ನಿಮ್ಮ ಒತ್ತಡವನ್ನು ಹೆಚ್ಚಿಸುವ ಫೇಸ್‌ಬುಕ್

Written By:

ನೀವು ಹೆಚ್ಚು ಬೋರ್ ಆದಾಗ ಸಾಮಾಜಿಕ ತಾಣವಾದ ಫೇಸ್‌ಬುಕ್ ಟ್ವಿಟ್ಟರ್, ಗೂಗಲ್ ಪ್ಲಸ್‌ಗೆ ಭೇಟಿ ನೀಡುತ್ತೀರಿ ಅಲ್ಲಿನ ಕೆಲವೊಂದು ಸ್ಟೇಟಸ್ ಅಪ್‌ಡೇಟ್‌ಗಳನ್ನು ಸವಿಯುತ್ತೀರಿ, ಫೋಟೋಗಳನ್ನು ಆಸ್ವಾದಿಸುತ್ತೀರಿ ಹೀಗೆ ಈ ತಾಣಗಳನ್ನು ನಿಮ್ಮ ಮನರಂಜನೆಗಾಗಿ ಬಳಸಿಕೊಳ್ಳುತ್ತೀರಿ.

ಅದರಲ್ಲೂ ಫೇಸ್‌ಬುಕ್ ಪ್ರತಿಯೊಬ್ಬರಲ್ಲೂ ಒಂದು ಜಾದೂವನ್ನು ಉಂಟುಮಾಡಿದೆ ಎಂದರೆ ಎಲ್ಲರೂ ಅಂಗೀಕರಿಸುತ್ತಾರೆ. ಆದರೆ ಕೆಲವೊಂದು ಅಧ್ಯಯನಗಳ ಪ್ರಕಾರ ಫೇಸ್‌ಬುಕ್ ಅನ್ನು ನೋಡುವುದು ಕೆಲವೊಮ್ಮೆ ಒತ್ತಡವನ್ನು ಹೆಚ್ಚಿಸುತ್ತದಂತೆ. ನೀವು ಹೆಚ್ಚು ಹೊತ್ತು ಫೇಸ್‌ಬುಕ್‌ನಲ್ಲಿ ಕಾಲಕಳೆದಂತೆಲ್ಲಾ ನೀವು ಹೆಚ್ಚು ಒತ್ತಡಕ್ಕೆ ಒಳಗಾಗುತ್ತೀರಿ ಎಂಬುದನ್ನು ಎರಡು ವಿಭಿನ್ನ ಅಧ್ಯಯನಗಳು ದೃಢೀಕರಿಸಿವೆ.

ಫೇಸ್‌ಬುಕ್ ಕೆಡುಕು ಒಳಿತಿನ ಎರಡು ಮುಖ

ಇಂಟರ್ನೆಟ್‌ನ ಇತರ ವಲಯಗಳಿಗಿಂತ, ನಿಮ್ಮ ಜೀವನವನ್ನು ವೃಥಾ ನೀವು ಕಳೆಯುತ್ತಿದ್ದೀರಿ ಎಂಬ ಭಾವನೆಯನ್ನು ಫೇಸ್‌ಬುಕ್ ಉಂಟುಮಾಡುತ್ತದೆಯಂತೆ. ಇಂಟರ್ನೆಟ್ ಅನ್ನು ಬ್ರೌಸ್ ಮಾಡುವುದಕ್ಕಿಂತಲೂ ಅಧಿಕ ಸಮಯ ನೀವು ಫೇಸ್‌ಬುಕ್‌ನಲ್ಲಿ ಕಳೆಯುವುದು ಸಮಯ ಕಳೆಯುವಿಕೆ, ಅನಗತ್ಯ ಎಂಬ ಅನಿಸಿಕೆಯನ್ನು ನಮ್ಮಲ್ಲಿ ಉಂಟುಮಾಡುತ್ತದೆ ಇದು ಒತ್ತಡವನ್ನು ಅಧಿಕಗೊಳಿಸುತ್ತದೆ ಎಂದು ಆಸ್ಟ್ರೀಯಾದ ಕ್ರಿಸ್ಟಿನಾ ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಋಣಾತ್ಮಕ ಅಂಶಗಳು ಮನದಲ್ಲಿ ಹೆಚ್ಚುವರಿ ಋಣಾತ್ಮಕ ಚಿಂತೆನಗಳನ್ನು ಹೆಚ್ಚುವಂತೆ ಮಾಡುತ್ತದೆ. ಮತ್ತು ಹೆಚ್ಚು ದೀರ್ಘ ಸಮಯ ಫೇಸ್‌ಬುಕ್‌ನಲ್ಲಿ ಕಾಲ ಕಳೆಯುವುದು ಮಾನಸಿಕ ತುಮುಲಗಳನ್ನು ಹೆಚ್ಚಿಸುತ್ತದೆ ಎಂದು ಫೇಸ್‌ಬುಕ್‌ನ ಅಧ್ಯಯನವೇ ದೃಢೀಕರಿಸಿದೆ.

ಹೆಚ್ಚು ಸಮಯದವರೆಗೆ ಫೇಸ್‌ಬುಕ್‌ನಲ್ಲಿರುವ ವ್ಯಕ್ತಿಗಳು ಜಿಜ್ಞಾಸೆಗೆ ಒಳಗಾಗುತ್ತಾರೆ ಮತ್ತು ಧನಾತ್ಮಕ ಅಥವಾ ಋಣಾತ್ಮಕ ಪೋಸ್ಟ್‌ಗಳಿಗೂ ಅವರ ಪ್ರತಿಕ್ರಿಯೆ ಒಂದೇ ಆಗಿರುತ್ತದೆ ಎಂದು ಆಸ್ಟ್ರಿಯನ್ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಎರಡನೇ ಅಧ್ಯಯನವು ವಿಭಿನ್ನ ಭಾಗವಹಿಸುವವರೊಂದಿಗೆ, ಇಪ್ಪತ್ತು ಜನರನ್ನು ಫೇಸ್‌ಬುಕ್‌ ಅನ್ನು ವೀಕ್ಷಿಸುವಂತೆ ಹೇಳಿತು. ಸ್ಟೇಟಸ್ ಅಪ್‌ಡೇಟ್, ಸ್ನೇಹಿತರೊಂದಿಗೆ ಚಾಟ್ ಮಾಡುವುದು, ಅವರ ಸುದ್ದಿ ಮಾಹಿತಿಗಳನ್ನು ಸ್ಕ್ಯಾನ್ ಮಾಡುವುದು ಹೀಗೆ ಮುಂತಾದ ಕ್ರಿಯೆಗಳನ್ನು ನಡೆಸಿದರು. ಇನ್ನೊಂದು ಇಪ್ಪತ್ತು ಜನರ ಗುಂಪು ಯಾವುದೇ ಸಾಮಾಜಿಕ ತಾಣಕ್ಕೆ ಭೇಟಿ ನೀಡದೇ, ಇಂಟರ್ನೆಟ್ ಅನ್ನು ಬ್ರೌಸ್ ಮಾಡಿತು. ಮೂರನೇ ಗುಂಪಿಗೆ ಯಾವುದೇ ನಿರ್ಬಂಧನೆಯನ್ನು ಹಾಕಲಿಲ್ಲ. ನಂತರ ಅವರ ಸಮಯ ವಿನಿಯೋಗ ಹೇಗೆ ಪ್ರಯೋಜನಕಾರಿಯಾಯಿತು ಎಂದು ಕೇಳಲಾಯಿತು.

ಫೇಸ್‌ಬುಕ್ ಬಳಸಿದ ತಂಡವು ತಮ್ಮ ಸಮಯವನ್ನು ನಾವು ವೃಥಾ ಕಳೆದೆವೆಂದು ಭಾವಿಸಿದೆವು ಎಂಬುದನ್ನು ಸ್ಪಷ್ಟಪಡಿಸಿದರು. ನೀವು ಇದನ್ನು ಉತ್ತಮವೆಂದು ಪರಿಗಣಿಸಿದರೂ ನಂತರದ ಪರಿಣಾಮ ನಿಮ್ಮ ಮೇಲೆ ಗಾಢವಾಗಿರುತ್ತದೆಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಆದರೆ ಫೇಸ್‌ಬುಕ್‌ನ ಎಲ್ಲಾ ಮಾಹಿತಿಗಳು ಈ ಅಂಶವನ್ನು ಋಣಾತ್ಮಕವಾಗಿ ಪರಿಗಣನೆಯಾಗುವುದಿಲ್ಲ. ಏಕೆಂದರೆ ಕೇವಲ ವಿನೋದಕ್ಕಾಗಿ ಫೇಸ್‌ಬುಕ್ ಅನ್ನು ಅವಲಂಬಿಸುವವರು ಫೇಸ್‌ಬುಕ್‌ನಿಂದ ಋಣಾತ್ಮಕ ಅಂಶವನ್ನೇ ಪಡೆದುಕೊಳ್ಳುತ್ತಾರೆ ಆದರೆ ಈ ಸಾಮಾಜಿಕ ಜಾಲತಾಣವನ್ನು ಧನಾತ್ಮಕವಾಗಿ ಕೂಡ ಬಳಸಬಹುದಾಗಿದೆ. ಸಮಾಜದ ಒಂದು ಭಾಗವಾಗಿ ಕೂಡ ಇದು ಒಮ್ಮೊಮ್ಮೆ ಕೆಲಸ ಮಾಡುತ್ತದೆ. ಆದ್ದರಿಂದಲೇ ಫೇಸ್‌ಬುಕ್‌ನ ಪ್ರೇಮಿಗಳು ವಿಶ್ವದಾದ್ಯಂತ ವಿಸ್ತಾರವಾಗಿ ಹರಡಿರುವುದು.

ಒಟ್ಟಿನಲ್ಲಿ ಫೇಸ್‌ಬುಕ್ ಬಳಕೆ ಕೆಟ್ಟದ್ದು ಹೌದು ಒಳ್ಳೆಯದೂ ಹೌದು. ಅದನ್ನು ಬಳಸುವವರ ಮೇಲೆ ಈ ಎರಡೂ ಅಂಶಗಳು ಆಧರಿಸಿವೆ ಎಂಬುದನ್ನು ಗಮನಿಸಬೇಕಾಗಿದೆ.

Read more about:
English summary
This article tells about Why You Feel Terrible After Spending Too Much Time On Facebook.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot