Subscribe to Gizbot

ಫೇಸ್‌ಬುಕ್ ಕಾರ್ಯನಿರ್ವಾಹಕಿ ಶೆರಿಲ್ ಭಾರತ ಭೇಟಿ

Written By:

ಭಾರತದಲ್ಲಿ ಫೇಸ್‌ಬುಕ್‌ಗಿರುವ ಅಸಾಮಾನ್ಯ ಬಳಕೆದಾರ ಸಂಖ್ಯೆ ಮತ್ತು ಉತ್ತಮ ಮಾರುಕಟ್ಟೆಯನ್ನು ನೋಡಿ ಈ ಜಾಲತಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೆರಿಲ್ ಸ್ಯಾಂಡ್‌ಬರ್ಗ್ ಭಾರತಕ್ಕೆ ಭೇಟಿ ನೀಡಿದ್ದು ಈ ತಾಣದಲ್ಲಿ ಇನ್ನಷ್ಟು ಅಭಿವೃದ್ಧಿ ಮತ್ತು ಭಾರತೀಯ ಬಳಕೆದಾರರಿಗೆ ಉತ್ತಮ ವೇದಿಕೆಯನ್ನು ಕಲ್ಪಸಿಕೊಡುವ ಕಾಯಕಲ್ಪವನ್ನು ಘೋಷಿಸಿದ್ದಾರೆ.

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಸಮಾಲೋಚನೆ ನಡೆಸಿದ್ದ ಶೆರಿಲ್, ಇವರನ್ನು ಭೇಟಿ ಮಾಡುವ ಉದ್ದೇಶ ಕೂಡ ತನ್ನ ಭಾರತೀಯ ಭೇಟಿಯಲ್ಲಿ ಸೇರಿದೆ ಎಂದು ಹೇಳಿದ್ದಾರೆ. ಫೇಸ್‌ಬುಕ್ ಮಾರುಕಟ್ಟೆ ಜಾಲವು ಪೂರ್ಣವಾಗಿ ಭಾರತೀಯ ಬಳಕೆದಾರರನ್ನು ಆಶ್ರಯಿಸಿದ್ದು ಫೇಸ್‌ಬುಕ್ ಆಶ್ರಯಿಸಿರುವ ಎರಡನೆಯ ದೇಶ ಭಾರತವಾಗಿದೆ ಎಂದವರು ಹೇಳಿದ್ದಾರೆ.

ಫೇಸ್‌ಬುಕ್‌ನ ಮಾರುಕಟ್ಟೆ ಜಾಲ ಭಾರತ ಹೇಗೆ?

ಭಾರತವು ಅತಿ ದೊಡ್ಡ ಆರ್ಥಿಕ ಮುತ್ಸದ್ದಿಯಾಗಿ ಬೆಳಯುವಂತಹ ಸಾಮರ್ಥ್ಯವನ್ನು ಹೊಂದಿದೆ ಮತ್ತು ಹೆಚ್ಚಿನ ಬೆಳವಣಿಗೆಯು ಇಲ್ಲಿ ಮಾತ್ರ ಸಾಧ್ಯ ಎಂದವರು ಹೇಳಿದ್ದು ಭಾರತವು ಹೆಚ್ಚು ವೇಗವಾಗಿ ಬೆಳೆಯುತ್ತಿರುವ ದೇಶಗಳ ಪಟ್ಟಿಗೆ ಸೇರಿದ್ದು ಆರ್ಥಿಕ ಕ್ಷೇತ್ರದಲ್ಲೂ ಇದು ಮುಂದುವರಿಯುತ್ತಿರುವ ಚಿಹ್ನೆಗಳನ್ನು ತೋರಿಸುತ್ತಿದೆ ಎಂದಾಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತವು ವಿಶ್ವದಲ್ಲೇ ಇಂಟರ್ನೆಟ್ ಬಳಕೆಯಲ್ಲಿ ಮೂರನೇ ಸ್ಥಾನವನ್ನು ಗಳಿಸಿದ್ದು ಹೆಚ್ಚಿನವರು ಅಂತರ್ಜಾಲವನ್ನು ತಮ್ಮ ಮೊಬೈಲ್‌ ಪೋನ್‌ಗಳಲ್ಲೇ ಪ್ರವೇಶಿಸುತ್ತಿದ್ದಾರೆ. ಫೇಸ್‌ಬುಕ್‌ನ ಎರಡನೆಯ ದೊಡ್ಡ ಮಾರುಕಟ್ಟೆಯಾಗಿ ಭಾರತವು ಸ್ಥಾನ ಗಳಿಸಿದ್ದು, ಹೆಚ್ಚು ಬೆಳೆಯುತ್ತಿರುವ ಮಾರುಕಟ್ಟೆ ಮತ್ತು ವೇಗವಾಗಿ ಬೆಳೆಯುತ್ತಿರುವ ಅಂತರ್ಜಾಲ ಸಂಪರ್ಕವನ್ನು ನಾವಿಲ್ಲಿ ಕಾಣಬಹುದಾಗಿದೆ ಎಂದು ಶೆರಿಲ್ ಕೊಂಡಾಡಿದ್ದಾರೆ.

ಅಮೇರಿಕಾದಲ್ಲಿರುವ ಹೆಚ್ಚಿನ ಭಾರತೀಯರು ಹೆಚ್ಚಿನ ಸಂಖ್ಯೆಯ ಫೇಸ್‌ಬುಕ್ ಬಳಕೆದಾರರಾಗಿದ್ದು ಈ ವರ್ಷದಲ್ಲಿ ಅತ್ಯಧಿಕ ಜನರು ಈ ತಾಣವನ್ನು ಪ್ರವೇಶಿಸಿ ಸಾಮಾಜಿಕ ಜಾಲದ ಪ್ರಾಬಲ್ಯವನ್ನು ಬಲಪಡಿಸಿದ್ದಾರೆ.

ಪಿಟಿಐ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot