ಅಮೇಜಾನಿನಲ್ಲಿ ಕ್ರಿಸ್ ಮಸ್ ಹಬ್ಬಕ್ಕಾಗಿ ಬೆಸ್ಟ್ ಆಫರ್ ಗಳು ಮತ್ತು ರಿಯಾಯಿತಿಗಳು

By Gizbot Bureau
|

ಅಮೇಜಾನ್, ಪ್ಲಿಪ್ ಕಾರ್ಟ್ ಮತ್ತು ಇತ್ಯಾದಿ ಆನ್ ಲೈನ್ ಮಳಿಗೆಗಳು ಹಲವಾರು ರೀತಿಯ ಆಫರ್ ಗಳನ್ನು ಮತ್ತು ರಿಯಾಯಿತಿಗಳನ್ನು ನೀಡುತ್ತಿದ್ದು ಸ್ಮಾರ್ಟ್ ಫೋನ್ ಗಳು, ಗೆಡ್ಜೆಟ್ಸ್ ಗಳು, ಕ್ಯಾಮರಾಗಳು, ಸ್ಮಾರ್ಟ್ ಬ್ಯಾಂಡ್ ಗಳು ಮತ್ತು ಇತ್ಯಾದಿಗಳು ಭಾರೀ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ.

ಕ್ರಿಸ್ ಮಸ್

ಕ್ರಿಸ್ ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹಾಗಾಗಿ ಈ ಸಂದರ್ಬದಲ್ಲಿ ಇ-ಕಾಮರ್ಸ್ ವೆಬ್ ಸೈಟ್ ಗಳು ಮಾರಾಟದಲ್ಲಿ ದೊಡ್ಡ ಲಾಭವನ್ನು ಪಡೆಯುವ ಉದ್ದೇಶವನ್ನು ಹೊಂದಿವೆ. ಅದೇ ಕಾರಣಕ್ಕೆ ಅಮೇಜಾನ್ ನಲ್ಲಿ ಅಮೇಜಾನ್ ಕಾರ್ನಿವಲ್ ಸೇಲ್ ನ್ನು ಆಯೋಜಿಸಲಾಗಿದೆ. ಹಲವಾರು ರೀತಿಯ ಗಿಫ್ಟ್ ಗಳು, ಎಲೆಕ್ಟ್ರಾನಿಕ್ ಪ್ರೊಡಕ್ಟ್ ಗಳಿಗೆ ಭರ್ಜರಿ ರಿಯಾಯಿತಿ ಸೇರಿದಂತೆ ಅನೇಕ ಲಾಭಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು. ನಾವು ಎಲೆಕ್ಟ್ರಾನಿಕ್ ವಸ್ತುಗಳಿಗೆ ನೋ ಕಾಸ್ಟ್ ಇಎಂಐ ಪ್ಲಾನ್ ಗಳು, 10% ಇನ್ಸೆಂಟ್ ರಿಯಾಯಿತಿ, ಅನೇಕ ಪ್ರೊಡಕ್ಟ್ ಗಳಿಗೆ ಜಿಎಸ್ ಟಿ ಇನ್ ವಾಯ್ಸ್ ಗಳು ಮತ್ತು ಮುಂದಿನ ಖರೀದಿಯಲ್ಲಿನ ಇನ್ ವಾಯ್ಸ್ ನಲ್ಲಿ 28% ಇನ್ ವಾಯ್ಸ್ ಉಳಿತಾಯ, ವಾರೆಂಟಿ ಸೇವೆಗಳು ಮತ್ತು ಇತ್ಯಾದಿ ಹಲವು ಆಫರ್ ಗಳನ್ನು ಅಮೇಜಾನ್ ನೀಡುತ್ತಿದೆ.

ಸ್ಮಾರ್ಟ್ ಫೋನ್ ಗಳಿಗೆ 40% ದ ವರೆಗೆ ರಿಯಾಯಿತಿ

ಸ್ಮಾರ್ಟ್ ಫೋನ್ ಗಳಿಗೆ 40% ದ ವರೆಗೆ ರಿಯಾಯಿತಿ

ಕೆಲವು ಸ್ಮಾರ್ಟ್ ಫೋನ್ ಗಳ ಖರೀದಿಯಲ್ಲಿ ಬಳಕೆದಾರರು 40% ದ ವರೆಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಯನ್ನು 13,999 ರುಪಾಯಿ ಬೆಲೆಗೆ ಖರೀದಿಸಬಹುದಾಗಿದ್ದು ಆರಂಭಿಕ ಇಎಂಐ ಪ್ರತಿ ತಿಂಗಳಿಗೆ 659 ರುಪಾಯಿ ಪಾವತಿ ಮಾಡಿ ಕೂಡ ಖರೀದಿ ಮಾಡಬಹುದು. 48ಎಂಪಿ ಟ್ರಿಪಲ್ ಕ್ಯಾಮರಾ ಸೆಟ್ ಅಪ್ ಮತ್ತು 6,000mAh ಬ್ಯಾಟರಿ ಜೊತೆಗೆ 15W ಟೈಪ್-ಸಿ ಚಾರ್ಜಿಂಗ್ ತಂತ್ರಜ್ಞಾನವು ಇದರಲ್ಲಿದೆ.

ಮನೆಯ ಮನರಂಜನೆ ವಸ್ತುಗಳಿಗೆ 20% ದ ವರೆಗೆ ರಿಯಾಯಿತಿ

ಮನೆಯ ಮನರಂಜನೆ ವಸ್ತುಗಳಿಗೆ 20% ದ ವರೆಗೆ ರಿಯಾಯಿತಿ

ಅನೇಕ ಮನೆಯ ಮನರಂಜನೆಯ ವಸ್ತುಗಳಿಗೆ 20% ದ ವರೆಗೆ ರಿಯಾಯಿತಿ ಲಭ್ಯವಾಗುತ್ತದೆ. ಎಪಿಸಿ APC BX1100C-IN 1100VA/660W UPS ಸಿಸ್ಟಮ್ ಅನ್ನು 5,799 ರುಪಾಯಿ ಅಂದರೆ 23% ರಿಯಾಯಿತಿಯಲ್ಲಿ ಖರೀದಿ ಮಾಡಬಹುದು.

ಕ್ಯಾಮರಾಗಳಿಗೆ 40% ದ ವರೆಗೆ ರಿಯಾಯಿತಿ

ಕ್ಯಾಮರಾಗಳಿಗೆ 40% ದ ವರೆಗೆ ರಿಯಾಯಿತಿ

ಕೆಲವು ಕ್ಯಾಮರಾಗಳನ್ನು 40% ರಿಯಾಯಿತಿಯಲ್ಲಿ ಖರೀದಿ ಮಾಡಬಹುದು. ಸೋನಿ DSC W830 ಸೈಬರ್-ಶಾಟ್ 20.1 MP ಪಾಯಿಂಟ್ ಮತ್ತು ಶೂಟ್ ಕ್ಯಾಮರಾವನ್ನು 7,299 ರುಪಾಯಿ ಬೆಲೆಗೆ ಖರೀದಿಸಬಹುದು. ಅಮೇಜಾನ್ ಪೇ ಯುಪಿಐ ಮೂಲಕ ಖರೀದಿ ಮಾಡಿದರೆ 50 ರುಪಾಯಿ ಕ್ಯಾಷ್ ಬ್ಯಾಕ್ ಲಭ್ಯವಾಗುತ್ತದೆ. ಆದರೆ ಅದಕ್ಕಾಗಿ ಕನಿಷ್ಟ 50 ರುಪಾಯಿಯ ಖರೀದಿಯನ್ನು ಮಾಡಿರಬೇಕು.

ಫಿಟ್ನೆಸ್ ಬ್ಯಾಂಡ್ ಗಳಿಗೆ 50% ದ ವರೆಗೆ ರಿಯಾಯಿತಿ

ಫಿಟ್ನೆಸ್ ಬ್ಯಾಂಡ್ ಗಳಿಗೆ 50% ದ ವರೆಗೆ ರಿಯಾಯಿತಿ

ಫಿಟ್ನೆಸ್ ಬ್ಯಾಂಡ್ ಗಳನ್ನು 50% ದ ವರೆಗಿನ ರಿಯಾಯಿತಿಯಲ್ಲಿ ಖರೀದಿ ಮಾಡಬಹುದು. ಎಂಐ ಸ್ಮಾರ್ಟ್ ಬ್ಯಾಂಡ್ 4 ನ್ನು 2,299 ರುಪಾಯಿ ಜೊತೆಗೆ 8% ರಿಯಾಯಿತಿಯಲ್ಲಿ ಖರೀದಿ ಮಾಡಬಹುದು. ಈ ಧರಿಸಬಹುದಾದ ವಸ್ತುಗಳು AMOLED ಡಿಸ್ಪ್ಲೇಯನ್ನು ಹೊಂದಿದ್ದು, 5ATM ವಾಟರ್ ಪ್ರೂಫ್ ಸಿಸ್ಟಮ್ ಮತ್ತು ಆಟೋಮ್ಯಾಟಿಕ್ ಹಾರ್ಡ್ ರೇಟ್ ಮಾನಿಟರಿಂಗ್ ವ್ಯವಸ್ಥೆಯನ್ನು ಹೊಂದಿದೆ.

ಗೇಮಿಂಗ್ ಗೆಡ್ಜೆಟ್ಸ್ ಗಳು ಮತ್ತು ಇತ್ಯಾದಿಗಳಿಗೆ ಅತ್ಯುತ್ತಮ ರಿಯಾಯಿತಿ

ಗೇಮಿಂಗ್ ಗೆಡ್ಜೆಟ್ಸ್ ಗಳು ಮತ್ತು ಇತ್ಯಾದಿಗಳಿಗೆ ಅತ್ಯುತ್ತಮ ರಿಯಾಯಿತಿ

ಗೇಮಿಂಗ್ ಗೆಡ್ಜೆಟ್ ಗಳಿಗೆ ಮತ್ತು ಇತರೆ ಪ್ರೊಡಕ್ಟ್ ಗಳಿಗೆ ದೊಡ್ಡ ರಿಯಾಯಿತಿಯನ್ನು ಅಮೇಜಾನ್ ಆಫರ್ ಮಾಡುತ್ತಿದೆ. ಬಳಕೆದಾರರು ಝೀಬ್ರಾನಿಕ್ಸ್ ಟ್ರಾನ್ಸ್ ಫಾರ್ಮರ್ ಗೇಮಿಂಗ್ ಮಲ್ಟಿಮೀಡಿಯಾ USB ಕೀಬೋರ್ಡ್ ಜೊತೆಗೆ ಕಪ್ಪು ಬಣ್ಣದ ಮೌಸ್ ನ್ನು ಕೇವಲ 1,100 ರುಪಾಯಿಗೆ ಖರೀದಿಸಬಗುದು. ಈ ಕೀಬೋರ್ಡ್ ನಲ್ಲಿ ಮಲ್ಟಿ-ಕಲರ್ LED ಮತ್ತು ಬೋರ್ಡ್ ಕಂಪ್ರೈಸಸ್ 104 ಕೀಗಳಿವೆ.

ಪವರ್ ಬ್ಯಾಂಕ್ ಗಳಿಗೆ 70% ರಿಯಾಯಿತಿ

ಪವರ್ ಬ್ಯಾಂಕ್ ಗಳಿಗೆ 70% ರಿಯಾಯಿತಿ

ಪವರ್ ಬ್ಯಾಂಕ್ ಗಳನ್ನು ನೀವು 70% ರಿಯಾಯಿತಿಯಲ್ಲಿ ಖರೀದಿಸುವ ಅವಕಾಶವಿದೆ. ಈ ಪವರ್ ಬ್ಯಾಂಕ್ ಗಳು ಅತೀ ದೊಡ್ಡ ಅಂದರೆ 20,000mAh ಅಥವಾ ಅದಕ್ಕಿಂತ ಹೆಚ್ಚಿನ ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಈ ಪವರ್ ಬ್ಯಾಂಕ್ ಗಳಿಂದ ನೀವು ಲ್ಯಾಪ್ ಟಾಪ್ ಮತ್ತು ಟ್ಯಾಬ್ಲೆಟ್ಸ್ ಗಳನ್ನು ಕೂಡ ಚಾರ್ಜ್ ಮಾಡಿಕೊಳ್ಳಬಹುದು.

ಹೆಡ್ ಸೆಟ್ ಗಳಿಗೆ 40% ರಿಯಾಯಿತಿ

ಹೆಡ್ ಸೆಟ್ ಗಳಿಗೆ 40% ರಿಯಾಯಿತಿ

ಹೆಡ್ ಸೆಟ್ ಗಳು 40% ರಿಯಾಯಿತಿಯಲ್ಲಿ ಅಮೇಜಾನಿನ ಈ ಸೇಲ್ ನಲ್ಲಿ ಸಿಗುತ್ತದೆ. ರೆಡ್ ಗಿಯರ್ ಕಾಸ್ಮೋ 7.1 ಗೇಮಿಂಗ್ ಹೆಡ್ ಫೋನ್ ಗಳನ್ನು 1,330 ರುಪಾಯಿಗೆ ಖರೀದಿಸಬಹುದು. ಈ ಹೆಡ್ ಫೋನ್ ಗಳು RGB LED ಎಫೆಕ್ಟ್, ಮೈಕ್ ಮತ್ತು ಇನ್-ಲೈನ್ ಕಂಟ್ರೋಲರ್ ಗಳನ್ನು ಹೊಂದಿದೆ. ಇವುಗಳು 7.1 ಸರೌಂಡ್ ಸೌಂಡ್ ನ್ನು ಹೊಂದಿವೆ.

ಮೌಂಟ್ಸ್, ಪಾಪ್ ಸಾಕೆಟ್ ಮತ್ತು ಇತ್ಯಾದಿಗಳಿಗೆ 80% ರಿಯಾಯಿತಿ

ಮೌಂಟ್ಸ್, ಪಾಪ್ ಸಾಕೆಟ್ ಮತ್ತು ಇತ್ಯಾದಿಗಳಿಗೆ 80% ರಿಯಾಯಿತಿ

ಮೌಂಟ್ಸ್, ಪಾಪಾ ಸಾಕೆಟ್ಸ್ ಮತ್ತು ಇತ್ಯಾದಿಗಳಿಗೆ ಅಮೇಜಾನಿನಲ್ಲಿ 80% ರಿಯಾಯಿತಿ ಲಭ್ಯವಿದೆ.ಫೋನ್ ಗಳಿಗೆ ಮತ್ತು ಟ್ಯಾಬ್ಲೆಟ್ ಗಳಿಗೆ ಪಾಪ್ ಸಾಕೆಟ್ಸ್ ಮರುಬಳಕೆ ಮಾಡಬಹುದಾದ ಗ್ರಿಪ್ ಮತ್ತು ಸ್ಟ್ಯಾಂಡ್ ನ್ನು 695 ರುಪಾಯಿ ಬೆಲೆಯಲ್ಲಿ ಖರೀದಿ ಮಾಡಬಹುದು. ಈ ಆಕ್ಸಸರೀಸ್ ಗಳು ಸೆಕ್ಯೂರ್ ಗ್ರಿಪ್, ಸುಲಭವಾಗಿ ಟೆಕ್ಸ್ಟ್ ಮಾಡುವುದಕ್ಕೆ ಅನುಕೂಲಕಾರಿ ಮತ್ತು ಫೋಟೋ ಕ್ಲಿಕ್ಕಿಸುವುದಕ್ಕೆ ಮತ್ತು ಫೋನ್ ಗಳು ಕೈಯಿಂದ ಬೀಳುವುದನ್ನು ತಡೆಯುವುದಕ್ಕೆ ಇವು ನೆರವು ನೀಡುತ್ತದೆ.

ಸ್ಕ್ರೀನ್ ಪ್ರೊಟೆಕ್ಟರ್ ಗಳ ಆರಂಭಿಕ ಬೆಲೆ 99 ರುಪಾಯಿಗಳು

ಸ್ಕ್ರೀನ್ ಪ್ರೊಟೆಕ್ಟರ್ ಗಳ ಆರಂಭಿಕ ಬೆಲೆ 99 ರುಪಾಯಿಗಳು

ನಿಮ್ಮ ಎಲ್ಲಾ ನೆಚ್ಚಿನ ಸ್ಕ್ರೀನ್ ಪ್ರೊಟೆಕ್ಟರ್ ಗಳು ಕೇವಲ 99 ರುಪಾಯಿಯ ಆರಂಭಿಕ ಬೆಲೆಯಲ್ಲಿ ಲಭ್ಯವಾಗುತ್ತದೆ. ಒನ್ ಪ್ಲಸ್ 7 ಸರಣಿ ಯು ಟೆಂಪರ್ಡ್ ಗ್ಲಾಸ್ ಗಳು 1,300 ರುಪಾಯಿ ಬದಲಿಗೆ 699 ಗೆ ಸಿಗುತ್ತದೆ. ಸ್ಕ್ರೀನಿಗೆ ಸ್ಕ್ರ್ಯಾಚ್ ಆಗುವುದು ಮತ್ತು ಸಮಸ್ಯೆಯಾಗುವುದನ್ನು ತಡೆಯುವುದಕ್ಕಾಗಿ ಈ ಸ್ಕ್ರೀನ್ ಪ್ರೊಟೆಕ್ಟರ್ ಗಳಲ್ಲಿ ಲಿಕ್ವಿಡ್ ಡಿಸ್ಪರ್ಷನ್ ತಂತ್ರಜ್ಞಾನವಿದೆ.

Most Read Articles
Best Mobiles in India

English summary
Amazon's “Christmas Carnival” is one of the latest schemes that you would want to take a note of. The webpage is filled with innumerable gifts, hampers, along with electronic products.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X