ಭಾರತದಲ್ಲಿ ನೀವು ಈಗಲೇ ಖರೀದಿಸಬಹುದಾದ ವಿಚಿತ್ರ ವಿನ್ಯಾಸದ ಉಪಯುಕ್ತ ಗ್ಯಾಜೆಟ್ಗಳು ಇವು!

By Tejaswini P G

  ತಾಂತ್ರಿಕವಾಗಿ ಮುಂದುವರೆದಿರುವ ಈ ಯುಗದಲ್ಲಿ ನಾವು ಸ್ಮಾರ್ಟ್ಫೋನ್, ಲ್ಯಾಪ್ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್ ಬ್ಯಾಂಡ್ ಮೊದಲಾದ ಸಾಧನಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಬಳಸುತ್ತೇವೆ. ಆದರೆ ಇಷ್ಟೇ ಅಲ್ಲದೆ ಇನ್ನೂ ಹಲವು ಗ್ಯಾಜೆಟ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

  ಭಾರತದಲ್ಲಿ ನೀವು ಈಗಲೇ ಖರೀದಿಸಬಹುದಾದ ವಿಚಿತ್ರ ವಿನ್ಯಾಸದ ಉಪಯುಕ್ತ ಗ್ಯಾಜೆಟ್ಗಳು

  ವಿಚಿತ್ರ ವಿನ್ಯಾಸವುಳ್ಳ ಹಲವು ಗ್ಯಾಜೆಟ್ಗಳು ಲಭ್ಯವಿದ್ದು, ಭವಿಷ್ಯದ ತಂತ್ರಜ್ಞಾನ ಹೊಂದಿರುವ ಈ ಗ್ಯಾಜೆಟ್ಗಳು ನಮ್ಮ ಊಹೆಗೂ ಮೀರಿದ್ದು ಬಹಳ ಉಪಯುಕ್ತವಾಗಿದೆ. ನಮ್ಮ ಜೀವನವನ್ನು ಆರಾಮದಾಯಕವೆನಿಸುವುದೇ ಈ ಗ್ಯಾಜೆಟ್ಗಳ ಉದ್ದೇಶವಾಗಿದೆ. ಈ ಲೇಖನದಲ್ಲಿ ಇಂತಹ ಗ್ಯಾಜೆಟ್ಗಳ ಕುರಿತು ಮಾಹಿತಿಯನ್ನು ನಿಮಗಾಗಿ ಕಲೆಹಾಕಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಗ್ಯಾಜೆಟ್ ಹೀರೋ ನ Ghofm 1200 Dpi 3D ಆಪ್ಟಿಕಲ್ ಫಿಂಗರ್ ಮೌಸ್

  ಬೆಲೆ : ರೂ 499

  ಇದೊಂದು ನವೀನ USB ಆಪ್ಟಿಕಲ್ 3D ಕಂಪ್ಯೂಟರ್ ಮೌಸ್ ಆಗಿದ್ದು, ನಿಮ್ಮ ಬೆರಳಿನಲ್ಲಿ ಉಂಗುರದಂತೆ ಧರಿಸುವ ವಿನ್ಯಾಸ ಹೊಂದಿದೆ. ಆಕರ್ಷಕ ವಿನ್ಯಾಸ ಹೊಂದಿರುವ ಈ ಮೌಸ್ USB ಇಂಟರ್ಫೇಸ್ ಹೊಂದಿದೆ. ಇದನ್ನು ಬಳಸಲು ಮೌಸ್ ಪ್ಯಾಡ್ ಅಥವಾ ಇನ್ಸ್ಟಲೇಶನ್ ನ ಅಗತ್ಯವಿಲ್ಲ.

  ಪ್ರಮುಖ ಫೀಚರ್ಗಳು:

  • ಬೆರಳಿನಲ್ಲಿ ಉಂಗುರದಂತೆ ಧರಿಸಬಹುದಾದ ವಿನ್ಯಾಸ ಹೊಂದಿರುವ ಆಧುನಿಕ USB ಫಿಂಗರ್ ಆಪ್ಟಿಕಲ್ 3D ಕಂಪ್ಯೂಟರ್ ಮೌಸ್

  • ಯಾವುದೇ ಮೇಲ್ಮೈನ ಮೇಲೆ ಸುಮ್ಮನೆ ಸ್ಲೈಡ್ ಮಾಡಿದರಾಯಿತು, ಮೌಸ್ ಪ್ಯಾಡ್ ನ ಅವಶ್ಯಕತೆಯಿಲ್ಲ

  • ಎರ್ಗೋನೋಮಿಕ್ ವಿನ್ಯಾಸದ ಮೌಸ್, ಕಡಿಮೆ ಆಯಾಸ ತರುತ್ತದೆ

  • ಡೆಸ್ಕ್ಟಾಪ್ ಮತ್ತು ಲ್ಯಾಪ್ಟಾಪ್ಗಳಿಗಾಗಿ, ವಿಂಡೋಸ್ ಮತ್ತು ಮ್ಯಾಕ್ ಕಂಪ್ಯಾಟಿಬಲ್

  • ವೃತ್ತಿಪರ ವಿನ್ಯಾಸಕಾರರಿಗೆ ಮತ್ತು ಗೇಮ್ ಪ್ರಿಯರಿಗೆ ಸೂಕ್ತ

  ಗ್ಯಾಜೆಟ್ಸ್ ರ್ಯಾಪ್ ಪಾರದರ್ಶಕ ಸಿಲಿಕಾನ್ ಕವರ್ ಆಪಲ್ ಇಯರ್ಪ್ಯಾಡ್ ಮತ್ತು ಆಪಲ್ ಏರ್ಪಾಡ್ಗಳಿಗೆ

  ಬೆಲೆ : ರೂ 300

  ಆಪಲ್ ಇಯರ್ಪ್ಯಾಡ್ ಮತ್ತು ಆಪಲ್ ಏರ್ಪಾಡ್ಗಳಿಗೆ ಬಳಸಬಹುದಾದ ಪಾರದರ್ಶಕ ಸಿಲಿಕಾನ್ ಕವರ್ ಇದು. ಇಯರ್ಬಡ್ಗಳು ಬಳಕೆಯಾಗದಿರುವ ಸಮಯದಲ್ಲಿ ಅದನ್ನು ಕವರ್ ಮಾಡಲು ಇದನ್ನು ಬಳಸಬಹುದಾಗಿದೆ.

  ಪ್ರಮುಖ ಫೀಚರ್ಗಳು

  • ಆಪಲ್ ಇಯರ್ಪ್ಯಾಡ್ ಮತ್ತು ಆಪಲ್ ಏರ್ಪಾಡ್ಗಳಿಗೆ ಬಳಸಬಹುದಾದ ಪಾರದರ್ಶಕ ಸಿಲಿಕಾನ್ ಕವರ್

  • ಇಯರ್ಪ್ಯಾಡ್ ಅಥವಾ ಏರ್ಪಾಡ್ ಜೊತೆಗೆ ಲಭ್ಯವಿಲ್ಲ

  ಗ್ಯಾಜೆಟ್ ಹೀರೋ ನ ಆಂಟಿ-ತೆಫ್ಟ್ ಬರ್ಗ್ಲರ್ ಪ್ಯಾಡ್ ಲಾಕ್ ಅಲಾರ್ಮ್ ಸೆಕ್ಯೂರಿಟಿ ಸೈರನ್ ಹೋಮ್ ಆಫೀಸ್ ಬೈಕ್ ಬೈಸಿಕಲ್ ಶಾಪ್

  ಬೆಲೆ: ರೂ 489

  ಈ ಆಂಟಿ-ತೆಫ್ಟ್ ಬರ್ಗ್ಲರ್ ಪ್ಯಾಡ್ ಲಾಕ್ ಅಲಾರ್ಮ್ ಸೆಕ್ಯೂರಿಟಿ ಸೈರನ್ ಅನ್ನು ಮನೆ, ಬೈಕ್, ಗಾರ್ಡನ್ ಶೆಡ್, ಟೂಲ್ ಬಾಕ್ಸ್, ಲಾಕರ್ ಮೊದಲಾದವುಗಳನ್ನು ಕಳ್ಳರಿಂದ ರಕ್ಷಿಸಲು ಬಳಸಬಹುದಾಗಿದೆ. ಇದೊಂದು ನವೀನ ಲಾಕ್ ಆಗಿದ್ದು , ಹಾನಿಯುಂಟುಮಾಡಿದಾಗ 110dB ಸೈರೆನ್ ಮೊಳಗುತ್ತದೆ.

  ಪ್ರಮುಖ ಫೀಚರ್ಗಳು

  • ಮನೆ, ಬೈಕ್, ಗಾರ್ಡನ್ ಶೆಡ್, ಟೂಲ್ ಬಾಕ್ಸ್, ಲಾಕರ್ ಅನ್ನು ಸುರಕ್ಷಿತವಾಗಿಡಲು ಬಳಸಬಹುದಾದ ಬಲಶಾಲಿ 110dB ಸೈರೆನ್ ಪ್ಯಾಡ್ ಲಾಕ್

  • ನವೀನ ಯು ಲಾಕ್ ನಲ್ಲಿ ಆರ್ಮ್ಡ್ ಮತ್ತು ಅನಾರ್ಮ್ಡ್ ಸೆಟ್ಟಿಂಗ್ ಗಳಿದ್ದು, ಲಾಕ್ ಗೆ ಹಾನಿಯುಂಟಾದಾಗ 105-110 dB ಅಲಾರ್ಮ್ ಮೊಳಗುತ್ತದೆ

  • ಈ ಹೆವಿ ಡ್ಯೂಟಿ ಸೈರೆನ್ ಅಲಾರ್ಮ್ ಪ್ಯಾಡ್ಲಾಕ್ ಎಕ್ಸ್ಟ್ರಾ ಸ್ಟ್ರಾಂಗ್ ಕಾಸ್ಟ್ ಸ್ಟೀಲ್ ಮತ್ತು ಹೈ ಗ್ರೇಡ್ ಸ್ಟೀಲ್ ಶ್ಯಾಕಲ್ ನಿಂದ ತಯಾರಿಸಲ್ಪಟ್ಟಿದೆ

  • ತುಕ್ಕು, ಕೆಟ್ಟ ಹವಾಮಾನ ಗಳಿಗೆ ಹಾಳಾಗದು ಮತ್ತು ವಾಟರ್ ಪ್ರೂಫ್

  • ಬಳಸಲು ಸರಳ, ನಿಮ್ಮ ಸ್ವತ್ತುಗಳನ್ನು ರಕ್ಷಿಸಲು ಸೂಕ್ತ ಲಾಕ್

  ಗ್ಯಾಜೆಟ್ ಟ್ರೀ ವೈರ್ಲೆಸ್ ಬ್ಲೂಟೂತ್ ರಿಸೀವರ್ ಎಡಾಪ್ಟರ್ 3.5mm ಆಕ್ಸ್ ಆಡಿಯೋ ಸ್ಟೀರಿಯೋ ಮ್ಯೂಸಿಕ್ ಹ್ಯಾಂಡ್ಸ್ ಫ್ರೀ ಕಾರ್ ಕಿಟ್

  ಬೆಲೆ : ರೂ 329

  ಈ ಹ್ಯಾಂಡ್ಸ್ ಫ್ರೀ ಮ್ಯೂಸಿಕ್ ರಿಸೀವರ್ ಅನ್ನು ಮೊಬೈಲ್ ಫೋನ್ ಅಥವಾ ಬ್ಲೂಟೂತ್ ಕನೆಕ್ಟಿವಿಟಿ ಇರುವ ಟ್ರಾನ್ಸ್ಮಿಟ್ಟರ್ ನಿಂದ ಮ್ಯೂಸಿಕ್ ರಿಸೀವ್ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಆಡಿಯೋ ಇನ್ಪುಟ್ ಜ್ಯಾಕ್ ಇರುವ ಬಹುತೇಕ ಎಲ್ಲಾ ಆಡಿಯೋ ರಿಸೀವರ್ನೊಂದಿಗೆ ಇದು ಕೆಲಸಮಾಡುತ್ತದೆ.

  ಪ್ರಮುಖ ಫೀಚರ್ಗಳು

  • ನಿಮ್ಮ ಸ್ಪೀಕರ್ಗಳನ್ನು ಬಹಳ ಸುಲಭವಾಗಿ ಫ್ಯಾಶನೇಬಲ್ ವೈರ್ಲೆಸ್ ಬ್ಲೂಟೂತ್ ಸ್ಪೀಕರ್ ಆಗಿ ಪರಿವರ್ತಿಸಬಹುದು

  • ಬ್ಲೂಟೂತ್ v 3.0+EDR ಕ್ಲಾಸ್ 2 ಬ್ಲೂಟೂತ್ ರೇಂಜ್:10 ಮೀಟರ್, ಬ್ಯಾಟರಿ 180mAh

  • ವೈರ್ಲೆಸ್ ಕಂಟ್ರೋಲ್ ಮೂಲಕ ಬ್ಲೂಟೂತ್ ಕನೆಕ್ಷನ್ ಮತ್ತು ಟ್ರಾನ್ಸ್ಮಿಶನ್ ಬಳಸಿ ಹೈಫೈ ಮ್ಯೂಸಿಕ್ ಕೇಳಿ ಆನಂದಿಸಿ, ಸರಳ ಪೇರಿಂಗ್ ಬಳಸಿ ಕಂಪ್ಯೂಟರ್ ,ಲ್ಯಾಪ್ಟಾಪ್, ಟ್ಯಾಬ್ಲೆಟ್, ಆಂಡ್ರಾಯ್ಡ್ ಫೋನ್ ಮತ್ತು ಇತರ ಸಾಧನಗಳನ್ನು ಸ್ಪೀಕರ್ ಗೆ ಕನೆಕ್ಟ್ ಮಾಡಿ ಮ್ಯೂಸಿಕ್ ಕೇಳಿ.

  • ಕಾಂಪ್ಯಾಕ್ಟ್ ಮತ್ತು ಪೋರ್ಟೇಬಲ್ ವಿನ್ಯಾಸ. ಬೇಕಾದಲ್ಲಿಗೆ ಒಯ್ಯಲು ಅನುಕೂಲಕರ ಮತ್ತು USB ವಾಲ್ ಪವರ್ ಅಡಾಪ್ಟರ್ ನಿಂದ ಚಾರ್ಕ್ ಮಾಡಬಹುದು.

  • ಮ್ಯೂಸಿಕ್ ಆಲಿಸುತ್ತಲೇ USB ಪೋರ್ಟ್ ಮೂಲಕ ಸಾಧನವನ್ನು ಚಾರ್ಜ್ ಮಾಡಬಹುದು. ಕಾರ್ ಕಿಟ್ ನ ಕಾರ್ ಸ್ಟೀರಿಯೋದಲ್ಲಿ 3.5mm ಇನ್ಪುಟ್ ಜ್ಯಾಕ್ ಆವಶ್ಯಕ

  Unmcore ಆಲ್ ಇನ್ ವನ್ ಟ್ರ್ಯಾವೆಲ್ ಚಾರ್ಜರ್ ಅಡ್ಯಾಪ್ಟರ್ ಡ್ಯುಯಲ್ USB ಪೋರ್ಟ್ ಇಲೆಕ್ಟ್ರಿಕಲ್ ಪ್ಲಗ್ ನೊಂದಿಗೆ

  ಬೆಲೆ : ರೂ 593

  ನೀವು ನಿಮ್ಮೊಂದಿಗೆ ಒಯ್ಯುವ ಪೋರ್ಟೇಬಲ್ ಸಾಧನಗಳ ಬ್ಯಾಟರಿ ಸಾಮರ್ಥ್ಯದ ಕುರಿತು ನಿಮಗೆ ಸಂಶಯವಿದ್ದರೆ, ಈ ಟ್ರ್ಯಾವೆಲ್ ಚಾರ್ಜಿಂಗ್ ಅಡ್ಯಾಪ್ಟರ್ ನಿಮ್ಮೆಲ್ಲಾ ಚಿಂತೆಯನ್ನು ದೂರ ಮಾಡುತ್ತದೆ.

  ಪ್ರಮುಖ ಫೀಚರ್ಗಳು

  • ಇನ್ಪುಟ್:100-240W/ಔಟ್ಪುಟ್:100-240W 6A ಮ್ಯಾಕ್ಸ್/ ಬಳಸುವ ಮೊದಲು ಮೇಲ್ಮೈನಲ್ಲಿರುವ ಪ್ಲ್ಯಾಸ್ಟಿಕ್ ಫಿಲ್ಮ್ ಹರಿಯಿರಿ

  • ಡ್ಯುಯಲ್ USB ಪೋರ್ಟ್ DC5V 1A 10W, ಐಪ್ಯಾಡ್,ಐಫೋನ್, ಗ್ಯಾಲಕ್ಸಿ ಫೋನ್, ಲ್ಯಾಪ್ಟಾಪ್, ಕ್ಯಾಮೆರಾ ಗಳೊಂದಿಗೆ ಕೆಲಸ ಮಾಡುತ್ತದೆ. ಇನ್ಡೋರ್ ಬಳಕೆಗೆ ಮಾತ್ರ

  • ಯುಎಸ್/ಇಯು/ಯುಕೆ/ಎಯು/ಚೈನಾ/ಜಪಾನ್ ಮೊದಲಾದ 150ಕ್ಕೂ ಅಧಿಕ ದೇಶಗಳ ಪ್ಲಗ್ ಸ್ವೀಕರಿಸುತ್ತದೆ, ಬಿಲ್ಟ್-ಇನ್ ಸೇಫ್ಟಿ ಶಟರ್, 1 ಯುನಿವರ್ಸಲ್ ಅಡ್ಯಾಪ್ಟರ್/ 1 ಫೈಬರ್ ಬ್ಯಾಗ್/ 1 ಇಂಗ್ಲಿಶ್ ಮತ್ತು ಚೈನೀಸ್ ಸೂಚನಾ ಕೈಪಿಡಿ

  • ಈ ಚಾರ್ಜರ್ ಅಡ್ಯಾಪ್ಟರ್ ಪ್ಲಗ್ ಪವರ್ ಔಟ್ಲೆಟ್ ಅನ್ನು ಮಾತ್ರ ಪರಿವರ್ತಿಸುತ್ತದೆ. ಇಲೆಕ್ಟ್ರಿಕಲ್ ಔಟ್ಪುಟ್ ಕರೆಂಟ್ ಮತ್ತು ವೋಲ್ಟೇಜ್ ಅನ್ನು ಪರಿವರ್ತಿಸುವುದಿಲ್ಲ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  In the current technologically advanced era, we use many devices such as smartphones, laptops, tablets, and smart bands or fitness bands among others. But these are not the only devices that exist. There are many weird or strange looking gadgets that might come very handy and here you will find some of these gadgets.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more