Subscribe to Gizbot

ಅಮೆಜಾನ್ ಕಿಂಡಲ್ ಒಸಿಸ್ ಹೇಗಿದೆ..? ಇಲ್ಲಿದೆ ಮಾಹಿತಿ..!

Written By: Lekhaka

ಅಮೆಜಾನ್ ಮಾರುಕಟ್ಟೆಗೆ ಸಾಕಷ್ಟು ವಸ್ತುಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತಿದ್ದು, ಸ್ಮಾರ್ಟ್ ವಾಯ್ಸ್ ಅಸಿಸ್ಟೆಂಟ್ ಸ್ಪೀಕರ್ ಗಳು, ಸ್ಮಾರ್ಟ್ ಫೋನ್ ಗಳು, ಟ್ಯಾಬ್ಲೆಟ್ ಗಳು ಸೇರಿಂತೆ ಹಲವು ವಸ್ತುಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಸದ್ಯ ಕಾಲಿಟ್ಟಿರುವ ಅಮೆಜಾನ್ ಕಿಂಡಲ್ ಬಗ್ಗೆ ವಿಮರ್ಶೆ ಇಲ್ಲಿದೆ.

ಅಮೆಜಾನ್ ಕಿಂಡಲ್ ಒಸಿಸ್ ಹೇಗಿದೆ..? ಇಲ್ಲಿದೆ ಮಾಹಿತಿ..!

ಆನ್ ಲೈನಲ್ಲಿ ದೊರೆಯುವ ಇ ಹೊತ್ತಿಗೆಗಳನ್ನು ಒದುವ ಸಲುವಾಗಿಯೇ ನಿರ್ಮಿಸಿರುವ ಅಮೆಜಾನ್ ಕಿಂಡಲ್ ಒಸಿಸ್ ಬಳಕೆ ಮಾಡಿಕೊಳ್ಳಲು ಉತ್ತಮವಾಗಿದ್ದು, ಸಾಮಾನ್ಯ ಬುಕ್ ಗಳನ್ನು ಓದಿದ ಅನುಭವನ್ನು ನೀಡಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಇದು ಹಲವು ಮಂದಿಯನ್ನು ಆಕರ್ಷಿಸಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
ವಿನ್ಯಾಸ:

ವಿನ್ಯಾಸ:

ಅಮೆಜಾನ್ ಕಿಂಡಲ್ ಮಾಡಲ್ ಗಳಲ್ಲಿ ಅಮೆಜಾನ್ ಕಿಂಡಲ್ ಒಸಿಸ್ ವಿಭಿನ್ನ ವಿನ್ಯಾಸವನ್ನು ಹೊಂದಿದೆ ಎನ್ನಲಾಗಿದೆ. 7 ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದು, ಓದಲು ಮತ್ತು ಕೈನಲ್ಲಿ ಹಿಡಿದಿಕೊಳ್ಳಲು ಉತ್ತಮ ಅನುಭವನ್ನು ಹೊಂದಿದೆ. ಬ್ಯಾಟರಿ ಬ್ಯಾಕಪ್ ಸಹ ಉತ್ತಮವಾಗಿದೆ ಎನ್ನಬಹುದಾಗಿದೆ. ಇದು ಅಲ್ಯೂಮಿನಿಯಮ್ ಬ್ಯಾಕ್ ಪ್ಯಾನಲ್ ಅನ್ನು ಹೊಂದಿದೆ.

ಇದಲ್ಲದೇ ಇದರಲ್ಲಿ ನೀಡಿರುವ ಬ್ಯಾಕ್ ಲೈಟ್ ಹಿಂಭಾಗದ ಬ್ರಿಟ್ ನೆಸ್ ಅನ್ನು ಆಟೋ ಆಡ್ಜಸ್ಟ್ ಮಾಡಿಕೊಳ್ಳಬಹುದಾಗಿದೆ. ಓದುವ ಸಂದರ್ಭದಲ್ಲಿ ಕಣ್ಣಿಗೆ ಹೆಚ್ಚಿನ ಶ್ರಮವನ್ನು ನೀಡುವುದಿಲ್ಲ ಎನ್ನಲಾಗಿದೆ. ಇದನ್ನು ಸನ್ ಲೈಟ್ ನಲ್ಲಿ ಹಿಡಿದು ಓದಿರುವ ಯಾವುದೇ ತೊಂದರೆ ಇಲ್ಲ ಎನ್ನಲಾಗಿದೆ.

ವಿಶೇಷತೆ:

ವಿಶೇಷತೆ:

ಇದು ವಾಟರ್ ಫ್ರೂಪ್ ಆಗಿದ್ದು, ಬಳಕೆದಾರರ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಆಡಿಯೋ ಬುಕ್ ಗಳನ್ನು ಓಪನ್ ಮಾಡುತ್ತದೆ. ಇದಲ್ಲದೇ ಇದರಲ್ಲಿ ವೆಬ್ ಬ್ರೌಸರ್ ಅನು ಸಹ ಕಾಣಬಹುದಾಗಿದೆ. ಹಿಂದಿನ ಎಲ್ಲಾ ಕಿಂಡಲ್ ಗಳಿಗೆ ಹೋಲಿಕೆ ಮಾಡಿಕೊಂಡರೆ ಇದರಲ್ಲಿ ಹೆಚ್ಚಿನ ಆಯ್ಕೆಯನ್ನು ಕಾಣಬಹುದಾಗಿದೆ. ಬಳಕೆದಾರರಿಗೆ ಹೆಚ್ಚಿನ ವಿಶೆಷತೆಗಳು ದೊರೆಯಲಿದೆ.

ಓದುವ ಬಗೆ:

ಓದುವ ಬಗೆ:

ಇತರೆ ಆವೃತ್ತಿಗೆ ಹೊಲಿಕೆ ಮಾಡಿಕೊಂಡರೆ ಅಮೆಜಾನ್ ಕಿಂಡಲ್ ಒಸಿಸ್ ಓದುವ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆಯನ್ನು ಕಂಡಿದೆ. ಇದರಲ್ಲಿ ಪಿಚ್ಚರ್ ಗಳು ಚಾರ್ಟ್ ಗಳು ಮತ್ತು ನಕ್ಷೆಗಳು ಉತ್ತಮವಾಗಿ ಕಾಣಿಸಿಕೊಳ್ಳಲಿದೆ. ಅಲ್ಲದೇ ಓದುವ ಸಂದರ್ಭದಲ್ಲಿ ಹೈಲೆಟ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಜೂಮ್ ಸಹ ಮಾಡಿಕೊಳ್ಳಬಹುದು.

ಇದಲ್ಲದೇ ಫಾಂಟ್ ಗಳನ್ನು ಸಹ ಬದಲಾಯಿಸಿಕೊಳ್ಳಬಹುದಾಗಿದೆ. ಇದು ತೂಕ ಸಹ ಕಡಿಮೆ ಇದ್ದು ಕೈನಲ್ಲಿ ಹಿಡಿದುಕೊಂಡರೆ ನೋವು ಬರುವುದಿಲ್ಲ. ಒಟ್ಟಿನಲ್ಲಿ ಬುಕ್ ಓದಿದ ಅನುಭವನ್ನು ನೀಡಲಿದೆ.

ಏಕಕಾಲದಲ್ಲಿ ಐದಾರು ಮೊಬೈಲ್‌ ಚಾರ್ಜ್ ಮಾಡಲಿದೆ ಈ ವೈರ್‌ಲೆಸ್ ಚಾರ್ಜರ್!!

ಸಾಫ್ಟ್ ವೇರ್:

ಸಾಫ್ಟ್ ವೇರ್:

ಅಮೆಜಾನ್ ಕಿಂಡಲ್ ಒಸಿಸ್ ನಲ್ಲಿ ಇರುವ ಸಾಫ್ ವೇರ್ ಉತ್ತಮವಾಗಿದ್ದು, ಬಳಕೆದಾರರ ಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ. ಇದು ಕಿಂಡಲ್ ಸ್ಟೋರ್ ನಿಂದ ಬುಕ್ ಡೌನ್ ಲೋಡ್ ಮಾಡುವುದನ್ನು ಸುಲಭವಾಗಿಸಿದೆ ಎನ್ನಲಾಗಿದೆ.

ಬ್ಯಾಟರಿ:

ಬ್ಯಾಟರಿ:

ಒಟ್ಟು ಆರು ದಿನಕ್ಕೂ ಹೆಚ್ಚಿನ ಅವಧಿಯ ಬ್ಯಾಕಪ್ ಅನ್ನು ಈ ಅಮೆಜಾನ್ ಕಿಂಡಲ್ ಒಸಿಸ್ ಬ್ಯಾಟರಿ ನೀಡಲಿದ್ದು, ಬುಕ್ ಓದುವ ಸಂದರ್ಭದಲ್ಲಿ ಬ್ಯಾಟರಿ ಖಾಲಿಯಾಗಲಿದೆ ಎನ್ನುವ ಭಯ ಬೇಕಾಗಿಲ್ಲ. ಆಡಿಯೋ ಬುಕ್ ಓದಿದ ಸಂದರ್ಭದಲ್ಲಿ ಬ್ಯಾಟರಿ ಬೇಗ ಖಾಲಿಯಾಗಲಿದೆ. USB ಟೈಪ್ C ಪೋರ್ಟಲ್ ಅನ್ನು ಇದರಲ್ಲಿ ನೋಡಬಹುದಾಗಿದೆ.

ಕೊನೆಯ ಮಾತು:

ಕೊನೆಯ ಮಾತು:

ರೂ. 21,999ಕ್ಕೆ ಅಮೆಜಾನ್ ಕಿಂಡಲ್ ಒಸಿಸ್ 8GB ಮಾಡಲ್ ದೊರೆಯುತ್ತಿದ್ದು, ರೂ. 28,999ಕ್ಕೆ 32GB (wifi+ 3G) ಅಮೆಜಾನ್ ಕಿಂಡಲ್ ಒಸಿಸ್ ದೊರೆಯುತ್ತಿದೆ. ಬೆಲೆ ಕೊಂಚ ಜಾಸ್ತಿಯಾಗಲಿದೆ. ಆದರೆ ಬಳಕೆದಾರರಿಗೆ ಒಳ್ಳೆಯ ಅನುಭವನ್ನು ಕಾಣಬಹುದಾಗಿದೆ. ಬೇರೆ ಬೇರೆ ಮಾಡಲ್ ಗೆ ಹೋಲಿಕೆ ಮಾಡಿಕೊಂಡರೆ ಇದರ ಬೆಲೆಯೂ ಜಾಸ್ತಿ, ವಿಶೇಷತೆಗಳು ಜಾಸ್ತಿ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
While innovating in the e-reader space maybe a big task, Amazon did come out with a new version of Oasis in 2017. The only thing we were concerned was the price but the company has made some significant additions or upgrades to the device as well.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot