ಈ ಅದ್ಬುತ ‘ಏರ್‌ ಸೆಲ್ಫೀ’ ಡ್ರೋಣ್ ಬಗ್ಗೆ ತಿಳಿದರೆ ಶಾಕ್ ಆಗ್ತೀರಾ!!

|

ಅಪಾಯಕಾರಿ ಸ್ಥಳದಲ್ಲಿಯೇ ಸೆಲ್ಫೀ ಕ್ಲಿಕ್ಕಿಸಲು ಹರಸಾಹಸ ಪಡುವ ಎಷ್ಟೋ ಜನರು ಸಾವನಪ್ಪಿರುವುದನ್ನು ನೀವು ಕೆಳಿದ್ದೀರಾ ಅಲ್ಲವೆ? ಆದರೆ, ಕೈಗಳಲ್ಲಿ ಮೊಬೈಲ್ ಹಿಡಿಯದೇ, ಸೆಲ್ಫೀ ಸ್ಟಿಕ್ ಬಳಸಸೇ ಅಪಾಯಕಾರಿ ಜಾಗಗಳಲ್ಲಿ ನಿಂತು ಸೆಲ್ಫೀ ತೆಗೆದುಕೊಳ್ಳುವುದನ್ನು ತಡೆಯಲು 'ಏರ್‌ ಸೆಲ್ಫೀ ಎಂಬ ಹೊಸ ಗ್ಯಾಜೆಟ್ ಮಾರುಕಟ್ಟೆಗೆ ಬಂದಿದೆ.

ನಾನಾ ಶೈಲಿಯಲ್ಲಿ ಯಾವುದೇ ಅಪಾಯಕಾರಿ ಸ್ಥಳಗಳಲ್ಲಿಯೂ ಆರಾಮಾಗಿ ಸೆಲ್ಫೀ ಕ್ಲಿಕ್ಕಿಸಿಕೊಳ್ಳುವ ಸಾಧನವೊಂದು ರೂಪಿತಗೊಂಡಿದೆ. ಗಾಳಿಯಲ್ಲಿ ತೇಲಿಬಿಟ್ಟು ತೆಗೆದುಕೊಳ್ಳುವ ಸೆಲ್ಫೀ ಸಾಧನ 'ಏರ್‌ ಸೆಲ್ಫೀ' ಸೆಲ್ಫೀ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಮಾರುಕಟ್ಟೆಗೆ ಬಿಡುಗಡೆಯಾಗಿ ಗ್ಯಾಜೆಟ್ ಲೋಕದಲ್ಲಿ ಚಿಕ್ಕದೊಂದು ಟ್ರೆಂಡ್ ಸೃಷ್ಟಿಸಲು ರೆಡಿಯಾಗಿದೆ.

ಈ ಅದ್ಬುತ ‘ಏರ್‌ ಸೆಲ್ಫೀ’ ಡ್ರೋಣ್ ಬಗ್ಗೆ ತಿಳಿದರೆ ಶಾಕ್ ಆಗ್ತೀರಾ!!

ಪ್ಯಾಂಟಿನ ಜೋಬಿನಲ್ಲಿಯೂ ಇಟ್ಟುಕೊಳ್ಳಬಹುದಾದಂಥ ಪುಟ್ಟ ಡ್ರೋಣ್ ಇದಾಗಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ಗೆ ಹೊಂದಿಕೊಂಡು ಕೆಲಸ ನಿರ್ವಹಿಸುತ್ತದೆ. ಹಾಗಾದರೆ, ಏನಿದು 'ಏರ್‌ ಸೆಲ್ಫೀ' ಡಿವೈಸ್? ಈ ಪುಟ್ಟ ಡ್ರೋಣ್ ಏರ್‌ ಸೆಲ್ಫೀ ಹೇಗೆ ಕೆಲಸ ಮಾಡುತ್ತದೆ?, ಈ ಪುಟ್ಟ ಡ್ರೋಣ್ ಏರ್‌ ಸೆಲ್ಫೀಯ ಸಾಮರ್ಥ್ಯವೇನು ಎಂಬುದನ್ನು ಮುಂದೆ ತಿಳಿಯಿರಿ.

ಏನಿದು ‘ಏರ್‌ ಸೆಲ್ಫೀ’?

ಏನಿದು ‘ಏರ್‌ ಸೆಲ್ಫೀ’?

ಪ್ಯಾಂಟಿನ ಜೋಬಿನಲ್ಲಿಯೂ ಇಟ್ಟುಕೊಳ್ಳಬಹುದಾದಂಥ ಪುಟ್ಟ ಡ್ರೋಣ್ ಇದಾಗಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ಗೆ ಹೊಂದಿಕೊಂಡು ಕೆಲಸ ನಿರ್ವಹಿಸುತ್ತದೆ. ಗಾಳಿಯಲ್ಲಿ ತೇಲುವ ಕ್ಯಾಮೆರಾದಂತೆ ಈ ಡ್ರೋಣ್ ಕೆಲಸ ಮಾಡುತ್ತದೆ. ಈ ಪುಟ್ಟ ಡ್ರೋಣ್ 66 ಅಡಿಗಳಷ್ಟು ಮೇಲೆ ಹಾರಿ ಸೆಲ್ಫೀ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯವನ್ನು ಹೊಂದಿದೆ.

ಏರ್‌ ಸೆಲ್ಫೀ ಹೇಗೆ ಕೆಲಸ ಮಾಡುತ್ತದೆ?

ಏರ್‌ ಸೆಲ್ಫೀ ಹೇಗೆ ಕೆಲಸ ಮಾಡುತ್ತದೆ?

ಈ ಪುಟ್ಟ ಡ್ರೋಣ್ ಏರ್‌ ಸೆಲ್ಫೀ'ಯಲ್ಲಿ ನಾಲ್ಕು ರೆಕ್ಕೆಗಳಿದ್ದು, 66 ಅಡಿಗಳಷ್ಟು ಮೇಲೆ ಹಾರಿ ಸೆಲ್ಫೀ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯವನ್ನು ಹೊಂದಿದೆ. ಉತ್ತಮ ಗುಣಮಟ್ಟದ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು 5 ಎಂ.ಪಿ. ಕ್ಯಾಮೆರಾ ನೀಡಲಾಗಿದೆ. ಒಂದೇ ಬಾರಿ ಎಂಟು ಫೋಟೊಗಳನ್ನು ಕ್ಲಿಕ್ಕಿಸಬಹುದಾದ ತಂತ್ರಜ್ಞಾನವನ್ನು ಈ ಡ್ರೋಣ್ ಹೊಂದಿದೆ.

ವೈಫೈ ನೆಟ್‍ವರ್ಕ್ ಹೊಂದಿದೆ.!!

ವೈಫೈ ನೆಟ್‍ವರ್ಕ್ ಹೊಂದಿದೆ.!!

ಏರ್‌ ಸೆಲ್ಫೀಯು 2.4 ಗಿಗಾ ಹರ್ಟ್ಸ್ ಸಾಮರ್ಥ್ಯದ ವೈಫೈ ನೆಟ್‍ವರ್ಕ್ ಹೊಂದಿದ್ದು, ಸ್ಮಾರ್ಟ್‌ಫೋನ್‌ ಸಂಪರ್ಕ ಸಾಧ್ಯವಾಗಲಿದೆ. ಐಒಎಸ್ ಅಥವಾ ಆಂಡ್ರಾಯ್ಡ್ ಮೊಬೈಲ್ ಆಪ್ ಬಳಸಿ ಡ್ರೋಣ್ ನಿಯಂತ್ರಿಸಬಹುದಾಗಿದೆ.ಈ ಏರ್‌ ಸೆಲ್ಫೀಯಲ್ಲಿ ಬ್ಯಾರೊಮೀಟರ್, ಜಿಯೊಮ್ಯಾಗ್ನೆಟಿಕ್ ಸೆನ್ಸರ್ ಇದ್ದು, ಕ್ಯಾಮೆರಾ ಮೇಲೆ ಹೋದಾಗ ಕೈ ಚಾಚಿದರೆ ಅದರ ಮೇಲೆ ಬಂದು ನಿಲ್ಲುತ್ತದೆ.

4ಜಿಬಿ ಮೆಮೊರಿ ಕಾರ್ಡ್‌!

4ಜಿಬಿ ಮೆಮೊರಿ ಕಾರ್ಡ್‌!

ಏರ್‌ ಸೆಲ್ಫೀ ಡ್ರೋಣಿನಲ್ಲಿ 4ಜಿಬಿ ಮೆಮೊರಿ ಕಾರ್ಡ್‌ ನೀಡಲಾಗಿದೆ. ಕ್ಲಿಕ್ಕಿಸಿದ ಫೋಟೊಗಳು 4ಜಿಬಿ ಮೆಮೊರಿ ಕಾರ್ಡ್‌ನಲ್ಲಿ ಶೇಖರಣೆಯಾಗುತ್ತವೆ. 30 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗುತ್ತದೆ. ಒಮ್ಮೆ ಪೂರ್ತಿ ಚಾರ್ಜ್ ಆಗಿರುವ ಈ ಏರ್‌ ಸೆಲ್ಫೀ ಡ್ರೋಣ್ ಮೂರು ನಿಮಿಷದವರೆಗೂ ಹಾರಾಡಬಲ್ಲದು ಎಂದು ಏರ್‌ ಸೆಲ್ಫೀ ತಯಾರಕ ಕಂಪೆನಿ ತಿಳಿಸಿದೆ.

ಇತರೆ ಫೀಚರ್ಸ್ ಮತ್ತು ಬೆಲೆ?

ಇತರೆ ಫೀಚರ್ಸ್ ಮತ್ತು ಬೆಲೆ?

ಈ ಏರ್‌ ಸೆಲ್ಫೀ ಡ್ರೋಣಿನಲ್ಲಿ ಸೆಲ್ಫೀ ಡಿಲೇ ಟೈಮರ್ ಇದ್ದು, ಹತ್ತು ಸೆಕೆಂಡುಗಳವರೆಗೂ ಫೋಟೊ ತೆಗೆದುಕೊಳ್ಳಲು ಸಮಯ ನೀಡುತ್ತದೆ. ಎರಡು ವರ್ಷಗಳಿಂದಲೂ ಇದರ ತಯಾರಿಯಲ್ಲಿ ತೊಡಗಿಕೊಂಡಿದ್ದ ಲಂಡನ್ ಮೂಲದ ಕಂಪನಿ ಇದರ ಬೆಲೆಯನ್ನು $300 (₹20,000) ಡಾಲರ್‌ಗಳಿಗೆ ನಿಗದಿಪಡಿಸಿದೆ.

Best Mobiles in India

English summary
essentially a selfie drone in a smartphone case, AirSelfie debuted the AirSelfie2 at CES 2018 in Las Vega. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X