ACT 'ಸ್ಟ್ರೀಮ್ ಟಿವಿ 4K' ಅತ್ಯುತ್ತಮ ಮನರಂಜನೆ ಸಾಧನ!..ವಿಮರ್ಶೆ!

|

ಪ್ರತಿಷ್ಠಿತ ಬ್ರಾಡ್‌ಬ್ಯಾಂಡ್‌ ಸಂಸ್ಥೆಗಳಲ್ಲಿ ಒಂದಾದ 'ಎಸಿಟಿ' (ACT- ಆಟ್ರಿಯಾ ಕನ್ವರ್ಜೆನ್ಸ್ ಟೆಕ್ನಾಲಜೀಸ್ ಲಿಮಿಟೆಡ್) ಕಂಪನಿಯು ಈಗಾಗಲೇ ದಕ್ಷಿಣ ಭಾರತದಲ್ಲಿ ಜನಪ್ರಿಯ ಹೆಸರನ್ನು ಪಡೆದಿದೆ. ಕಡಿಮೆ ಬೆಲೆಯ ಪ್ಲ್ಯಾನ್‌ಗಳನ್ನು ಪರಿಚಯಿಸಿರುವ ಎಸಿಟಿ ಬ್ರಾಡ್‌ಬ್ಯಾಂಡ್‌ ಡೌನ್‌ಲೋಡಿಂಗ್ ವೇಗವು ಗಿಗಾಬೈಟ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಗ್ರಾಹಕರಿಗೆ 'ಸ್ಟ್ರೀಮ್ ಟಿವಿ 4K' ಡಿವೈಸ್‌ ಪರಿಚಯಿಸಿದೆ.

ACT 'ಸ್ಟ್ರೀಮ್ ಟಿವಿ 4K' ಅತ್ಯುತ್ತಮ ಮನರಂಜನೆ ಸಾಧನ!..ವಿಮರ್ಶೆ!

ಹೌದು, ಎಟಿಸಿ ಸಂಸ್ಥೆಯು ಹೊಸದಾಗಿ 'ಸ್ಟ್ರೀಮ್ ಟಿವಿ 4K' ಡಿವೈಸ್‌ ಪರಿಚಯಿಸಿದೆ. ಡಿವೈಸ್‌ಗೆ 1,500ರೂ. ಶುಲ್ಕ ನಿಗದಿಮಾಡಿದ್ದು, ಇದರಲ್ಲಿ ಸದಸ್ಯತ್ವ ಮತ್ತು ವಿಶೇಷ ವಿಡಿಯೊ ಸ್ಟ್ರೀಮಿಂಗ್ ಡೇಟಾ ಪ್ಲ್ಯಾನ್‌ ಸಹ ಲಭ್ಯವಾಗಲಿದೆ. ಕಂಪನಿಯ ಡೇಟಾ ಪ್ಲ್ಯಾನ್‌ಗಳು ಕಡಿಮೆ ದರದಲ್ಲಿದ್ದು, ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ ತಾಣಗಳಾದ ಅಮೆಜಾನ್ ಪ್ರೈಮ್‌ ಮತ್ತು ನೆಟ್‌ಫ್ಲಿಕ್ಸ್‌ ವೀಕ್ಷಣೆಗೆ ಪೂಕರವಾಗಿದೆ. ಹೀಗಾಗಿ ಈ ಹೊಸ ಡಿವೈಸ್ ಮನರಂಜನೆ ಒದಗಿಸುವ ಒಂದು ಅತ್ಯುತ್ತಮ ಡಿವೈಸ್‌ ಆಗಿದೆ.

ACT 'ಸ್ಟ್ರೀಮ್ ಟಿವಿ 4K' ಅತ್ಯುತ್ತಮ ಮನರಂಜನೆ ಸಾಧನ!..ವಿಮರ್ಶೆ!

ಎಸಿಟಿ ಬ್ರಾಡ್‌ಬ್ಯಾಂಡ್ ಬೆಂಬಲಿತ 'ಸ್ಟ್ರೀಮ್ ಟಿವಿ 4K' ಡಿವೈಸ್‌ ಬಿಲ್ಟ್‌ಇನ್‌ ನೆಟ್‌ಫ್ಲಿಕ್ಸ್‌ ಆಪ್‌ ಹೊಂದಿದ್ದು, ಇತ್ತೀಚಿನ ಆಂಡ್ರಾಯ್ಡ್‌ ಓಎಸ್‌ ಬೆಂಬಲವನ್ನು ಒಳಗೊಂಡಿದೆ. ಇದರೊಂದಿಗೆ 4K ಸ್ಟ್ರಿಮಿಂಗ್ ಸೌಲಭ್ಯವನ್ನು ಹೊಂದಿದೆ. ಕೆಲವು ವಾರದಿಂದ ಈ ಡಿವೈಸ್‌ ನಾವು ಬಳಸಿದ್ದು, ಆ ಆಧಾರದ ಮೇಲೆ ಎಸಿಟಿ ಸ್ಟ್ರೀಮ್ ಟಿವಿ 4K ಡಿವೈಸ್‌ನ ಸೌಲಭ್ಯಗಳ ಮತ್ತು ಕಾರ್ಯವೈಖರಿ ಕುರಿತು ವಿಮರ್ಶೆ ಮಾಡಲಾಗಿದೆ. ಮುಂದೆ ಓದಿರಿ.

ಕೀ ಫೀಚರ್ಸ್‌ಗಳು

ಕೀ ಫೀಚರ್ಸ್‌ಗಳು

* ಹಿಲಿಯೊ ಸಿಲಿಕಾನ್ 3798M V200 ಪ್ರೊಸೆಸರ್.
* ಆಂಡ್ರಾಯ್ಡ್‌ ಟಿವಿ ಬೆಂಬಲಿತ ಆಂಡ್ರಾಯ್ಡ್‌ 9 ಪೈ ಓಎಸ್‌.
* 2GB RAM ಮತ್ತು 8ROM.
* ಡ್ಯುಯಲ್ ಚಾನೆಲ್ ವೈಫೈ ಮತ್ತು ಲ್ಯಾನ್‌(LAN).
* 2 x USB-A ಪೋರ್ಟ್ಸ್‌, ಮೈಕ್ರೊಎಸ್‌ಡಿ ಕಾರ್ಡ್‌ ಸ್ಲಾಟ್‌, HDMI, AV.

ಡಿಸೈನ್ ಹೇಗಿದೆ

ಡಿಸೈನ್ ಹೇಗಿದೆ

ಎಸಿಟಿ 'ಸ್ಟ್ರೀಮ್ ಟಿವಿ 4K' ಡಿವೈಸ್‌ ಮಿನಿ ಸೆಟ್‌ಅಪ್‌ ಬಾಕ್ಸ್‌ ತರಹ ಕಾಣುತ್ತದೆ. ಕಪ್ಪು ಕಣ್ಣದಲ್ಲಿರುವ ಈ ಡಿವೈಸ್ ಮೇಲ್ಭಾಗದಲ್ಲಿ ಕಂಪನಿಯ ಎಸಿಟಿ ಲೊಗೊ ರಚನೆ ನೀಡಲಾಗಿದೆ. ಹಾಗೆಯೇ ಡಿವೈಸ್‌ ಹಿಂಭಾಗದಲ್ಲಿ SPDIF ಆಡಿಯೊ ಔಟ್‌ಪುಟ್‌ ಪೋರ್ಟ್‌, ಫುಲ್‌ಸೈಜ್‌ ಎಚ್‌ಡಿಎಮ್‌ಐ ಪೋರ್ಟ್‌, ಆಡಿಯೊ ಜಾಕ್, ಮೈಕ್ರೊ ಎಸ್‌ಡಿ ಕಾರ್ಡ್‌ಗೆ ಅವಕಾಶದ ಆಯ್ಕೆಗಳನ್ನು ನೀಡಲಾಗಿದೆ. ಇದರೊಂದಿಗೆ ಎಲ್‌ಇಡಿ ಲೈಟ್‌ ಇದ್ದು, ಅದು ವಿವಿಧ ಮೋಡ್‌ಗಳ ಇಂಡಿಕೇಶನ್ ನೀಡುತ್ತದೆ.

ಅನುಕೂಲಕರ ಫೀಚರ್ಸ್‌ಗಳು

ಅನುಕೂಲಕರ ಫೀಚರ್ಸ್‌ಗಳು

ಎಸಿಟಿ 'ಸ್ಟ್ರೀಮ್ ಟಿವಿ 4K' ಡಿವೈಸ್‌ ಡಿಜಿಟಲ್‌ ಸೆಟ್‌ಅಪ್‌ಬಾಕ್ಸ್ ಒಳಗೊಂಡಿದ್ದು, ಸಾಮಾನ್ಯ ಟಿವಿಯನ್ನು ಸ್ಮಾರ್ಟ್‌ ಟಿವಿ ರೂಪಕ್ಕೆ ಬದಲಾಯಿಸುತ್ತದೆ. ಮುಖ್ಯವಾಗಿ ಇದು ಎಸಿಟಿ ಬ್ರಾಡ್‌ಬ್ಯಾಂಡ್‌ ಸಂಪರ್ಕದಲ್ಲಿ ಕಾರ್ಯನಿರ್ವಹಿಸಲಿದ್ದು, ಹೀಗಾಗಿ ಸ್ಟ್ರೀಮ್ ಟಿವಿ 4K ಬಾಕ್ಸ್‌ಗೆ ಎಸಿಟಿ ಇಂಟರ್ನೆಟ್‌ ಸೇವೆಯನ್ನು ವೈಫೈ ಅಥವಾ ಕೇಬಲ್ ಮೂಲಕ ಕನೆಕ್ಟ್‌ ಮಾಡಬೇಕು.ಹಾಗೆಯೇ ನೆಟ್‌ಫ್ಲಿಕ್ಸ್, ಸನ್‌ನೆಕ್ಸ್‌, ಯೂಟ್ಯೂಬ್, ಸೋನಿ ಲೈವ್ ಸೇರಿದಂತೆ ಹಲವು ವಿಡಿಯೊ ಸ್ಟ್ರಿಮಿಂಗ್ ಆಪ್‌ಗಳ ಬೆಂಬಲ ಇದ್ದು, ಅಮೆಜಾನ್ ಪ್ರೈಮ್ ಸೇವೆ ಅಲಭ್ಯವಾಗಿದೆ. ಪ್ಲೇ ಸ್ಟೋರ್‌ನಲ್ಲಿಯೂ ಲಭ್ಯವಾಗಿಲ್ಲ. ಟಿವಿ ರಿಮೋಟ್‌ ಬಿಲ್ಟ್‌ಇನ್ ಮೈಕ್ರೊಫೋನ್‌ ಸೌಲಭ್ಯ ಪಡೆದಿದ್ದು, ವಾಯಿಸ್‌ ಕಮಾಂಡ್ ಬೆಂಬಲಿಸಲಿದೆ. ವಿಡಿಯೊ ಸ್ಟ್ರಿಮಿಂಗ್ ಆಪ್ಸ್‌ ಅಗತ್ಯ ಬಟನ್ ನೀಡಲಾಗಿದೆ.

ನಾವು ಗಮನಿಸಿದ ಅಂಶಗಳು

ನಾವು ಗಮನಿಸಿದ ಅಂಶಗಳು

ಎಸ್‌ಡಿಕಾರ್ಡ್‌ ಮತ್ತು ಯುಎಸ್‌ಬಿ-ಎ ಫೋರ್ಟ್‌ ಬಾಹ್ಯ ಸ್ಟೋರೇಜ್ ಅಗತ್ಯ ಎನಿಸಿದ್ದು, ಇಂಟರ್ನೆಟ್‌ ಸಂಪರ್ಕ ಇಲ್ಲದಾಗ ಡಿವೈಸ್‌ಗೆ ಪೆನ್‌ಡ್ರೈವ್ ಕನೆಕ್ಟ್ ಮಾಡಿ ಸಿನಿಮಾ ವೀಕ್ಷಿಸಬಹುದು. ಹಾಗೆಯೇ ಯಾವುದೇ ಅಡೆತಡೆ ಇಲ್ಲದೇ Mp4, AVI ಮತ್ತು MKV ಮಾದರಿಯ ವಿಡಿಯೊ ಫಾರ್ಮೇಟ್‌ಗಳನ್ನು ಸಪೋರ್ಟ್ ಮಾಡುತ್ತದೆ. ಇದರೊಂದಿಗೆ VLC ಆಪ್‌ ಅನ್ನು ಸಹ ಬೆಂಬಲಿಸುವುದು ವಿಶೇಷ.

ಡಿವೈಸ್‌ ಸೆಟ್‌ಅಪ್

ಡಿವೈಸ್‌ ಸೆಟ್‌ಅಪ್

ಎಸಿಟಿ 'ಸ್ಟ್ರೀಮ್ ಟಿವಿ 4K' ಡಿವೈಸ್‌ ಅನ್ನು ಸೆಟ್‌ಅಪ್‌ ಮಾಡುವುದು ಸುಲಭವಾಗಿದ್ದು, ಡಿವೈಸ್‌ ಅನ್ನು ಗೂಗಲ್ ಅಕೌಂಟ್ ಲಾಗ್‌ಇನ್ ಮಾಡಬೇಕು. ಬಿಲ್ಟ್‌ಇನ್ ಇರುವ ವಿಡಿಯೊ ಸ್ಟ್ರಿಮಿಂಗ್ ಆಪ್‌ಗಳನ್ನು ಪ್ರತ್ಯೇಕವಾಗಿ ಲಾಗ್‌ಇನ್ ಆಗಬೇಕು. 2.4GHz ಮತ್ತು 5.0GHz ಹಾಗೂ ವೈ ಫೈ ನೆಟ್‌ವರ್ಕ್ ಸೌಲಭ್ಯವನ್ನು ಪಡೆದಿರುವುದು ವಿಶೇಷ ಪ್ರಯೋಜನಗಳಾಗಿ ಗಮನ ಸೆಳೆಯುತ್ತವೆ.

ಕೊನೆಯ ನುಡಿ

ಕೊನೆಯ ನುಡಿ

ಎಸಿಟಿ 'ಸ್ಟ್ರೀಮ್ ಟಿವಿ 4K' ಡಿವೈಸ್‌ ಅತ್ಯುತ್ತಮ ಮನರಂಜನೆಯ ಸಾಧನವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅಮೆಜಾನ್ ಪ್ರೈಮ್ ಸೇವೆ ಇದ್ರಲ್ಲಿಲ್ಲ ಎನ್ನುವುದು ಮತ್ತು ಇದು ಎಸಿಟಿ ಬ್ರಾಡ್‌ಬ್ಯಾಂಡ್‌ ಕನೆಕ್ಷನ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸಲಿದ್ದು, ಎನ್ನುವುದು ಡಿಮೇರಿಟ್‌ ಪಾಯಿಂಟ್‌ಗಳಾಗಿವೆ. ಉಳಿದಂತೆ ಇತ್ತೀಚಿಗೆ ಸ್ಮಾರ್ಟ್‌ಟಿವಿಗಳು ಒಳಗೊಂಡಿರುವ ಫೀಚರ್ಸ್‌ಗಳನ್ನು ಈ ಡಿವೈಸ್‌ ಹೊಂದಿದ್ದು, ನಿಮ್ಮ ಬಳಿ ನಾನ್‌-ಸ್ಮಾರ್ಟ್‌ಟಿವಿ ಇದ್ದರೇ, ಆ ಟಿವಿಗೆ 'ಸ್ಟ್ರೀಮ್ ಟಿವಿ 4K' ಡಿವೈಸ್‌ ಬಳಸುವು ಮೂಲಕ ಸ್ಮಾರ್ಟ್‌ ಲುಕ್ ಪಡೆಯಬಹುದು.

Best Mobiles in India

English summary
ACT has now released the ACT Stream TV 4K for its broadband subscribers with special streaming data plans for just Rs. 1,500. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X