ನೀವ್ಯಾಕೆ ಸ್ಮಾರ್ಟ್ ಬಲ್ಬ್ ಗಳ ಖರೀದಿಗೆ ಮುಂದಾಗಬೇಕು ಗೊತ್ತಾ?

By Gizbot Bureau
|

ಸ್ಮಾರ್ಟ್ ಬಲ್ಬ್ ಗಳು ನಿಮ್ಮ ಸಾಮಾನ್ಯ ಎಲ್ಇಡಿಗಳಂತಲ್ಲ. ಅವುಗಳು ಕೇವಲ ಸಾಕೆಟ್ ನಲ್ಲಿ ಸುಮ್ಮನೆ ಕುಳಿತುಕೊಂಡಿರುವುದಿಲ್ಲ ಮತ್ತು ಸಾಮಾನ್ಯ ಬಲ್ಬ್ ಗಳಂತೆ ಕೇವಲ ಬೆಳಕು ಕೊಡುವ ವಸ್ತುಗಳಲ್ಲ. ಖಂಡಿತ ಅಂತಹ ವಸ್ತುಗಳು ಬೋರಿಂಗ್ ಆಗಿರುತ್ತದೆ. ಇದಕ್ಕಿಂತ ಹೆಚ್ಚಿನ ಕೆಲಸವನ್ನು ಸ್ಮಾರ್ಟ್ ಬಲ್ಬ್ ಗಳು ಮಾಡಬಲ್ಲವು.

ನೀವ್ಯಾಕೆ ಸ್ಮಾರ್ಟ್ ಬಲ್ಬ್ ಗಳ ಖರೀದಿಗೆ ಮುಂದಾಗಬೇಕು ಗೊತ್ತಾ?

ಹಲವು ಕಾರಣಗಳಿಂದಾಗಿ ಸ್ಮಾರ್ಟ್ ಬಲ್ಬ್ ಗಳನ್ನು ಸ್ಮಾರ್ಟ್ ಎಂದು ಕರೆಯಲಾಗಿದೆ. ಅವುಗಳು ಫೋನ್ ಆಪ್ ಗಳಿಂದ ವಯರ್ ಲೆಸ್ ಆಗಿ ಕನೆಕ್ಟ್ ಆಗುತ್ತವೆ, ಹಲವು ಸಾಧ್ಯತೆಗಳಿಗೆ ಅವು ತೆರೆದುಕೊಳ್ಳುತ್ತವೆ. ಸ್ಮಾರ್ಟ್ ಬಲ್ಬ್ ಗಳು ಮಾಡಬಲ್ಲ ಕೆಲವು ಕೆಲಸಗಳ ಪಟ್ಟಿ ಇಲ್ಲಿದೆ ನೋಡಿ.

ಡಿಮ್ ಆಗಿ ಇರುತ್ತದೆ

ಡಿಮ್ ಆಗಿ ಇರುತ್ತದೆ

ಸ್ಮಾರ್ಟ್ ಬಲ್ಬ್ ಗಳ ಬೇಸಿಕ್ ಫೀಚರ್ ಏನೆಂದರೆ ಅವುಗಳನ್ನು ನೀವು ಯಾವುದೇ ಡಿಮ್ಮರ್ ನ್ನು ಇನ್ಸ್ಟಾಲ್ ಮಾಡದೆಯೂ ಕೂಡ ಡಿಮ್ ಗೊಳಿಸುವುದಕ್ಕೆ ಸಾಧ್ಯವಾಗುತ್ತದೆ. ನಿಮ್ಮ ಲ್ಯಾಂಪ್ ಗೆ ಸಿಂಪಲ್ ಆಗಿ ಡಿಮ್ ಮಾಡಬಲ್ಲ ಸ್ಮಾರ್ಟ್ ಬಲ್ಬ್ ನ್ನು ಸ್ಕ್ರ್ಯೂ ಮಾಡಿದರೆ ಸಾಕು ಅಥವಾ ಬಲ್ಬ್ ನ ಸಂಬಂಧಿತ ಆಪ್ ನಲ್ಲೂ ಕೂಡ ಇದನ್ನು ನೀವು ಸಾಧಿಸುವುದಕ್ಕೆ ಸಾಧ್ಯ.

ಎಲ್ಲಿಂದ ಬೇಕಿದ್ದರೂ ಅವುಗಳನ್ನು ಕಂಟ್ರೋಲ್ ಮಾಡಬಹುದು :

ಎಲ್ಲಿಂದ ಬೇಕಿದ್ದರೂ ಅವುಗಳನ್ನು ಕಂಟ್ರೋಲ್ ಮಾಡಬಹುದು :

ಕೆಲವು ಸ್ಮಾರ್ಟ್ ಬಲ್ಬ್ ಗಳು ಉದಾಹರಣೆಗೆ ಬೆಲ್ಕಿನ್ ವಿಮೋ ಎಲ್ಇಡಿ ಮತ್ತು ಜಿಇ ಲಿಂಕ್ ಬಲ್ಬ್ ಗಳು ನೀವು ಮನೆಯಲ್ಲಿ ಇಲ್ಲದೇ ಇರುವಾಗಲೂ ಕೂಡ ಕಂಟ್ರೋಲ್ ಮಾಡುವುದಕ್ಕೆ ಸಾಧ್ಯವಾಗುವ ಆಯ್ಕೆಯನ್ನು ನೀಡುತ್ತವೆ. ಅಂದರೆ ಅವುಗಳು ಆನ್ ಮತ್ತು ಆಫ್ ಆಗುವುದಕ್ಕೆ ನೀವು ಸಮಯವನ್ನು ನಿಗದಿಗೊಳಿಸಬಹುದು. ನೀವು ರಜೆಯಲ್ಲಿರುವಾಗ, ಊರಿನಿಂದ ಹೊರಗಿರುವಾಗ ಈ ಆಯ್ಕೆ ಹೆಚ್ಚಿನ ಭದ್ರತೆಗೆ ನೆರವು ನೀಡುತ್ತದೆ.

ಯಾಕೆಂದರೆ ನಿಮ್ಮ ಬೆಳಕಿನಿಂದಾಗಿ ಯಾವಗಲೂ ಕೂಡ ಖಾಲಿಯಿದೆ ಅಥವಾ ಯಾರೂ ಇಲ್ಲ ಎಂಬುದು ತಿಳಿಯದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲ ಮನೆಯಿಂದ ಹೊರಡುವಾಗಲೇ ಲೈಟ್ ಆನ್ ಮಾಡಿ ವಿದ್ಯುತ್ ವೆಚ್ಚವಾಗುವುದನ್ನು ತಡೆಯುವುದಕ್ಕೂಕೂಡ ಇದು ನೆರವಾಗುತ್ತದೆ.ಹೆಚ್ಚಿನ ಲೈಟಿನ ಬ್ರ್ಯಾಂಡ್ ನವರು ಹಬ್ ನ್ನು ಆಫರ್ ಮಾಡುತ್ತಾರೆ ಮತ್ತು ನಿಮ್ಮ ಎಲ್ಲಾ ಲೈಟ್ ಗಳನ್ನು ಒಟ್ಟಿಗೆ ಸಿನ್ಕ್ರನೈಜ್ ಮಾಡುತ್ತಾರೆ. ಒಂದೇ ಆಪ್ ನಲ್ಲಿ ಎಲ್ಲಾ ಲೈಟ್ ಗಳನ್ನು ಕಂಟ್ರೋಲ್ ಮಾಡುವುದಕ್ಕೆ ಇದರಿಂದ ಸಾಧ್ಯವಾಗುತ್ತದೆ.

ಬಣ್ಣಗಳ ಬದಲಾವಣೆ ಸಾಧ್ಯ

ಬಣ್ಣಗಳ ಬದಲಾವಣೆ ಸಾಧ್ಯ

ಲೈಟ್ ನ್ನು ಡಿಮ್ ಮಾಡಬೇಕು ಎಂದು ಸೆಟ್ ಮಾಡುವುದು ಓಕೆ ಆದರೆ ಒಂದು ಹೆಜ್ಜೆ ಇದರಲ್ಲಿ ಮುಂದೆ ಹೋಗುವುದಕ್ಕೆ ಸಾಧ್ಯವಿದೆ. ಹೆಚ್ಚಿನ ಸ್ಮಾರ್ಟ್ ಬಲ್ಬ್ ಗಳು ಬಣ್ಣಗಳ ಬದಲಾವಣೆಗೆ ಸಹಕರಿಸುತ್ತದೆ. ಫ್ಲಕ್ಸ್ ಸ್ಮಾರ್ಟ್ ಎಲ್ಇಡಿ ಲೈಟ್ ಬಲ್ಬ್ ಗಳು ಅಂದಾಜು 16 ಮಿಲಿಯನ್ ಬಣ್ಣಗಳನ್ನು ನೀಡಬಲ್ಲವು ಎಂದು ಹೇಳಲಾಗುತ್ತದೆ. ನೀವು ಕಲರ್ ನ್ನು ಟ್ಯಾಪ್ ಮಾಡುವ ಮೂಲಕ ನಿಮಗೆ ಬೇಕಾದ ಕಲರ್ ನ್ನು ಆಯ್ಕೆ ಮಾಡಿಕೊಳ್ಳಬಹುದು. ಫಿಲಿಪ್ಸ್ ಹ್ಯೂ, ಸಿರಿಯಲ್ಲೂ ಕೂಡ ಲೈಟಿನ ಬಣ್ಣವನ್ನು ಬದಲಾಯಿಸುವುದಕ್ಕೆ ಸಾಧ್ಯವಾಗುತ್ತದೆ.

ಕಲರ್ ನಲ್ಲಿ ಬದಲಾವಣೆಯಾಗುವ ಲೈಟ್ ನ ಅಗತ್ಯವಾದರೂ ಏನು?

ಕಲರ್ ನಲ್ಲಿ ಬದಲಾವಣೆಯಾಗುವ ಲೈಟ್ ನ ಅಗತ್ಯವಾದರೂ ಏನು?

• ತಣ್ಣಗಿರುವ ರೂಮಿನ ವಾತಾವರಣವನ್ನು ಸ್ವಲ್ಪ ಬೆಚ್ಚಗಾಗಿ ಬದಲಾಯಿಸುವುದಕ್ಕೆ ಲೈಟಿನ ಬಣ್ಣವನ್ನು ಗೋಲ್ಡನ್ ಗೆ ತಿರುಗಿಸರೆ ಸಾಧ್ಯವಾಗುತ್ತದೆ.

• ರೂಮಿನ ವಾತಾವರಣ ಕೂಲ್ ಆಗಬೇಕು ಎಂದಿದ್ದರೆ ನೀಲಿ ಬಣ್ಣದ ಲೈಟ್ ನ್ನು ಬಳಕೆ ಮಾಡಬೇಕು.

• ಪಾರ್ಟಿ ಫಂಕ್ಷನ್ ಗಳಲ್ಲಿ ಥೀಮ್ ಕಲರ್ ಗೆ ನಿಮ್ಮ ಮನೆಯ ದೈನಂದಿನ ಬಲ್ಬ್ ಗಳನ್ನೇ ಬದಲಾಯಿಸುವುದಕ್ಕೆ ಅವಕಾಶ

• ಆಯಾ ಸಂದರ್ಬಕ್ಕೆ ಸರಿಯಾಗಿ ಬಣ್ಣವನ್ನು ಬದಲಾಯಿಸಬಹುದು. ಕ್ರಿಸ್ ಮಸ್ ಗೆ ಹಸಿರು, ಹೀಗೆ ನಿಮ್ಮ ಇಚ್ಛೆಯಂತೆ ಮನೆಯನ್ನು ಬೆಳಕಿನಿಂದ ಅಲಂಕರಿಸುವುದಕ್ಕೆ ಇದು ನೆರವಾಗುತ್ತದೆ.

• ನಿಮ್ಮ ಮನೆಯ ಗೋಡೆಯ ಬಣ್ಣ ನಿಮಗೆ ಇಷ್ಟವಿಲ್ಲದೆ ಇದ್ದರೆ ಸ್ಮಾರ್ಟ್ ಬಲ್ಬ್ ಗಳನ್ನು ಬಳಸಿ ಬಣ್ಣವನ್ನು ಬದಲಾದಂತೆ ಕಾಣುವಂತೆ ಮಾಡಲು ಸಾಧ್ಯವಾಗುತ್ತದೆ.

ಕೆಲವು ಬಲ್ಬ್ ಗಳಲ್ಲಿ ಮ್ಯೂಸಿಕ್ ಪ್ಲೇ ಮಾಡಬಹುದು

ಕೆಲವು ಬಲ್ಬ್ ಗಳಲ್ಲಿ ಮ್ಯೂಸಿಕ್ ಪ್ಲೇ ಮಾಡಬಹುದು

ಒಂದು ವೇಳೆ ಸ್ಪೀಕರ್ ವಯರ್ ಎಲ್ಲಾ ಕಡೆಯೂ ಇಲ್ಲವೆಂದು ಭಾವಿಸಿ ಆದರೂ ಕೂಡ ನೀವು ಮನೆಯ ಎಲ್ಲಾ ರೂಮಿನಲ್ಲೂ ಕೂಡ ಮ್ಯೂಸಿಕ್ ಆಲಿಸುವುದಕ್ಕೆ ಸಾಧ್ಯವಾಗುತ್ತದೆ. ಸ್ಮಾರ್ಟ್ ಬಲ್ಬ್ ಗಳಲ್ಲಿರುವ ಬಿಲ್ಟ್ ಇನ್ ಸ್ಪೀಕರ್ ಗಳು ಇದನ್ನು ಸಾಧ್ಯವಾಗಿಸುತ್ತದೆ. ಉದಾಹರಣೆಗೆ, ಪ್ಲೇ ಬಲ್ಬ್ ಕಲರ್ ನಲ್ಲಿ ಲೈಟ್ ಗಳು ಹೊರಬರುವ ಸಂಗೀತಕ್ಕೆ ತಕ್ಕಂತೆ ಬಣ್ಣವನ್ನು ಬದಲಾಯಿಸುತ್ತದೆ. ಆದರೆ ಈ ಮ್ಯೂಸಿಕ್ ದೊಡ್ಡ ಸೌಂಡ್ ನಲ್ಲಿರುತ್ತವೆ. ಟೀನಜರ್ಸ್ ಗೆ ಬಹಳ ಇಷ್ಟವಾಗುತ್ತದೆ.

ಉತ್ತಮ ನಿದ್ದೆಗೆ ಅವು ಸಹಕರಿಸುತ್ತವೆ

ಉತ್ತಮ ನಿದ್ದೆಗೆ ಅವು ಸಹಕರಿಸುತ್ತವೆ

ಸ್ಮಾರ್ಟ್ ಬಲ್ಬ್ ಗಳು ನಿದ್ದೆಯನ್ನು ಉತ್ತಮಗೊಳಿಸುತ್ತದೆ. ಸಿ ಸ್ಲೀಪ್ ಹಲವಾರು ಬಣ್ಣಗಳ ಟೆಂಪರೇಚರ್ ನ್ನು ಪ್ರತಿಫಲಿಸುತ್ತದೆ. ನೈಸರ್ಗಿಕ ಮೆಲಟೊನಿನ್ ನ್ನು ದೇಹದಲ್ಲಿ ಉತ್ಪಾದನೆ ಮಾಡಲು ಸಹಕಾರಿಯಾಗುವಂತೆ ಇದನ್ನು ಡಿಸೈನ್ ಮಾಡಲಾಗಿರುತ್ತದೆ. ಹಗಲಿನಲ್ಲಿ ಮೆಲಟನಿನ್ ಲೆವೆಲ್ ಸರಿಯಾಗಿರುವಂತೆ ಮತ್ತು ಮಲಗಿದಾಗ ಹೆಚ್ಚಾಗುವಂತೆ ನೋಡಿಕೊಳ್ಳುತ್ತದೆ.

Best Mobiles in India

Read more about:
English summary
5 reasons why your next light bulb should be a smart bulb

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X