ಆಸುಸ್ ನಿಂದ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

ವಿವೋಬುಕ್ ಪ್ರೋ 15 (N580) ಹಾಗೂ ವಿವೋಬುಕ್ S15 (S510) ಹೆಸರಿನ ಮಧ್ಯಮ ಬೆಲೆಯ ಲಾಪ್ ಟಾಪ್ ಗಳಾಗಿದೆ.

By Precilla Dias
|

ಆಸುಸ್ ಮಾರುಕಟ್ಟೆಗೆ ಹೊಸ ಎರಡು ಲ್ಯಾಪ್ ಟಾಪ್ ಗಳನ್ನು ಕಂಪ್ಯೂಟೆಕ್ಸ್ 2017ನಲ್ಲಿ ಬಿಡುಗಡೆ ಮಾಡಿದ್ದು, ವಿವೋಬುಕ್ ಪ್ರೋ 15 (N580) ಹಾಗೂ ವಿವೋಬುಕ್ S15 (S510) ಹೆಸರಿನ ಮಧ್ಯಮ ಬೆಲೆಯ ಲಾಪ್ ಟಾಪ್ ಗಳಾಗಿದೆ.

ಆಸುಸ್ ನಿಂದ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

ಆಸುಸ್ ವಿವೋಬುಕ್ ಪ್ರೋ 15 (N580) ಬೆಲೆ ಸುಮಾರು ರೂ.51,575 ಆಗಿದ್ದು, ಇದೇ ಮಾದರಿಯಲ್ಲಿ ವಿವೋಬುಕ್ S15 (S510) ಬೆಲೆ ರೂ. 32,210 ಆಗಲಿದೆ. ಈ ಲಾಪ್ ಟಾಪ್ ಗಳು ಮುಂದಿನ ತಿಂಗಳಿನಿಂದ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಈ ಹಿನ್ನಲೆಯಲ್ಲಿ ಇವುಗಳ ಕುರಿತಾದ ಮಾಹಿತಿ ಇಲ್ಲಿದೆ.

ವಿವೋಬುಕ್ ಪ್ರೋ 15 (N580) ಅಳತೆ ಮತ್ತು ಪರದೆ:

ವಿವೋಬುಕ್ ಪ್ರೋ 15 (N580) ಅಳತೆ ಮತ್ತು ಪರದೆ:

ವಿವೋಬುಕ್ ಪ್ರೋ 15 19.2 ಎಂಎಂ ನಷ್ಟು ದಪ್ಪವಿದ್ದು, 2.2 ಕೆಜಿ ತೂಕವಿದೆ. ಇನ್ನು ಡಿಸ್ ಪ್ಲೇ ವಿಚಾರಕ್ಕೆ ಬರುವುದಾದರೆ, UHD 4K ಡಿಸ್ ಪ್ಲೇ ಇದಾಗಿದೆ. 3840x2160 ರೆಸಲ್ಯೂಷನ್ ಹೊಂದಿದೆ. ಇದಲ್ಲದೇ ಈ ಡಿಸ್ ಪ್ಲೇಯಲ್ಲಿ ವೈಡ್ ವಿವ್ ಟೆಕ್ನಾಲಜಿಯನ್ನು ಅಳವಡಿಸಿಲಾಗಿದೆ.

ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್:

ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್:

ವಿವೋಬುಕ್ ಪ್ರೋ ನಲ್ಲಿ 7ನೇ ತಲೆಮಾರಿನ ಇಂಟೆಲ್ ಕೋರ್ಟ್ ಐ5/ಐ7 ಹೆಚ್ ಸರಣಿಯ ಪ್ರೋಸೆಸರ್ ಅಳವಡಿಸಲಾಗಿದೆ. ಇದರಲ್ಲಿ 16GB DDR4 RAM ಇದೆ, ಜೊತೆಗೆ ಗಿಫೋರ್ಸ್ GTX 1050 ಗ್ರಾಫಿಕ್ಸ್ ನೀಡಲಾಗಿದೆ. ಇದರಲ್ಲಿ ಹೈಬ್ರಿಡ್ ಸ್ಟೋರೆಜ್ ಇದ್ದು 2TB HDD ಮತ್ತು 512GB SSD ಇದರಲ್ಲಿದೆ. ಇದು ವಿಂಡೋಸ್ 10ನಲ್ಲಿ ರನ್ ಆಗಲಿದೆ.

ವಿವೋಬುಕ್ ಪ್ರೋ 15 ಇತರೇ ವಿಶೇಷತೆಗಳು:

ವಿವೋಬುಕ್ ಪ್ರೋ 15 ಇತರೇ ವಿಶೇಷತೆಗಳು:

ಈ ಲಾಪ್ ಟಾಪ್ ನಲ್ಲಿ ಉತ್ತಮ ಆಡಿಯೋ ಇಂಜಿನ್ ಅಳವಡಿಸಲಾಗಿದೆ. ಅಲ್ಲದೇ ಟ್ವೀನ್ ಸ್ಪಿಕರ್ ಕೊಡಲಾಗಿದೆ. ಇದಕ್ಕಾಗಿ ಸ್ಮಾರ್ಟ್ ಆಮಪ್ಲಿಫೈರ್ ಟೆಕ್ನಾಲಜಿ ನೀಡಲಾಗಿದೆ. ಇದಲ್ಲದೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ. ಅಲ್ಲದೇ ಬ್ಲಾಕ್ ಕಿಟ್ ಕೀಬೋರ್ಡ್ ಜೊತೆಗೆ ವೈಫೈ ಸಫೋರ್ಟ್ ಮಾಡಲಿದೆ.

2 ನಿಮಿಷದಲ್ಲಿ GIF ಫೈಲ್‌ ಕ್ರಿಯೇಟ್ ಮಾಡುವುದು ಹೇಗೆ?2 ನಿಮಿಷದಲ್ಲಿ GIF ಫೈಲ್‌ ಕ್ರಿಯೇಟ್ ಮಾಡುವುದು ಹೇಗೆ?

ವಿವೋಬುಕ್ S15 ಅಳತೆ ಮತ್ತು ಪರದೆ:

ವಿವೋಬುಕ್ S15 ಅಳತೆ ಮತ್ತು ಪರದೆ:

ವಿವೋಬುಕ್ S15 ನಲ್ಲಿ 15.6 ಇಂಚಿನ FHD ನ್ಯಾನೋ ಏಡ್ಜ್ ಡಿಸ್ ಪ್ಲೇ ನೀಡಲಾಗಿದ್ದು, 17.9 ಇಂಚಿನಷ್ಟು ದಪ್ಪವಾಗಿದೆ. ಅಲ್ಲದೇ 1.5 ಕೆಜಿ ತೂಕವನ್ನು ಹೊಂದಿದೆ. ಇದರಲ್ಲಿ ಗೋಲ್ಡ್ ಫಿನಿಷಿಂಗ್ ಹೊಂದಿದ್ದು, ಉತ್ತಮ ಲುಕಿಂಗ್ ಹೊಂದಿದೆ.

ವಿವೋಬುಕ್ S15 ವಿಶೇಷತೆಗಳು:

ವಿವೋಬುಕ್ S15 ವಿಶೇಷತೆಗಳು:

ವಿವೋಬುಕ್ S15 ನಲ್ಲಿ ಇಂಟೆಲ್ ಕೋರ್ ಐ3/ಐ5/ಐ7 ಪ್ರೋಸೆಸರ್ ಕಾಣಬಹುದಾಗಿದೆ. ಇದರಲ್ಲಿ 16GB DDR4 ಸ್ಟೋರೆಜ್ ಸ್ಪೆಸ್ ಹೊಂದಿದ್ದು, NVIDIA 940MX ಗ್ರಾಫಿಕ್ಸ್ ಕಾರ್ಡ್ ಇದ್ದು, ವಿಂಡೋಸ್ 10ನಲ್ಲಿ ನಡೆಯಲಿದೆ. ಇದರಲ್ಲೂ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಜೊತೆಗೆ ವೈಫೈ ಸಪೋರ್ಟ್ ಮಾಡಲಿದೆ.

Best Mobiles in India

Read more about:
English summary
Asus has just unveiled two new laptops called the VivoBook Pro 15 (N580) and the VivoBook S15 (S510) at the Computex 2017.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X