ಮತ್ತೆ ಆರಂಭವಾಗುತ್ತಿದೆ ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್!

|

ಆನ್ ಲೈನ್ ಮಾರುಕಟ್ಟೆಯಲ್ಲಿ ಆಗಾಗ ಹಬ್ಬಗಳು, ಸೀಸನ್ ಸೇಲ್ ಹೀಗೆ ಹಲವು ಕಾರಣಗಳಿಂದಾಗಿ ಭರ್ಜರಿ ರಿಯಾಯಿತಿ ಬೆಲೆ ಲಭ್ಯವಾಗುತ್ತಿರುತ್ತದೆ. ಅಮೇಜಾನ್ ಕೂಡ ಇದೇ ರೀತಿಯ ಡಿಸ್ಕೌಂಟ್ ನ್ನು ತನ್ನ ವಿಭಿನ್ನ ಪ್ರೊಡಕ್ಟ್ ಗಳಿಗೆ ಹೊಸ ವರ್ಷದ ಆರಂಭದಲ್ಲೇ ನೀಡುತ್ತಿದ್ದು ರಿಯಾಯಿತಿ ಸೇಲ್ ನ್ನು ಆಯೋಜಿಸಿದೆ. ಇದೀಗ ಗಣರಾಜ್ಯೋತ್ಸವದ ಅಂಗವಾಗಿ ಇ-ಕಾಮರ್ಸ್ ಸೈಟ್ ಅಮೇಜಾನ್ ಮತ್ತೊಂದು ರಿಯಾಯಿತಿ ಸೇಲ್ ನ್ನು ಆಯೋಜಿಸಿದೆ.

ಸೇಲ್ ಯಾವಾಗ ನಡೆಯುತ್ತದೆ?

ಸೇಲ್ ಯಾವಾಗ ನಡೆಯುತ್ತದೆ?

ಅಮೇಜಾನಿನ ಈ ಗ್ರೇಟ್ ಇಂಡಿಯನ್ ಸೇಲ್ ಜನವರಿ 20 ರಿಂದ ಜನವರಿ 23ರ ವರೆಗೆ ನಡೆಯಲಿದೆ. ವಿಭಿನ್ನ ಕೆಟಗರಿಯ ಸುಮಾರು 170 ಮಿಲಿಯನ್ ಪ್ರೊಡಕ್ಟ್ ಗಳ ಸೇಲ್ ಇದರಲ್ಲಿ ನಡೆಯಲಿದೆ ಮತ್ತು ಪ್ರೈಮ್ ಸದಸ್ಯರಿಗೆ ವಿಶೇಷ ರಿಯಾಯಿತಿ ಕೂಡ ದೊರೆಯುತ್ತದೆ.

ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಮನೆಬಳಕೆ ವಸ್ತುಗಳಿಂದ ಹಿಡಿದು ಸ್ಮಾರ್ಟ್ ಫೋನ್ ಗಳು ಮಮತ್ತು ನಾನ್-ಟೆಕ್ನಿಕಲ್ ಕೆಟಗರಿಯ ವಸ್ತುಗಳು ಕೂಡ ದೊಡ್ಡ ಮಟ್ಟದ ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ.

ಯಾವ ಬ್ರ್ಯಾಂಡ್ ನ ವಸ್ತುಗಳಿಗೆ ರಿಯಾಯಿತಿ:

ಯಾವ ಬ್ರ್ಯಾಂಡ್ ನ ವಸ್ತುಗಳಿಗೆ ರಿಯಾಯಿತಿ:

ವಿಭಿನ್ನ ಬ್ರ್ಯಾಂಡ್ ಗಳ ಪ್ರೊಡಕ್ಟ್ ಗಳಿಗೆ ಡಿಸ್ಕೌಂಟ್ ನೀಡಲಾಗುತ್ತದೆ ಎಂದು ಅಮೇಜಾನ್ ತಿಳಿಸಿದೆ. ಗ್ರಾಹಕರು ಆಪಲ್, ಒನ್ ಪ್ಲಸ್, ಶಿಯೋಮಿ, ಹಾನರ್, ರಿಯಲ್ ಮಿ, ಸ್ಯಾಮ್ ಸಂಗ್, 10.or, ಪೂಮಾ, ರೆಡ್ ಟೇಪ್, ಬಾಟಾ, ಮದರ್ ಕೇರ್, ಫಾಸ್ಟ್ರ್ಯಾಕ್, ವೋಲ್ಟಾಸ್, ಬಿಪಿಎಲ್ , ಜಾಯ್ಅಲುಕಾಸ್, ಟೈಮೆಕ್ಸ್, ಸ್ಕೈಬ್ಯಾಗ್ಸ್, ಆರ್ರೋ, ಎಲ್ ಜಿ, ಕೆನಾನ್, ಹೆಚ್ ಪಿ, ಹಾಟ್ ವೀಲ್ಸ್, ಪ್ಯಾಂಪರ್ಸ್, ಸರ್ಫ್ ಎಕ್ಸೆಲ್, ಲ್ಯಾಕ್ಮೀ, ಫಿಲಿಪ್ಸ್, ಪ್ರೆಸ್ಟೀಜ್, ಉಷಾ, ಬಾಂಬೆ ಡೈಯಿಂಗ್ ಸೇರಿದಂತೆ ಇನ್ನೂ ಹಲವು ಕಂಪೆನಿಯ ವಸ್ತುಗಳು ಕಡಿಮೆ ಬೆಲೆಯಲ್ಲಿ ಸಿಗುತ್ತದೆ.

ಅಮೇಜಾನ್ ವಸ್ತುಗಳಿಗೆ ರಿಯಾಯಿತಿ:

ಅಮೇಜಾನ್ ವಸ್ತುಗಳಿಗೆ ರಿಯಾಯಿತಿ:

ಅಮೇಜಾನ್ ತನ್ನದೇ ಸ್ವಂತ ಬ್ರ್ಯಾಂಡ್ ನ ವಸ್ತುಗಳಿಗೂ ಆಫರ್ ನೀಡುತ್ತಿದೆ. ಅಮೇಜಾನ್ ಬೇಸಿಕ್ಸ್, ಸೊಲಿಮೋ, ಸಿಂಬಾಲ್, ವೆದಕಾ, ಪ್ರೆಸ್ಟ್ರೋ ಮತ್ತು ಇತ್ಯಾದಿಗಳು ರಿಯಾಯಿತಿಯಲ್ಲಿ ಲಭ್ಯವಿದೆ. ಅಮೇಜಾನ್ ಇಕೋ, ಫೈಯರ್ ಟಿವಿ ಸ್ಟಿಕ್ ಮತ್ತು ಕಿಂಡಲ್ ಇ-ರೀಡರ್ಸ್ ಗಳಿಗೆ 3,000 ದ ವರೆಗೆ ರಿಯಾಯಿತಿ ಸಿಗುತ್ತದೆ.

ಇತರೆ ವಸ್ತುಗಳಿಗೆ ಎಷ್ಟೆಷ್ಟು ರಿಯಾಯಿತಿ?

ಇತರೆ ವಸ್ತುಗಳಿಗೆ ಎಷ್ಟೆಷ್ಟು ರಿಯಾಯಿತಿ?

ಲ್ಯಾಪ್ ಟಾಪ್ ಗಳಿಗೆ ಗ್ರಾಹಕರು 30,000 ರುಪಾಯಿ ವರೆಗೆ ರಿಯಾಯಿತಿ ಪಡೆಯಬಹುದಾದ ಸುವರ್ಣಾವಕಾಶ ಇರುತ್ತದೆ. ಎಕ್ಸ್ ಟರ್ನಲ್ ಹಾರ್ಡ್ ಡ್ರೈವ್ ಗಳು 60 ಶೇಕಡಾ ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ. ರೆಫ್ರಿಜರೇಟರ್ ಗಳು 35,000 ರುಪಾಯಿವರೆಗಿನ ರಿಯಾಯಿತಿಯಲ್ಲಿ ಸಿಕ್ಕರೆ ಟಿವಿಗಳು 40,000 ರುಪಾಯಿ ರಿಯಾಯಿತಿವರೆಗೂ ಲಭ್ಯವಿರುತ್ತದೆ ಎಂದು ಹೇಳಲಾಗಿದೆ. ಏರ್ ಕಂಡೀಷನರ್ ಗಳು 25,000 ರುಪಾಯಿವರೆಗಿನ ರಿಯಾಯಿತಿ ಬೆಲೆಯಲ್ಲಿ ಈ ಸೇಲ್ ನಲ್ಲಿ ಸಿಗುತ್ತದೆ.

ಬ್ಯಾಂಕ್ ರಿಯಾಯಿತಿಗಳು:

ಬ್ಯಾಂಕ್ ರಿಯಾಯಿತಿಗಳು:

ಹೆಚ್ ಡಿ ಎಫ್ ಸಿ ಬ್ಯಾಂಕಿನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಹೆಚ್ಚುವರಿ 10 ಶೇಕಡಾ ರಿಯಾಯಿತಿ ಲಭ್ಯವಾಗುತ್ತದೆ. ಕೆಲವು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಗಳಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆ ಇದೆ. ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ಮಾಲೀಕರು ಸ್ಮಾರ್ಟ್ ಫೋನ್, ಟಿವಿ, ಎಸಿ ಮತ್ತು ಇತರೆ ಹಲವು ಕೆಟಗರಿಯ ಸಾವಿರಕ್ಕೂ ಅಧಿಕ ವಸ್ತುಗಳಿಗೆ ಎಕ್ಸ್ ಚೇಂಜ್ ಆಫರ್ ನ್ನು ಪಡೆಯಲಿದ್ದಾರೆ.

ಪ್ರೈಮ್ ಸದಸ್ಯರಿಗೆ ಬೇಗನೆ ಆಕ್ಸಿಸ್

ಪ್ರೈಮ್ ಸದಸ್ಯರಿಗೆ ಬೇಗನೆ ಆಕ್ಸಿಸ್

ಮೊದಲ ಬಾರಿಗೆ ಅಮೇಜಾನ್ ನಲ್ಲಿ ಶಾಪಿಂಗ್ ಮಾಡುತ್ತಿರುವವರು ಉಚಿತ ಡೆಲಿವರಿ ಸೌಲಭ್ಯವವನ್ನು ಪಡೆಯಲಿದ್ದಾರೆ.ಅಮೇಜಾನ್ ಪ್ರೈಮ್ ಸದಸ್ಯರಿಗೆ 12 ತಾಸುಗಳ ಮುನ್ನವೇ ಆಫರ್ ಗಳು ಏನೇನಿದೆ ಎಂದು ತಿಳಿಯಲು ಆಕ್ಸಿಸ್ ಇರುತ್ತದೆ ಅಂದರೆ ಜನವರಿ 19,2019 ರ ಮಧ್ಯಾಹ್ನ 12 ಘಂಟೆಗೆ ಪ್ರೈಮ್ ಸದಸ್ಯರು ಆಕ್ಸಿಸ್ ಪಡೆಯಬಹುದು.

Best Mobiles in India

Read more about:
English summary
Amazon Great Indian Sale is back, to offer big discounts on phones, headphones other gadgets

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X