Subscribe to Gizbot

ಆರೋಗ್ಯ ಸಲಹೆಗಾಗಿ ಫೇಸ್‌ಬುಕ್ ಹೊಸ ಅಪ್ಲಿಕೇಶನ್

Written By:

ನಿಮ್ಮ ಆರೋಗ್ಯ ಮಾಹಿತಿಯನ್ನು ಕ್ರೋಢೀಕರಿಸುವ ಇನ್ನೊಂದು ಟೆಕ್ ಕಂಪೆನಿಯಾಗಿ ಫೇಸ್‌ಬುಕ್ ಹೊರಹೊಮ್ಮಲಿದೆ. ಈ ಸಾಮಾಜಿಕ ಜಾಲತಾಣವು ಆರೋಗ್ಯ ಕಾಳಜಿಗೆ ಸಂಬಂಧಿಸಿದಂತೆ ಅಪ್ಲಿಕೇಶನ್ ಅನ್ನು ರಚಿಸುತ್ತಿದ್ದು "ಬೆಂಬಲ ಸಮುದಾಯವನ್ನು" ಇದಕ್ಕಾಗಿ ರಚಿಸುತ್ತಿದ್ದು ಒಂದೇ ತೆರನಾದ ಕಾಯಿಲೆಯಿಂದ ಬಳಲುತ್ತಿರುವವರು ಇದರ ಮೂಲಕ ಸಂಪರ್ಕಕ್ಕೆ ಬಂದು ಸಹಾಯವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: ಈ ದಸರಾದ ಆಕರ್ಷಣೆ ಈ ಸುಂದರ ಸ್ಮಾರ್ಟ್‌ಫೋನ್‌ಗಳು

"ಪ್ರಿವೆಂಟೀವ್ ಕೇರ್" ಎಂಬ ಯೋಜನೆಯು ತಮ್ಮ ಜೀವನ ಶೈಲಿಯನ್ನು ಬದಲಾಯಿಸಲು ಇವರಿಗೆ ಸಹಾಯ ಮಾಡುತ್ತದೆ ಎಂದು ಕಂಪೆನಿ ತಿಳಿಸಿದೆ. ತನ್ನ ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಫೇಸ್‌ಬುಕ್ ವೈದ್ಯಕೀಯ ತಜ್ಞರಲ್ಲಿ ಗಾಢವಾದ ಸಮಾಲೋಚನೆಯನ್ನು ನಡೆಸಿದ್ದು ನಂತರವಷ್ಟೇ ಆರೋಗ್ಯ ಕಾಳಜಿಯ ಬಗೆಗೆ ಹೆಚ್ಚಿನ ನಿಗಾವನ್ನು ವಹಿಸಿಕೊಂಡಿದೆ.

ನಿಮ್ಮ ಆರೋಗ್ಯ ಮಾಹಿತಿ ಇನ್ನು ಫೇಸ್‌ಬುಕ್ ಕೈಯಲ್ಲಿ

ಕೆಲವೊಂದು ನಿಯಮಗಳಿಗನುಸಾರವಾಗಿ ಫೇಸ್‌ಬುಕ್ ಈ ಆರೋಗ್ಯ ಅಪ್ಲಿಕೇಶನ್ ಅನ್ನು ಲಾಂಚ್ ಮಾಡುತ್ತಿದ್ದು ಇದಕ್ಕೆ ವಿಭಿನ್ನ ಹೆಸರನ್ನು ಇಡುವ ಇರಾದೆಯನ್ನು ಕಂಪೆನಿ ಹೊಂದಿದೆ. ಗೂಗಲ್ ಮತ್ತು ಆಪಲ್ ಕೂಡ ಆರೋಗ್ಯ ಸಂಬಂಧಿತ ಅಪ್ಲಿಕೇಶನ್‌ಗಳನ್ನು ಹೊತರುವ ಕಾರ್ಯದಲ್ಲಿ ಹೆಚ್ಚು ನಿರತವಾಗಿದ್ದು ಫೇಸ್‌ಬುಕ್ ಇವುಗಳಿಗಿಂತಲೂ ಅತಿ ವಿಭಿನ್ನ ಮಾರ್ಗವನ್ನು ಅನುಸರಿಸಲಿದೆ. ಆಪಲ್ ಇತ್ತೀಚೆಗಷ್ಟೇ, ಆರೋಗ್ಯ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿದ್ದು, ಐಓಎಸ್ 8 ನ ಬಳಕೆದಾರರು ಫಿಟ್‌ನೆಸ್ ಗುರಿಗಳ ಕುರಿತಾಗಿ ಆರೋಗ್ಯ ಸಂಬಂಧಿತ ಸಲಹೆಗಳಿಗಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಗೂಗಲ್ ತನ್ನ ಗೂಗಲ್ ಫಿಟ್‌ ಅಪ್ಲಿಕೇಶನ್‌ನಲ್ಲಿ ಹೆಚ್ಚು ವ್ಯಸ್ಥವಾಗಿದ್ದು ಇದನ್ನು ಅಭಿವೃದ್ಧಿಪಡಿಸಲಿದೆ.

ಇದನ್ನೂ ಓದಿ: ಈ ದಸರಾಕ್ಕಾಗಿ ಬೊಂಬಾಟ್ ಕೊಡುಗೆಯ ಫೋನ್‌ಗಳು

ಇನ್ನು ಫೇಸ್‌ಬುಕ್ ಆರೋಗ್ಯ ಕಾಳಜಿಯ ಅಪ್ಲಿಕೇಶನ್ ಅನ್ನು ಹೊರತರುತ್ತಿರುವುದು ಇದು ಮೊದಲ ಬಾರಿಯಲ್ಲ. 2012 ರಲ್ಲಿ ಫೇಸ್‌ಬುಕ್ ತನ್ನ ಟೈಮ್‌ಲೈನ್‌ಗೆ ಇಂತಹುದೇ ಅಂಗಾಂಗ ದಾನ ಆಯ್ಕೆಯನ್ನು ಸೇರಿಸಿತ್ತು. ಇದರ ಮೂಲಕ ಹೃದಯ, ಕಿಡ್ನಿಯ ಅವಶ್ಯಕತೆ ಇರುವವರು ಇದರ ಮೂಲಕ ಸಹಾಯ ಪಡೆಯಬಹುದಾಗಿತ್ತು. ಫೇಸ್‌ಬುಕ್ ಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸಿಲ್ಲಾ ಚಾನ್ ಈ ಕಾರ್ಯದಲ್ಲಿ ಮಹತ್ತರ ಸಾಧನೆಯನ್ನು ಮಾಡುವ ಇರಾದೆಯಲ್ಲಿದ್ದಾರೆ.

English summary
This article tells about Facebook May Be the Next Tech Company Collecting Your Health Data.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot