ಫೇಸ್‌ಬುಕ್ ದಿಗ್ಗಜನೊಂದಿಗೆ ಪ್ರಧಾನಿ ಮಹತ್ವ ಭೇಟಿ

Posted By:

ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಭಾರತಕ್ಕೆ ಭೇಟಿ ನೀಡಿದ್ದು ಆಸಕ್ತಿಕರ ಅಂಶವಾಗಿ ಪರಿಣಮಿಸಿದ್ದು ಇದು ಯಾಕಾಗಿರಬಹುದು ಎಂಬ ಪ್ರಶ್ನೆಗಳ ಸಾಲೇ ಇದೀಗ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

ಹೆಚ್ಚು ಪ್ರಸಿದ್ಧಿಯ ಉತ್ತುಂಗದಲ್ಲಿರುವ ಸಾಮಾಜಿಕ ಮಾಧ್ಯಮದ ಹಿಂದಿರುವ ದೈತ್ಯ ಶಕ್ತಿ ಮಾರ್ಕ್ ಜುಕರ್ ಬರ್ಗ್ ನಿನ್ನೆಯಷ್ಟೇ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದು ಫೆಸ್‌ಬುಕ್‌ನ ಇನ್ನಷ್ಟು ಮಹತ್ವಕಾರಿ ಬಳಕೆಗೆ ಅಗತ್ಯವಿರುವ ವಿಷಯಗಳನ್ನು ಪ್ರಧಾನ ಮಂತ್ರಿಗಳೊಂದಿಗೆ ಚರ್ಚಿಸಿದ್ದಾರೆ. ಮತ್ತು ಫೇಸ್‌ಬುಕ್‌ನ ಅಭಿವೃದ್ಧಿಗೆ ತೊಡಕಾಗಿರುವ ಕೆಲವೊಂದು ವಿಷಯಗಳನ್ನು ಮೋದಿಯವರೊಂದಿಗೆ ಚರ್ಚಿಸಿ ನಿವಾರಣೆಯ ಕ್ರಮಗಳನ್ನು ಕೈಗೊಂಡಿದ್ದಾರೆ.

ಎರಡೂ ಧೀಮಂತ ವ್ಯಕ್ತಿಗಳ ಭೇಟಿಯ ಒಳಗುಟ್ಟೇನು?

ಇದನ್ನೂ ಓದಿ: ದೀಪಾವಳಿ ಸಂಭ್ರಮ ಸ್ಯಾಮ್‌ಸಂಗ್ ಫೋನ್‌ ದರಕಡಿತ

ಡಿಜಿಟಲ್ ಇಂಡಿಯಾ ಇನಿಶಿಯೇಟೀವ್ ಬಗ್ಗೆ ಅವರು ಈ ಸಂದರ್ಭದಲ್ಲಿ ಮಾತನಾಡಿದ್ದು ಫೇಸ್‌ಬುಕ್‌ ಈ ಯೋಜನೆಗೆ ಸಹಾಯ ಮಾಡುವಂತಹ ಕೆಲವೊಂದು ಡೊಮೇನ್‌ಗಳನ್ನು ಗುರುತಿಸಲು ಪ್ರಧಾನ ಮಂತ್ರಿಯವರು ಜೂಕರ್‌ ಬರ್ಗ್‌ನೊಂದಿಗೆ ಕೋರಿದ್ದಾರೆ.

ಈ ಸಂದರ್ಭದಲ್ಲಿ ಮಾರ್ಕ್ ಜೂಕರ್‌ಬರ್ಗ್ ಕೂಡ ಡಿಜಿಟಲ್ ಇಂಡಿಯಾ ಇನಿಶಿಯೇಟೀವ್ ಯೋಜನೆಯ ಕುರಿತು ಹೆಚ್ಚು ಉತ್ಸುಕರಾಗಿದ್ದು ತಮ್ಮ ಸಂಪೂರ್ಣ ಸಹಾಯವನ್ನು ಮಾಡುವುದಾಗಿ ತಿಳಿಸಿದ್ದಾರೆ. ತಾವು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಕಾಣೆಯಾದ ಮಗುವನ್ನು ಹುಡುಕುವಲ್ಲಿ ಫೇಸ್‌ಬುಕ್‌ನ ಕ್ಯಾಂಪೇನ್ ಮಗುವನ್ನು ಪತ್ತೆ ಹಚ್ಚಲು ಹೇಗೆ ನೆರವಾಯಿತು ಮೊದಲಾದ ಸಾಧನೆಗಳನ್ನು ಮೋದಿಯವರು ಈ ಸಂದರ್ಭದಲ್ಲಿ ಮರುನೆನಪಿಸಿಕೊಂಡರು.

ಇದನ್ನೂ ಓದಿ: ದೀಪಾವಳಿಯ ಬಂಪರ್ ಕೊಡುಗೆಯ ಫೋನ್‌ಗಳು

ಭಾರತದ ಶ್ರೀಮಂತ ಪ್ರವಾಸ ಶಕ್ತಿಯನ್ನು ಫೇಸ್‌ಬುಕ್ ಮೂಲಕ ಪ್ರಚಾರಪಡಿಸಲು ಮೋದಿಯವರು ಫೇಸ್‌ಬುಕ್ ದಿಗ್ಗಜನಲ್ಲಿ ವಿನಂತಿಸಿಕೊಂಡಿದ್ದಾರೆ. ಅಂತರ್ಜಾಲ ಸಂಪರ್ಕದ ಮೂಲಕ ಅಂತರ್ಜಾಲ ಅಕ್ಷರತೆಯನ್ನು ಹೇಗೆ ವರ್ಧಿಸುವುದು ಇದಕ್ಕೆ ಫೇಸ್‌ಬುಕ್ ಹೇಗೆ ನೆರವನ್ನೊದಗಿಸಬಹುದು ಎಂಬುದರ ಬಗ್ಗೆ ಪ್ರಧಾನಿಯವರು ಚರ್ಚಿಸಿದ್ದಾರೆ. ಇದೇ ಸಂದರ್ಭದಲ್ಲಿ ಟೆಲಿಕಾಮ್ ಮತ್ತು ಐಟಿ ಮಂತ್ರಿಯಾಗಿರುವ ರವಿ ಶಂಕರ್ ಪ್ರಸಾದ್‌ರನ್ನು ಕೂಡ ಫೆಸ್‌ಬುಕ್ ಸಿಇಒ ಭೇಟಿಯಾಗಿದ್ದಾರೆ.

ಅಮೆಜಾನ್‌ನ ಜೆಫ್ ಬೆಸೋಸ್ ಮತ್ತು ಮೈಕ್ರೋಸಾಫ್ಟ್‌ನ ಸತ್ಯ ನಡೇಲ್ಲಾ ನಂತರ ಭಾರತಕ್ಕೆ ಭೇಟಿ ನೀಡಿರುವ ಮೂರನೇ ಹೆಚ್ಚು ಪ್ರಸಿದ್ಧ ವ್ಯಕ್ತಿಯಾಗಿದ್ದಾರೆ ಫೆಸ್‌ಬುಕ್ ಸಾಮಾಜಿಕ ತಾಣದ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್.

English summary
This article tells about Facebook CEO Mark Zuckerberg's visit to India has already been quite interesting and everyone in the social networking sites have been yelling out the questions out loud.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot