ನಿಮ್ಮ ಮನಗೆ ಸ್ಮಾರ್ಟ್ ಬಲ್ಬ್ ಆಗಲು ಇವುಗಳು ಬೆಸ್ಟ್

By Gizbot Bureau
|

ಅಂತರ್ಜಾಲ ಸಂಬಂಧಿತ ಇಕೋಸಿಸ್ಟಮ್ ಭಾರತದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿಲ್ಲ, ಆದರೆ ಕೆಲವು ಕಂಪನೆಗಳು ತಮ್ಮ ಸ್ಮಾರ್ಟ್ ಲೈಟ್ ಗಳನ್ನು ದೇಶದಲ್ಲಿ ಬಿಡುಗಡೆಗೊಳಿಸಿ ಪ್ರಚಾರಗೊಳಿಸುತ್ತಿದೆ.

ನಿಮ್ಮ ಮನಗೆ ಸ್ಮಾರ್ಟ್ ಬಲ್ಬ್ ಆಗಲು ಇವುಗಳು ಬೆಸ್ಟ್

ವಾಯ್ಸ್ ಮೂಲಕವೇ ಈ ಡಿವೈಸ್ ಗಳನ್ನು ಕಂಟ್ರೋಲ್ ಮಾಡುವುದಕ್ಕೆ ಅಮೇಜಾನ್ ಇಕೋ ಡಿವೈಸ್ ಗಳು ಮತ್ತು ಗೂಗಲ್ ಹೋಮ್ ಗಳು ಬಹಳ ಪ್ರಯೋಜನಕಾರಿಯಾಗಿರುತ್ತದೆ ಮತ್ತು ಈ ಎಲ್ಲವನ್ನೂ ಕೂಡ ಸ್ಮಾರ್ಟ್ ಫೋನ್ ಗಳಿಂದಲೂ ಕೂಡ ಕಂಟ್ರೋಲ್ ಮಾಡಬಹುದಾಗಿದೆ.ರಿಮೋಟ್ ನಲ್ಲೂ ಕೂಡ ಇವುಗಳನ್ನು ಆನ್-ಆಫ್ ಮಾಡುವುದಕ್ಕೆ ಅವಕಾಶವಿರುತ್ತದೆ.

ಒಂದು ವೇಳೆ ನಿಮ್ಮ ಮನೆಗೂ ಕೂಡ ಸ್ಮಾರ್ಟ್ ಲೈಟ್ ಗಳನ್ನು ಬಳಕೆ ಮಾಡುವ ಉದ್ದೇಶವನ್ನು ನೀವು ಹೊಂದಿದ್ದರೆ ಯಾವ ಲೈಟ್ ಗಳನ್ನು ಖರೀದಿಸುವುದು ಸೂಕ್ತ ಎಂಬುದಕ್ಕಾಗಿ ನಾವೊಂದಿಷ್ಟು ಸಲಹೆಗಳನ್ನು ನೀಡುತ್ತಿದ್ದೇವೆ. ಇಲ್ಲಿ ಪ್ರಮುಖಾಗಿ ಕೆಲವು ಸ್ಮಾರ್ಟ್ ಲೈಟ್ ಗಳ ಬಗ್ಗೆ ಹೇಳಲಾಗಿದೆ.

ಸಿಸ್ಕಾ TL-1007-I ಸ್ಮಾರ್ಟ್ ಟೇಬಲ್ ಲ್ಯಾಂಪ್

ಸಿಸ್ಕಾ TL-1007-I ಸ್ಮಾರ್ಟ್ ಟೇಬಲ್ ಲ್ಯಾಂಪ್

ಇದು 7 ವ್ಯಾಟ್(W) ಟೇಬಲ್ ಲ್ಯಾಂಪ್ ಆಗಿದ್ದು ಅಮೇಜಾನ್ ಇಕೋ ಮತ್ತು ಗೂಗಲ್ ಹೋಮ್ ಎರಡರಲ್ಲೂ ಕೂಡ ಕೆಲಸ ಮಾಡುತ್ತದೆ. ಅಂದರೆ ಇದನ್ನು ವಾಯ್ಸ್ ಕಮಾಂಡ್ ಮೂಲಕ ಕಂಟ್ರೋಲ್ ಮಾಡಬಹುದು. ಇದರಲ್ಲಿ ಮೂರು ವಿಭಿನ್ನ ಬ್ರೈಟ್ ನೆಸ್ ಲೆವೆಲ್ ಇದ್ದು ರೀಡಿಂಗ್, ನೈಟ್ ಮೋಡ್ಸ್ ಮತ್ತು ಇತ್ಯಾದಿಗಳು ಲಭ್ಯವಿದೆ. ಕಂಪೆನಿಯು ತಿಳಿಸುವ ಪ್ರಕಾರ ಸರಾಸರಿ ಒಂದು ಲೈಟ್ 30,000 ಘಂಟೆಗಳ ಕಾಲ ಉಳಿಯುವುದಕ್ಕೆ ಸಾಧ್ಯವಾಗುತ್ತದೆ. ಬೆಲೆ: ₹3,699

ಫಿಲಿಪ್ಸ್ ಹ್ಯೂ

ಫಿಲಿಪ್ಸ್ ಹ್ಯೂ

ಫಿಲಿಪ್ಸ್ ಹ್ಯೂ ಸರಣಿಯು ಜಗತ್ತಿನಲ್ಲೇ ಅತ್ಯುತ್ತಮವಾದ ಸ್ಮಾರ್ಟ್ ಲೈಟನಿಂಗ್ ಸಲ್ಯೂಷನ್ ಎಂದೆನಿಸಿಕೊಂಡಿದೆ. ಇದು 10W ಸ್ಮಾರ್ಟ್ ಬಲ್ಬ್ ಆಗಿದ್ದು ಕಂಪೆನಿಯ ಎಂಟ್ರಿ ಲೆವೆಲ್ ಆಫರ್ ಗಳಾಗಿದೆ ಮತ್ತು ಒಂದು ವರ್ಷದ ವಾರೆಂಟಿಯನ್ನು ಇದು ಹೊಂದಿರುತ್ತದೆ.ಇದು ಇಕೋ ಮತ್ತು ಗೂಗಲ್ ಹೋಮ್ ಎರಡರಲ್ಲೂ ಕೂಡ ಕೆಲಸ ಮಾಡುತ್ತದೆ. ಆಪಲ್ ನ ಹೋಮ್ ಕಿಟ್ ಗೂ ಕೂಡ ಇದು ಸಹಾಯ ಮಾಡುತ್ತದೆ. ಅಂದರೆ ನೀವು ಸಿರಿ ವಾಯ್ಸ್ ಕಮಾಂಡ್ ಮೂಲಕ ಕೂಡ ಕಂಟ್ರೋಲ್ ಮಾಡಬಹುದು. ಬೆಲೆ: ಆರಂಭಿಕ ಬೆಲೆ ಅಮೇಜಾನಿನಲ್ಲಿ 1,929 ರುಪಾಯಿ ಆಗಿದೆ

ವಿಪ್ರೋ ನೆಕ್ಸ್ಟ್ ಸ್ಮಾರ್ಟ್ ಎಲ್ ಇಡಿ ಬಟೆನ್

ವಿಪ್ರೋ ನೆಕ್ಸ್ಟ್ ಸ್ಮಾರ್ಟ್ ಎಲ್ ಇಡಿ ಬಟೆನ್

ಒಂದು ವೇಳೆ ನೀವು ಬಲ್ಬ್ ಗಳು ತುಂಬಾ ಚಿಕ್ಕದು ಎಂದು ಭಾವಿಸುತ್ತಿದ್ದರೆ ಮತ್ತು ನೀವಂದುಕೊಂಡ ಕೆಲಸ ಮಾಡಲು ಅವುಗಳು ನೆರವಾಗುತ್ತಿಲ್ಲವಾದರೆ ವಿಪ್ರೋ ಕಂಪೆನಿಯ ಎಲ್ಇಡಿ ಬಟೆನ್ ನ್ನು ಖರೀದಿಸಬಹುದು. ಇವು ಹಳೆಯ ಸ್ಕೂಲ್ ಟ್ಯೂಬ್ ಲೈಟ್ ಗಳನ್ನು ರಿಪ್ಲೇಸ್ ಮಾಡುತ್ತದೆ ಮತ್ತು ವಿಪ್ರೋ ನೆಕ್ಸ್ಟ್ ಸ್ಮಾರ್ಟ್ ಆಪ್ ಕೂಡ ನಿಮ್ಮ ಫೋನಿನಿಂದಲೇ ಇವುಗಳನ್ನು ಕಂಟ್ರೋಲ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಇಕೋ ಮತ್ತು ಗೂಗಲ್ ಹೋಮ್ ಬೆಂಬಲವೂ ಕೂಡ ಇದರಲ್ಲಿ ಲಭ್ಯವಿರುತ್ತದೆ.

ಇದರಲ್ಲಿ ಕೆಲವು ವಿಭಿನ್ನ ಶೇಡಿನ ಬಿಳಿ ಬಣ್ಣವಿರುತ್ತದೆ ಮತ್ತು ಪ್ರಕಾಶತೆಯನ್ನು ಮಾನ್ಯುವಲ್ ಆಗಿ ಸೆಟ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಲೈಟ್ ಆನ್ ಆಫ್ ಆಗುವಾಗ ಅದನ್ನು ಕಲರ್ ಸೆಟ್ಟಿಂಗ್ಸ್ ನ ಸೆಟ್ ಮೋಡ್ ಬಳಸಿ ಸೆಟ್ ಮಾಡಬಹುದು. ಬೆಲೆ: ಅಮೇಜಾನಿನಲ್ಲಿ 1,499 ರುಪಾಯಿಗಳು

ಈಲೈಟ್ ಎಲ್ಇಡಿ ಬಲ್ಬ್ ಗಳು

ಈಲೈಟ್ ಎಲ್ಇಡಿ ಬಲ್ಬ್ ಗಳು

ಶಿಯೋಮಿ ಮಾಲೀಕತ್ವದ ಇದು ಇತ್ತೀಚೆಗೆ ಭಾರತಕ್ಕೆ ಪ್ರವೇಶಿಸಿದೆ. ಆಫರ್ ನಲ್ಲಿ ಕೆಲವು ಅಧ್ಬುತ ಪ್ರೊಡಕ್ಟ್ ಗಳು ಇದರಲ್ಲಿದೆ. ಈಲೈಟ್ ಸ್ಮಾರ್ಟ್ ಎಲ್ಇಡಿ ಬಲ್ಬ್ ಗಳನ್ನು ಎಂಐ ಹೋಮ್ ಆಪ್ ಗಳಿಂದ ಕಂಟ್ರೋಲ್ ಮಾಡೂಬಹುದು. ಇದರಲ್ಲಿ ಎರಡು ವಿಭಿನ್ನ ವೇರಿಯಂಟ್ ಗಳಿವೆ. ಕಲರ್ ಮತ್ತು ಟ್ಯೂನೇಬಲ್ ವೈಟ್. ಬ್ರೈಟ್ ನೆಸ್ ನ್ನು ಕಂಟ್ರೋಲ್ ಮಾಡಬಹುದು, ದಿನದ ಬೇರೆಬೇರೆ ಸಮಯಕ್ಕೆ ಸರಿಯಾಗಿ ವಿಭಿನ್ನ ಮೋಡ್ ಗಳನ್ನು ಸೆಟ್ ಮಾಡಬಹುದು ಮತ್ತು ಇದು ಇಕೋ, ಗೂಗಲ್ ಹೋಮ್ ಡಿವೈಸ್ ಗಳಲ್ಲೂ ಕೂಡ ಕೆಲಸ ಮಾಡುತ್ತದೆ. ಬೆಲೆ: ಆರಂಭಿಕವಾಗಿ 1,499 ರುಪಾಯಿಗಳು

ಹೋಮ್ ಮೇಟ್ ವೈ-ಫೈ ಮಲ್ಟಿಕಲರ್ ಸ್ಮಾರ್ಟ್ ಎಲ್ಇಡಿ ಸ್ಟ್ರೈಪ್

ಹೋಮ್ ಮೇಟ್ ವೈ-ಫೈ ಮಲ್ಟಿಕಲರ್ ಸ್ಮಾರ್ಟ್ ಎಲ್ಇಡಿ ಸ್ಟ್ರೈಪ್

ಇದು 5 ಮತ್ತು 10 ಮೀಟರ್ ವೇರಿಯಂಟ್ ನಲ್ಲಿ ಲಭ್ಯವಿದೆ. ಸ್ಮಾರ್ಟ್ ಎಲ್ಇಡಿ ಸ್ಟ್ರೈಪ್ ನ್ನು ಬಳಸಿ ವಿಭಿನ್ನ ಮೋಡ್ ಗಳನ್ನು ಸೆಟ್ ಮಾಡಬಹುದು ಮತ್ತು ಫೆಸ್ಟಿವಲ್ ಲೈಟಿಂಗ್ ಗೆ ಇದನ್ನು ಬಳಕೆ ಮಾಡಬಹುದು. ಕಂಪೆನಿಯು ಕೆಲವು ಕ್ರಿಯೇಟಿವ್ ವಿಧಾನಗಳನ್ನು ಕೂಡ ಆಫರ್ ಮಾಡುತ್ತದೆ. ಅಲೆಕ್ಸಾ ಮತ್ತು ಗೂಗಲ್ ಹೋಮ್ ಸಪೋರ್ಟ್ ಇದರಲ್ಲಿದೆ. ಕಂಪೆನಿಯ ಸ್ವಂತ ಆಪ್ ಮೂಲಕವೂ ಕಂಟ್ರೋಲ್ ಮಾಡಬಹುದು. ಬೆಲೆ:ಅಮೇಜಾನ್ ನಲ್ಲಿ 2,790 ರುಪಾಯಿಗಳು.

Best Mobiles in India

Read more about:
English summary
5 smart lighting solutions to brighten up your home

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X