ಕಡಿಮೆ ದರದ ಟ್ಯಾಬ್ಲೆಟ್ ಗಳ ಹಣೆಬರಹ ಇಲ್ಲಿದೆ

By Varun
|
ಕಡಿಮೆ ದರದ ಟ್ಯಾಬ್ಲೆಟ್ ಗಳ ಹಣೆಬರಹ ಇಲ್ಲಿದೆ

ಎಲ್ಲರಿಗೂ 25 ಸಾವಿರ ಕೊಟ್ಟು ಆಪಲ್ ಟ್ಯಾಬ್ಲೆಟ್ ತಗೊಳಕ್ಕೆ ಆಗಲ್ಲ. ಆದರೆ ಕಡಿಮೆ ಬಜೆಟ್ ಟ್ಯಾಬ್ಲೆಟ್ ತಗೊಳ್ಳಣ ಅಂದ್ರೆ ಯಾವ್ದು ಸರಿ ಇದೆ, ಯಾವ್ದು ಸರಿ ಇಲ್ಲ, ಯಾವ ಟ್ಯಾಬ್ಲೆಟ್ ನ ಕಾರ್ಯಕ್ಷಮತೆಹೇಗಿದೆ ಅಂತ ತಿಳ್ಕೊಬೇಕಾ ?

ಹಾಗಿದ್ದರೆ 8 ಸಾವಿರ8 ಸಾವಿರ ರೂಪಾಯಿಯ ಒಳಗೆ ಸಿಗುವ ಟ್ಯಾಬ್ಲೆಟ್ ಗಳಾದ ಕಾರ್ಬನ್ ಸ್ಮಾರ್ಟ್ ಟ್ಯಾಬ್ 1, ಜಿಂಕ್ Z990+,ಫನ್ ಟ್ಯಾಬ್ ಫಿಟ್,ಮೈಕ್ರೋಮ್ಯಾಕ್ಸ್ ಫನ್ ಬುಕ್,ಜೇನ ಅಲ್ಟ್ರಾಟ್ಯಾಬ್ A100, ಎಚ್.ಸಿ.ಎಲ್ ME U1, ಹೀಗೆ 6 ಟ್ಯಾಬ್ಲೆಟ್ ಗಳನ್ನು ವಿಶ್ಲೇಷಣೆ ಮಾಡಿ ಧನಾತ್ಮಕ ಹಾಗು ಋಣಾತ್ಮಕ ಅಂಶಗಳನ್ನು ಕೊಡಲಾಗಿದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಇವುಗಳಲ್ಲಿ ಒಂದನ್ನು ಖರೀದಿ ಮಾಡಬಹುದಾಗಿದೆ.

1) ಕಾರ್ಬನ್ ಸ್ಮಾರ್ಟ್ ಟ್ಯಾಬ್ 1

+ ಉತ್ತಮ ಕ್ವಾಲಿಟಿಯ ದೊಡ್ಡ ಐಕಾನ್

+ 6 ಗಂಟೆ ಬ್ಯಾಟರಿ ಬ್ಯಾಕಪ್

+ ಉತ್ತಮ USB ಸಪೋರ್ಟ್

- ಪ್ರತಿಬಿಂಬಿಸುವ ಡಿಸ್ಪ್ಲೇ

- ಕಡಿಮೆ ಕ್ವಾಲಿಟಿಯ ಕ್ಯಾಮರಾ

- ಲೌಡ್ ಸ್ಪೀಕರ್ ಚೆನ್ನಾಗಿಲ್ಲ

(ಇದರ ಸ್ಪೆಸಿಫಿಕೇಶನ್ ಇಲ್ಲಿದೆ)

2) ಜಿಂಕ್ Z990+

+ಅತ್ಯತ್ತಮ ಹಾರ್ಡ್ವೇರ್

+ಸ್ಪೀಕರ್ ಚೆನ್ನಾಗಿದೆ

+ 4 ಗಂಟೆ ಬ್ಯಾಟರಿ ಲೈಫ್

- ಬೆರಳಚ್ಚು ಸ್ಕ್ರೀನ್ ಮೇಲೆ ಬೀಳುತ್ತೆ

- ಕ್ಯಾಮರಾ ಚೆನ್ನಾಗಿಲ್ಲ

- ವಿವಿಧ ಕೋನಗಳಿಂದ ಸ್ಕ್ರೀನ್ ಸರಿಯಾಗಿ ಕಾಣುವುದಿಲ್ಲ

(ಇದರ ಸ್ಪೆಸಿಫಿಕೇಶನ್ ಇಲ್ಲಿದೆ)3) ಫನ್ ಟ್ಯಾಬ್ ಫಿಟ್

+ಪ್ರೀ ಲೋಡೆಡ್ ಆಪ್ಸ್ ಚೆನ್ನಾಗಿದೆ

+ಐಕಾನ್ ಗಳು ಚೆನ್ನಾಗಿವೆ

-ಬ್ಯಾಟರಿ ಚೆನ್ನಾಗಿಲ್ಲ

-USB ಅಡಾಪ್ಟರ್ ಇಲ್ಲ

- ನಿರ್ವಹಣೆ ಚೆನ್ನಾಗಿಲ್ಲ

(ಇದರ ಸ್ಪೆಸಿಫಿಕೇಶನ್ ಇಲ್ಲಿದೆ)4) ಮೈಕ್ರೋಮ್ಯಾಕ್ಸ್ ಫನ್ ಬುಕ್

+ USB ಅಡಾಪ್ಟರ್ ಇದೆ

+ ಪ್ರೀ ಲೋಡೆಡ್ ಆಪ್ಸ್ ಚೆನ್ನಾಗಿದೆ

+ಅತ್ಯುತ್ತಮ ವೀಡಿಯೋ ಪ್ಲೇಯರ್

+ ಪ್ರತ್ಯೇಕ ಹಾರ್ಡ್ವೇರ್ ಬಟನ್

- ಪ್ಲಾಸ್ಟಿಕ್ ಹೊರಮೈ

- ಸೌಂಡ್ ಕ್ವಾಲಿಟಿ ಚೆನ್ನಾಗಿಲ್ಲ

- ವಿವಿಧ ಕೋನಗಳಿಂದ ಸ್ಕ್ರೀನ್ ಸರಿಯಾಗಿ ಕಾಣುವುದಿಲ್ಲ

-ಕ್ಯಾಮರಾ ಚೆನ್ನಾಗಿಲ್ಲ

-ಬ್ಯಾಟರಿ ಲೈಫ್ ಕಡಿಮೆ

-ಚಾರ್ಜ್ ಮಾಡುವಾಗ ಟಚ್ ಸ್ಕ್ರೀನ್ ಕೆಲಸ ಮಾಡುವುದಿಲ್ಲ

(ಇದರ ಸ್ಪೆಸಿಫಿಕೇಶನ್ ಇಲ್ಲಿದೆ)5) ಜೆನ್ ಅಲ್ಟ್ರಾ ಟ್ಯಾಬ್ A100

+ ಸ್ಲಿಮ್ ಆದ ಡಿಸೈನ್

+ ಹೊರಮೈ ನ ಗುಣಮಟ್ಟ ಚೆನ್ನಾಗಿದೆ

+ ಲೌಡ್ ಸ್ಪೀಕರ್ ಗುಣಮಟ್ಟ ಚೆನ್ನಾಗಿದೆ

+ ಬ್ರೈಟ್ ಆದ ಡಿಸ್ಪ್ಲೇ

+ 4 ಗಂಟೆ ಬ್ಯಾಟರಿ ಲೈಫ್

- ಸಣ್ಣದಾದ ಐಕಾನ್

- HDMI ಪೋರ್ಟ್ ಇಲ್ಲ

- ಕ್ಯಾಮರಾ ಗುಣಮಟ್ಟ ಸರಿಯಿಲ್ಲ

- ವಿವಿಧ ಕೋನಗಳಿಂದ ಸ್ಕ್ರೀನ್ ಸರಿಯಾಗಿ ಕಾಣುವುದಿಲ್ಲ

(ಇದರ ಸ್ಪೆಸಿಫಿಕೇಶನ್ ಇಲ್ಲಿದೆ)6) ಎಚ್.ಸಿ.ಎಲ್ ME U1

+ ಉತ್ತಮ ಡಿಸೈನ್

+ ಪೂರ್ಣವಾದ USB ಸಪೋರ್ಟ್

+ ವಿವಿಧ ಕೋನಗಳಿಂದಲೂ ಸರಿಯಾಗಿ ಕಾಣುವ ಸ್ಕ್ರೀನ್

+ ಪ್ರೀಲೋಡ್ ಆದ ಆಪ್ಸ್

- HDMI ಪೋರ್ಟ್ ಇಲ್ಲ

- ಕಾರ್ಯಕ್ಷಮತೆ ಸರಿಯಿಲ್ಲ

- ಕಡಿಮೆ ಬ್ಯಾಟರಿ ಲೈಫ್

- ಗೂಗಲ್ ಪ್ಲೇ ಇಲ್ಲ

- ಬೆಲೆ ಜಾಸ್ತಿ

(ಇದರ ಸ್ಪೆಸಿಫಿಕೇಶನ್ ಇಲ್ಲಿದೆ)

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X