Subscribe to Gizbot

ಭಾರತಕ್ಕೆ ಕಾಲಿಡಲಿದೆ ಅಮೇಜಾನ್ ಟಿವಿ: ಬೆಲೆ ಎಷ್ಟು..? ವಿಶೇಷತೆಗಳೇನು..?

Written By:

ಸದ್ಯ ಭಾರತೀಯ ಟೆಲಿಕಾಂ ವಲಯದಲ್ಲಿ ನಡೆದ ಮಾದರಿಯಲ್ಲೇ ಟಿವಿ ಸೆಟಪ್ ಬಾಕ್ಸ್ ಲೋಕದಲ್ಲಿ ಹೊಸ ಹೊಸ ಕಂಪನಿಗಳ ಆಗಮನವಾಗುತ್ತಿದ್ದು, ಇಲ್ಲಿಯೂ ದರ ಸಮರ ನಡೆಯುವ ಸಾಧ್ಯತೆಗಳಿದೆ. ಶೀಘ್ರವೇ ಜಿಯೋ ಡಿಟಿಹೆಚ್ ಲಾಂಚ್ ಮಾಡಲಿದೆ, ಅದಕ್ಕಿಂತ ಮುಂಚೆಯೇ ಅಮೆಜಾನ್ ಟಿವಿ ಸಹ ಭಾರತದಲ್ಲಿ ಕಾಲಿಡಲಿದೆ.

ಭಾರತಕ್ಕೆ ಕಾಲಿಡಲಿದೆ ಅಮೇಜಾನ್ ಟಿವಿ: ಬೆಲೆ ಎಷ್ಟು..? ವಿಶೇಷತೆಗಳೇನು..?

ಓದಿರಿ: ಉಚಿತವಾಗಿ ಆನ್‌ಲೈನಿನಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಹೇಗೆ..? ಇಲ್ಲಿದೇ ಮಾಹಿತಿ

ಈಗಾಗಲೇ ಎರ್‌ಟೆಲ್, ಜಿಯೋ ಟಿವಿ ಲಾಂಚ್ ಮಾಡಲಿದೆ ಎನ್ನುವ ಸುದ್ದಿ ತಿಳಿದ ನಂತರ ಇಂಟರ್‌ನೆಟ್ ಟಿವಿ ಲಾಂಚ್ ಮಾಡಿದೆ, ಹಾಗಾಗಿ ಅಮೇಜಾನ್ ಟಿವಿ ಸಹ ಭಾರತಕ್ಕೆ ಬಂದರೆ ಗ್ರಾಹಕರಿಗೆ ಲಾಭವಾಗುವುದೊಂದಿಗೆ ಕಡಿಮೆ ಬೆಲೆಗೆ ಎಲ್ಲಾ ಚಾನಲ್ ನೋಡುವ ಅವಕಾಶ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಮೇಜಾನ್ ಫೈರ್ ಟಿವಿ:

ಅಮೇಜಾನ್ ಫೈರ್ ಟಿವಿ:

ಇದೇ ತಿಂಗಳಲ್ಲಿ ಅಮೇಜಾನ್ ಫೈರ್ ಟಿವಿ ಮಾರುಕಟ್ಟೆಗೆ ಬರಲಿದ್ದು, ತನ್ನ ಪ್ರೈಮ್ ಗ್ರಾಹಕರಿಗೆ ರೂ.1,999ಕ್ಕೆ ನೀಡಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಸ್ಪರ್ಧೆ ಶುರುವಾಗಿದೆ. ಈ ಹಿನ್ನಲೆಯಲ್ಲಿ ಕಡಿಮೆ ಬೆಲೆ ಸೇವೆಯನ್ನು ನೀಡಲಿದೆ.

ಕ್ರೋಮ್ ಕಾಸ್ಟ್ ಇರಲಿದೆ:

ಕ್ರೋಮ್ ಕಾಸ್ಟ್ ಇರಲಿದೆ:

ಅಮೇಜಾನ್ ಫೈರ್ ಟಿವಿಯಲ್ಲಿ ಕ್ರೋಮ್ ಕಾಸ್ಟ್ ಇರಲಿದ್ದು, ಇದು ಅಮೇಜಾನ್ ಪ್ರೈಮ್ ಸದಸ್ಯರಿಗಾಗಿಯೇ ಮಾಡಲಾಗಿದೆ. ಇದರಲ್ಲಿ ಪ್ರೈಮ್ ಸದಸ್ಯತ್ವ ಒಂದು ವರ್ಷದ ಅವಧಿಗೆ ದೊರೆಯಲಿದೆ. ಇದರಲ್ಲಿ ಪ್ರೈಮ್ ವಿಡಿಯೋ ಗಳನ್ನು ನೋಡಬಹುದಾಗಿದೆ.

ಅಮೇಜಾನ್ ಫೈರ್ ಟಿವಿ ವಿಶೇಷತೆ:

ಅಮೇಜಾನ್ ಫೈರ್ ಟಿವಿ ವಿಶೇಷತೆ:

ಆಂಡ್ರಾಯ್ಡ್ ಕಾರ್ಯಚರಣೆಯಲ್ಲಿ ಕಾರ್ಯನಿರ್ವಹಿಸುವದ ಅಮೇಜಾನ್ ಫೈರ್ ಟಿವಿ ಪ್ರೈಮ್ ವಿಡಿಯೋ, ನೆಟ್‌ಫಿಕ್ಸ್ ಹಾಗೂ ಯೂಟೂಬ್ ಸೇರಿದಂತೆ ಹಲವು ಆನ್‌ಲೈನ್ ಸ್ಟ್ರಿಮಿಂಗ್ ಗಳು ದೊರೆಯಲಿದೆ. ಇದು ಕ್ವಾಡ್ ಕೋರ್ ಪ್ರೋಸೆಸರ್ ಹೊಂದಿದ್ದು, 1GB RAM ಹಾಗೂ ವಾಯ್ಸ್ ಕಮೆಂಡ್ ಇರುವ ರಿಮೋಟ್ ದೊರೆಯಲಿದೆ.

 ಎಲ್ಲಿ ದೊರೆಯಲಿದೆ.?

ಎಲ್ಲಿ ದೊರೆಯಲಿದೆ.?

ಅಮೇಜಾನ್ ಫೈರ್ ಟಿವಿ ಅಮೇಜಾನ್ ಸೇರಿದಂತೆ ಕ್ರೋಮಾ, ಹಾಗೂ ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳಲ್ಲಿ ಲಭ್ಯವಿರಲಿದೆ. ಅಲ್ಲದೇ ಇದು ಎಲ್ಲಾ ನಗರಗಳಲ್ಲೂ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Amazon’s popular TV streaming product — the Amazon Fire TV Stick — is all set to make its way to India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot