಮಾತ್ರವಲ್ಲದೇ ರ್ಯಾಂಕ್‌ ಅನ್ನು ಸಹ ನೋಡಬಹುದು.

WhatsApp Tips
ಡ್ರಾಬ್ಯಾಕ್‌ ಆಫ್‌ ಫೀಚರ್

ಡ್ರಾಬ್ಯಾಕ್‌ ಆಫ್‌ ಫೀಚರ್

ಅಂದಹಾಗೆ ಸ್ಟೋರೇಜ್‌ ಬ್ರೇಕ್‌ಡೌನ್‌ ಫೀಚರ್ ಅನ್ನು ವಾಟ್ಸಾಪ್‌ನಲ್ಲಿ ಐಓಎಸ್ ಬಳಕೆದಾರರು ಮಾತ್ರ ಬಳಸಬಹುದು. ಆಂಡ್ರಾಯ್ಡ್ ಬಳಕೆದಾರರು ಈ ಫೀಚರ್‌ ಅನ್ನು ಇನ್ನೂ ಸಹ ಬಳಸಲು ಅಪ್‌ಡೇಟ್‌ ಮಾಡಿಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Find Out Your WhatsApp Best Friends With This Simple Trick [4 Simple Steps] To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot