ಐಫೋನ್‌ನಲ್ಲಿ ಸ್ಪೇಸ್ ಮುಕ್ತವಾಗಿಸುವುದು ಹೇಗೆ? ಇಲ್ಲಿದೆ ಸಲಹೆಗಳು

Written By:

ತಮಗೆ ಅಗತ್ಯವಾಗಿ ಬೇಕಾಗಿರುವ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡುವಾಗ ಐಫೋನ್ ಬಳಕೆದಾರರು ಸ್ಥಳಾವಕಾಶದ ಕೊರತೆಯನ್ನು ಎದುರಿಸುವುದು ಸಹಜವೇ ಆಗಿದೆ. ನಿಜಕ್ಕೂ ಇಂತಹ ಪರಿಸ್ಥಿತಿ ಎದುರಾದಾಗ ಅದು ನಮ್ಮನ್ನು ಆ ಕೆಲಸದಿಂದಲೇ ವಿಮುಖಗೊಳಿಸುತ್ತದೆ. ಸ್ಪೇಸ್ ಸಮಸ್ಯೆಯನ್ನು ನೀವು ಎದುರಿಸಿದಿರಿ ಎಂದಾದಲ್ಲಿ, ನೀವು ಕೂಡಲೇ ನಿಮ್ಮ ಐಫೋನ್‌ನಲ್ಲಿರುವ ಅಪ್ಲಿಕೇಶನ್ ಮತ್ತು ಫೋಟೋಗಳನ್ನು ಡಿಲೀಟ್ ಮಾಡುತ್ತೀರಿ.

ಆದರೆ ಸ್ವಲ್ಪ ತಾಳಿ ನೀವು ಹೀಗೆ ಮಾಡುವುದಕ್ಕಿಂತ ಮುನ್ನ ಇಂದಿನ ಲೇಖನದಲ್ಲಿ ನೀಡುತ್ತಿರುವ ಸಲಹೆಗಳನ್ನು ಪಾಲಿಸಿಕೊಂಡು ಬಂದಲ್ಲಿ ಸ್ಪೇಸ್ ಸಮಸ್ಯೆಯನ್ನು ನಿಮಗೆ ನೀಗಿಸಿಕೊಳ್ಳಬಹುದಾಗಿದೆ. ನಿಮ್ಮ ಐಫೋನ್‌ನಲ್ಲಿ ಸ್ಟೋರೇಜ್ ಸ್ಪೇಸ್ ಅನ್ನು ಮುಕ್ತವಾಗಿಸುವ ಸಲಹೆಗಳನ್ನು ನೀಡುತ್ತಿದ್ದು ನಿಮ್ಮ ಐಫೋನ್‌ನಲ್ಲಿ ಸ್ಪೇಸ್ ಸಮಸ್ಯೆಯನ್ನು ನೀಗಿಸಿಕೊಳ್ಳಬಹುದಾಗಿದೆ.

Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!

ಓದಿರಿ: 2016 ರಲ್ಲಿ ಐಟಿ ಉದ್ಯೋಗಿಗಳಿಗೆ ಬೇಡಿಕೆ, ಯೂತ್ಸ್‌ಗಳಿಗೆ ಬಂಪರ್‌ ಆಫರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಫೋನ್‌ನ ಸ್ಪೇಟಸ್ ತಿಳಿದುಕೊಳ್ಳಿ

ನಿಮ್ಮ ಫೋನ್‌ನ ಸ್ಪೇಟಸ್ ತಿಳಿದುಕೊಳ್ಳಿ

#1

ಮೊದಲಿಗೆ, ನೀವು ಬಳಸುತ್ತಿರುವ ಒಟ್ಟು ಸ್ಪೇಸ್ ಅನ್ನು ಪರಿಗಣಿಸಿಕೊಳ್ಳಿ. ಇದನ್ನು ಮಾಡಲು ಸೆಟ್ಟಿಂಗ್ಸ್ > ಜನರಲ್ > ಸ್ಟೋರೇಜ್ ಮತ್ತು ಐಕ್ಲೌಡ್ ಯೂಸೇಜ್‌ಗೆ ಹೋಗಿ. ಸ್ಟೋರೇಜ್ ಅಡಿಯಲ್ಲಿ, ಸ್ಥಳೀಯವಾಗಿ ಬಳಸಲಾದ ಸ್ಪೇಸ್ ಅನ್ನು ನೀವು ಅರಿತುಕೊಳ್ಳಬಹುದು ಮತ್ತು ಆ ಸ್ಪೇಸ್ ಮುಕ್ತವಾಗಿರುತ್ತದೆ.

ಮ್ಯಾನೇಜ್ ಸ್ಟೋರೇಜ್

ಮ್ಯಾನೇಜ್ ಸ್ಟೋರೇಜ್

#2

ನಂತರ ಸ್ಟೋರೇಜ್ ಸೆಟ್ಟಿಂಗ್ ಮೆನುವಿನಲ್ಲಿರುವ ಮ್ಯಾನೇಜ್ ಸ್ಟೋರೇಜ್ ಅನ್ನು ಕ್ಲಿಕ್ ಮಾಡಿ. ದೊಡ್ಡದರಿಂದ ಸಣ್ಣದಾಗಿರುವ ಶ್ರೇಯಾಂಕಿತ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಇದು ನೀಡುತ್ತದೆ. ಎಲ್ಲಿಯಾದರೂ ಬಳಸದೇ ಇರುವ ಅಪ್ಲಿಕೇಶನ್‌ಗಳು ಇದ್ದಲ್ಲಿ ಅವುಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಅವುಗಳನ್ನು ಡಿಲೀಟ್ ಮಾಡಿ ಮತ್ತು ಸ್ಪೇಸ್ ಫ್ರಿ ಮಾಡಿ.

ಐಟ್ಯೂನ್ಸ್‌

ಐಟ್ಯೂನ್ಸ್‌

#3

ಐಟ್ಯೂನ್ಸ್‌ನೊಂದಿಗೆ ಕಂಪ್ಯೂಟರ್‌ಗೆ ಐಫೋನ್ ಅನ್ನು ಸಂಪರ್ಕಪಡಿಸುವ ಮೂಲಕ ಸ್ಟೋರೇಜ್ ಸ್ಥಿತಿಯನ್ನು ನಿಮಗೆ ವೀಕ್ಷಿಸಬಹುದಾಗಿದೆ. ಇತರ ಡೇಟಾ ಅತಿಕ್ರಮಿಸಿರುವ ಸ್ಥಳ ಒಳಗೊಂಡಂತೆ ಸ್ಟೋರೇಜ್ ಸ್ಪೇಸ್ ಅನ್ನು ನಿಮಗೆ ವೀಕ್ಷಿಸಬಹುದಾಗಿದೆ.

ಕ್ಲೌಡ್ ಬಳಸುವುದು

ಕ್ಲೌಡ್ ಬಳಸುವುದು

#4

ನಿಮ್ಮ ಐಫೋನ್‌ನಲ್ಲಿ ಸ್ಪೇಸ್‌ಗಾಗಿ ಫೈಲ್‌ಗಳನ್ನು ಕ್ಲೌಡ್‌ಗೆ ಸರಿಸುವುದು ಸುಲಭವಾಗಿದೆ. ಐಕ್ಲೌಡ್ 5ಜಿಬಿ ಉಚಿತ ಸ್ಥಳಾವಕಾಶವನ್ನು ನೀಡುತ್ತಿದ್ದು ಇದರ ಪ್ರಯೋಜವನ್ನು ಪಡೆದುಕೊಳ್ಳಬಹುದಾಗಿದೆ.

 ನಿರ್ದಿಷ್ಟ ಮೊತ್ತ

ನಿರ್ದಿಷ್ಟ ಮೊತ್ತ

#5

5ಜಿಬಿಗಿಂತಲೂ ಹೆಚ್ಚಿನ ಸ್ಥಳಾವಕಾಶ ಬೇಕು ಎಂದಾದಲ್ಲಿ ನಿರ್ದಿಷ್ಟ ಮೊತ್ತವನ್ನು ಪಾವತಿಸಿ ಇದನ್ನು ಖರೀದಿಸಬಹುದಾಗಿದೆ. ಸೆಟ್ಟಿಂಗ್ಸ್ > ಐಕ್ಲೌಡ್ > ಫೋಟೋಸ್. ಇಲ್ಲಿ ಅಪ್ಟಿಮೈಸ್ ಐಫೋನ್ ಸ್ಟೋರೇಜ್ ಆಪ್ಶನ್ ಲಭ್ಯವಿದೆ.

ಪೂರ್ಣ ರೆಸಲ್ಯೂಶನ್

ಪೂರ್ಣ ರೆಸಲ್ಯೂಶನ್

#6

ಇದು ಫೋಟೋ ಮತ್ತು ವೀಡಿಯೊಗಳನ್ನು ಐಫೋನ್‌ನಲ್ಲಿ ಉಳಿಸುತ್ತದೆ. ಸಣ್ಣ ಸ್ವರೂಪದಲ್ಲಿ ಇದು ಕಡಿಮೆ ಸ್ಥಳಾವಕಾಶವನ್ನು ಬಳಸುತ್ತದೆ. ಪೂರ್ಣ ರೆಸಲ್ಯೂಶನ್ ಫೋಟೋಗಳನ್ನು ಉಚಿತ ಪ್ರವೇಶಕ್ಕಾಗಿ ಐಕ್ಲೌಡ್‌ನಲ್ಲಿ ಉಳಿಸಲಾಗುತ್ತದೆ.

ಉಚಿತ ಅನಿಯಮಿತ ವೀಡಿಯೊ

ಉಚಿತ ಅನಿಯಮಿತ ವೀಡಿಯೊ

#7

ಗೂಗಲ್ ಫೋಟೋಸ್ ಮತ್ತು ಡ್ರಾಪ್ ಬಾಕ್ಸ್ ಸಂಗ್ರಹಣೆಗಾಗಿ ನಿರ್ದಿಷ್ಟ ಮೊತ್ತವನ್ನು ಕೋರುತ್ತವೆ. ಐಸ್‌ಕ್ರೀಮ್, ಶೂಬಾಕ್ಸ್ ಮೊದಲಾದ ಅಪ್ಲಿಕೇಶನ್‌ಗಳು ಉಚಿತ ಅನಿಯಮಿತ ವೀಡಿಯೊ ಮತ್ತು ಫೋಟೋಗಳನ್ನು ಒದಗಿಸುತ್ತದೆ.

ಆಫ್‌ಲೈನ್ ಡೇಟಾ ಸೆಟ್ಟಿಂಗ್ ಬದಲಾಯಿಸಿ

ಆಫ್‌ಲೈನ್ ಡೇಟಾ ಸೆಟ್ಟಿಂಗ್ ಬದಲಾಯಿಸಿ

#8

ಓದುವ ಪರಿಕರಗಳನ್ನು ಡೌನ್‌ಲೋಡ್ ಮಾಡುವುದು, ಪೋಡ್‌ಕಾಸ್ಟ್, ಮ್ಯೂಸಿಕ್ ಆಫ್‌ಲೈನ್‌ಗೆ ಆದ್ಯತೆ ನೀಡುತ್ತೀರಿ ಎಂದಾದಲ್ಲಿ ಅದು ಉತ್ತಮವೇ ಆದರೂ ಇದು ಕೂಡ ಹೆಚ್ಚಿನ ಸ್ಥಳಾವಕಾಶವನ್ನು ಪಡೆದುಕೊಳ್ಳುತ್ತದೆ.

ಸ್ಪೇಸ್ ಸಮಸ್ಯೆ

ಸ್ಪೇಸ್ ಸಮಸ್ಯೆ

#9

ಸ್ಪೇಸ್ ಸಮಸ್ಯೆಯಿಂದ ನೀವು ಬಳಲುತ್ತಿದ್ದೀರಿ ಎಂದಾದಲ್ಲಿ, ಆದಷ್ಟು ಇಂಟರ್ನೆಟ್ ಆಫ್ ಇದ್ದಾಗ ಟ್ಯೂನ್‌ಗಳನ್ನು ಪ್ರವೇಶಿಸಿ. ವೀಡಿಯೊಗಳನ್ನು ಮತ್ತು ಸಂಗೀತವನ್ನು ಸ್ಟ್ರೀಮ್ ಮಾಡುವುದು ಸ್ಪೇಸ್ ಅನ್ನು ಅಧಿಕವಾಗಿ ಬಳಸಿಕೊಳ್ಳುತ್ತದೆ.

ಟೆಕ್ಸ್ಟಿಂಗ್ ಅಪ್ಲಿಕೇಶನ್‌

ಟೆಕ್ಸ್ಟಿಂಗ್ ಅಪ್ಲಿಕೇಶನ್‌

#10

ಇನ್ನು ಟೆಕ್ಸ್ಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸಿಕೊಳ್ಳುವುದೂ ಕೂಡ ನಿಮ್ಮ ಐಫೋನ್‌ನಲ್ಲಿ ಹೆಚ್ಚು ಸ್ಥಳವನ್ನು ತೆಗೆದುಕೊಳ್ಳುತ್ತದೆ. ಸಂದೇಶಗಳನ್ನು ಉಳಿಸುವ ಆಯ್ಕೆ ಕೂಡ ಇದ್ದು ಒಂದು ವರ್ಷ ಅಥವಾ 30 ದಿನಗಳಿಗೆ ಇದನ್ನು ಬದಲಾಯಿಸಿಕೊಳ್ಳಬಹುದಾಗಿದೆ.
ಸೆಟ್ಟಿಂಗ್ಸ್ > ಸಂದೇಶಗಳು > ಸಂದೇಶಗಳನ್ನು ಉಳಿಸಿ ಮತ್ತು ನಿರ್ದಿಷ್ಟ ಸಮಯವನ್ನು ಆರಿಸಿ.

ತಾತ್ಕಾಲಿಕ ಫೈಲ್‌ಗಳನ್ನು ಅಳಿಸುವುದು ಮತ್ತು ಕ್ಯಾಶ್ ಕ್ಲಿಯರ್ ಮಾಡಿ

ತಾತ್ಕಾಲಿಕ ಫೈಲ್‌ಗಳನ್ನು ಅಳಿಸುವುದು ಮತ್ತು ಕ್ಯಾಶ್ ಕ್ಲಿಯರ್ ಮಾಡಿ

#11

ತಾತ್ಕಾಲಿಕ ಫೈಲ್ ಮತ್ತು ಕ್ಯಾಶ್ ಕ್ಲಿಯರ್ ಮಾಡುವುದರಿಂದ ಸ್ವಲ್ಪ ಸ್ಪೇಸ್ ಅನ್ನು ಉಳಿಸಿಕೊಳ್ಳಬಹುದಾಗಿದೆ. ಸೆಟ್ಟಿಂಗ್ಸ್ > ಸಫಾರಿ > ಕ್ಲಿಯರ್ ಹಿಸ್ಟ್ರಿ ಮತ್ತು ವೆಬ್‌ಸೈಟ್ ಡೇಟಾ ಈ ವಿಧಾನವನ್ನು ಅನುಸರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Try the following methods to free considerable storage space on your iPhone. Before going to the methods, you need to analyze the stats of your phone.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot