ಮೆಸೆಂಜರ್ ಅಪ್ಲಿಕೇಶನ್‌ಗಾಗಿ ಫೇಸ್‌ಬುಕ್ ಕಡ್ಡಾಯ ನಿಯಮ

Written By:

ತನ್ನ ಮೊಬೈಲ್ ಅಪ್ಲಿಕೇಶನ್‌ನಿಂದ ಸಂದೇಶ ವೈಶಿಷ್ಷ್ಯ (ಮೆಸೇಜಿಂಗ್ ಫೀಚರ್) ತೆಗದುಹಾಕಲಿರುವ ಫೇಸ್‌ಬುಕ್ ತನ್ನದೇ ಸ್ಟ್ಯಾಂಡ್‌ಅಲೋನ್ ಮೆಸೆಂಜರ್ ಅಪ್ಲಿಕೇಶನ್ ಅನ್ನು ಬಳಸಲು ನಿರ್ಧರಿಸಿದೆ. ತಮ್ಮ ಮೊಬೈಲ್‌ಗಳಲ್ಲಿ ಫೇಸ್‌ಬುಕ್ ಸಂಪರ್ಕಗಳೊಂದಿಗೆ ಚಾಟ್ ಮಾಡಲು ಮೆಸೆಂಜರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ತನ್ನ ಬಳಕೆದಾರರನ್ನು ಒತ್ತಾಯಿಸುತ್ತಿದೆ.

ಫೇಸ್‌ಬುಕ್ ಸಂದೇಶಗಳನ್ನು ಕಳುಹಿಸಲು ಬಯಸುವವರು ಇನ್ನೂ ಮೆಸೆಂಜರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗಿರುವುದು ಅತ್ಯವಶ್ಯಕವಾಗಿದ್ದು ಹೆಚ್ಚಿನ ಜನರ ಗಮನಕ್ಕೆ ಇದನ್ನು ತರಲು ನಾವು ಶ್ರಮವಹಿಸುತ್ತಿದ್ದೇವೆ ಎಂದು ಫೇಸ್‌ಬುಕ್ ಕಾರ್ಯಕರ್ತರು ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಸಂದೇಶ ಕಳುಹಿಸಲು ಮೆಸೆಂಜರ್ ಬೇಕೇ ಬೇಕಂತೆ!!!

ಏಪ್ರಿಲ್ ತಿಂಗಳಿನಲ್ಲೇ ಈ ಯೋಜನೆ ಘೋಷಣೆಗೊಂಡಿದ್ದು ಇದೀಗ ಫೇಸ್‌ಬುಕ್‌ನ ಮೊಬೈಲ್ ಅಪ್ಲಿಕೇಶನ್ ಐಓಎಸ್ ಮತ್ತು ಆಂಡ್ರಾಯ್ಡ್ ಮೇಲೂ ಪರಿಣಾಮವನ್ನು ಬೀರುತ್ತಿದೆ. ಮುಂಚಿನಂತೆಯೇ ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ನಿಮಗೆ ಸಂದೇಶಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಈ ಮೆಸೆಂಜರ್ ಅಪ್ಲಿಕೇಶನ್ ಧನಾತ್ಮಕ ಪರಿಣಾಮವನ್ನು ಉಂಟುಮಾಡುವುದರಿಂದ ಬಳಕೆದಾರರು ಇದರ ಹೆಚ್ಚುವರಿ ಪ್ರಯೋಜನವನ್ನು ಪಡದುಕೊಳ್ಳಬಹುದೆಂದು ಕಂಪೆನಿ ತಿಳಿಸಿದೆ.

ಐಪ್ಯಾಡ್ ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ಫೋನ್‌ಗಳು, ವಿಂಡೋಸ್ ಫೋನ್ ಡಿವೈಸ್‌ಗಳಲ್ಲಿ ಬಳಕೆದಾರರು ಫೇಸ್‌ಬುಕ್ ಅಪ್ಲಿಕೇಶನ್‌ನಲ್ಲಿ ಚಾಟ್ ಮಾಡುವುದನ್ನು ಮುಂದುವರಿಸಬಹುದಾಗಿದೆ. ಇದು ಫೇಸ್‌ಬುಕ್ ಮೆಸೇಜ್ ಅಪ್ಲಿಕೇಶನ್ ಅನ್ನು ಒಂದು ಅತ್ಯುತ್ತಮ ಸಂದೇಶಿಸುವಿಕೆ ಅಪ್ಲಿಕೇಶನ್ ಆಗಿ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕಂಪೆನಿ ತಿಳಿಸಿದೆ.

Read more about:
English summary
This article tells about Facebook is forcing users to download the messenger app.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot