ಗೂಗಲ್ ಮತ್ತು ಸ್ಯಾಮ್‌ಸಂಗ್‌ ವೆರಿಯೇಬಲ್ ವಾಗ್ವಾದ

Written By:

ಗೂಗಲ್ ಮತ್ತು ಸ್ಯಾಮ್‌ಸಂಗ್‌ಗಳು ವೇರಿಯೇಬಲ್‌ಗಳಲ್ಲಿ ಟೈಸನ್ಸ್ ಪಾತ್ರವನ್ನು ಕುರಿತು ವಾಗ್ವಾದವನ್ನು ನಡೆಸುತ್ತಿದೆಯೇ? ಹೊಸ ವರದಿಯ ಪ್ರಕಾರ ಈ ಸುದ್ದಿ ನಿಜವಾಗಿದೆ.

ಮಾಹಿತಿಯ ಪ್ರಕಾರ, ಗೂಗಲ್‌ನ ಸಿಇಒ ಪಾರಿ ಪೇಜ್ ಸ್ಯಾಮ್‌ಸಂಗ್‌ನ ಚೇರ್‌ಮೆನ್ ಜೆ ವೈ ಲೀಯನ್ನು ಭೇಟಿ ಮಾಡಿದ್ದು ಸಂವಾದನ್ನು ಕೂಡ ನಡೆಸಿದ್ದಾರೆ. ವೇರಿಯೇಬಲ್ ಕುರಿತು ಸ್ಯಾಮ್‌ಸಂಗ್‌ನ ಮುಂದಿನ ನಡೆ ಏನು ಎಂಬುದನ್ನು ತಿಳಿದುಕೊಳ್ಳುವುದು ಇದರ ಉದ್ದೇಶವಾಗಿತ್ತು ಎಂಬುದು ತಿಳಿದುಬಂದಿದೆ.

ಗೂಗಲ್ ಮತ್ತು ಸ್ಯಾಮ್‌ಸಂಗ್‌ ಸ್ಮಾರ್ಟ್‌ವಾಚ್ ಸಮರ

ಆದರೆ ಈ ಸಂವಾದ ಯಶಸ್ವಿಯಾಗಿಲ್ಲ. ಆಂಡ್ರಾಯ್ಡ್ ವೇರ್‌ಗೆ ಹೆಚ್ಚಿನ ಬೆಂಬಲವನ್ನು ಕೊಡುವುದಕ್ಕಿಂತಲೂ ತನ್ನದೇ ಟೈಸಾನ್ ಆಪರೇಟಿಂಗ್ ಸಿಸ್ಟಮ್‌ಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವ ಕುರಿತು ಸ್ಯಾಮ್‌ಸಂಗ್ ಯೋಜನೆಗಳನ್ನು ನಡೆಸುತ್ತಿದೆ ಎಂಬುದನ್ನು ತಿಳಿದು ಪೇಜ್ ಸಂತೋಷಗೊಂಡಿಲ್ಲ.

ಸ್ಯಾಮ್‌ಸಂಗ್ ಆಂಡ್ರಾಯ್ಡ್ ಚಾಲನೆಯಲ್ಲಿರುವಂತಹ ಸ್ಮಾರ್ಟ್‌ವಾಚ್ ಅನ್ನು ತಯಾರಿಸಿದ್ದು ಇದರ ಅತಿದೊಡ್ಡ ಸ್ಮಾರ್ಟ್‌ವಾಚ್ ಪ್ರಯತ್ನ ಎಂದಾಗಿ ಪರಿಗಣಿಸಲಾದ ಗೇರ್ ಲೈವ್ ಟೈಸನ್‌ಗೆ ಹೆಚ್ಚಿನ ಮಹತ್ವವನ್ನು ನೀಡಿದೆ.

ಈ ವಿಚಾರವಾಗಿ ಗೂಗಲ್ ಮತ್ತು ಸ್ಯಾಮ್‌ಸಂಗ್ ತಮ್ಮ ಸಂಬಂಧಗಳನ್ನು ಇನ್ನಷ್ಟು ಜಟಿಲಗೊಳಿಸುತ್ತಿದೆ. ಆಂಡ್ರಾಯ್ಡ್ ವೇರ್‌ನಲ್ಲಿ ಹೆಚ್ಚು ಯಶಸ್ಸನ್ನು ಪಡೆದುಕೊಂಡಿರುವ ಸ್ಯಾಮ್‌ಸಂಗ್, ತನ್ನ ಈ ಅನುಭವವನ್ನು ಇನ್ನಷ್ಟು ವಿಸ್ತಾರಗೊಳಿಸುವ ನಿಟ್ಟಿನಲ್ಲಿದೆ. ಇನ್ನು ವೇರಿಯೇಬಲ್ ವಿಷಯದಲ್ಲಿ ಇವೆರಡೂ ದೈತ್ಯ ಕಂಪೆನಿಗಳು ವಾಗ್ವಾದವೆಂಬ ಸಮಸ್ಯೆಯನ್ನು ಎದುರಿಸುತ್ತಿವೆ. ಪ್ರಸ್ತುತ ಸ್ಯಾಮ್‌ಸಂಗ್ ಎರಡು ಸ್ಪರ್ಧಾತ್ಮಕ ಡಿವೈಸ್‌ಗಳನ್ನು ಮಾರಾಟ ಮಾಡುತ್ತಿದೆ. ಗೇರ್ 2 ಸ್ಮಾರ್ಡ್‌ವಾಚ್ ಸ್ಯಾಮ್‌ಸಂಗ್‌ನ ಸಾಫ್ಟ್‌ವೇರ್‌ನಲ್ಲಿ ಚಾಲನೆಯಾಗುತ್ತಿದೆ ಮತ್ತು ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಇನ್ನು ಗೇರ್ ಲೈವ್ ಗೂಗಲ್‌ನ ನಿಯಮಗಳನ್ನು ಅನುಸರಿಸಬೇಕು ಮತ್ತು ಆಂಡ್ರಾಯ್ಡ್ 4.3 ಅಥವಾ ಹೆಚ್ಚಿನದರೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ.

ವೇರಿಯೇಬಲ್ ಮಾರುಕಟ್ಟೆ ವಿಶೇಷವಾಗಿ ಸ್ಮಾರ್ಟ್‌ವಾಚ್ ವಿಷಯದಲ್ಲಿ ಇವೆರಡೂ ಪ್ಲಾಟ್‌ಫಾರ್ಮ್‌ಗಳಿಗೆ ಬೆಂಬಲ ಒದಗಿಸಲು ಸ್ಯಾಮ್‌ಸಂಗ್‌ಗೆ ಅನುವು ಮಾಡಿಕೊಡಬೇಕು. ಸ್ಯಾಮ್‌ಸಂಗ್ ಈ ಪ್ಲಾಟ್‌ಫಾರ್ಮ್‌ಗಳನ್ನು ಆರಿಸಿ ಅದಕ್ಕೆ ತಕ್ಕ ಬದ್ಧತೆಯನ್ನು ನೀಡಲು ಸಾಧ್ಯವಾದರೆ ಈ ಸ್ಮಾರ್ಟ್‌ವಾಚ್‌ಗಳು ಪ್ರಮುಖ ಮಾರುಕಟ್ಟೆ ಬೆಂಬಲವನ್ನು ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

Read more about:
English summary
This article tells that Samsung and Google butt heads over smartwatches.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot