ಆರ್ಕುಟ್‌ನೊಂದಿಗೆ ವಿದಾಯ ಹೇಳಿರುವ ಜಾಲತಾಣಗಳು

By Shwetha
|

ಗೂಗಲ್ ಸಾಮಾಜಿಕ ತಾಣಗಳಲ್ಲಿ ತನ್ನ ಪ್ರಾಬಲ್ಯವನ್ನು ಕೆಲವು ಸಮಯಗಳಿಂದೀಚೆಗೆ ಹೊಂದಿರುವುದು ನಿಮಗೆಲ್ಲಾ ತಿಳಿದೇ ಇದೆ. ನೀವು ಈ ತಾಣಗಳಲ್ಲಿ ತೊಡಗಿಸಿಕೊಂಡವರಾದಲ್ಲಿ, ನೀವು ನಿಮ್ಮ ಸ್ನೇಹಿತರೊಂದಿಗೆ ಎಷ್ಟು ಸಮಯದವರೆಗೆ ಚಾಟ್ ಮಾಡುತ್ತಾ ಸಮಯ ಕಳೆದಿದ್ದೀರಿ? ಎಷ್ಟು ಜನ ಸ್ನೇಹಿತರನ್ನು ಮಾಡಿಕೊಂಡಿದ್ದೀರಿ ಹೊಸದಾಗಿ ಜಾಲತಾಣದಲ್ಲಿ ತಮ್ಮ ಖಾತೆ ತೊಡಗಿಸಿಕೊಂಡಾಗ ಉಂಟಾದ ಹಿಗ್ಗು ಇದೆಲ್ಲಾ ಈಗ ನೆನೆಸಿಕೊಂಡಾಗ ಆ ದಿನಗಳು ಮನದಲ್ಲಿ ಮೂಡಿ ಮರೆಯಾಗುವುದು ನಿಜ ಅಲ್ಲವೇ?

ಅದಾಗ್ಯೂ ಬದಲಾವಣೆ ಜಗದ ನಿಯಮ ತಾನೇ ಪ್ರತಿಯೊಂದು ಕೂಡ ಬದಲಾವಣೆಯತ್ತ ಮುಖ ಮಾಡಲೇಬೇಕು. ಈ ಬದಲಾವಣೆಗೆ ಪೂರಕವೆಂಬಂತೆ ಆರ್ಕುಟ್ ಕೂಡ ಸಾಮಾಜಿಕ ತಾಣದಿಂದ ಶಾಶ್ವತವಾಗಿ ವಿದಾಯ ಹೇಳುತ್ತಿದೆ. ಫೇಸ್‌ಬುಕ್‌ನೊಂದಿಗೇನೇ ತನ್ನ ಆರಂಭವನ್ನು ಪ್ರಾರಂಭಿಸಿಕೊಂಡ ಈ ಖಾತೆ ಕಾಲಕ್ರಮೇಣ ತನ್ನ ವರ್ಚಸ್ಸನ್ನು ಕಳೆದುಕೊಂಡು ಮೂಲೆಗುಂಪಾಯಿತು. ಆದರೆ ಇದೇ ಹಾದಿಯಲ್ಲಿ ನಡೆದಿದ್ದ ಫೇಸ್‌ಬುಕ್ ತನ್ನ ಪ್ರಾಬಲ್ಯವನ್ನು ಸಾಧಿಸಿಕೊಂಡಿತು ಮತ್ತು ವಿಶ್ವದಾದ್ಯಂತ ಬಳಕೆದಾರರ ಮನ ಗೆದ್ದಿತು.

ಗೂಗಲ್ ಆರ್ಕುಟ್ ಅನ್ನು ಮುಚ್ಚಿ ತನ್ನ ಒಂದು ಅಂಗವಾಗಿರುವ ಸಾಮಾಜಿಕ ತಾಣವನ್ನು ಕಳೆದುಕೊಂಡಿರುವುದು ಇದೇ ಮೊದಲಲ್ಲ. ಇಂತಹ ಅನೇಕ ವೆಬ್‌ಸೈಟ್‌ಗಳನ್ನು ಗೂಗಲ್ ಚಿಗುರುವ ಮುನ್ನವೇ ಚುವುಟಿ ಹಾಕಿದೆ ಇದಕ್ಕೆ ಕಾರಣ ಆ ತಾಣಗಳು ಬಳಕೆದಾರರ ಮೇಲೆ ಯಾವುದೇ ಪ್ರಭಾವವನ್ನು ಬೀರದೇ ಇರುವುದಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಗೂಗಲ್ ಚಿಗುರುವ ಮುನ್ನವೇ ಚಿವುಟಿ ಹಾಕಿರುವ ಕೆಲವೊಂದು ತಾಣಗಳ ಬಗ್ಗೆ ತಿಳಿದುಕೊಳ್ಳೋಣ.

#1

#1

ಗೂಗಲ್ ಈ ತಾಣವನ್ನು 2005 ರಲ್ಲಿ ಪ್ರಾರಂಭಿಸಿತ್ತು. ಫೋರ್ಸ್‌ಕ್ವೇರ್‌ ಅನ್ನು ಕಟ್ಟಿದವರೊಂದಿಗೆ ಸೇರಿಕೊಂಡು ಗೂಗಲ್ ಈ ತಾಣವನ್ನು ಹುಟ್ಟುಹಾಕಿತ್ತು. ಆದರೀಗ ಇದು ನೆನೆಪು ಮಾತ್ರ.

#2

#2

ಫೇಸ್‌ಬುಕ್ ಮತ್ತು ಟ್ವಿಟ್ಟರ್‌ಗೆ ಸ್ಪರ್ಧೆಯನ್ನು ಒಡ್ಡಿದ್ದ ಜಾಲತಾಣವಾಗಿತ್ತು ಗೂಗಲ್ ಬಜ್. ಆದರೆ ದುರಾದೃಷ್ಟವಶಾತ್ ಇದು ಸೋಲನ್ನು ಅನುಭವಿಸತೊಡಗಿತು. ಇದು ಬಳಕೆದಾರರಿಗೆ ವೀಡಿಯೋಗಳನ್ನು, ಲಿಂಕ್‌ಗಳನ್ನು ಮತ್ತು ಫೋಟೋಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿತ್ತು.

#3

#3

ಇದು ಈಗಲೂ ಪ್ರಸ್ತುತವಿರುವ ತಾಣವಾಗಿದೆ ಮತ್ತು ಗೂಗಲ್ ಇದನ್ನು ಅಭಿವೃದ್ಧಿಯ ಪಥದತ್ತ ಮುನ್ನಡೆಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ.

#4

#4

ಡಾಡ್ಗ್‌ಬಾಲ್‌ನ ಪ್ರಸ್ತುತಿಯಲ್ಲಿ ಗೂಗಲ್ ತನ್ನ ನಿರೀಕ್ಷೆಯ ಮಟ್ಟವನ್ನು ತಲುಪಿರಲಿಲ್ಲ. ನಂತರ ಗೂಗಲ್ ಡಾಡ್ಗ್‌ಬಾಲ್ ಅನ್ನು ಲಾಟಿಟ್ಯೂಡ್ ಆಗಿ ಮಾರ್ಪಡಿಸಿತು. ಇದು 2013 ರಲ್ಲಿ ವಿದಾಯ ಹೇಳಿತು.

#5

#5

ಗೂಗಲ್ ವೀಡಿಯೋಗಳ ಮೇಲೆ ಹೇರಿರುವ ಹೊಸ ಹೊಸ ನಿಯಮಗಳು ಯೂಟ್ಯೂಬ್ ಅನ್ನು ಕೊಂಚ ಕೊಂಚ ಹಿಂದಕ್ಕೆ ಸರಿಯುವಂತೆ ಮಾಡಿದೆ. ಯೂಟ್ಯೂಬ್‌ನಲ್ಲಿ ಟೀಕೆಗಳನ್ನು ಪ್ರಸ್ತುತಪಡಿಸಲು ಈ ತಾಣದ ಬಳಕೆದಾರರು ಗೂಗಲ್ ಪ್ಲಸ್ ಅನ್ನು ಸೈನ್ ಇನ್ ಮಾಡುವುದು ಕಡ್ಡಾಯವಾಗಿದೆ. ಇದರಿಂದಾಗಿ ಗೂಗಲ್ ಬಳಕೆದಾರರು ಒಂದು ರೀತಿಯ ಬಲಪ್ರಯೋಗದ ಸ್ವಭಾವಕ್ಕೆ ಒಳಗಾಗುತ್ತಿದ್ದಾರೆ. ಬರಿ ಹೆಸರಿಗೆ ಮಾತ್ರವೇ ಇದೊಂದು ಸಾಮಾಜಿಕ ತಾಣವಾಗಿದೆ ಅಷ್ಟೇ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X