ಫೇಸ್‌ಬುಕ್ ಮೆಸೆಂಜರ್ ಬಳಕೆದಾರರ ಸಂಖ್ಯೆ ಇದೀಗ 500 ಮಿಲಿಯನ್

Posted By:

ಸಾಮಾಜಿಕ ರಂಗದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಫೇಸ್‌ಬುಕ್ ಅಪ್ಲಿಕೇಶನ್‌ನ ಅದೇ ಸಾಲಿಗೆ ಫೆಸ್‌ಬುಕ್ ಮೆಸೆಂಜರ್ ಬಂದಿದೆ. ಕಂಪೆನಿಯ ಜನಪ್ರಿಯತೆಗೆ ಈ ಅಪ್ಲಿಕೇಶನ್ ವಿಶೇಷ ಕಾರಣವಾಗಿದೆ.

ಇನ್ನು ಈ ಜನಪ್ರಿಯತೆಗೆ ಗರಿ ಮೂಡುವಂತೆ ಇನ್ನೊಂದು ಹೊಸ ಸುದ್ದಿ ಹೊರಬಿದ್ದಿದೆ. ಪ್ರತೀ ತಿಂಗಳು 500 ಮಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರು ಈ ಮೆಸೆಂಜರ್ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದು ಕಂಪೆನಿ ವರಮಾನಕ್ಕೆ ಇದು ಧನಾತ್ಮಕ ಅಂಶವಾಗಿದೆ. ಮುಖ್ಯ ಫೇಸ್‌ಬುಕ್ ಅಪ್ಲಿಕೇಶನ್ ಮೆನುವಿನಿಂದ ಮೆಸೆಂಜರ್ ಅನ್ನು ಜುಲೈನಲ್ಲಿ ತೆಗೆದು ಹಾಕಿದ ನಂತರ ಫೆಸ್‌ಬುಕ್ ಮೆಸೆಂಜರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವಂತೆ ಬಳಕೆದಾರರಿಗೆ ಪ್ರೇರೇಪಿಸಲು ಆರಂಭಿಸಿತು.

500 ಮಿಲಿಯನ್ ದಾಟಿದ ಫೇಸ್‌ಬುಕ್ ಬಳಕೆದಾರರು

ಇದನ್ನೂ ಓದಿ: ದುಬಾರಿ ಫೋನ್‌ಗಳ ಮೇಲೆ ಭರ್ಜರಿ ದರಕಡಿತ

ಫೇಸ್‌ಬುಕ್‌ ಪ್ರೊಡಕ್ಟ್ ಮ್ಯಾನೇಜ್‌ಮೆಂಟ್‌ನ ಡೈರೆಕ್ಟರ್ ಆದ ಪೀಟರ್ ಮಾರ್ಟಿನ್ಜ್, ಬ್ಲಾಗ್‌ನಲ್ಲಿ ತಿಳಿಸಿರುವಂತೆ, "ಜನರು ಹೇಗೆ ಸಂಪರ್ಕದಲ್ಲಿರುತ್ತಾರೆ ಎಂಬುದನ್ನು ಅರಿಯಲು ಸಂದೇಶಿಸುವಿಕೆ ಸಹಾಯ ಮಾಡುತ್ತದೆ. ಮೆಸೆಂಜರ್ ಅನ್ನು 2011 ರಿಂದ ಪ್ರಾರಂಭಿಸಿದಲ್ಲಿಂದ ಸಂವಹನ ನಡೆಸಲು ಅತಿ ವೇಗವಾಗಿರುವ ಮತ್ತು ಪ್ರಬಲ ಮಾಧ್ಯಮವನ್ನು ನಾವು ಬಳಕೆದಾರರಿಗೆ ನೀಡಿದ್ದು ಪ್ರತೀ ತಿಂಗಳು 500 ಮಿಲಿಯನ್‌ಗಿಂತಲೂ ಹೆಚ್ಚು ಜನರು ಮೆಸೆಂಜರ್ ಅನ್ನು ಬಳಸುತ್ತಿದ್ದು ಸಂದೇಶಿಸುವಿಕೆಯ ಉತ್ತಮ ಅನುಭವವನ್ನು ಇದು ನೀಡಲಿದೆ".

ಈ ಕುರಿತು ಕಂಪೆನಿ ಇನ್ನಷ್ಟು ಮಾಹಿತಿಯನ್ನು ನೀಡಿದ್ದು, ಮೆಸೆಂಜರ್ ನಮ್ಮ ಪ್ರಥಮ ಸ್ಟ್ಯಾಂಡ್‌ಲೋನ್ ಅಪ್ಲಿಕೇಶನ್ ಆಗಿದ್ದು, ನಮ್ಮ ಫೇಸ್‌ಬುಕ್ ಅಪ್ಲಿಕೇಶನ್‌ಗಳಂತೆ, ಇದು ಒಂದೇ ಚಟುವಟಿಕೆಯ ಮೇಲೆ ಗಮನವನ್ನು ಇಟ್ಟಿದೆ. ಅದುವೇ ಸಂದೇಶಿಸುವಿಕೆ. ಮೆಸೆಂಜರ್‌ನೊಂದಿಗೆ ನೀವು ಜನರನ್ನು ತ್ವರಿತವಾಗಿ ತಲುಪಬಹುದಾಗಿದೆ. ಇದು ಎಸ್‌ಎಮ್‌ಎಸ್‌ನಂತೆ ವೇಗವಾಗಿದ್ದು ನಿಮಗೆ ಎಸ್‌ಎಮ್‌ಎಸ್‌ನಲ್ಲಿ ತೋರ್ಪಡಿಸಲೂ ಆಗದೇ ಇರುವುದನ್ನು ಮೆಸೇಜಿಂಗ್‌ನಲ್ಲಿ ವ್ಯಕ್ತಪಡಿಸಬಹುದಾಗಿದೆ. ನಿಮಗೆ ಇದರಲ್ಲಿ ಸ್ಟಿಕ್ಕರ್‌ಗಳು, ವೀಡಿಯೊಗಳನ್ನು ಕಳುಹಿಸಬಹುದಾಗಿದ್ದು, ಸೆಲ್ಫೀಗಳನ್ನು ತೆಗೆಯಬಹುದಾಗಿದೆ. ಗುಂಪು ಚಾಟ್ ಅನ್ನು ನಿರ್ವಹಿಸಬಹುದಾಗಿದ್ದು ಉಚಿತ ಕರೆಗಳನ್ನು ಮಾಡಬಹುದು. ಇದರ ವೇಗ ಮತ್ತು ವಿಶ್ವಾಸಾರ್ಹತೆಯನ್ನು ನಾವು ಸುಧಾರಿಸುವ ಪ್ರಯತ್ನದಲ್ಲಿದ್ದು ಪ್ರತೀ ಎರಡು ವಾರಗಳಿಗೊಮ್ಮೆ ಮೆಸೆಂಜರ್‌ ಅನ್ನು ನವೀಕರಿಸುವ ಇರಾದೆ ನಮ್ಮದಾಗಿದೆ".

English summary
This article tells about Facebook Messenger Reaches 500 Million Users.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot