ಆಪಲ್ ವಾಚ್ 4 ಸೆಲ್ಯುಲರ್ ಈ 11 ದೇಶಗಳಲ್ಲಿ ದೊರೆಯುತ್ತಿದೆ ಭಾರೀ ಕಡಿಮೆ ಬೆಲೆಗೆ..!
ಆಪಲ್ ವಾಚ್ ಸರಣಿ ಭಾರತಕ್ಕೆ ಬಂದಿದೆ. ಭಾರತದಲ್ಲಿ ಆಪಲ್ ಡಿವೈಸ್ ಗಳು ಸ್ವಲ್ಪ ದುಬಾರಿಯೇ ಆಗಿರುತ್ತದೆ. ದುಬಾರಿ ಬೆಲೆಗೆ ಪ್ರಮುಖ ಕಾರಣ ಸರ್ಕಾರದ ಕೆಲವು ತೆರಿಗೆಯೇ ಆಗಿದೆ. ವಾಚ್ ಸರಣಿ 4 ಎರಡು ಆಯ್ಕೆಗಳಲ್ಲಿ ಲಭ್ಯ- ಜಿಪಿಎಸ್ ಮಾಡೆಲ್ ಮತ್ತು ಜಿಪಿಎಸ್ + ಸೆಲ್ಯುಲರ್ ಮಾಡೆಲ್. ಇನ್ನು ಎರಡು ಸೈಜ್ ಗಳು ಕೂಡ ಇದೆ- 40mm ಮತ್ತು 44mm. ಒಂದು ವೇಳೆ ನೀವು ಯುಎಸ್ ನಲ್ಲಿ ಖರೀದಿಸಿ ಭಾರತದಲ್ಲಿ ಬಳಕೆ ಮಾಡುವುದಾದರೆ ಆಪಲ್ ವಾಚ್ 4 ಸೆಲ್ಯುಲರ್ ಕಾರ್ಯ ನಿರ್ವಹಿಸುವುದೇ ಇಲ್ಲ.

ಆಪಲ್ ವಾಚ್ ಸಿರೀಸ್ 4 ಜಿಪಿಎಸ್ + ಸೆಲ್ಯುಲರ್ (40-mm) ಆರಂಭಿಕ ಬೆಲೆ ರೂ. 49,900 ಮತ್ತು ಗರಿಷ್ಟ ರೂ. 76,900 ಆಗಿದೆ. ಯಾವ ಬ್ಯಾಂಡ್ ನ್ನು ಆಯ್ಕೆ ಮಾಡಿದ್ದೀವಿ ಎಂಬುದನ್ನು ಆಧರಿಸಿರುತ್ತದೆ. (12 ಬ್ಯಾಂಡ್ ವೇರಿಯಂಟ್ ಗಳು ಲಭ್ಯವಿದೆ.) ಇನ್ನೊಂದೆಡೆ 44-mm ಕೇಸ್ ಸೈಜ್ ನ ಆರಂಭಿಕ ಬೆಲೆರೂ. 52,900 ಮತ್ತು ಇದರ ಬೆಲೆ ರೂ. 80,900 ವರೆಗೂ ವಿಭಿನ್ನ ಬ್ಯಾಂಡ್ ನ್ನು ಆಧರಿಸಿ ಇರುತ್ತದೆ. (12 ಬ್ಯಾಂಡ್ ವೇರಿಯಂಟ್ ಗಳು ಲಭ್ಯ).
ಸೂಚನೆ: ಇಲ್ಲಿ ಹೇಳಲಾಗಿರುವ ಬೆಲೆಯಲ್ಲಿ VAT ನ್ನು ಸೇರಿಸಲಾಗಿಲ್ಲ. ಇದು ದೇಶದಿಂದ ದೇಶಕ್ಕೆ ವಿಭಿನ್ನವಾಗಿರುತ್ತದೆ ಉದಾಹರಣೆಗೆ ಯುಕೆಯಲ್ಲಿ ಶೇ.20 ರಷ್ಟು VAT ಇದೆ. ಭಾರತದಲ್ಲಿ ಆಪಲ್ ವಾಚ್ 4 ಸೆಲ್ಯುಲರ್ ನ ಬೆಲೆ ರೂ. 49,900. ಇನ್ನುಳಿದ ದೇಶಗಳಲ್ಲಿ ಅದರ ಬೆಲೆಯನ್ನು ಈ ಕೆಳಗೆ ತಿಳಿಸಲಾಗಿದೆ.

ಆಸ್ಟ್ರೇಲಿಯಾ (ಅಂದಾಜು ಆರಂಭಿಕ ಬೆಲೆ ರೂ.39,100 ಮತ್ತು ಹೆಚ್ಚುಕಡಿಮೆ ರೂ. 10,800 ಕಡಿಮೆ)
ಆಸ್ಟ್ರೇಲಿಯಾದಲ್ಲಿ ಆಪಲ್ ವಾಚ್ 4 ಸೆಲ್ಯುಲರ್ ನ ಬೆಲೆ 749 ಆಸ್ಟ್ರೇಲಿಯನ್ ಡೋಲಾ. ಅದನ್ನು ಭಾರತೀಯ ಬೆಲೆಯಲ್ಲಿ ಹೇಳುವುದಾದರೆ ಅಂದಾಜು ರೂ. 39,100.

ದುಬೈ ಮತ್ತು UAE (ಆರಂಭಿಕ ಬೆಲೆ ರೂ 40,000 ಮತ್ತು ಹೆಚ್ಚು ಕಡಿಮೆ ರೂ. 9,900 ಕಡಿಮೆ)
UAE ನಲ್ಲಿ (ದುಬೈ ಕೂಡ ಸೇರಿದಂತೆ), ಆಪಲ್ ವಾಚ್ 4 ಸೆಲ್ಯುಲರ್ ನ ಬೆಲೆ 1999 UAE ಧೀರ್ಹಂ ಇದನ್ನು ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ ಅಂದಾಜು ರೂ. 40,000.

ಜಪಾನ್ (ಆರಂಭಿಕ ಬೆಲೆ ರೂ. 37,100 ಮತ್ತು ಹೆಚ್ಚು ಕಡಿಮೆ ರೂ. 12,800 ಕಡಿಮೆ)
ಜಪಾನಿನಲ್ಲಿ ಆಪಲ್ ವಾಚ್ 4 ಸೆಲ್ಯುಲರ್ ನ ಬೆಲೆ 56,800 ಯೆನ್. ಭಾರತೀಯ ಬೆಲೆಯಲ್ಲಿ ಅಂದಾಜಿಸುವುದಾದರೆ ರೂ. 37,100.

ಸಿಂಗಾಪುರ (ಆರಂಭಿಕ ಬೆಲೆ ರೂ. 40,000 ಮತ್ತು ಹೆಚ್ಚು ಕಡಿಮೆ ರೂ. 9,900 ಕಡಿಮೆ)
ಸಿಂಗಾಪುರದಲ್ಲಿ ಆಪಲ್ ವಾಚ್ 4 ಸೆಲ್ಯುಲರ್ ನ ಬೆಲೆ 749 ಸಿಂಗಾಪುರ ಡಾಲರ್. ಭಾರತೀಯ ಬೆಲೆಯಲ್ಲಿ ಹೇಳುವುದಾದರೆ ಅಂದಾಜು ರೂ. 40,000.

ಸ್ವಿಝರ್ ಲ್ಯಾಂಡ್ (ಆರಂಭಿಕ ಬೆಲೆ ರೂ. 41,000 ಮತ್ತು ಹೆಚ್ಚು ಕಡಿಮೆ ರೂ. 8,900 ಕಡಿಮೆ )
ಜಪಾನ್ ನಲ್ಲಿ ಆಪಲ್ ವಾಚ್ 4 ಸೆಲ್ಯುಲರ್ ನ ಬೆಲೆ 549 ಸ್ವಿಸ್ ಫ್ರ್ಯಾಂಕ್ ಭಾರತೀಯ ಬೆಲೆಗೆ ಇದನ್ನು ಹೇಳುವುದಾದರೆ ರೂ. 41,000.

ಫ್ರಾನ್ಸ್ (ಆರಂಭಿಕ ಬೆಲೆ ರೂ. 44,700 ಮತ್ತು ಹೆಚ್ಚು ಕಡಿಮೆ ರೂ. 5,200 ಕಡಿಮೆ)
ಫ್ರಾನ್ಸ್ ನಲ್ಲಿ ಆಪಲ್ ವಾಚ್ 4 ಸೆಲ್ಯುಲರ್ ನ ಬೆಲೆ 529 ಯ್ಯೂರೋ. ಭಾರತೀಯ ಬೆಲೆಯಲ್ಲಿ ಅಂದಾಜಿಸುವುದಾದರೆ ರೂ. 44,700.

ಜರ್ಮನಿ (ಆರಂಭಿಕ ಬೆಲೆ ರೂ. 44,700 ಮತ್ತು ಹೆಚ್ಚು ಕಡಿಮೆ ರೂ. 5,200 ಕಡಿಮೆ)
ಜರ್ಮನಿಯಲ್ಲಿ ಆಪಲ್ ವಾಚ್ 4 ಸೆಲ್ಯುಲರ್ ವಾಚ್ ನ ಬೆಲೆ 529 ಯ್ಯೂರೋ. ಇದನ್ನು ಭಾರತೀಯ ಬೆಲೆಯಲ್ಲಿ ಹೇಳುವುದಾದರೆ ರೂ.44,700

ಇಟಲಿ (ಆರಂಭಿಕ ಬೆಲೆ ರೂ. 45,500 ಮತ್ತು ರೂ. 4,400 ಕಡಿಮೆ)
ಇಟಲಿಯಲ್ಲಿ ಆಪಲ್ ವಾಚ್ 4 ಸೆಲ್ಯುಲರ್ ನ ಬೆಲೆ 539 ಯ್ಯೂರೋ. ಭಾರತೀಯ ಬೆಲೆಯಲ್ಲಿ ಅದನ್ನು ಹೇಳುವುದಾದರೆ ರೂ. 45,500.

ಸ್ಪೈನ್ (ಆರಂಭಿಕ ಬೆಲೆ ರೂ. 44,700 ಮತ್ತು ಹೆಚ್ಚು ಕಡಿಮೆ ರೂ. 5,200 ಕಡಿಮೆ)
ಸ್ಪೈನ್ ನಲ್ಲಿ ಆಪಲ್ ವಾಚ್ 4 ಸೆಲ್ಯುಲರ್ ನಬೆಲೆ 529 ಯ್ಯೂರೋ. ಭಾರತೀಯ ಬೆಲೆಗೆ ಇದನ್ನು ಅಂದಾಜಿಸಿ ಹೇಳುವುದಾದರೆ ರೂ. 44,700 ಆಗಲಿದೆ.

ಡೆನ್ಮಾರ್ಕ್ (ಆರಂಭಿಕ ಬೆಲೆ ರೂ. 46,400 ಮತ್ತು ಹೆಚ್ಚು ಕಡಿಮೆ ರೂ. 3,500 ಕಡಿಮೆ)
ಡೆನ್ಮಾರ್ಕ್ ನಲ್ಲಿ ಆಪಲ್ ವಾಚ್ 4 ಸೆಲ್ಯುಲರ್ ನ ಬೆಲೆ 4099 ಡಾನಿಷ್ ಕ್ರೋನ್. ಭಾರತೀಯ ಬೆಲೆಗೆ ಅಂದನ್ನು ಅಂದಾಜಿಸುವುದಾದರೆ 46,400 ರುಪಾಯಿಗಳು.

ಯುನೈಟೆಡ್ ಕಿಂಗ್ ಡಂ (ಆರಂಭಿಕ ಬೆಲೆ ರೂ. 47,600 ಮತ್ತು ಹೆಚ್ಚು ಕಡಿಮೆ ರೂ. 2,300 ಕಡಿಮೆ)
ಯುಕೆಯಲ್ಲಿ ಆಪಲ್ ವಾಚ್ 4 ಸೆಲ್ಯುಲರ್ ನ ಬೆಲೆ 499 ಪೌಂಡ್. ಭಾರತೀಯ ಬೆಲೆಗೆ ಇದನ್ನು ಅಂದಾಜಿಸಿ ಹೇಳುವುದಾದರೆ ರೂ. 47,600 ಆಗಲಿದೆ.


Click it and Unblock the Notifications








