ಎಚ್ಚರಿಕೆ!.ನಿಮ್ಮ ಚಲನವಲನಗಳ ಮೇಲೆ ನಿಗಾ ಇಡಬಹುದು 'ಸ್ಪೈ ಆಪ್‌ಗಳು'!

|

ಸ್ಮಾರ್ಟ್‌ಫೋನ್‌ ಬಿಟ್ಟಿರಲು ಆಗದು ಎನ್ನುವ ಮಟ್ಟಿಗೆ ನಂಟನ್ನು ಬೇಸದುಕೊಂಡಿದ್ದು, ಇದಕ್ಕೆ ಮಕ್ಕಳು ಹೊರತಾಗಿಲ್ಲ. ಹೀಗಾಗಿ ಪ್ರಸ್ತುತ ಟೆಕ್ನಾಲಜಿ ಜಗತ್ತನ್ನು ಚಿಕ್ಕದಾಗಿ ಮಾಡಿದ್ದು, ಅಂಗೈಯಲ್ಲಿರುವ ಸ್ಮಾರ್ಟ್‌ಫೋನ್‌ನಿಂದಲೇ ಎಲ್ಲವನ್ನು ನಿಯಂತ್ರಿಸುವಂತಾಗಿದೆ. ಈ ನಿಟ್ಟಿನಲ್ಲಿ ಆಪ್ತರು ಮತ್ತು ಮಕ್ಕಳು ಸ್ಮಾರ್ಟ್‌ಫೋನ್‌ನಲ್ಲಿ ಏನು ಮಾಡುತ್ತಿದ್ದಾರೆ ಮತ್ತು ಸ್ಮಾರ್ಟ್‌ಫೋನ್‌ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ಗ್ರಹಿಸಲು ಸ್ಪೈ ಆಪ್‌ಗಳ ಕಣ್ಣಿಟ್ಟಿರಲಿವೆ ಎಚ್ಚರಿಕೆ.

ಎಚ್ಚರಿಕೆ!.ನಿಮ್ಮ ಚಲನವಲನಗಳ ಮೇಲೆ ನಿಗಾ ಇಡಬಹುದು 'ಸ್ಪೈ ಆಪ್‌ಗಳು'!

ಹೌದು, ಈ ಸ್ಪೈ ಆಪ್‌ಗಳನ್ನು ಬಳಸಿಕೊಂಡು ಆಪ್ತರು ಮತ್ತು ಮಕ್ಕಳು ಸ್ಮಾರ್ಟ್‌ಫೋನ್‌ಗಳಲ್ಲಿ ಏನು ಮಾಡುತ್ತಿದ್ದಾರೆ ಎಂಬುದರ ನಿಗಾ ಇಡಲು ಬಳಸಲಾಗುತ್ತಿದೆ. ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ ಆಯ್ಕೆ ಬಳಸಿ ಈ ಸ್ಪೈ ಆಪ್‌ಗಳು ಬಳಕೆದಾರರ ಖಾಸಗಿ ಚಲನವಲನಗಳನ್ನು ಗಮನಿಸುತ್ತವೆ ಮತ್ತು ಅವರ ಲೊಕೇಶನ್ ಗುರುತಿಸುವ ಆಯ್ಕೆಗಳನ್ನು ಸಹ ಹೊಂದಿವೆ. ಹಾಗಾದರೇ 5 ಸ್ಪೈ ಆಪ್‌ಗಳ ಯಾವುವು ಮತ್ತು ಅವುಗಳ ವಿಶೇಷತೆಯೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

1. ಸ್ಪೈರಾ

1. ಸ್ಪೈರಾ

ಸ್ಪೈರಾ ಇದು ಒಂದು ಸ್ಪೈ ಆಪ್‌ ಆಗಿದ್ದು, ಇತ್ತೀಚಿನ ಕೇಲವು ಐಫೋನ್‌ ಮತ್ತು ಆಂಡ್ರಾಯ್ಡ್‌ ಮಾದರಿ ಫೋನ್‌ಗಳಲ್ಲಿ ಪ್ರಿ ಇನ್‌ಸ್ಟಾಲ್‌ ಆಗಿ ಬರುತ್ತಿವೆ. ಇದು ಸ್ಮಾರ್ಟ್‌ಫೋನಿನ ಮೈಕ್ರೊಫೋನ್‌ ಅನ್ನು ಬಳಸಿಕೊಂಡು, ಸುತ್ತಮುತ್ತಲಿನ ವಾಯಿಸ್‌ ರೆಕಾರ್ಡ್‌ ಮಾಡಿಕೊಳ್ಳವ ಸಾಮರ್ಥ್ಯವನ್ನು ಹೊಂದಿದೆ. ಹಾಗೇ ಚಲನವಲನವನ್ನು ದಾಖಲಿಸಿಕೊಳ್ಳಲಿದ್ದು, ನೀವು ಮಾಡುವ ಮೆಸೆಜ್, ಟೆಕ್ಸ್ಟ್‌, ವಾಯಿಸ್‌ ಕರೆಗಳು ಸೇರಿದಂತೆ, ವಾಟ್ಸ್‌ಪ್‌, ವೈಬ್, ಸ್ಕೈಪ್‌, ವಿಚಾಟ್‌ ಆಪ್‌ಗಳ ಮೇಲೂ ಗಮನವಹಿಸಲಿದೆ. ನೀವು ಸೆರೆಹಿಡಿಯುವ ಫೋಟೋಗಳನ್ನು ಸಹ ದಾಖಲಿಸಿಕೊಳ್ಳಲಿದೆ. ಒಂದು ವರ್ಷದ ಸ್ಪೈ ಚಾರ್ಜ್‌ ಸುಮಾರು. 26,985ರೂ.ಗಳು ಆಗಿದೆ.

2.ದಿ ಒನ್‌ ಸ್ಪೈ

2.ದಿ ಒನ್‌ ಸ್ಪೈ

ಐಫೋನ್‌ ಮತ್ತು ಐಪೊಡ್‌ ಬಳಕೆದಾರರಿಗೆ ದಿ ಒನ್‌ ಸ್ಪೈ ಆಪ್‌ ಉಪಯುಕ್ತವೆನಿಸಲಿದೆ. ಏಕೆಂದರೇ ಇದು ಮುಖ್ಯವಾಗಿ ಐಓಎಸ್‌ ಆಪರೇಟಿಂಗ್ ಸಿಸ್ಟಂ ಡಿವೈಸ್‌ಗಳನ್ನು ಟಾರ್ಗೆಟ್ ಮಾಡಲಿದೆ. ಈ ಆಪ್‌ ಡಿವೈಸ್‌ನ ಕ್ಯಾಮೆರಾ, ಕರೆ, ಟೆಕ್ಸ್ಟ್, ಮೈಕ್ರೊಫೋನ್ ಆಯ್ಕೆಗಳನ್ನು ಆಸ್ಸೆಸ್‌ ಮಾಡಿಕೊಳ್ಳಲಿದ್ದು, ಒಂದು ಬಾರಿ ಆಪ್‌ ಅನ್ನು ಇನ್‌ಸ್ಟಾಲ್ ಮಾಡಿದರೇ ಡಿವೈಸ್‌ನ ಸಂಪೂರ್ಣ ಸ್ಪೈ ವರದಿ ತೆಗೆದುಬಿಡುತ್ತದೆ. 30 ದಿನಗಳ ಸ್ಪೈ ನಿಗಾ ಇಡಲು 1,248ರೂ.ಗಳ ವೆಚ್ಚ ಆಗಲಿದೆ.

3.ಫ್ಲೆಕ್ಸಿ ಸ್ಪೈ

3.ಫ್ಲೆಕ್ಸಿ ಸ್ಪೈ

ಉಳಿದ ಸ್ಪೈ ಆಪ್‌ಗಳಂತೆ ಈ ಫ್ಲೆಕ್ಸಿ ಸ್ಪೈ ಆಪ್‌ ಇನ್‌ಸ್ಟಾಲ್‌ ಮಾಡಿಕೊಂಡರೇ ಆಕ್ಟಿವಿಟಿಯ ಮೇಲೆ ನಿಗಾ ಇಡಲಿದೆ. ಮೆಸೆಜ್‌, ಆಡಿಯೊ ಮತ್ತು ಡೇಟಾಗಳ ಜೊತೆಗೆ ಜಿಪಿಎಸ್‌ ಲೊಕೇಶನ್, ಪಾಸ್‌ವರ್ಡ್‌ ಮತ್ತು ಇತರೆ ಆಪ್‌ಗಳ ಮೇಲೆ ಕಣ್ಣಿಟ್ಟಿರಲಿದೆ. ಮೊಬೈಲ್‌ನ ಅಪ್ಲಿಕೇಶನ್ ಮ್ಯಾನೆಜರ್‌ನಲ್ಲಿ ಈ ಆಪ್ ಕಾಣಿಸಿಕೊಳ್ಳುವುದಿಲ್ಲ. ಈ ಆಪ್‌ನ ಪ್ರೀಮಿಯಮ್ ಪ್ಲ್ಯಾನಿನ ಒಂದು ತಿಂಗಳ ವೆಚ್ಚವು 4,716.ರೂ.ಗಳು ಆಗಿರಲಿದೆ.

4.ಎಮ್‌ ಸ್ಪೈ

4.ಎಮ್‌ ಸ್ಪೈ

ಆಕ್ಟಿವಿಟಿಗಳ ನಿಗಾ ಇಡಲು ಎಮ್‌ಸ್ಪೈ ಸೂಕ್ತವೆನಿಸಲಿದ್ದು, ಇದು ಜಿಪಿಎಸ್‌, ಕರೆ, ಟೆಕ್ಸ್ಟ್‌, ಆಪ್‌ಗಳನ್ನು ಕಣ್ಣಾವಲಿನಲ್ಲಿರಿಸಿಕೊಳ್ಳಲಿದ್ದು, ಹಾಗೇ ಕರೆಗಳನ್ನು ನಿ‍ಷೇಧಿಸುವ ಆಯ್ಕೆಯನ್ನು ಹೊಂದಿದೆ. ನೀವು ಸೂಚಿಸಿರುವ ನಂಬರ್‌ನಿಂದ ಕರೆಬಂದರೆ ಅದನ್ನು ತಡೆಯುವ ಆಯ್ಕೆ ಇದ್ದು, ಮಕ್ಕಳ ಮೇಲೆ ನಿಗಾ ಇಡಬಯಸುವ ಪಾಲಕರು ಈ ಆಪ್ ಬಳಸಬಹುದಾಗಿದೆ. ಫೋನ್‌ ಮತ್ತು ಡೆಸ್ಕ್‌ಟಾಪ್‌ನ ಎರಡು ಮಾದರಿಯ ಕಿಟ್‌ಗಳಲ್ಲಿ ದೊರೆಯಲಿದೆ. ಈ ಕಿಟ್‌ನ ತಿಂಗಳ ವೆಚ್ಚ ಸುಮಾರು 1,386.51ರೂ.ಗಳ ಆಗಿರಲಿವೆ.

5. ಹೈಸ್ಟರ್ ಮೊಬೈಲ್

5. ಹೈಸ್ಟರ್ ಮೊಬೈಲ್

ಈ ಹೈಸ್ಟರ್ ಸ್ಪೈ ಆಪ್ ನಿವು ಬಳಸುವ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಸ್ಕೈಪ್‌, ವಾಟ್ಸಪ್ ಸೇರಿದಂತೆ ಇತರೆ ಆಪ್‌ಗಳ ಮೇಲೆ ನಿಗಾ ಇರಿಸಲಿದೆ. ರಿಮೋಟ್‌ ಮಾದರಿಯಲ್ಲಿ ಇನ್‌ಸ್ಟಾಲ್‌ ಮಾಡಬಹುದಾಗಿದ್ದು, ಬೇಡದ ಆಪ್‌ಗಳನ್ನು ಬ್ಲಾಕ್‌ ಮಾಡಬಹುದಾಗಿದೆ. ಹೈಸ್ಟರ್ ಮೊಬೈಲ್ ಸ್ಪೈ ಆಪ್‌ ವಿಶೇಷವೆಂದರೇ ಡಿಲೀಟ್ ಮಾಡಿದ ಮೆಸ್ಸೆಜ್ ಮತ್ತು ಡೇಟಾಗಳ ಬಗ್ಗೆಯು ಕಣ್ಣಿರಿಸಲಿದೆ . ಟಾರ್ಗೆಟ್‌ ಮಾಡಿದ ಡಿವೈಸ್‌ ಅನ್ನು ಲಾಕ್ ಮಾಡಬಹುದಾಗದೆ. ಒಂದು ಬಾರಿ ತಗಲುವ ವೆಚ್ಚ್ 4,852.96ರೂ.ಗಳ ಆಗಿರಲಿದೆ.

ಕೊನೆಯ ಮಾತು

ಕೊನೆಯ ಮಾತು

ಹೊಸ ತಂತ್ರಜ್ಞಾನಗಳು ಬೇಕು ಅದು ಒಳ್ಳೆಯ ಬೆಳವಣಿಗೆಯೇ ಸರಿ. ಪ್ರಸ್ತುತ ತಂತ್ರಜ್ಞಾನದಿಂದ ಅಗತ್ಯವು ಹೌದು ಮತ್ತು ತುಂಬಾ ಉಪಯುಕ್ತವು ಆಗಿದೆ. ಹಾಗೇ ಸ್ಪೈ ಆಪ್‌ಗಳು ಉಪಯುಕ್ತ ನಿಜ ಆದರೆ ಅವುಗಳನ್ನು ಬಳಸುವ ಉದ್ದೇಶ ಸರಿದಾರಿಯಲ್ಲಿರಲಿ.

ಓದಿರಿ : ವಿಶ್ವದ ಈ 10 ದುಬಾರಿ ಫೋನ್‌ಗಳ ಬೆಲೆ ಕೇಳಿದ್ರೆ ನೀವು ಬೆರಗಾಗೊದು ಪಕ್ಕಾ!ಓದಿರಿ : ವಿಶ್ವದ ಈ 10 ದುಬಾರಿ ಫೋನ್‌ಗಳ ಬೆಲೆ ಕೇಳಿದ್ರೆ ನೀವು ಬೆರಗಾಗೊದು ಪಕ್ಕಾ!

Best Mobiles in India

English summary
5 smartphone spy apps that could be listening and watching you right now.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X