Subscribe to Gizbot

ಗೂಗಲ್‌ ನೆಕ್ಸಸ್‌ 7 VS ಆಪಲ್‌ ಐಪ್ಯಾಡ್‌ ಮಿನಿ

Posted By: Vijeth

ಗೂಗಲ್‌ ನೆಕ್ಸಸ್‌ 7 VS ಆಪಲ್‌ ಐಪ್ಯಾಡ್‌ ಮಿನಿ
ಜಾಗತಿಕ ಟ್ಯಾಬ್ಲೆಟ್‌ ಕ್ಷೇತ್ರದಲ್ಲಿ ಬಹುತೇಕ ಆಪಲ್‌ ಸಂಸ್ಥೆಯ ಐಪ್ಯಾಡ್‌ ನದ್ದೇ ಕಾರುಬಾರು. ಇದರ ಹೊರತಾಗಿ ಇಂದು ಹಲವು ತಯಾರಕರುಗಳ ಆಂಡ್ರಾಯ್ಡ್‌ ಟ್ಯಾಬ್ಲೆಟ್‌ಗಳೂ ಕೂಡ ನಿಧಾನವಾಗಿ ತಲೆಯೆತ್ತುತ್ತಿದ್ದು ಗ್ರಾಹಕರ ಗಮನ ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿವೆ. ಅಂದಹಾಗೆ ಆಪಲ್‌ ಸಂಸ್ಥೆಯು 10 ಇಂಚಿನ ಟ್ಯಾಬ್ಲೆಟ್‌ ತಯಾರಿಕಾ ಕ್ಷೇತ್ರದಲ್ಲಿ ಮಾತ್ರವಷ್ಟೇ ಹಿಡಿತ ಸಾಧಿಸಿದ್ಧು ಇದೀಗ ತನ್ನಯ ನೂತನ ಐಪ್ಯಾಡ್‌ ಮಿನಿ ಬಿಡುಗಡೆ ಮಾಡುವ ಮೂಲಕ 7 ಇಂಚಿನ ಟ್ಯಾಬ್ಲೆಟ್‌ ತಯಾರಿಕಾ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದೆ.

ಅಂದಹಾಗೆ 7 ಇಂಚಿನ ಟ್ಯಾಬ್ಲೆಟ್‌ ತಯಾರಿಕಾ ವಲಯದಲ್ಲಿ ಈಗಾಗಲೇ ಸ್ಯಾಮ್ಸಂಗ್‌, ಗೂಗಲ್‌, ಅಮೇಜಾನ್‌ ಹಾಗೂ ವಿವಿಧ ಸ್ತಳೀಯ ತಯಾರಕರುಗಳು ಮಾರುಕಟ್ಟೆಯಲ್ಲಿ ಬಲವಾಗಿ ನೆಯೂರಿದ್ದು ಆಪಲ್‌ ಸಂಸ್ಥೆಗೆ ಭಾರೀ ಪೈಪೋಟಿ ನೀಡಲಿವೆ. ಆದ್ದರಿಂದಲೇ ಗಿಜ್ಬಾಟ್‌ ಇಂದು ಮಾರುಕಟ್ಟೆಯಲ್ಲಿ ಐಪ್ಯಾಡ್‌ ಮಿನಿಗೆ ಪ್ರಬಲ ಪೈಪೋಟಿ ನೀಡಬಲ್ಲ ಟ್ಯಾಬ್ಲೆಟ್‌ ಆದಂತಹ ಗೂಗಲ್‌ನ ನೆಕ್ಸಸ್‌ 7 ಟ್ಯಾಬ್ಲೆಟ್‌ ನಡುವಿನ ಹೋಲಿಕೆಯನ್ನು ತಂದಿದೆ ಒಮ್ಮೆ ಓದಿ ನೋಡಿ.

ನೀವೂ ಕೂಡ ಈ ಎರಡೂ ಟ್ಯಾಬ್ಲೆಟ್‌ಗಳಲ್ಲಿ ಯಾವುದನ್ನಾದರೂ ಖರೀದಿಸುವ ಆಲೋಚನೆಯಲ್ಲಿದ್ದೀರಾ? ಆದರೇ ಯಾವುದನ್ನು ಖರೀದಿಸುವುದು ಎಂಬ ಗೊಂದಲ ನಿಮ್ಮದ್ದಾಗಿದ್ದರೆ, ಖರೀದಿಗೂ ಮುನ್ನ ಇವೆರಡರ ನಡುವಿನ ಹೋಲಿಕೆಯನ್ನು ಒಮ್ಮೆ ಓದಿ ನೋಡಿ ನಿಮ್ಮ ಆಯ್ಕೆಯ ಟ್ಯಾಬ್ಲೆಟ್‌ ಯಾವುದೆಂದು ನೀವೇ ನಿರ್ಧರಿಸಿ ನಂತರ ಖರೀದಿಗೆ ಮುಂದಾಗಿ.

ತೂಕ ಹಾಗೂ ಸುತ್ತಳತೆ: ಗೂಗಲ್‌ನ ನೆಕ್ಸಸ್‌ 7 ಟ್ಯಾಬ್ಲೆಟ್‌ 198.5 x 120 x 10.45 mm ಸುತ್ತಳತೆಯೊಂದಿಗೆ 340 ಗ್ರಾಂ ತೂಕವಿದೆ. ಆದರೆ ಐಪ್ಯಾಡ್‌ ಮಿನಿ ನೆಕ್ಸ್‌ಗಿಂತಲೂ ಕೊಂಚ ಗಾತ್ರದಲ್ಲಿ ದೊಡ್ಡದಾಗಿದ್ದು ಅಂದರೆ 200 x 134.7 x 7.2mm ಸುತ್ತಳತೆ ಹೊಂದಿದ್ದು 308 ಗ್ರಾಂ ತೂಕ ಹೊಂದಿದ್ದು ನೆಕ್ಸಸ್‌ ಗಿಂತಲೂ ಹಗುರವಾಗಿದೆ.

ದರ್ಶಕ : ನೆಕ್ಸಸ್‌ 7 ನಲ್ಲಿ 7 ಇಂಚಿನ WXGA 10 ಪಾಯಿಂಟ್‌ ಮಲ್ಟಿ-ಟಚ್‌ ಐಪಿಎಸ್‌ ದರ್ಶಕ ಹೊಂದಿದ್ದು 1280 x 800 ಪಿಕ್ಸೆಲ್‌ ರೆಸೆಲ್ಯೂಷನ್‌ನಿಂದ ಕೂಡಿದ್ದರೆ. ಐಪ್ಯಾಡ್‌ ಮಿನಿಯಲ್ಲಿ 7.9 ಇಂಚಿನ ದರ್ಶಕದೊಂದಿಗೆ ಎಲ್‌ಇಡಿ-ಬ್ಯಾಕ್‌ಲೈಟ್‌ ಐಪಿಎಸ್‌ ಎಲ್‌ಸಿಡಿ ಸಾಮರ್ತ್ಯದ ದರ್ಶಕ ಹಾಗೂ ನೆಕ್ಸಸ್‌ಗಿಂತಲೂ ಕೊಂಚ ಕಡಿಮೆಯ ಅಂದರೆ 1024 x 768 ಪಿಕ್ಸೆಲ್‌ ಹೊಂದಿದೆ,ಆದರೆ ರೆಟಿನಾ ದರ್ಶಕ ಹೊಂದಿರುವುದು ಇದರಲ್ಲಿನ ವಿಶೇಷತೆ ಯಾಗಿದೆ.

ಪ್ರೊಸೆಸರ್‌ : ನೆಕ್ಸಸ್‌ 7 ನಲ್ಲಿ 1.2GHz ಕ್ವಾಡ್‌ ಕೋರ್‌ ಎನ್‌ವಿಡಿಯಾ ಟೆಗ್ರಾ 3 ಪ್ರೊಸೆಸರ್‌ ಹೊಂದಿದ್ದು ಉತ್ತಮ ಸ್ಪೀಡ್‌ ಹಾಗೂ ಪರ್ಫಾರ್ಮನ್ಸ್‌ ನೀಡುತ್ತದೆ. ಆದರೆ ಆಪಲ್‌ ಐಪ್ಯಾಡ್‌ ಮಿನಿಯಲ್ಲಿ ಎಆರ್‌ಎಎಂ ಕಾರ್ಟೆಕ್ಸ್‌ ಎ9 ಪ್ರೊಸೆಸರ್‌ ಮಾದರಿಯ 1GHz ಡ್ಯುಯೆಲ್‌ ಕೋರ್‌ ಆಪಲ್‌ ಎ5 ಪ್ರೊಸೆಸರ್‌ ನೀಡಲಾಗಿದ್ದು ಈ ಮೂಲಕ ಬ್ಯಾಟರಿ ಉಳಿಸಲು ನೆರವಾಗುತ್ತದೆ.

ಆಪರೇಟಿಂಗ್‌ ಸಿಸ್ಟಂ : ನೆಕ್ಸಸ್‌ 7 ನಲ್ಲಿ ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಆಧಾರಿತ ಟ್ಯಾಬ್ಲೆಟ್‌ ಆಗಿದ್ದರೆ, ಐಪ್ಯಾಡ್‌ ಮಿನಿ ಯೋಎಸ್‌ 6 ಚಾಲಿತವಾಗಿದೆ. ಅಂದಹಾಗೆ ವರದಿಗಳ ಪ್ರಕಾರ ನೆಕ್ಸಸ್‌ 7 ಶೀಘ್ರದಲ್ಲೇ ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ಗೆ ಅಪ್ಗ್ರೇಡ್‌ ಆಗಲಿದೆ.

ಕ್ಯಾಮೆರಾ : ಈ ವಿಚಾರದಲ್ಲಿ ನೆಕ್ಸಸ್‌ 7 ನಲ್ಲಿ ವಿಡಿಯೋ ಕರೆಗಾಗಿ 1.2ಎಂಪಿ ಕ್ಯಾಮೆರಾ ಹೊಂದಿದ್ದು ಹಿಂಬದಿಯ ಕ್ಯಾಮೆರಾ ಇಲ್ಲವಾಗಿದೆ. ಆದರೆ ಐಪ್ಯಾಡ್‌ ಮಿನಿಯಲ್ಲಿ ಐಸೈಟ್‌ ತಂತ್ರಜ್ಞಾನದೊಂದಿಗೆ 5MP ನ ಹಿಂಬದಿಯ ಕ್ಯಾಮೆರಾ ಹಾಗೂ ವಿಡಿಯೋ ಕರೆ ಮಾಡಲು 1.2ಎಂಪಿ ನ ಮುಂಬದಿಯ ಕ್ಯಾಮೆರಾ ಕೂಡಾ ಹೊಂದಿದೆ.

ಸ್ಟೋರೇಜ್‌: ನೆಕ್ಸಸ್‌ 7 16ಜಿಬಿ/32ಜಿಬಿ ಆಂತರಿಕ ಮೆಮೊರಿ ಮಾದರಿಗಳಲ್ಇ ಲಭ್ಯವಿದ್ದು 1ಜಿಬಿ RAM ಹೊಂದಿದ್ದರೆ ಐಪ್ಯಾಡ್‌ ಮಿನಿ 16ಜಿಬಿ/32ಜಿಬಿ ಹಾಗೂ 64ಜಿಬಿ ಆನ್‌ ಬೋರ್ಡ್‌ ಸ್ಟೋರೇಜ್‌ ನೊಂದಿಗೆ 512ಎಂಬಿ RAM ಹೊಂದಿರುವುದು ಕೊಂಚ ನಿರಾಶಾದಾಯಕವಾಗಿದೆ. ಅಂದಹಾಗೆ ಎರಡೂ ಟ್ಯಾಬ್ಲೆಟ್‌ಗಳಲ್ಲಿ ಮೆಮೊರಿ ವಿಸ್ತರಣೆಗಾಗಿ ಮೈಕ್ರೋ ಎಸ್‌ಡಿ ಕಾರ್ಟ್‌ ಸೌಲಭ್ಯವಿಲ್ಲವಾಗಿದೆ.

ಕನೆಕ್ಟಿವಿಟಿ : ಈ ವಿಚಾರದಲ್ಲಿ ನೆಕ್ಸಸ್‌ 7 ನಲ್ಲಿ ಎನ್‌ಎಫ್‌ಸಿ, ಬ್ಲೂಟೂತ್‌, ವೈ-ಫೈ ಹಾಗೂ ಮೈಕ್ರೋ ಯುಎಸ್‌ಬಿ 2.0. ಫೀಚರ್‌ಗಳನ್ನು ಹೊಂದಿದ್ದು ಇತ್ತೀಚಿನ ವರದಿಗಳ ಪ್ರಕಾರ 3ಜಿ ಮಾದರಿಯಲ್ಲಿಯೂ ಬರಲಿದೆ. ಅಂದಹಾಗೆ ಐಪ್ಯಾಡ್‌ ಮಿನಿಯಲ್ಲಿ ವೈ-ಫೈ ಹಾಗೂ ಬ್ಲೂಟೂತ್‌ ನೀಡಲಾಗಿದ್ದು ನೆಕ್ಸಸ್‌ನಲ್ಲಿ ನೀಡದೇ ಇರುವಂತಹ 3ಜಿ ಹಾಗೂ 4ಜಿ ಬೆಂಬಲಿತವಾಗಿದ್ದು ನವೆಂಬರ್‌ನ ಮಧ್ಯಂತರದಲ್ಲಿ ಮಾರುಕಟ್ಟೆಗೆ ಬರಲಿದೆ.

ಬ್ಯಾಟರಿ : ನೆಕ್ಸಸ್‌ 7 ನಲ್ಲಿ 4,325 mAh 16Whr ಲಿ-ಪೋ ಬ್ಯಾಟರಿ ನೀಡಲಾಗಿದ್ದು 9.5 ಗಂಟೆಗಳ ಬ್ಯಾಕಪ್‌ ನೀಡುತ್ತದೆ. ಹಾಗೂ ಐಪ್ಯಾಡ್‌ ಮಿನಿಯಲ್ಲಿ ಕೊಂಚ ಉತ್ತಮವಾದ 16.3 Whr ಲಿ-ಪೋ ಬ್ಯಾಟರಿ ನೀಡಲಾಗಿದ್ದು 10 ಗಂಟೆಗಳ ಬ್ಯಾಕಪ್‌ ಒದಗಿಸುತ್ತದೆ.

ಬೆಲೆ: ಖರಿದಿಸುವುದಾದರೆ ನೆಕ್ಸಸ್‌ 7 ಭಾರತೀಯ ಮಾರುಕಟ್ಟೆಗೆ ರೂ. 19,981 ದರದಲ್ಲಿ ಬರಲಿದೆ ಹಾಘೂ ಐಪ್ಯಾಡ್‌ ಮಿನಿ ರೂ 25,000 ರಿಂದ 33,000 ರೂ.ದರದಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ನೂತನ ಟ್ಯಾಬ್ಲೆಟ್‌ನ ಅಧಿಕೃತ ದರ ಬಿಡುಗಡೆಯ ದಿನದಂದೇ ತಿಳಿಯಲಿದೆ.

Read In English...

6,000 ರೂ. ದರದಲ್ಲಿನ ಟಾಪ್‌ 5 ಆಂಡ್ರಾಯ್ಡ್‌ ಟ್ಯಾಬ್ಲೆಟ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot