Subscribe to Gizbot

ಆಶ್ಚರ್ಯ ಮೂಡಿಸುವ ಅತ್ಯದ್ಬುತ ಗ್ಯಾಜೆಟ್‌ಗಳನ್ನು ಅಮೆಜಾನ್‌ನಲ್ಲಿ ಖರೀದಿಸಬಹುದು!!

Posted By:

ಎಲೆಕ್ಟ್ರಾನಿಕ್ ಪ್ರಪಂಚಕ್ಕೆ ಪ್ರತಿದಿನವೂ ಹೊಸ ಹೊಸ ಗ್ಯಾಜೆಟ್ ಉಪಕರಣಗಳು ಕಾಲಿಡುತ್ತವೆ. ಆದರೆ, ಆ ಎಲ್ಲಾ ಗ್ಯಾಜೆಟ್ ಉಪಕರಣಗಳು ಜನಪ್ರಿಯವಾಗದೇ ಇರುವುದರಿಂದ ಗ್ಯಾಜೆಟ್ ಬಳಕೆದಾರರಿಗೆ ತಲುಪಿರುವುದಿಲ್ಲ. ಇದರಿಂದ ಗ್ಯಾಜೆಟ್ ಪ್ರಿಯರು ಹಲವು ಪ್ರಮುಖ ಉತ್ಪನ್ನಗಳ ಬಳಕೆ ಮತ್ತು ಉಪಯೋಗಗಳನ್ನು ಕಳೆದುಕೊಂಡಿರುತ್ತಾರೆ ಎನ್ನಬಹುದು.!!

ಆಶ್ಚರ್ಯ ಮೂಡಿಸುವ ಅತ್ಯದ್ಬುತ ಗ್ಯಾಜೆಟ್‌ಗಳನ್ನು ಅಮೆಜಾನ್‌ನಲ್ಲಿ ಖರೀದಿಸಬಹುದು!

ಹಾಗಾಗಿ, ಇಂದಿನ ಲೇಖನದಲ್ಲಿ ಗ್ಯಾಜೆಟ್ ಪ್ರಿಯರಿಗೆ ಕುತೋಹಲ ಮೂಡಿಸುವಂತಹ ಕೆಲವು ಗ್ಯಾಜೆಟ್‌ಗಳನ್ನು ನಾವು ನಿಮಗೆ ಪರಿಚಯಿಸಿಕೊಡುತ್ತೇವೆ.! ಈ ಎಲ್ಲಾ ವಿಶೇಷ ಗ್ಯಾಜೆಟ್‌ಗಳು ಅಮೆಜಾನ್ ಇಂಡಿಯಾದಲ್ಲಿ ಲಭ್ಯವಿದ್ದು, ಬಹುಉಪಯೋಗಿ ಆಗಿವೆ. ಹಾಗಾಗರೆ, ಆ 5 ಗ್ಯಾಜೆಟ್‌ಗಳು ಯಾವುವು? ಇವುಗಳನ್ನು ಖರೀದಿಸಿದರೆ ಏನೆಲ್ಲಾ ಲಾಭ? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್ ಫ್ಲ್ಯಾಷ್ ಲೈಟ್!!

ಸ್ಮಾರ್ಟ್‌ಫೋನ್ ಫ್ಲ್ಯಾಷ್ ಲೈಟ್!!

ಈಗಿನ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಫ್ಲ್ಯಾಷ್ ಲೈಟ್ ಅನ್ನು ಹೊಂದಿರುತ್ತವೆ. ಆದರೆ, ಕೆಲವು ಸ್ಥಳಗಳಲ್ಲಿ ಫೋಟೊ ಚಿತ್ರಿಸಲು ಹೆಚ್ಚು ಬೆಳಕು ಬೇಕಾಗುತ್ತದೆ ಅಲ್ಲವೇ.? ಹಾಗಾಗಿಯೇ, ಎಫ್ ಲೆನ್ಸ್ ಎಂದು ಕರೆಯಲ್ಪಡುವ ಫ್ಲ್ಯಾಷ್ ಲೈಟ್ ಲಭ್ಯವಿದೆ. ಎಫ್-ಲೆನ್ಸ್ ಎಂದು ಕರೆಯುವ ಈ ಫ್ಲ್ಯಾಷ್ ಲೈಟ್ 16 ಎಲ್ಇಡಿ ಬಲ್ಪ್‌ಗಳಿಂದ ಬಹು-ಆಯಾಮದ ಬೆಳಕನ್ನು ಪೂರೈಸುತ್ತದೆ.!!

ವಂಡರ್ ಕ್ಯೂಬ್!!

ವಂಡರ್ ಕ್ಯೂಬ್!!

ಸ್ಮಾರ್ಟ್‌ಪೋನಿನ 8 ಕೆಲಸಗಳಿಗೆ ಉಪಯೋಗವಾಗುವ ಒಂದೇ ಒಂದು ಗ್ಯಾಜೆಟ್ ವಂಡರ್ ಕ್ಯೂಬ್!!. ಈ ಗ್ಯಾಜೆಟ್ ಸಹಾಯದಿಂದ ಚಾರ್ಜಿಂಗ್, ಓಟಿಜಿ ಕೇಬಲ್, ಫೋನ್ ಸ್ಟಾಂಡ್, ಬ್ಯುಲ್ಟ್ ಇನ್ ಕೇಬಲ್, ಸಿಂಕ್, ಎಮರ್ಜೆನ್ಸಿ ಚಾರ್ಜರ್, ಫ್ಲಾಶ್ ಮೆಮೊರಿ ಹಾಗೂ ಎಲ್‌ಇಡಿ ಟಾರ್ಚ್ ಸೇವೆಗಳು ಲಭ್ಯವಿವೆ.!!

HP Sprocket First Impressions (Kannada)
3D ಪೆನ್ ಹೇಗಿದೆ!?

3D ಪೆನ್ ಹೇಗಿದೆ!?

3D ಪೆನ್ ತಂತ್ರಜ್ಞಾನ ಮೊದಲಿನಿಂದಲೂ ಲಭ್ಯವಿದ್ದರೂ ಸಹ ಈಗ ಇದು ಸುಧಾರಿತ ತಂತ್ರಜ್ಞಾನದ ಲಕ್ಷಣಗಳನ್ನು ಹೊಂದಿರುವುದು ಗಮನಾರ್ಹವಾಗಿದೆ.! ಸ್ಟೀರಿಯೊಸ್ಕೋಪಿಕ್ ಪ್ರಿಂಟ್ ಮತ್ತು ಸುಧಾರಿತ ಅನ್‌ಕ್ಲಾಗಿಂಗ್ ತಂತ್ರಜ್ಞಾನ ಇರುವುದರಿಂದ ಕಾಗದದ ಮೇಲೆ ಗಾಳಿಯಲ್ಲಿ ವಸ್ತುಗಳನ್ನು ಬಿಡಿಸಬಹುದಾಗಿದೆ.!!

ಪ್ಲೇ ಬಲ್ಬ್ ಕ್ಯಾಂಡೆಲ್!!

ಪ್ಲೇ ಬಲ್ಬ್ ಕ್ಯಾಂಡೆಲ್!!

ಇದೀಗ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಪ್ಲೇ ಬಲ್ಬ್ ಕ್ಯಾಂಡೆಲ್ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಮೂಲಕ ನಿಯಂತ್ರಿಸಬಹುದಾ ಈ ಗ್ಯಾಜೆಟ್ ಮೂಲಕ ನಿಮಗೆ ಬೇಕಾದ ಬಣ್ಣಗಳ ಬೆಳಕನ್ನು ಪಡೆಯಬಹುದು. ಇದರಿಂದ ವಿವಿಧ ಬಣ್ಣಗಳಲ್ಲಿ ವಿವಿಧ ರೀತಿಯಲ್ಲಿ ಫೋಟೊಗಳನ್ನು ಚಿತ್ರಿಸಲು ಸಹಾಯವಾಗುತ್ತದೆ.!

ಲೇಸರ್ ಕೀಬೋರ್ಡ್!!

ಲೇಸರ್ ಕೀಬೋರ್ಡ್!!

ಸ್ಮಾರ್ಟ್‌ಫೋನ್ ಮೂಲಕ ಟೈಪ್ ಮಾಡಲು ಸಾಧ್ಯವಾಗದವರಿಗೆ ಅತ್ಯಂತ ಉಪಯೋಗಕಾರಿ ಈ ಲೇಸರ್ ಕೀಬೋರ್ಡ್.! ಹಾಲೋಗ್ರಫಿ ತಂತ್ರಜ್ಞಾನದ ಈ ಲೇಸರ್ ಕೀಬೋರ್ಡ್ ಅನ್ನು ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಹಾಗೂ ಟ್ಯಾಬ್ಲೆಟ್‌ನಂತಹ ಸಾಧನಗಳಲ್ಲಿ ಬ್ಲೂಟೂತ್‌ನ ಸಹಾಯದಿಂದ ಉಪಯೋಗಿಸಬಹುದು.!!

ಲೆನೊವೊ

ಲೆನೊವೊ "ಯೋಗಾ 920 ಏಶಿಯನ್‌ ವೈಡ್ಸ್" ಅದ್ಬುತ ಲ್ಯಾಪ್‌ಟಾಪ್ ಮಾರುಕಟ್ಟೆಗೆ!!..ಬೆಲೆ?

ಚೀನಾದ ಬಹುರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ತಯಾರಕ ಕಂಪನಿ ಲೆನೋವೊ "ಟು ಇನ್ ಒನ್ ಗ್ಲಾಸ್ ಕನ್ವರ್ಟೆಬಲ್" ಆಯ್ಕೆ ಹೊಂದಿರುವ ಹೈ ಎಂಡ್ ಲ್ಯಾಪ್‌ಟಾಪ್ ಒಂದನ್ನು ಪರಿಚಯಿಸಿದೆ.! 8 ನೇ ತಲೆಮಾರಿನ ಜೆನ್ ಇಂಟೆಲ್ ಕ್ವಾಡ್-ಕೋರ್ U ಸೀರೀಸ್ ಪ್ರೊಸೆಸರ್‌ಗಳ ಸಂಯೋಜಿತ ನೂತನ 'ಯೋಗಾ 920 ಲಿಮಿಟೆಡ್‌ ಏಶಿಯನ್‌ ವೈಡ್ಸ್' ಲ್ಯಾಪ್‌ಟಾಪ್ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ.!!

'ಯೋಗಾ 920 ಲಿಮಿಟೆಡ್‌ ಏಶಿಯನ್‌ ವೈಡ್ಸ್' ಆಲ್ಟ್ರಾ ಪ್ರೀಮಿಯಂ ಕನ್ವರ್ಟಿಬಲ್ ಲ್ಯಾಪ್‌ಟಾಪ್ ಆಗಿದ್ದು, 2 ಇನ್‌ 1 ಗ್ಲಾಸ್ ಕನ್ವರ್ಟೆಬಲ್‌ನ ಈ ಡಿವೈಸ್ ಡಿಜಿಟಲ್‌ ಪೆನ್‌ ಜೊತೆಗೆ ಬರುತ್ತದೆ. ಹಾಗಾದರೆ, ಯೋಗಾ 920 ಲಿಮಿಟೆಡ್‌ ಏಶಿಯನ್‌ ವೈಡ್ಸ್ ಲ್ಯಾಪ್‌ಟಾಪ್ ಫೀಚರ್ಸ್ ಯಾವುವು? ಇತರೆ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ ಹೇಗಿದೆ?

ಡಿಸ್‌ಪ್ಲೇ ಮತ್ತು ವಿನ್ಯಾಸ ಹೇಗಿದೆ?

ಅತ್ಯಂತ ತೆಳುವಾಗಿ ರೂಪುಗೊಂಡಿರುವ ಯೋಗಾ 920 ಲಿಮಿಟೆಡ್‌ ಏಶಿಯನ್‌ ವೈಡ್ಸ್ ಲ್ಯಾಪ್‌ಟಾಪ್ 4K ಟಚ್ಸ್ಕ್ರೀನ್ ಸ್ಕ್ರೀನ್ ಅನ್ನು ಹೊಂದಿದೆ. 1.37 ಕೆ.ಜಿ ತೂಕವನ್ನು ಹೊಂದಿರುವ ಈ ಲ್ಯಾಪ್‌ಟಾಪ್ ಪ್ಲ್ಯಾಟಿನಮ್ ಬಣ್ಣದಲ್ಲಿ ಆಲ್-ಮೆಟಲ್ ಯುನಿಬಾಡಿ ವಿನ್ಯಾಸದ ಮೂಲಕ ಮಾರುಕಟ್ಟೆಗೆ ಎಂಟ್ರಿ ನೀಡಿದೆ.!!

ಕ್ವಾಡ್ ಕೋರ್‌ ಯೂ ಸೀರಿಸ್‌ ಪ್ರೋಸೆಸರ್!!

ಕ್ವಾಡ್ ಕೋರ್‌ ಯೂ ಸೀರಿಸ್‌ ಪ್ರೋಸೆಸರ್!!

8ನೇ ತಲೆಮಾರಿನ ಇಂಟೆಲ್‌ ಕ್ವಾಡ್ ಕೋರ್‌ ಯೂ ಸೀರಿಸ್‌ ಪ್ರೋಸೆಸರ್‌ಗಳನ್ನು ಯೋಗಾ 920 ಲಿಮಿಟೆಡ್‌ ಏಶಿಯನ್‌ ವೈಡ್ಸ್ ಲ್ಯಾಪ್‌ಟಾಪ್‌ನಲ್ಲಿ ನೋಡಬಹುದಾಗಿದೆ. ಜೊತೆಗೆ ಏಕೀಕೃತ ಗ್ರಾಫಿಕ್ಸ್‌ ಮತ್ತು ದೋಹರಾ ಥಂಡರ್‌ಬೋಲ್ಟ್ ಯೂಎಸ್‌ಬಿ ಟೈಪ್‌ ಸಿ ಪೋರ್ಟ್ಸ್ ತಂತ್ರಜ್ಞಾನಗಳು ಲ್ಯಾಪ್‌ಟಾಪ್‌ ಹೆಚ್ಚುಗಾರಿಕೆಗೆ ಸಾಕ್ಷಿಯಾಗಿದೆ.!!

ಜೆಬಿಎಲ್ ಸ್ಪೀಕರ್ಸ್!!

ಜೆಬಿಎಲ್ ಸ್ಪೀಕರ್ಸ್!!

ಡಾಲ್ಬಿ ಅಟ್ಮಾಸ್ ತಂತ್ರಜ್ಞಾನದೊಂದಿಗೆ ತೆಳುವಾದ ಜೆಬಿಎಲ್ ಸ್ಪೀಕರ್ಸ್‌ಗಳೊಂದಿಗೆ ಹೊರಬಂದಿರುವ 'ಯೋಗಾ 920 ಲಿಮಿಟೆಡ್‌ ಏಶಿಯನ್‌ ವೈಡ್ಸ್' ಲ್ಯಾಪ್‌ಟಾಪ್ ಸೌಂಡ್ ಸಿಸ್ಟಮ್ ಅತ್ಯುತ್ತಮವಾಗಿದೆ. ಅತ್ಯುತ್ತಮ ಮ್ಯೂಸಿಕ್ ಆಲಿಸುವಿಕೆಯ ಜೊತೆಗೆ ವಾಯ್ಸ್‌ ಆಕ್ಟಿವೇಟೆಡ್ ಇಂಟೆಲಿಜೆಂಟ್‌ ಅಸಿಸ್ಟೆಂಟ್ ಕೊರ್ಟೊನಾ ಸಪೋರ್ಟ್ ಆಗಲಿದೆ.!!

ಆಲ್ಟ್ರಾ ಪ್ರೀಮಿಯಂ ಕನ್ವರ್ಟಿಬಲ್ ಪಿಸಿ!!

ಆಲ್ಟ್ರಾ ಪ್ರೀಮಿಯಂ ಕನ್ವರ್ಟಿಬಲ್ ಪಿಸಿ!!

ಅತ್ಯಂತ ಕಡಿಮೆ ಬೆಲೆಗೆ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸುತ್ತಿದ್ದ ಲೆನೊವೊ ಇದೇ ಮೊದಲ ಬಾರಿ ಹೈ ಎಂಡ್ ಲ್ಯಾಪ್‌ಟಾಪ್ ವಿನ್ಯಾಸಕ್ಕೆ ಮನಸ್ಸು ಮಾಡಿದೆ. ಇದು ಆಲ್ಟ್ರಾ ಪ್ರೀಮಿಯಂ ಕನ್ವರ್ಟಿಬಲ್ ಪಿಸಿ ಆಗಿದ್ದು, 2 ಇನ್‌ 1 ಗ್ಲಾಸ್ ಕನ್ವರ್ಟಿಬ್ ಈಡಿವೈಸ್‌ ಫಿಂಗರ್ಪ್ರಿಂಟ್ ರೀಡರ್ ಹಾಗೂ ಒಂದು ಡಿಜಿಟಲ್‌ ಪೆನ್‌ ಜೊತೆಗೆ ಬರುತ್ತದೆ.

ಅಸಿಸ್ಟೆಂಟ್ ಕೊರ್ಟೊನಾ!!

ಅಸಿಸ್ಟೆಂಟ್ ಕೊರ್ಟೊನಾ!!

ಫಾರ್‌ ಫೀಲ್ಡ್‌ ಟೆಕ್ನಾಲಜಿ ಹೊಂದಿರುವ ಈ ಲ್ಯಾಪ್‌ಟಾಪ್ ವಾಯ್ಸ್‌ ಆಕ್ಟಿವೇಟೆಡ್‌ ಇಂಟೆಲಿಜೆಂಟ್‌ ಅಸಿಸ್ಟೆಂಟ್‌ ಕೊರ್ಟೊನಾವನ್ನು ನಾಲ್ಕು ಮೀಟರ್‌ ದೂರದಿಂದಲೂ ಸಹ ಸಕ್ರಿಯಗೊಳಿಸಲು ಸಾಧ್ಯವಾಗುತ್ತದೆ. ಲ್ಯಾಪ್‌ಟಾಪ್‌ ಸ್ಟ್ಯಾಂಡ್‌ ಬೈ ಮೋಡ್‌ನಲ್ಲಿದ್ದರೂ ಸಹ ಈ ಕಾರ್ಯ ಸಾಧ್ಯವಾಗಲಿದೆ.!!

ಲ್ಯಾಪ್‌ಟಾಪ್ ಬೆಲೆ ಎಷ್ಟು?

ಲ್ಯಾಪ್‌ಟಾಪ್ ಬೆಲೆ ಎಷ್ಟು?

2 ಎಕ್ಸ್‌ ಥಂಡರ್‌ವೋಲ್ಟ್ ಪೋರ್ಟ್ಸ್ ಹೊಂದಿರುವ 'ಯೋಗಾ 920 ಲಿಮಿಟೆಡ್‌ ಏಶಿಯನ್‌ ವೈಡ್ಸ್' ಲ್ಯಾಪ್‌ಟಾಪ್ ಹೆಚ್ಚು ಸ್ಪೀಡ್‌ ಡಾಟಾ ಟ್ರಾನ್ಸ್‌ಫರ್ ಮಾಡಲು ಸಹಾಯ ಮಾಡುತ್ತದೆ. ಇಷ್ಟೆಲ್ಲಾ ವಿಶೇಷ ಫೀಚರ್‌ಗಳನ್ನು ಹೊಂದಿರುವ ಈ ಲ್ಯಾಪ್‌ಟಾಪ್ ಬೆಲೆ 127,150 + GST ರೂಪಾಯಿಗಳಾಗಿವೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
5 Amazing Tech Gadgets available on Amazon; Read more about this in kannadaGizBot
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot