ನಿಮ್ಮ ಕಿವಿಗೆ ಇಂಪು ನೀಡಲಿವೆ ಈ ಸಾವಿರ ರೂ. ಒಳಗಿನ ಇಯರ್‌ಫೋನ್‌ಗಳು..!

  By GizBot Bureau
  |

  ಒಂದು ಇಯರ್ ಫೋನ್ ಖರೀದಿಸಬೇಕು ಎಂದು ಹೊರಟರೆ ಸಾಕಷ್ಟು ಗೊಂದಲ ಆಗೋದು ಸರ್ವೇಸಾಮಾನ್ಯ. ಯಾಕೆಂದರೆ ಮಾರುಕಟ್ಟೆ ಯಲ್ಲಿ ಕಳೆದ ಹಲವು ವರ್ಷಗಳಲ್ಲಿ ಬಿಡುಗಡೆಗೊಂಡಿರುವ ಇಯರ್ ಫೋನ್ ಗಳಿಗೆ ಲೆಕ್ಕಮಿತಿವಿಲ್ಲ. ಹೆಚ್ಚಿನ ತಿಳುವಳಿಕೆ ಇಲ್ಲದೆ ಇಯರ್ ಫೋನ್ ಖರೀದಿಸಲು ಹೋದರೆ ಯಾವುದು ಖರೀಸಿದಬೇಕು, ಯಾವುದು ಉತ್ತಮವಾದದ್ದು ಎಂದು ತಿಳಿಯದೆ ಅಂಗಡಿಯವರು ಹೇಳಿದ್ದನ್ನೆ ಬೆಸ್ಟ್ ಎಂದು ಭಾವಿಸಿ ಯಾವುದೋ ಒಂದನ್ನ ಖರೀದಿಸುವಂತಾಗುತ್ತದೆ.

  ನಿಮ್ಮ ಕಿವಿಗೆ ಇಂಪು ನೀಡಲಿವೆ ಈ ಸಾವಿರ ರೂ. ಒಳಗಿನ ಇಯರ್‌ಫೋನ್‌ಗಳು..!

  ಆದರೆ ನಿಮ್ಮ ಹವ್ಯಾಸ ಮತ್ತು ಅಗತ್ಯತೆಯನ್ನು ತಿಳಿದು ಒಂದು ಇಯರ್ ಫೋನ್ ಖರೀದಿಸಲು ಮುಂದಾದರೆ ಅದು ನಿಜಕ್ಕೂ ಉತ್ತಮ ಆಯ್ಕೆಗೆ ಸಹಕಾರಿಯಾಗಿರುತ್ತದೆ. ಈಗಂತೂ ಮಾರುಕಟ್ಟೆಯಲ್ಲಿ 200 ರುಪಾಯಿಯಿಂದ ಹಿಡಿದು 30,000 ರುಪಾಯಿ ಬೆಲೆಬಾಳುವ ಇಯರ್ ಫೋನ್ ಗಳೂ ಕೂಡ ಲಭ್ಯವಿದೆ. ಆದರೆ ಕೇವಲ ಒಂದು ಸಾವಿರ ರೂಪಾಯಿ ಒಳಗಿನ ಇಯರ್ ಫೋನ್ ಒಂದನ್ನ ನೀವು ಖರೀದಿಸಬೇಕು ಎಂದು ಆಲೋಚಿಸುತ್ತಿದ್ದರೆ ಈ ಲೇಖನವನ್ನು ಒಮ್ಮೆ ಪೂರ್ತಿ ಓದಿ.. 1000 ರುಪಾಯಿ ಒಳಗಿನ 10 ಇಯರ್ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  1. ಸೋನಿ MDR-EX150AP

  ಈಗಾಗಲೇ ಹೇಳಿರುವಂತೆ ಅವರ ಅಗತ್ಯತೆಗೆ ಅನುಗುಣವಾಗಿ ಅವರ ಇಯರ್ ಫೋನಿನ ಬಯಕೆಯು ವಿಭಿನ್ನವಾಗಿರುತ್ತದೆ. ಆದರೆ ಈ ಪಟ್ಟಿಯಲ್ಲಿ ನಾವು ಮೊದಲು ಆದ್ಯತೆ ನೀಡುತ್ತಿರುವ ಇಯರ್ ಫೋನ್ ಎಂದರೆ ಅದು ಸೋನಿ MDR-EX150AP. ಯಾಕೆಂದರೆ ಇದು ಬಹಳ ಲೈಟ್ ವೈಟ್ ಆಗಿದೆ ಮತ್ತು ಎಷ್ಟು ಹೊತ್ತು ಧರಿಸಿದರೂ ಕೂಡ ಭಾರ ಅನ್ನಿಸುವುದಿಲ್ಲ ಜೊತೆಗೆ ಕಿರಿಕಿರಿಯೂ ಉಂಟಾಗುವುದಿಲ್ಲ. ಇದು ನಿಮ್ಮ ಕಿವಿಯಲ್ಲಿ ಸರಿಯಾಗಿ ಹೊಂದಿಕೊಂಡಂತೆ ಕೂತುಕೊಳ್ಳುತ್ತೆ.
  ಇದರಲ್ಲಿ 3.5 ಎಂಎಂ ಜಾಕ್ ಇದೆ.ಮೆಟಲ್ ಸಾಲಿಡ್ ಇರೋದ್ರಿಂದ ಬಹಳ ನಾಜೂಕಾದ ಇಯರ್ ಫೋನ್ ಅನ್ನಿಸುತ್ತದೆ. ಆಡಿಯೋ ಕ್ವಾಲಿಟಿ ಬಗ್ಗೆ ಮಾತನಾಡುವುದಾದರೆ, ಸೋನಿ MDR-EX150AP ನಲ್ಲಿ 9 mm ನಿಯೋಡೈಮಿಯಮ್ ಡ್ರೈವರ್ ಗಳನ್ನು ಒಳಗೊಂಡಿದೆ ಮತ್ತು ಇದು ಬ್ಯಾಲೆನ್ಸ್ ಆಗಿ ಆಡಿಯೋ ಬರಲು ನೆರವಾಗುತ್ತದೆ. ಈ ಇಯರ್ ಫೋನಿನ ಆಡಿಯೋ ಕ್ವಾಲಿಟಿ ಉತ್ತಮವಾಗಿರಲು ಇದುವೇ ಕಾರಣ. ಕೇವಲ ಸೌಂಡ್ ಗಾಗಿ ಮಾತ್ರವಲ್ಲದೆ ಉತ್ತಮವಾಗಿ ಬಿಲ್ಟ್ ಮಾಡಿರುವ ಫೋನ್ ಕೂಡ ನಿಮಗೆ ಬೇಕು ಅನ್ನುವುದಾದರೆ ಖಂಡಿತ ಸೋನಿ MDR-EX150AP ನ್ನು ಆಯ್ಕೆ ಮಾಡಿಕೊಳ್ಳಬಹುದು.

  ಅಮೇಜಾನ್ ನಲ್ಲಿ ₹849 ಕ್ಕೆ ಲಭ್ಯವಿದೆ.

  2. ಬೋಟ್ ಬಾಸ ಹೆಡ್ಸ್ (Boat BassHeads)

  ಕೇವಲ ಕಡಿಮೆ ಬಜೆಟ್ ನ್ನು ಮಾತ್ರ ಗಣನೆಗೆ ತೆಗೆದುಕೊಳ್ಳದೆ ಸಾವಿರ ರೂಪಾಯಿ ಒಳಗೆ ಸಿಗುವ ಉತ್ತಮ ಇಯರ್ ಫೋನ್ ನ ಪಟ್ಟಿ ತಯಾರಿಸುವುದಾದರೆ ಇದು ಕೂಡ ಈ ಪಟ್ಟಿಯಲ್ಲಿ ಸೇರಿಸಲೇಬೇಕಾದ ಮತ್ತೊಂದು ಇಯರ್ ಫೋನ್ ಆಗಿರುತ್ತದೆ. ಹೆಸರೇ ಸೂಚಿಸುವಂತೆ ಇದು ಹೈ bass ನ್ನು ಇದು ಹೊಂದಿರುತ್ತದೆ. 10mm ಡ್ರೈವರ್ ನ್ನು ಹೊಂದಿದೆ.ಸ್ಟೋರಿಯೋ ಸೌಂಡ್ ಎಫೆಕ್ಟ್ ಇದೆ. ಶಬ್ದಮಾಲಿನ್ಯವಿರುವ ಪ್ರದೇಶದಲ್ಲೂ ಉತ್ತಮ ರೀತಿಯಲ್ಲಿ ನೀವು ಕೇಳುವ ಹಾಡನ್ನ ಎಂಜಾಯ್ ಮಾಡುವುದಕ್ಕೆ ಇದು ಅವಕಾಶ ಕಲ್ಪಿಸಿಕೊಡುತ್ತದೆ.
  ಯಾಕೆಂದರೆ ಇದರಲ್ಲಿ ನಾಯ್ಸ್ ಕ್ಯಾನ್ಸಲೇಷನ್ ವೈಶಿಷ್ಟ್ಯ ವಿದೆ.ಪ್ಲೇ/ಪಾಸ್ ಬಟನ್ ಸೌಲಭ್ಯ ಇದರಲ್ಲಿ ಇದೆ. ಈ ಬೆಲೆಗೆ ಮೆಟಲ್ ಇಯರ್ ಬಡ್ಸ್ ನ್ನು ನಾವು ಕಡಿಮೆ‌ಇಯರ್ ಫೋನ್ ಗಳಲ್ಲಿ ಗಮನಿಸಬಹುದು. ಇದೇ ಕಾರಣಕ್ಕೆ ಇದು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ ಮತ್ತು ಅನೇಕರು ಈ ಸಮಸ್ಯೆಯನ್ನೆ ಹೇಳುತ್ತಾರೆ.

  ಯಾಕೆಂದರೆ ಸ್ವಲ್ಪ ಸಮಯದ ನಂತರ ಮೆಟಲ್ ಕೇಸ್ ಹಾಳಾಗುತ್ತದೆ.ಕಡಿಮೆ ಬೆಲೆಯ ಇಯರ್ ಫೋನ್ ಗಾಗಿ ನೀವು ಹುಡುಕಾಡುತ್ತಿದ್ದರೆ 500 ರುಪಾಯಿ ಆಸುಪಾಸಲ್ಲೆ ನಿಮಗೆ ಇದು ಸಿಗುತ್ತದೆ.
  ಅಮೇಜಾನ್ ನಲ್ಲಿ :₹549 ಕ್ಕೆ ಲಭ್ಯವಿದೆ.

  3. ಎಂಐ ಇಯರ್ ಫೋನ್ 

  ಶಿಯೋಮಿ ಕಂಪೆನಿಯು ಯಾವಾಗಲೂ ಗುಣಮಟ್ಟದ ವಸ್ತುಗಳನ್ನು ಕಡಿಮೆ ಬೆಲೆಗೆ ತಯಾರಿಸುವುದಕ್ಕೆ ಹೆಸರುವಾಸಿ. 1000 ರುಪಾಯಿ ಒಳಗೆ ಖರೀದಿಸಬಹುದಾದ ಬೆಸ್ಟ್ ಇಯರ್ ಫೋನ್ ಗಳಲ್ಲಿ ಎಂಐ ಕೂಡ ಒಂದು. ಇದು ತುಂಬಾ ಲೈಟ್ ಆಗಿರುತ್ತದೆ ಅಂದರೆ ಕೇವಲ 14 ಗ್ರಾಂ ನಷ್ಟಿರುತ್ತದೆ.

  ಸೌಂಡ್ ಕ್ವಾಲಿಟಿ ಬಗ್ಗೆ ಹೇಳುವುದಾದರೆ ಇದು ಡುಯಲ್ 10mm ಡ್ರೈವರ್ಸ್ ನ್ನು ಹೊಂದಿದ್ದು ಬೆಸ್ಟ್ ಸೌಂಡ್ ಎಫೆಕ್ಟ್ ನೀಡುತ್ತದೆ. 20-20,000 Hz ಲಿಸನಿಂಗ್ ಫ್ರೀಕ್ವಾನ್ಸಿಯನ್ನು ಇದು ಹೊಂದಿದೆ. ಕಾಲ್ ರಿಸೀವ್ ಮತ್ತು ಕಟ್ ಮಾಡಲು ಬಟನ್‌ ಸೌಲಭ್ಯವಿದೆ. ಬೆಳ್ಳಿ ಮತ್ತು ಕಪ್ಪು ಎರಡು ಬಣ್ಣಗಳ ವೇರಿಯಂಟ್ ನಲ್ಲಿ ಇದು ನಿಮಗೆ ಲಭ್ಯವಿದೆ.

  ಅಮೇಜಾನ್ ನಲ್ಲಿ ₹699 ಕ್ಕೆ ಲಭ್ಯವಿದೆ

  4. ಜೆಬಿಎಲ್ ಸಿ100ಎಸ್ ಐ

  ಜೆಬಿಎಲ್ ಕಂಪೆನಿ ಆಡಿಯೋ ಡಿವೈಸ್ ಗಳಿಗಾಗಿ ಫೇಮಸ್ ಆಗಿರುವ ಕಂಪೆನಿಯಾಗಿದೆ. ಜೆಬಿಎಲ್ C100SI ಲೈಟ್ ವೈಟ್ ಆಗಿದ್ದು ಬಹಳ ಕಂಫರ್ಟ್ ಆಗಿರುತ್ತದೆ. ನಿಮ್ಮ ಕಿವಿಗಳಿಗೆ ಇದು ಆರಾಮದಾಯಕ ಅನುಭವವನ್ನು ನೀಡುತ್ತದೆ. ಇದು ಮೆಟಲ್ ಅಲ್ಲ ಪ್ಲಾಸ್ಟಿಕ್ ಕೇಸನ್ನು ಹೊಂದಿರುತ್ತದೆ. ಹಾಗಾಗಿ ಇದು ಹೆಚ್ಚು ಬಾಳಿಕೆ ಬರುತ್ತೆ.

  ಜೆಬಿಎಲ್ 9mm ಡ್ರೈವರ್ ನ್ನು ಹೊಂದಿದೆ. ಬೆಲೆಗೆ ತಕ್ಕುದಾದ ಸೌಂಡ್‌ಎಫೆಕ್ಟ್ ನ್ನು ಇದು ನೀಡುತ್ತದೆ.

  ಅಮೇಜಾನ್ ನಲ್ಲಿ ₹799ಕ್ಕೆ ಲಭ್ಯವಿದೆ

  5. Sennheiser CX 180

  ಎಲ್ಲಾ ಉತ್ತಮ ಕಾರಣಗಳಿಂದಾಗಿ ಸದ್ಯ ಮಾರುಕಟ್ಟೆಯಲ್ಲಿ ಸಾವಿರ ರುಪಾಯಿ ಒಳಗೆ ಹೆಚ್ಚು ಪ್ರಸಿದ್ದಗೊಂಡಿರುವ ಇಯರ್ ಫೋನ್ ಇದು. ಡಿಸೈನ್ ವಿಚಾರದಲ್ಲಿ ಹೆಚ್ಚು ಅಟ್ರ್ಯಾಕ್ಟೀವ್ ಆಗಿಲ್ಲದೆ ಇದ್ದರೂ ಕೂಡ ಸೌಂಡ್ ಎಫೆಕ್ಟ್ ಅಧ್ಬುತವಾಗಿದೆ.ಇದು ಪ್ಲಾಸ್ಟಿಕ್ ನಿಂದ ತಯಾರಿಸಿರುವ ಇಯರ್ ಫೋನ್ ಆಗಿದೆ ಹಾಗಾಗಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಈ ಇಯರ್ ಫೋನ್ ನ ಒಂದು ಪ್ರಮುಖ ಸಮಸ್ಯೆ ಯೆಂದರೆ ಇದರ ವಯರ್. ಇದು ಒಂದಕ್ಕೊಂದು ಸುತ್ತಿಕೊಳ್ಳು ವುದು ಮತ್ತು ಅದನ್ನು ಬಿಡಿಸುವುದಕ್ಕೆ ಸಮಯ ಕಳೆಯಬೇಕಾದ ಅನಿವಾರ್ಯತೆಯನ್ನು ಎದುರಿಸುವಂತೆ ಮಾಡುತ್ತದೆ.

  ನಾಯ್ಸ್ ರಿಡಕ್ಷನ್ ಕೆಪಾಸಿಟಿ ಇರೊದ್ರಿಂದ‌ ಹೆಚ್ಚು ಶಬ್ದವಿರುವ ಪ್ರದೇಶದಲ್ಲೂ ನಿಮ್ಮ ಕೇಳುವಿಕೆಗೆ ಇದು ಯಾವುದೇ ತೊಂದರೆ ನೀಡದೆ ಅತ್ಯುತ್ತಮವಾಗಿ ಸಹಕರಿಸುತ್ತದೆ. ನೀವು ಇಯರ್ ಫೋನ್ ಬಳಸಿ ಕರೆಗಳನ್ನು ಮಾಡುವುದಿಲ್ಲ ಎಂದಾದರೆ ಇದು ಉತ್ತಮ ಆಯ್ಕೆಯಾಗಬಲ್ಲದು.

  ಅಮೇಜಾನ್ ನಲ್ಲಿ ₹749ಕ್ಕೆ ಲಭ್ಯವಿದೆ

  6. ಹೌಸ್ ಆಫ್ ಮರ್ಲೆ ಜಮೈಕಾ ಇಎಮ್ -ಜೆಇ-041-ಎಸ್ ಬಿ

  ಇದು ಭಾರತದಲ್ಲಿ ಅತೀ ಹೆಚ್ಚು ಪ್ರಸಿದ್ದಿಯಾಗಿರುವ ಬ್ರ್ಯಾಂಡ್ ಅಲ್ಲ. ಆದರೆ ಯುಎಸ್ ಮತ್ತು ಯುಕೆಗಳಲ್ಲಿ ಅತೀ ಬಳಕೆಯಲ್ಲಿರುವ ಇಯರ್ ಫೋನ್ ಗಳಲ್ಲಿ ಒಂದೆನಿಸಿದೆ.ಈ ಕಂಪೆನಿಯು ಯಾವಾಗಲೂ ಆಡಿಯೋ ಪ್ರೊಡಕ್ಟ್ ಗಳ ಮೇಲೆ ತನ್ನ ಗಮನ ಕೇಂದ್ರೀಕೃತ ಗೊಳಿಸಿದೆ‌ ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಸೌಂಡ್‌ ನೀಡುವ ಇಯರ್ ಫೋನ್ ಗಳನ್ನ ಬಿಟ್ಟಿದೆ. ಇದು ಮಲ್ಟಿ ಕಲರ್ ಕೇಬಲ್‌ನ್ನು ಹೊಂದಿದ್ದು ಡ್ರಮ್ ಶೇಪ್ ನ ಇಯರ್ ಬಡ್ಸ್ ಹೊಂದಿದ್ದು ಮರದ ವುಡನ್ ಫಿನಿಶಿಂಗ್ ನ್ನು ಹೊಂದಿರುತ್ತದೆ. ಇದು 8 mm ಮೂವಿಂಗ್ ಕಾಯಿಲ್ ಡ್ರೈವರ್ ಹೊಂದಿದೆ.

  ಅಮೇಜಾನ್ ನಲ್ಲಿ ₹899ಕ್ಕೆ ಲಭ್ಯವಿದೆ

  7. ಆಡಿಯೋ-ಟೆಕ್ನಿಕಾ ATH-CLR100BK

  ಇದು ಕೂಡ ಕಡಿಮೆ‌ ಬೆಲೆಯಲ್ಲಿ ಅತ್ಯುತ್ತಮ ಇಯರ್ ಫೋನ್ ಗಳನ್ನ ತಯಾರಿಸುವ ಮತ್ತೊಂದು ಕಂಪೆನಿ ಆಗಿದೆ. ಬಹಳ ಲೈಟ್ ವೈಟ್ ಆಗಿರುವ ಉತ್ತಮ ಗುಣಮಟ್ಟದ ಸಿಲಿಕಾನ್‌ ಟಿಪ್ ನ್ನು ಹೊಂದಿದ್ದು ಇದು ಕಿವಿಯಲ್ಲಿ ಸರಿಯಾಗಿ ಕೂರುತ್ತದೆ. ಇದು ಎಲ್ ಶೇಪಿನ ಕನೆಕ್ಟರ್ ನ್ನು ಹೊಂದಿದ್ದು ನಾರ್ಮಲ್‌ಇಯರ್ ಫೋನಿಗಿಂತ‌ ಹೆಚ್ಚು ಬಾಳಿಕೆ ಬರುತ್ತದೆ. ಇದು ಪ್ಲಾಸ್ಟಿಕ್ ರೋಲಿಂಗ್ ಕೇಸ್ ನ್ನು ಹೊಂದಿದೆ ಹಾಗಾಗಿ ಹೆಚ್ಚು ಸುರುಳಿ ಸುತ್ತದೆ ಇದನ್ನು ಇತರೆಡೆಗೆ ತೆಗೆದುಕೊಂಡು ಹೋಗಬಹುದು.

  ಈ ಇಯರ್ ಫೋನ್ 8.5 mm ಡ್ರೈವರ್ ನ್ನು ಹೊಂದಿದೆ ಮತ್ತು ಬಳಕೆದಾರನಿದೆ ಉತ್ತಮ ಆಡಿಯೋ ಕ್ವಾಲಿಟಿಯ ಅನುಭವ ನೀಡುತ್ತದೆ. ಇದು ಹೆಚ್ಚಿನ ಎಕೋಸ್ಟಿಕ್ ರೆಸಲ್ಯೂಷನ್ ಹೊಂದಿದೆ. ಅದೇ‌ಕಾರಣಕ್ಕೆ ಈ ಇಯರ್ ಫೋನ್ ಮೂಲಕ ಕೇಳಿಸಿಕೊಳ್ಳುವ ಶಬ್ದವು ಸ್ಪಷ್ಟವಾಗಿ, ಜೋರಾಗಿ, ಕ್ಲಿಯರ್ ಆಗಿ ಇರುತ್ತದೆ.

  ಅಮೇಜಾನ್ ನಲ್ಲಿ ₹571ಕ್ಕೆ ಲಭ್ಯವಿದೆ

  8. ಡಿಫಂಕ್ ಗೋ ಮ್ಯೂಸಿಕ್ ಇಯರ್ ಫೋನ್ 

  ಡಿಫಂಕ್ ಗೋ ಒಂಸು ಈ ಲಿಸ್ಟ್ ನಲ್ಲಿರುವ ಒಂದು ಉತ್ತಮ ಇಯರ್ ಫೋನ್ ಆಗಿದೆ. ಇದರ ಇಯರ್ ಬಡ್ ಗಳು ಮೃದುವಾದ ಸಿಲಿಕಾನ್ ಪ್ಲಗ್ ಹೊಂದಿದೆ ಮತ್ತು ಈ ಬೆಲೆಗೆ ಇಷ್ಟು ಎಕೋಸ್ಟಿಕ್ ಐಸೋಲೆಷನ್ ಹೊಂದಿರುವ ಇಯರಗ ಫೋನ್ ಇದಾಗಿದೆ. ಇದು ಕೇವಲ ಉತ್ತಮ ಶಬ್ದ ಬರುವ ಇಯರ್ ಫೋನ್ ಮಾತ್ರವಲ್ಲ ಬದಲಾಗಿ ಹೊರಗಿನ ಶಬ್ದವನ್ನೂ ನಿಯಂತ್ರಿಸಿ ಬಳಕೆದಾರನಿಗೆ ಉತ್ತಮ ಅನುಭವವನ್ನು ನೀಡುತ್ತದೆ.

  ಈ ಇಯರ್ ಫೋನಿಬ ಡಿಸೈನ್ ವಿಚಾರವನ್ನು ಪ್ರಸ್ತಾಪಿಸುವುದಾದರೆ, ಇದು ಸಂಪೂರ್ಣ ಸಿಲಿಕಾನ್ ನಿಂದ ಮಾಡಲ್ಪಟ್ಟಿರುತ್ತದೆ ಹಾಗಾಗಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ.

  ಅಮೇಜಾನ್ ನಲ್ಲಿ ₹872ಕ್ಕೆ ಲಭ್ಯವಿದೆ

  9. 1MORE Piston Fit

  ಕಳೆದ ಕೆಲವು ತಿಂಗಳುಗಳಿಂದ ಅತೀ ಹೆಚ್ಚು ಪ್ರಸಿದ್ದಿಯಾಗಿರುವ ಈ ಬಜೆಟ್ ನ ಇಯರಗ ಫೋನ್ ಗಳ ಪಟ್ಟಿಯಲ್ಲಿ ಸೇರುವ ಮತ್ತೊಂದು ಇಯರ್ ಫೋನ್ ಎಂದರೆ ಅದು 1ಮೋರ್ Piston Fit. ಇದು ಬಾಳಿಕೆ ಬರುವ ಡಿಸೈನ್ ಹೊಂದಿದೆ ಮತ್ತು ಸೌಂಡ್ ಕ್ವಾಕಿಟಿಯಲ್ಲಿ ಬಹಳ ಶ್ರೀಮಂತ ವಾಗಿದೆ.ಮೆಟಲ್ ಹೌಸಿಂಗ್ ಇದ್ದು ಬಾಳಿಕೆ ಬರುವಂತ ಕೇಬಲ್ ಗಳನ್ನು ಇದು ಹೊಂದಿದೆ. ಈ ಪಟ್ಟಿಯಲ್ಲಿರುವ ಇತರೆ ಫೋನ್ ಗಳಿಂಮಗಿಂತ ಇದು ಸ್ವಲ್ಪ ಭಾಗವಾಗಿದೆ. 22.7 ಗ್ರಾಂ ತೂಕವನ್ನು ಇದು ಹೊಂದಿದೆ. ಇದು 10ಎಂಎಂ ಡ್ರೈವರ್ ನ್ನು ಇದು ಹೊಂದಿದೆ. ಅಷ್ಟೇ ಅಲ್ಲ ಡ್ರೈವರ್ ಡುಯಲ್ ಲೇಯರ್ ನ್ನು ಹೊಂದಿದೆ.

  ಅಮೇಜಾನ್ ನಲ್ಲಿ ₹849ಕ್ಕೆ ಲಭ್ಯವಿದೆ

  10. ಸೌಂಡ್ ಮ್ಯಾಜಿಕ್ ಇಎಸ್ 18ಎಸ್

  ಈ ಲಿಸ್ಟ್ ನಲ್ಲಿರುವ ಕೊನೆಯ ಇಯರ್ ಫೋನ್ ಇದು. ಇದರಲ್ಲಿ 10 mm ನ ನಿಯೋಡೈಮಿಯಮ್ ಡ್ರೈವರ್ ಇದೆ. ಎಲ್ಲಾ ರೀತಿಯ ಮ್ಯೂಸಿಕ್ ಗೂ ಹೊಂದಿಕೆಯಾಗುವಂತ ಔಟ್ ಪುಟ್ ನೀಡುವ ಸಾಮರ್ಥ್ಯ ವನ್ನು ಇದು ಹೊಂದಿದೆ. ಇದೂ ಕೂಡ ಅತ್ಯಂತ ಅಧ್ಬುತವಾದ ಸೌಂಡ್ ಎಫೆಕ್ಟ್ ನೀಡಲು ಸಹಕಾರಿಯಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  10 Best Earphones Under 1000 INR You Can Buy. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more